ಕಾರಣವೇನು? ಪರಿಹಾರ ಹೇಗೆ? ಬಾಲ್ಯದಲ್ಲೇ ಬೊಜ್ಜು!

Team Udayavani, Jul 14, 2019, 5:24 AM IST

ಕಳೆದ ಸಂಚಿಕೆಯಿಂದ-ಶಿಶುಗಳಲ್ಲಿ ಬೊಜ್ಜು ತಡೆಯುವುದು ಮಗುವಿಗೆ ಹೆಚ್ಚು ಕಾಲ ಎದೆಹಾಲು ಉಣ್ಣಿಸಿದರೆ ಮಗು ಬೆಳೆದಂತೆ ಅಧಿಕ ದೇಹತೂಕ, ಬೊಜ್ಜು ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಎದೆಹಾಲು ಉಂಡ ಮಕ್ಕಳು ಅಧಿಕ ದೇಹತೂಕ ಬೆಳೆಸಿಕೊಳ್ಳುವ ಸಾಧ್ಯತೆಗಳು ಶೇ.15ರಿಂದ 20ರಷ್ಟು ಕಡಿಮೆಯಾಗುತ್ತದೆ. ಆರು ತಿಂಗಳು ಅಥವಾ ಅದಕ್ಕಿಂತ ದೀರ್ಘ‌ಕಾಲ ಎದೆಹಾಲು ಸೇವಿಸುವ ಶಿಶುಗಳು ಬೊಜ್ಜು ಬೆಳೆಸಿಕೊಳ್ಳುವ ಸಾಧ್ಯತೆ ಶೇ.20ರಿಂದ 40ರಷ್ಟು ಕಡಿಮೆ.

ಬಾಲ್ಯದ ಬೊಜ್ಜನ್ನು
ತಡೆಯುವುದು ಹೇಗೆ?
ಬಾಲ್ಯದಲ್ಲಿಯೇ ಬೊಜ್ಜು ಬೆಳೆಸಿಕೊಳ್ಳುವುದನ್ನು ತಡೆಯಲು ಬಹು ಆಯಾಮದ ಕಾರ್ಯವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಆಹಾರಾಭ್ಯಾಸ ಪರಿವರ್ತನೆ, ವರ್ತನಾತ್ಮಕ ಬದಲಾವಣೆ ಮತ್ತು ದೈಹಿಕ ಚಟುವಟಿಕೆಗಳು ಇದರಲ್ಲಿ ಸೇರಿವೆ. ಹೊಟೇಲುಗಳಲ್ಲಿ ಊಟ ಉಪಾಹಾರ ಸೇವಿಸದೆ ಇರುವುದು, ಸಾಫ್ಟ್ ಡ್ರಿಂಕ್‌ ಕುಡಿಯುವುದನ್ನು ಕಡಿಮೆ ಮಾಡುವುದು, ಸೇವಿಸುವುದೇ ಆದಲ್ಲಿ ಕಡಿಮೆ ಸೇವಿಸುವುದು, ಕ್ಯಾಲೊರಿ ಸಮೃದ್ಧ ಆಹಾರಗಳನ್ನು ಕಡಿಮೆ ಮಾಡಿ ನಾರಿನಂಶಯುಕ್ತ ಆಹಾರಗಳನ್ನು ಹೆಚ್ಚು ಉಪಯೋಗಿಸುವುದು ಇತ್ಯಾದಿ ಆಹಾರಾಭ್ಯಾಸ ಬದಲಾವಣೆಗಳಲ್ಲಿ ಸೇರಿವೆ. ಮಕ್ಕಳು ಮತ್ತು ಹೆತ್ತವರಲ್ಲಿ ಆರೋಗ್ಯಪೂರ್ಣ ಆಹಾರ ಶೈಲಿಯ ಬಗ್ಗೆ ಎಚ್ಚರ ಮೂಡಿಸುವುದು, ಆಹಾರ ದಿನಚರಿಯ ಬಗ್ಗೆ ಬರೆದಿರಿಸಿಕೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸುವುದು ವರ್ತನಾತ್ಮಕ ಬದಲಾವಣೆಯ ಕಾರ್ಯತಂತ್ರಗಳಲ್ಲಿ ಸೇರಿವೆ. ಸ್ತ್ರೀಯರು ಮತ್ತು ಬಾಲಕಿಯರ ಪೌಷ್ಟಿಕಾಂಶ ಮಟ್ಟವನ್ನು ಉತ್ತಮಪಡಿಸುವುದು ಕೂಡ ಬಾಲ್ಯದಲ್ಲಿಯೇ ಬೊಜ್ಜು ಬೆಳೆಸಿಕೊಳ್ಳುವುದನ್ನು ತಡೆಗಟ್ಟುವಲ್ಲಿ ನಿರ್ಣಾಯಕವಾಗಿದೆ. ಗರ್ಭಧಾರಣೆಯ ಬಳಿಕ ಮತ್ತು ಅದಕ್ಕೆ ಮುನ್ನ ತಾಯಿಯ ಪೌಷ್ಟಿಕಾಂಶ ಮಟ್ಟವು ಜನಿಸಲಿರುವ ಶಿಶುವಿನ ಮೇಲೆ ಪರಿಣಾಮ ಬೀರುತ್ತದೆಯಲ್ಲದೆ, ಬಳಿಕದ ಜೀವನದಲ್ಲಿ ಬೊಜ್ಜು ಬೆಳೆಸಿಕೊಳ್ಳುವ ಅಪಾಯದ ಜತೆಗೆ ಸಂಬಂಧ ಹೊಂದಿರುತ್ತದೆ.

-ಮುಂದುವರಿಯುವುದು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಪ್ಲಾಸ್ಟಿಕ್‌ ಇಂದು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಕಡಿಮೆ ವೆಚ್ಚದಲ್ಲಿ ತಯಾರಿಕೆ ಹಾಗೂ ಕೈಗೆಟಕುವ ದರದಲ್ಲಿ ಈ ಪ್ಲಾಸ್ಟಿಕ್‌...

  • ಹೃದ್ರೋಗಗಳಿಂದ ಹಿಡಿದು ಅಧಿಕ ರಕ್ತದೊತ್ತಡ, ಇನ್ಸುಲಿನ್‌ ಅವಲಂಬಿಯಲ್ಲದ ಟೈಪ್‌ 2 ಮಧುಮೇಹ, ಸಂಧಿವಾತ, ಪಿತ್ತಕೋಶದ ಕಲ್ಲುಗಳು ಮತ್ತು ಎಂಡೊಮೆಟ್ರಿಕ್‌ ಕ್ಯಾನ್ಸರ್‌...

  • ದೀರ್ಘ‌ಕಾಲಿಕವಾಗಿ ಉಂಟಾಗುವ ಕ್ರಾನಿಕ್‌ ಒಟಿಟಿಸ್‌ ಮೀಡಿಯಾವನ್ನು ಸಂಕ್ಷಿಪ್ತವಾಗಿ ಸಿಒಎಂ ಎನ್ನಲಾಗುತ್ತದೆ. ಇದು ನಮ್ಮ ದೇಶದಲ್ಲಿ ಅತಿ ಸಾಮಾನ್ಯವಾಗಿರುವ...

  • ಚೀನದ ವುಹಾನ್‌ ಪ್ರಾಂತ್ಯದಲ್ಲಿ 2019ರ ಡಿಸೆಂಬರ್‌ ತಿಂಗಳಲ್ಲಿ ಅಸಾಮಾನ್ಯ ಬಗೆಯ ನ್ಯುಮೋನಿಯಾ ಪ್ರಕರಣಗಳಲ್ಲಿ ಹೆಚ್ಚಳ ಉಂಟಾಗುತ್ತಿರುವುದು ಕಂಡುಬಂತು. ಇದರ ಬಗ್ಗೆ...

  • ನಾವು ಸಮಾಜಜೀವಿಗಳು.ಹಾಗಾಗಿ ಸಮಾಜದಲ್ಲಿರುವ ಎಲ್ಲ ವರ್ಗದ ಜನರ, ಅದರಲ್ಲೂ ಏಡ್ಸ್‌ನಂತಹ ಗುಣವಾಗದ ಕಾಯಿಲೆಗಳಿಂದ ಬಾಧಿತರಾದವರ ಅಗತ್ಯಗಳನ್ನು ಅರಿತುಕೊಳ್ಳುವುದು,...

ಹೊಸ ಸೇರ್ಪಡೆ