- Saturday 07 Dec 2019
ಅಯೋಧ್ಯಾಕಾಂಡ: ಸರಯೂ ತೀರದ ಸಾಮರಸ್ಯದ ಚಿತ್ರಗಳು
Team Udayavani, Nov 23, 2019, 5:13 AM IST
ಫೋಟೊಗ್ರಫಿ ಮಾಡಲೆಂದೇ ಸಾಕಷ್ಟು ಸಲ ಅಯೋಧ್ಯೆಯಲ್ಲಿ ಓಡಾಡಿದ್ದೆ. ಮೊದಲ ಬಾರಿಗೆ ಹೋದಾಗ, ಅಲ್ಲೊಬ್ಬ ಪುಟ್ಟ ಹುಡುಗ ಬರಿಮೈಯಲ್ಲಿ ನಿಂತಿದ್ದ. “ಇಕ್ಬಾಲ್ ಅನ್ಸಾರಿ ಅಂತ ಇದ್ದಾರಲ್ಲ, ಅವರು ಇಲ್ಲಿ ಎಲ್ಲಿರ್ತಾರೆ?’ ಅಂತ ಕೇಳಿದೆ. ನಿಮಿಷದಲ್ಲಿ ಸಾಗಬಹುದಾದ, ಕಣ್ಣಳತೆಯ ದೂರಕ್ಕೆ ಬೆರಳು ತೋರಿಸಿದ: “ಅವರೇ ಇಕ್ಬಾಲ್’. ಅವರು, ರಾಮಮಂದಿರದ ಕಟ್ಟೆಯ ಮೇಲೆ, ಕೆಲ ಪುರೋಹಿತರ ಜತೆ ಹರಟುತ್ತಾ ಕುಳಿತಿದ್ದರು.
“ನಿಮ್ಮನ್ನು ಸಂದರ್ಶಿಸಲು ಬೆಂಗಳೂರಿನಿಂದ ಬಂದಿದ್ದೇನೆ’ ಎಂದೆ. ಇಕ್ಬಾಲ್ ಆತ್ಮೀಯವಾಗಿ, 20-30 ಅಡಿ ವಿಸ್ತಾರವಿದ್ದ ತಮ್ಮ ಪುಟ್ಟ ಮನೆಯೊಳಗೆ ಕೂರಿಸಿಕೊಂಡು, ಮಾತುಕತೆಯಲ್ಲಿ ಮುಳುಗಿದರು. ಬಳಿಕ, ಒಂದು ಚಹಾದ ಪೆಟ್ಟಿಗೆ ಅಂಗಡಿಗೆ ಕರಕೊಂಡು ಬಂದರು. ಅಷ್ಟರಲ್ಲಾಗಲೇ, ರಾಮಮಂದಿರದ ಪುರೋಹಿತರು ಅಲ್ಲಿದ್ದರು. ಅವರೆಲ್ಲ ಸೋದರರಂತೆ ಒಟ್ಟಿಗೆ ಚಹಾ ಕುಡಿಯುವಾಗ, ಶತಮಾನಗಳ ಬಾಂಧವ್ಯದ ಚಿತ್ರ ಮೂಡುತ್ತಿತ್ತು.
“ನೋಡಿ, ಕೋರ್ಟಿನ ಕಣ್ಣಿಗೆ ನಾವೆಲ್ಲ ದಾವೆದಾರರು. ಇಲ್ಲಿ ನಿತ್ಯ ಚಹಾ ಕುಡಿಯುವಾಗ ಒಡನಾಡಿಗಳು. ಬಾಲ್ಯದಿಂದಲೂ ಇದೇ ಸ್ನೇಹದಿಂದಲೇ ನಾವು ಬೆಳೆದವರು. ಆದರೆ, ಇಲ್ಲಿನ ವಿಚಾರ ಎಲ್ಲಿಗೋ ಹೋಗಿ, ಇನ್ನೆಲ್ಲಿಗೋ ಮುಟ್ಟಿದೆ’ ಎಂದು ಅವರೆಲ್ಲ ಹೇಳುವಾಗ, ತಾಜಾ ಚಹಾ ಕೈಸೇರಿತ್ತು. “ಅಯೋಧ್ಯೆ ಎಂದರೆ, ಯಾರೂ ಗೆಲ್ಲಲಾಗದ, ಜಗಳವೇ ಇಲ್ಲದ ಪ್ರದೇಶ’ ಎಂಬುದನ್ನು ಕೇಳಿದ್ದೆ. ಆ ಪುಟ್ಟ ಪಟ್ಟಣ ಹಾಗೆಯೇ ರೂಪುಗೊಂಡಿದೆ ಕೂಡ.
ನಾನು ಹೋದಾಗ ರಂಜಾನ್ ಮಾಸ. ಅಲ್ಲಿನ ಪ್ರಧಾನ ಅರ್ಚಕರಾದ ಮಹಾಂತ ಜ್ಞಾನದಾಸ್, ಇಫ್ತಾರ್ ಕೂಟವನ್ನು ಏರ್ಪಡಿಸಿದ್ದರು. “ಅವರು ನೂರು ಜನ ಮುಸಲ್ಮಾನರನ್ನು ಕರೆದರೆ, ಸಾವಿರಾರು ಬಾಂಧವರು ಅವರ ಸುತ್ತ ನೆರೆಯುತ್ತಾರೆ’ ಎನ್ನುವ ಸ್ಥಳೀಯನೊಬ್ಬನ ಮಾತು, ಅವರ ಅನ್ಯೋನ್ಯತೆಗೆ ಕನ್ನಡಿ ಹಿಡಿದಂತಿತ್ತು. ಮೂರ್ನಾಲ್ಕು ವರುಷದ ಕೆಳಗೆ ಅಯೋಧ್ಯೆಯಲ್ಲಿ ಸರಿಯಾದ ಹೋಟೆಲ್ಲುಗಳೇ ಇದ್ದಿರಲಿಲ್ಲ. ನಾವು ಕುಳಿತ ಆಟೋದ ಮುಸಲ್ಮಾನ ಡ್ರೈವರ್‌ಗೆ, “ಇಲ್ಲಿ ನಾನ್‌ವೆಜ್ ಊಟ ಸಿಗುವ ಹೋಟೆಲ್ಲು ಎಲ್ಲಿದೆ?’ ಎಂದು ಕೇಳಿದೆ.
ಅವನ ಮುಖಭಾವವೇ ಬದಲಾಯಿತು. “ರಾಮ ಹುಟ್ಟಿದ ಜಾಗಕ್ಕೆ ಬಂದು ಯಾರಾದರೂ ನಾನ್‌ವೆಜ್ ಬಯಸುತ್ತಾರಾ ಸಾರ್…? ಇಲ್ಲಿ ನಾವುಗಳೇ ಮಾಂಸಾಹಾರ ಮುಟ್ಟೋದಿಲ್ಲ’ ಎಂದಾಗ, ಪ್ರಶ್ನೆ ಕೇಳಿದ್ದ ನನಗೇ ಮುಜುಗರ ಹುಟ್ಟಿತು. ರಾಮನನ್ನು ನೋಡಲೆಂದೇ ಸಹಸ್ರಾರು ಸಾಧುಗಳು ಅಲ್ಲಿಗೆ ಬರುತ್ತಾರೆ. ಹಾಗೆ ಬಂದವರಲ್ಲಿ ಅನೇಕರು, “ಖಡಾವು’ ಚಪ್ಪಲಿಗಾಗಿ ಒಂದು ಅಂಗಡಿಗೆ ಹೋಗು ತ್ತಾರೆ. ಖಡಾವು ಎಂದರೆ, ವಿವಿಧ ಚಿತ್ತಾರ ಗಳನ್ನು ಮೂಡಿಸಿ, ಮರದಿಂದ ರೂಪಿಸಿದ ಸಾಧುಗಳ ಚಪ್ಪಲಿ.
ಅಯೂಬ್‌ಖಾನ್ ಎನ್ನುವವರ ಕುಟುಂಬ ಐದು ತಲೆಮಾರಿ ನಿಂದ, ಸುಂದರ ಖಡಾವುಗಳನ್ನು ಸಿದ್ಧಮಾ ಡುತ್ತಾ ಬಂದಿದೆ. ಅದರ ಆಚೆಗೆ ಸ್ವಲ್ಪವೇ ದೂರದಲ್ಲಿ ಬಾಬು ಖಾನ್‌ನ ಟೈಲರ್ ಅಂಗಡಿ ಕಾಣಿಸುತ್ತದೆ. ಅವನು “ಝಗ್ ಝಗ್’ ಎನ್ನುತ್ತಾ, ಮಶೀನು ತುಳಿಯು ವುದೇ ಶ್ರೀರಾಮ ನಿಗಾಗಿ. ಅಯೋಧ್ಯೆಯ ರಾಮಲಲ್ಲಾ ವಿಗ್ರಹ, ಬಾಬು ಸಾಹೇಬರು ಹೊಲಿದು ಕೊಟ್ಟ ಬಟ್ಟೆಯಿಂದಲೇ ಅಲಂಕೃತ ವಾಗುತ್ತದೆ. ಸಂಜೆಯಾದರೆ, ಆ ಪುಣ್ಯಾತ್ಮನ ಮನೆಯಿಂದಲೇ ಹನುಮಾನ್ ಚಾಲೀಸ ಕೇಳಿಸುತ್ತದೆ. ಇದೇ ಅಲ್ಲವೇ, ನಮ್ಮ ಅಯೋಧ್ಯೆ!
* ಸುಧೀರ್ ಶೆಟ್ಟಿ
ಈ ವಿಭಾಗದಿಂದ ಇನ್ನಷ್ಟು
-
ವೃದ್ಧ ತಂದೆ- ತಾಯಿಯನ್ನು ಹೊತ್ತು, ಯಾತ್ರೆ ಸಾಗಿದ ಶ್ರವಣ ಕುಮಾರನ ಕಥೆ ಕೇಳಿದ್ದೀರಿ. ಅಂಥದ್ದೇ ಒಬ್ಬ ಅಪರೂಪದ ಮಗ ಮೈಸೂರಿನ ಕೃಷ್ಣಕುಮಾರ್. ಅಡುಗೆಮನೆಯೇ ಜಗತ್ತು...
-
ಮಿಥಿಲೆ ಪುರಾಣ ಗ್ರಂಥಗಳಿಂದ ಮಾತ್ರವೇ ನಮಗೆ ತಿಳಿದಿರುವ ನಗರ. ಸೀತೆ ಹುಟ್ಟಿದ್ದು, ಜನಕರಾಜನ ಅರಮನೆ ಇದ್ದಿದ್ದು ಇಲ್ಲಿಯೇ ಎಂದು ನಂಬಿದ್ದೇವೆ. ಮಿಥಿಲಾ ನಗರಿ ಈಗ...
-
ಟ್ರಾಫಿಕ್ ಪೊಲೀಸರು ದಿನವಿಡೀ ನಿಂತೇ ಇರಬೇಕು. ಜೊತೆಗೆ, ಟ್ರಾಫಿಕ್ನ ಅಬ್ಬರ, ನಿಯಮ ಮುರಿದು ತಲೆನೋವು ಕೊಡುವ ವಾಹನ ಚಾಲಕರು, ಬಿಸಿಲು, ಧೂಳು, ಹೊಗೆ, ಕಿವಿಗಡಚಿಕ್ಕುವ...
-
ಸಾಮಾನ್ಯವಾಗಿ ಒಂದೇ ಗುರುಗಳ ಇಬ್ಬರು ಶಿಷ್ಯರು ಅಥವಾ ಅಣ್ಣ-ತಂಗಿ, ಅಕ್ಕ-ತಂಗಿ- ಹೀಗೆ ಜೋಡಿಯಲ್ಲಿ ರಂಗಪ್ರವೇಶ ಮಾಡುವವರ ಬಗ್ಗೆ ಕೇಳಿದ್ದೇವೆ. ಆದರೆ, ಇಲ್ಲೊಂದು...
-
ಇರುವೆಯಲ್ಲಿ ಎಷ್ಟೆಲ್ಲ ವಿಧಗಳುಂಟು? ಮಿಣುಕು ಹುಳದ ಮೂತಿಯಲ್ಲಿರುವ ಲೈಟ್ ಹೇಗಿರುತ್ತೆ? ಮಿಡತೆಗಳು ಎಷ್ಟು ಎತ್ತರಕ್ಕೆ ಹಾರುತ್ತವೆ?- ಹೀಗೆ ನಮ್ಮೊಳಗೆ ಕೀಟಗಳ...
ಹೊಸ ಸೇರ್ಪಡೆ
-
ಲಕ್ನೋ: ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಎಗ್ಗಿಲ್ಲದೇ ಮುಂದುವರಿದಿದೆ. ಗುರುವಾರವಷ್ಟೇ ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಮೇಲೆ ಬೆಂಕಿ ಹಚ್ಚಿ...
-
ಹೊಸದಿಲ್ಲಿ: ಪಾಕಿಸ್ಥಾನ, ಅಫ್ಘಾನಿಸ್ಥಾನ, ಬಾಂಗ್ಲಾದೇಶಗಳಲ್ಲಿ ಕಿರುಕುಳ ಅನುಭವಿಸುತ್ತಿದ್ದವರಿಗೆ ಉತ್ತಮ ನಾಳೆಯ ಅವಕಾಶವನ್ನು ಕಲ್ಪಿಸುವುದೇ ಪೌರತ್ವ (ತಿದ್ದುಪಡಿ)...
-
ಹೊಸದಿಲ್ಲಿ: ಈರುಳ್ಳಿ ದರ ಕಡಿಮೆಯಾಗುವ ಲಕ್ಷಣಗಳು ಸದ್ಯಕ್ಕೆ ಗೋಚರಿ ಸುತ್ತಿಲ್ಲ. ಶುಕ್ರವಾರ ಈರುಳ್ಳಿ ಬೆಲೆ ಕೇಜಿಗೆ 165 ರೂ. ತಲುಪಿದೆ. ವಿದೇಶಗಳಿಂದ ಆಮದು ಮಾಡಿಕೊಂಡಿರುವ...
-
ನವದೆಹಲಿ: ತನ್ನನ್ನು ಅತ್ಯಾಚಾರ ಮಾಡಿದ್ದ ಆರೋಪಿಯೊಬ್ಬನ ಸಹಿತ ಇತರೇ ನಾಲವರು ದುಷ್ಕರ್ಮಿಗಳಿಂದ ಗುರುವಾರದಂದು ಹಲ್ಲೆಗೊಳಗಾಗಿ ಬಳಿಕ ಬೆಂಕಿ ಹಚ್ಚಲ್ಪಟ್ಟಿದ್ದ...
-
ಉಡುಪಿ: ಅದಮಾರು ಮಠದ ಪರ್ಯಾಯದಲ್ಲಿ ಕಾಲೇ ವರ್ಷತು ಪರ್ಜನ್ಯಃ| ಪೃಥಿವೀ ಸಸ್ಯಶಾಲಿನಿ|| ದೇಶಃ ಅಯಂ ಕ್ಷೋಭರಹಿತಃ| ಸಜ್ಜನಾಃ ಸಂತು ನಿರ್ಭಯಾಃ|| ಎಂಬಂತೆ ಈ ನಾಲ್ಕು ವಿಷಯಗಳ...