ಶೌಚಕ್ಕೆ ಹೋಗಿದ್ದಕ್ಕೆ 526 ರೂ! ಬೆಂಗಳೂರಿಗೆ ಹೊಸಬರಾಗಿದ್ದರೆ ಹುಷಾರ್‌

Team Udayavani, Jul 29, 2017, 5:02 PM IST

ಬೆಂಗಳೂರು ಎಲ್ಲರ ಪಾಲಿಗೂ ಕನಸಿನ ನಗರಿ. ಈ ಮಹಾನಗರಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕು. ಸಾಧ್ಯವಾದರೆ ಕೆಲಸ ತೆಗೆದುಕೊಂಡು ಇಲ್ಲಿಯೇ ಬದುಕಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ. ಅದಕ್ಕಾಗಿ ಇಲ್ಲಿಗೆ ಬರುವವರು ಹಲವರು. ಅದರೆ, ಒಂದು ನೌಕರಿ ಹಿಡಿಯಲು ಈ ಊರಿನಲ್ಲಿ ನಡೆಸುವ ಅಲೆದಾಟ, ಆ ಸಂದರ್ಭದಲ್ಲಿ ಎದುರಾಗುವ ಸಂಕಷ್ಟಗಳು ಸಾವಿರಾರು. ಪ್ರತಿದಿನ ಎದ್ದರೆ ಸಾಕು; ತಲೆಯಲ್ಲಿ ಒಂದೇ ಟೆನÒನ್‌. ಕೆಲಸ, ಕೆಲಸ ಕೆಲಸ… ಎಷ್ಟು ಸಂದರ್ಶನ ಮುಗಿಸಿದರೂ ಸಿಗುವ ಉತ್ತರ ಒಂದೇ. “´ೋನ್‌ ಮಾಡುತ್ತೀವಿ ಹೋಗಿ ಬನ್ನಿ’! ಇದರ ನಡುವೆ ಕೆಲಮೊಮ್ಮೆ ಸುತ್ತಿದ ಜಾಗದಲ್ಲೇ ಸುತ್ತಿ ಸುತ್ತಿ ಸಿಕ್ಕಾಪಟ್ಟೆ ಬೇಸರಗೊಳ್ಳುವುದು ತೀರಾ ಸಾಮಾನ್ಯ ಎಂಬಂಥ ಸಂಗತಿ. 

ಒಮ್ಮೆ ಬೆಂಗಳೂರಿನ ಒಂದು ಪ್ರತಿಷ್ಟಿತ ಕಂಪನಿಯೊಂದರ ಸಂದರ್ಶನಕ್ಕೆ ಹೋಗಬೇಕಾಗಿ ಬಂತು. ಆಗಲೇ ತಿಳಿದಿದ್ದು ಬೆಂಗಳೂರು ಎಷ್ಟು ಕಾಸ್ಟಿ$É ಅಂತ.  ಒಂದು ಯೂರಿನ್‌ ಪಾಸ್‌ಗಾಗಿ ನಾವು ಪಾವತಿಸಿದ್ದು 526 ರೂ. ಆಶ್ಚರ್ಯ ಆಗುತ್ತಿದೆಯಲ್ಲವೇ? ಅರೆರೆ, ಬೆಂಗಳೂರು ಅ,rಂದು ದುಬಾರಿಯೇ? ಶೌಚಾಲಯ ಬಳಸಿದ್ದಕ್ಕೆ 526 ರೂ. ಪಡೆಯುವ ಆ ಜಾಗ ಎಲ್ಲಿದೆ ಅಂತ ಕೇಳುತ್ತೀರಾ? ಅದಿರುವುದು ವಸಂತನಗರದ ರೈಲ್ವೆ ಸ್ಟೇಷನ್‌ನಲ್ಲಿ! ಸಾಮಾನ್ಯವಾಗಿ ರೈಲ್ವೇ ಸ್ಟೇಷನ್ನುಗಳಲ್ಲಿ ಚಿಲ್ಲರೆ ಕಾಸು ತೆಗೆದುಕೊಳ್ಳುತ್ತಾರೆ. ಅಂಥದ್ದರಲ್ಲಿ ನಾನು 526 ರೂ. ಕೊಟ್ಟಿದ್ದೇಕೆ ಎಂಬುದರ ಹಿಂದೆ ಒಂದು ಕತೆ ಇದೆ. 

ಸಂದರ್ಶನಕ್ಕೆ ಹೊರಟಿದ್ದೆ ಅಂದೆನಲ್ಲವೆ? ದಾರಿಯಲ್ಲಿ ಹೋಗುತ್ತಿದ್ದಾಗ ನನಗೆ ಶೌಚಕ್ಕೆ ಅವಸರವಾಯಿತು. ಶೌಚಾಲಯಕ್ಕೆ ಹೋಗೋಣವೆಂದರೆ ಹತ್ತಿರದಲ್ಲೆಲ್ಲೂ ಕಾಣಲಿಲ್ಲ. ರಸ್ತೆ ಬದಿ ಮಾಡಲು ನನ್ನ ಮನಸ್ಸು ಒಪ್ಪಲಿಲ್ಲ. ಈಗ ಏನಪ್ಪಾ ಮಾಡೋದು ಅಂತ ಯೋಚನೆ ಮಾಡಿಕೊಂಡು ಕೂತಿದ್ದಾಗ ಹತ್ತಿರದಲ್ಲೇ ರೈಲ್ವೇ ಸ್ಟೇಷನ್‌  ಇರೋದು ನೆನಪಿಗೆ ಬಂದಿತ್ತು. ಸೀದಾ ಒಳ ನುಗ್ಗಿ ಅಲ್ಲಿನ ಶೌಚಾಲಯಕ್ಕೆ ಹೋದೆ. ಹೋಗುವಾಗ ತಡೆಯದಿದ್ದ ಪೊಲೀಸಮ್ಮ ವಾಪಸ್ಸಾಗುವಾಗ ನಮ್ಮನ್ನು ತಡೆದರು. “ರೈಲು ಟಿಕೆಟ್‌ ತೋರಿಸಿ’ ಎಂದು ಕೇಳಿದರು. ನಮ್ಮ ಬಳಿ ಟಿಕೆಟ್‌ ಎಲ್ಲಿತ್ತು?! ನಿಜ ವಿಷಯವನ್ನು ಹೇಳಿದೆ. ಅವಳ ಮನ ಕರಗಲೇ ಇಲ್ಲ. ಬದಲಾಗಿ ಟಿಕೆಟ್‌ ಇಲ್ಲದೆ ನಿಲ್ದಾಣವನ್ನು ಪ್ರವೇಶಿಸಿದ್ದಕ್ಕೆ ದಂಡ ಹಾಗೂ ಶೌಚಾಲಯದ ಬಿಲ್ಲು ಸೇರಿಸಿ 526 ರೂ. ದಂಡ ವಿಧಿಸಿದರು.

ನಿಜಕ್ಕೂ ನಮಗೆ ರೈಲು ನಿಲ್ದಾಣದ ಒಳಹೋಗಲು ಟಿಕೆಟ್‌ ತೆಗೆದುಕೊಳ್ಳಬೇಕೆಂದು ಗೊತ್ತಿರಲಿಲ್ಲ. ಎಷ್ಟು ಕೇಳಿಕೊಂಡರೂ ಅವರು ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ನಮ್ಮ ಬಳಿ ಇದ್ದದು ಕೇವಲ 120 ರೂ. ಅಷ್ಟೇ. ಅದನ್ನೂ ಕೊಟ್ಟು ಬರಲು ಸಿದ್ಧರಿದ್ದೆವು. ಆದರೆ, ಅವರು ಪೂರ್ತಿ ಹಣ ಕಟ್ಟುವವರೆಗೂ ಬಿಡಲಿಲ್ಲ. ಕಡೆಗೆ, ಹತ್ತಿರದಲ್ಲಿದ್ದ ಎ.ಟಿ.ಎಂ. ಗೆ ಹೋಗಿ ಸ್ನೇಹಿತನ ಕಾರ್ಡ್‌ನಿಂದ ಹಣ ಡ್ರಾ ಮಾಡಿ ಆ ಪೊಲೀಸಮ್ಮನಿಗೆ ಕೊಟ್ಟು ಬಂದೆವು. ಈ ನಡುವೆ ನನ್ನ ಸ್ನೇಹಿತ ಆ ಬಿಲ್‌ ´ೋಟೋ ತಗೆದು, ವಾಟ್ಸಪ್‌ ಗ್ರೂಪ್‌ನಲ್ಲಿ ಹಾಕಿ ಪೂರ್ತಿ ದಿನ ನಗುವಿನಲ್ಲಿ ತೇಲಿಸಿದ್ದ. 

– ಚಂದ್ರಶೇಖರ ಜಿ., ಮಧುಗಿರಿ 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ರಾಜಧಾನಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ರೋಮಾಂಚನವನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು. ಅಲ್ಲಿ ಜರುಗುವುದು ನಮ್ಮ ಸೇನಾಶಕ್ತಿಯ ವಿಶ್ವರೂಪ ದರ್ಶನ....

  • ನಾಳೆ ಬೆಳಗಾದರೆ ಗಣತಂತ್ರದ ಹಬ್ಬದ ಸಂಭ್ರಮ, ರಾಜಧಾನಿ ದೆಹಲಿಯನ್ನು ರಂಗೇರಿಸಲಿದೆ. ರಾಜಪಥದಲ್ಲಿ ನಡೆಯುವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಈ ಬಾರಿ ಕರ್ನಾಟಕದ...

  • ಲಂಕೆಯಲ್ಲಿ ಯುದ್ಧವೆಲ್ಲ ಮುಗಿದು, ಮರಳುವಾಗ ವಿಮಾನದ ಮೇಲಿಂದ ರಾಮನು ತನ್ನೊಲವಿನ ಮಡದಿ ಸೀತೆಗೆ ರಾಮೇಶ್ವರಂನ ದ್ವೀಪವನ್ನು ತೋರಿಸಿ- "ನೋಡಿಲ್ಲಿ, ಈ ದ್ವೀಪದಲ್ಲೇ...

  • ರಂಗದ ಮೇಲೆ ಮಿಂಚಿನ ಬಳ್ಳಿಯೊಂದು ಝಳಪಿಸಿದಂತೆ ಅದಮ್ಯ ಚೈತನ್ಯದಿಂದ ಲೀಲಾಜಾಲವಾಗಿ ನರ್ತಿಸಿದವಳು ಭರತನಾಟ್ಯ ಕಲಾವಿದೆ ಹರ್ಷಿತಾ ಜಗದೀಶ್‌. ಅದು ಅವಳ ಮೊದಲ ರಂಗಾರ್ಪಣೆ...

  • ಎಷ್ಟು ಬಗೆಯಲ್ಲಿ ಇಡ್ಲಿ ಮಾಡಬಹುದು ಅಂದುಕೊಂಡಿದ್ದೀರಿ? ಹೆಚ್ಚೆಂದರೆ ಹತ್ತಿಪ್ಪತ್ತು ವೆರೈಟಿ ಅಂತೀರಾ? ಇಲ್ಲ, 55 ವೆರೈಟಿಯ ಇಡ್ಲಿ ಮಾಡಬಹುದು ಅನ್ನುತ್ತಿದೆ...

ಹೊಸ ಸೇರ್ಪಡೆ