ಡ್ರೂ..ಢುಗ್‌ ಢುಗ್‌!:ಬೈಕ್‌ ಜತೆಗೆ 600 ಮಂದಿಯ ಕ್ಲಾಸಿಕ್‌ ನಂಟು


Team Udayavani, Aug 19, 2017, 1:58 PM IST

9.jpg

ಎಷ್ಟೇ ಹೊಸ ಮಾದರಿಯ ಬೈಕ್‌ಗಳು ಮಾರುಕಟ್ಟೆಗೆ ಬಂದರೂ, ಹಳೆಯ ಮಾಡೆಲ್‌ನ ಬೈಕ್‌ಗಳನ್ನು ಓಡಿಸೋ ಮಜಾನೇ ಬೇರೆ. ಇಂದು ಅದೇ ಕ್ರೇಜ್‌ ಆಗಿಬಿಟ್ಟಿದೆ. ಅದರಲ್ಲೂ ಕರ್ನಾಟಕದಲ್ಲೇ ಉತ್ಪಾದನೆಯಾಗುತ್ತಿದ್ದ ಜಾವಾ ಮತ್ತು ಯೆಜ್ಡಿ ಬೈಕ್‌ಗಳ ಮೇಲಿನ ಮೋಹ ಇನ್ನೂ ಅನೇಕರಿಗೆ ಹೋಗಿಲ್ಲ. “ರಸ್ತೆಯ ರಾಜ’ ಅಂತಲೇ ಕರೆಯಲ್ಪಟ್ಟಿದ್ದ ಇವೆರಡೂ ಬೈಕ್‌ಗಳ ಉತ್ಪಾದನೆ ಈಗ ನಿಂತರೂ, ಅವುಗಳ ಸದ್ದು ಮಾತ್ರ ಮರೆಯಾಗಿಲ್ಲ. ಬೆಂಗ್ಳೂರಿನಲ್ಲಿ ಸುಮಾರು 500ಕ್ಕೂ ಹೆಚ್ಚಿನ ಜಾವಾ ಮತ್ತು ಯೆಜ್ಡಿà ಬೈಕ್‌ ಸವಾರರಿದ್ದು, ಅವರದ್ದೇ ಒಂದು ಕ್ಲಬ್‌ ಕೂಡ ಇದೆ! ಅದರ ಹೆಸರು, “ಬೆಂಗ್ಳೂರ್‌ ಜಾವಾ ಯೆಜ್ಡಿà ಮೋಟಾರ್‌ ಸೈಕಲ್‌ ಕ್ಲಬ್‌’ನ (ಬಿಜೆವೈಎಂಸಿ).

ಅಲ್ಲೊಂದು ಹಿಸ್ಟರಿ…
ಜಾವಾ ಮತ್ತು ಯೆಜ್ಡೀ ರೋಡ್‌ಕಿಂಗ್‌ ಬೈಕ್‌ಗಳನ್ನು ಮೈಸೂರಿನಲ್ಲಿ ಉತ್ಪಾದಿಸಲಾಗುತ್ತಿತ್ತು. 2006ರಿಂದ ಇತರ ಉತ್ಪಾದನೆಯನ್ನು ನಿಲ್ಲಿಸಲಾಗಿದೆ. ಆನಂತರ ಬೈಕ್‌ನ ಬಿಡಿಭಾಗಗಳೂ ಎಲ್ಲೂ ಸಿಗದೇ ಹೋದವು. ಈ ಬೈಕ್‌ಗಳನ್ನೇ ರಿಪೇರಿ ಮಾಡಿ, ಬದುಕು ಕಟ್ಟಿಕೊಂಡಿದ್ದ ಮೆಕಾನಿಕ್‌ಗಳೂ ಅಪರೂಪವೇ ಆಗಿಬಿಟ್ಟರು. ಇವೆಲ್ಲ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ಉದ್ದೇಶದಿಂದ ಉತ್ಸಾಹಿ ಯುವಕರಾದ ಲೋಕೇಶ್‌, ಅಮೃತ್‌ ಅಪ್ಪಯ್ಯ, ಬ್ರಿಯಾನ್‌ ಅಮ್ಮಣ್ಣ ಮತ್ತು ಜಾನ್‌ ಸಾಮ್ಯುಯಲ್‌- ಈ ನಾಲ್ವರು 2007ರಲ್ಲಿ ಈ ಕ್ಲಬ್‌ ಅನ್ನು ಆರಂಭಿಸಿದರು. ರಸ್ತೆಯಲ್ಲಿ ಸಾಗುತ್ತಿದ್ದ ಜಾವಾ ಮತ್ತು ಯೆಜ್ಡಿà ಸವಾರರನ್ನು ನಿಲ್ಲಿಸಿ, ಮಾತನಾಡಿಸಿ, ಕ್ಲಬ್‌ಗ ಆಹ್ವಾನಿಸುವ ಕೆಲಸ ನಡೆಯಿತು. ಅದೇ ಕ್ಲಬ್‌ ಈಗ ಬೆಂಗ್ಳೂರಲ್ಲಿ ಜೋಶ್‌ಫ‌ುಲ್ಲಾಗಿ ಸದ್ದು ಮಾಡುತ್ತಿದೆ!

ದೇಶದ ಅತಿದೊಡ್ಡ ಯೆಜ್ಡೀ ಕ್ಲಬ್‌!
ಕೇವಲ 4 ಜನರಿಂದ ಆರಂಭವಾದ ಈ ಕ್ಲಬ್‌ ಇಂದು 600ಕ್ಕೂ ಹೆಚ್ಚಿನ ಸದಸ್ಯರನ್ನು ಒಳಗೊಂಡಿದೆ. ದೇಶದ್ಯಾಂತ ಅನೇಕ ಚಿಕ್ಕ ಚಿಕ್ಕ ಕ್ಲಬ್‌ಗಳಿದ್ದರೂ, ಬೆಂಗ್ಳೂರ್‌ ಜಾವಾ ಯೆಜ್ಡಿà ಮೋಟಾರ್‌ ಸೈಕಲ್‌ ಕ್ಲಬ್‌ನ ಸಂಖ್ಯೆಯನ್ನು ಅವ್ಯಾವೂ ಮೀರಿಸಿಲ್ಲ. ಈ ಕ್ಲಬ್‌ನಲ್ಲಿ 67 ವರ್ಷದ ಹಿರಿಯರಿಂದ ಹಿಡಿದು 19 ವರ್ಷದ ಕಿರಿಯ ಬೈಕ್‌ ಸವಾರರೂ ಇದ್ದಾರೆ. ವಿದ್ಯಾರ್ಥಿಗಳು, ಸಾಫ್ಟ್ವೇರ್‌ ಉದ್ಯೋಗಿಗಳು, ನಿವೃತ್ತರೂ ಇಲ್ಲಿ ಸದಸ್ಯತ್ವ ಹೊಂದಿದ್ದಾರೆ.

ಬ್ರೇಕ್‌ಫಾಸ್ಟ್‌ ಮೀಟ್‌
ಈ ಕ್ಲಬ್‌ ಪ್ರತಿ ತಿಂಗಳ ಎರಡನೇ ಭಾನುವಾರ “ಬ್ರೇಕ್‌ಫಾಸ್ಟ್‌ ಮೀಟ್‌’ ಆಯೋಜಿಸುತ್ತದೆ. ಕಂಠೀರವ ಸ್ಟೇಡಿಯಂ ಬಳಿಯ ಕೊನಾರ್ಕ್‌ ಹೋಟೆಲ್‌ನಲ್ಲಿ ಎಲ್ಲರೂ ಸೇರುತ್ತಾರೆ. ಮುಂದಿನ ಪ್ರವಾಸ, ರ್ಯಾಲಿಗಳು ಮತ್ತು ಸದಸ್ಯರಲ್ಲಿ ಯಾರಾದರೂ ಲಾಂಗ್‌ ರೈಡ್‌ ಹೋಗಿದ್ದರೆ ಅದರ ಅನುಭವ, ಬೈಕ್‌ನ ನಿರ್ವಹಣೆ ಕುರಿತು ಚರ್ಚೆಗಳು ನಡೆಯುತ್ತವೆ. ಅಲ್ಲದೇ, ಬೈಕ್‌ನ ಕುರಿತಾದ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತಾರೆ.

ಕ್ಲಬ್‌ನ ಸಮಾಜಮುಖೀ ಕಾರ್ಯ
ಈ ಕ್ಲಬ್‌ನ ಸದಸ್ಯರು ಕೇವಲ ಮನರಂಜನೆಗಾಗಿ ಯೆಜ್ಡಿà ರೈಡ್‌ ಕೈಗೊಳ್ಳುವುದಿಲ್ಲ. ಜನೋಪಕಾರಿ ಕೆಲಸಗಳಲ್ಲೂ ಭಾಗಿಯಾಗುತ್ತದೆ. ಬೈಕ್‌ನಲ್ಲಿ ಪ್ರವಾಸಕ್ಕೆ ಹೋದ ಸ್ಥಳದ ಶಾಲೆಗಳು, ಅನಾಥಾಶ್ರಮಗಳು, ವೃದ್ಧಾಶ್ರಮಗಳಿಗೆ ಭೇಟಿ ನೀಡಿ, ಅಲ್ಲಿನ ಅಗತ್ಯಗಳನ್ನು ಪೂರೈಸುತ್ತದೆ. ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಸದಸ್ಯರಿಂದ ಸಂಗ್ರಹಿಸಿದ ದೇಣಿಗೆ ಹಣದಿಂದ ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಸಂಭ್ರಮಾಚರಣೆ ನಡೆಸುತ್ತದೆ.

ಒಟ್ಟಿನಲ್ಲಿ ಇವರೆಲ್ಲ ಬೈಕ್‌ನಲ್ಲಿ ರೈಡ್‌ ಹೊರಟರೆ, 1970- 80ರ ದಶಕದ ಹೀರೋಗಳು ಹೊರಟಂತೆ ಕ್ಲಾಸಿಕ್‌ ನೆನಪುಗಳು ಕಣ್ಮುಂದೆ ಬಿಚ್ಚಿಕೊಳ್ಳುತ್ತವೆ.

ಜಾಗತಿಕ ಜಾವಾ ದಿನ!
ನಮ್ಮ ಕರುನಾಡಿನ ಜಾವಾ ಬೈಕ್‌ಗೂ ಒಂದು ದಿನ ಇರೋದು ನಿಮ್ಗೆ ಗೊತ್ತೇ? ಪ್ರತಿವರ್ಷದ ಜುಲೈ ತಿಂಗಳ ಎರಡನೇ ಭಾನುವಾರವು ಇಂಟರ್‌ ನ್ಯಾಷನಲ್‌ ಜಾವಾ ಡೇ ಆಗಿದ್ದು, 2008ರಿಂದ ಸತತವಾಗಿ 9 ವರ್ಷಗಳಿಂದ ವಿಶ್ವ ಜಾವಾ ದಿನವನ್ನು ಆಚರಿಸಲಾಗುತ್ತಿದೆ. ಮೊದಲ ಬಾರಿಗೆ ಕಬ್ಬನ್‌ ಪಾರ್ಕ್‌ನಲ್ಲಿ “ಜಾವಾ ಡೇ’ಯನ್ನು ಆಯೋಜಿಸಿದ್ದಾಗ, 120 ಜಾವಾ ಬೈಕ್‌ಗಳು ಬಂದಿದ್ದವು. ಈ ವರ್ಷ ಜುಲೈ 10ರಂದು ನಡೆದ “ಜಾವಾ ಡೇ’ಯಲ್ಲಿ 550 ಬೈಕ್‌ಗಳು ಸದ್ದು ಮಾಡಿದ್ದವು!

ಗಿನ್ನೆಸ್‌ ಹಾದಿ…
2015ರಲ್ಲಿ ಈ ಕ್ಲಬ್‌, ಜಾವಾ ಮತ್ತು ಯೆಜ್ಡೀ ಬೈಕ್‌ಗಳ ಅತಿದೊಡ್ಡ ರ್ಯಾಲಿಯನ್ನು ಆಯೋಜಿಸಿ, ಲಿಮ್ಕಾ ದಾಖಲೆಯನ್ನು ಬರೆದಿದೆ. ಕಳೆದ ಜುಲೈ 9ರಂದು ಸೇಂಟ್‌ ಜೋಸೆಫ್ ಇಂಡಿಯನ್‌ ಹೈಸ್ಕೂಲ್‌ ಆವರಣದಲ್ಲಿ ಇದೇ ಕ್ಲಬ್‌ನ ವತಿಯಿಂದ 409 ಯೆಜ್ಡೀ ಬೈಕ್‌ಗಳ ಮಹಾ ಪರೇಡ್‌ ನಡೆಸಿದ್ದು, ಅದು ಗಿನ್ನೆಸ್‌ ದಾಖಲೆಯ ಪರಿಗಣನೆಯಲ್ಲಿದೆ.

68 ವರ್ಷದ ರೈಡರ್‌!
ಈ ಕ್ಲಬ್‌ನಲ್ಲಿ ಅಮಿತ್‌ ದತ್ತಾ ಎಂಬ 68 ವರ್ಷದ ಸದಸ್ಯರಿದ್ದಾರೆ. ಇವರಿಗೆ ಈ ಗುಂಪಿಗೆ ಹಿರಿಯರು. ಲಾಂಗ್‌ರೈಡ್‌ನ‌ಲ್ಲಿ ಇವರ ಉತ್ಸಾಹ ಬಳಗಕ್ಕೆ ಸ್ಫೂರ್ತಿದಾಯಕ. ಈ ಕ್ಲಬ್‌ನ ಬಹುತೇಕರು ಕೇವಲ ಹವ್ಯಾಸಕ್ಕಾಗಿ, ಪ್ಯಾಷನ್‌ಗಾಗಿ ಈ ಬೈಕ್‌ಗಳನ್ನು ನಡೆಸಿದರೆ, ದತ್ತಾ ಅವರು ಕಳೆದ 18-20 ವರ್ಷಗಳಿಂದ ನಿತ್ಯವೂ ಯೆಜ್ಡಿà ಬೈಕ್‌ ಓಡಿಸುತ್ತಾರೆ.

ಲ್ಹೇ – ಲಡಾಖ್‌ಗೆ ಲಾಂಗ್‌ರೈಡ್‌
ಈ ಕ್ಲಬ್‌ನ ಬಹುತೇಕರು ಉತ್ತರ ಭಾರತದ ಲ್ಹೇ – ಲಡಾಖ್‌ಗೆ ಲಾಂಗ್‌ ರೈಡ್‌ ಕೈಗೊಂಡಿದ್ದಾರೆ. ಅದರಲ್ಲೂ ಮಹೇಶ್‌ ಸಿಂಗ್‌ ಎಂಬವರು ತಮ್ಮ 35 ವರ್ಷಗಳ ಹಳೆಯ ಯೆಜ್ಡಿà ಕ್ಲಾಸಿಕ್‌ ಬೈಕ್‌ನಲ್ಲಿ 8000 ಕಿ.ಮೀ.ಗಳ ಪ್ರವಾಸ ಕೈಗೊಳ್ಳುವ ಮೂಲಕ ಉತ್ತರ ಭಾರತದ ಮೂಲೆ ಮೂಲೆಯನ್ನೂ ತಲುಪಿರುವ ಅನುಭವ ತೆರೆದಿಡುತ್ತಾರೆ.

4- ಯೆಜ್ಡೀ ಕ್ಲಬ್‌ ಆರಂಭಿಸಿದ್ದು ಇಷ್ಟು ಮಂದಿ
68- ಕ್ಲಬ್‌ನ ಹಿರಿಯ ಜೀವ, ಅಮಿತ್‌ ದತ್ತಾ ಅವರ ವಯಸ್ಸು
600- ಕ್ಲಬ್‌ನಲ್ಲಿರುವ ಒಟ್ಟು ಸದಸ್ಯರು ಈ ಸಂಖ್ಯೆಯನ್ನೂ ದಾಟಿದೆ
3,300- ಯೆಜ್ಡೀ ಬೈಕ್‌ಗೆ 1960ರಲ್ಲಿ ಇದ್ದ ದರ
70,000- ಯೆಜ್ಡೀ ಬೈಕ್‌ನ ಈಗಿನ ಮಾರುಕಟ್ಟೆ ಮೌಲ್ಯ
1,05,000- ಜಾವಾದ ಈಗಿನ ಮಾರುಕಟ್ಟೆ ಮೌಲ್ಯ

ಫೇಸ್‌ಬುಕ್‌ https://www.facebook.com/bangalorejawayezdimotorcycleclub

– ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.