ಗೊಂಬೆ ಹೇಳುತೈತೆ…

ಗರುಡಾ ಮಾಲ್‌ನಲ್ಲಿ ಗೊಂಬೆ ಹಬ್ಬ

Team Udayavani, Aug 17, 2019, 5:54 AM IST

ಗರುಡಾ ಮಾಲ್‌ನಲ್ಲಿ ಮೂರು ದಿನಗಳ, ಗೊಂಬೆ ಹಬ್ಬ ಹಾಗೂ ಬೃಹತ್‌ ಪುಸ್ತಕ ಮೇಳ ಹಮ್ಮಿಕೊಳ್ಳಲಾಗಿದೆ. ದಿನದಿಂದ ದಿನಕ್ಕೆ ನಶಿಸುತ್ತಿರುವ ಅಪರೂಪದ ಕಲಾ ಪ್ರಾಕಾರವಾದ ಪಾರಂಪರಿಕ ಕರಕುಶಲ ಗೊಂಬೆ ಪ್ರದರ್ಶನವನ್ನು ಉತ್ತೇಜಿಸುವ ಪ್ರಯತ್ನವಾಗಿ ಸಂಸ್ಕೃತಿ ಗೊಂಬೆ ತಯಾರಿಕಾ ಸಂಸ್ಥೆಯ ಸಹಯೋಗದೊಂದಿಗೆ ಗರುಡಾ ಮಾಲ್‌ ಈ ಹಬ್ಬವನ್ನು ಆಯೋಜಿಸಿದೆ.

ನವರಾತ್ರಿ ಸಂಭ್ರಮ
ನವರಾತ್ರಿಯ ಹಬ್ಬದ ಸಮಯದಲ್ಲಿ ಪಾರಂಪರಿಕ ಗೊಂಬೆಗಳನ್ನು ಮನೆ ಮನೆಗಳಲ್ಲಿ ಪ್ರದರ್ಶಿಸುವುದು ಸಂಪ್ರದಾಯ. ಅದನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ಗೊಂಬೆ ಹಬ್ಬ, ಮಾಲ್‌ನಲ್ಲಿ ನವರಾತ್ರಿಯ ಸಂಭ್ರಮವನ್ನು ಸೃಷ್ಟಿಸಿದೆ. ಗೊಂಬೆಗಳ ಮೂಲಕ ಪೌರಾಣಿಕ ಹಾಗೂ ಐತಿಹಾಸಿಕ ಕತೆಗಳನ್ನು ಪ್ರಸ್ತುತಪಡಿಸುತ್ತಾ, ಯುವ ಪೀಳಿಗೆಗೆ ಭಾರತದ ಸಂಸ್ಕೃತಿಯನ್ನು ಪರಿಚಯಿಸುವ ಪ್ರಯತ್ನ ಇದಾಗಿದೆ. ಈ ಗೊಂಬೆಗಳು ರಾಮಾಯಣ, ಮಹಾಭಾರತ, ಗ್ರಾಮೀಣ ಜೀವನ ಶೈಲಿ, ಮದುವೆ, ಕುಂಬಾರಿಕೆ, ಜನಪದ ನೃತ್ಯ, ಹಬ್ಬ ಹಾಗೂ ಸುಗ್ಗಿಯ ಸಂಭ್ರಮಗಳನ್ನು ಪ್ರಸ್ತುತಪಡಿಸುತ್ತಿವೆ.

ಹೊರನಾಡಿನ ಗೊಂಬೆಗಳು
ಸಂಸ್ಕೃತಿ ಗೊಂಬೆ ತಯಾರಿಕಾ ಸಂಸ್ಥೆಯ ಸದಸ್ಯರು ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಕರ್ನಾಟಕ ಹಾಗೂ ಇತರ ಪ್ರದೇಶಗಳಿಂದ ಬಂದವರಾಗಿದ್ದು, ಅವರು ತಮ್ಮೂರಿನ ಕರಕುಶಲ, ರೇಷ್ಮೆ ಮತ್ತು ಇತರೆ ಬಟ್ಟೆಗಳಿಂದ ತಯಾರಿಸಿದ ಅಪರೂಪದ ಗೊಂಬೆಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ.

ಗಿನ್ನಿಸ್‌ ದಾಖಲೆ
ಗುಡಿ ಕೈಗಾರಿಕೆಯಲ್ಲಿ ತಯಾರಾದ ಸುಮಾರು 3 ಸಾವಿರಕ್ಕೂ ಹೆಚ್ಚು ಗೊಂಬೆಗಳನ್ನು ಒಂದೇ ಸೂರಿನಿಡಿ ಪ್ರದರ್ಶನಕ್ಕಿಡಲಾಗಿದ್ದು, ಸುಮಾರು 1,500 ಗೊಂಬೆಗಳು ಖರೀದಿಗೆ ಲಭ್ಯ ಇವೆ. ಈ ಮೂಲಕ ಗಿನ್ನಿಸ್‌ ವಿಶ್ವ ದಾಖಲೆ ಸೃಷ್ಟಿಸುವ ಗುರಿ ಇದೆ. ಜೊತೆಗೆ, ಪುಸ್ತಕ ಪ್ರಿಯರಿಗಾಗಿ ಸುಮಾರು 10 ಸಾವಿರಕ್ಕೂ ಹೆಚ್ಚು ಪುಸ್ತಕಗಳ, ವಿಶೇಷವಾಗಿ ಮಕ್ಕಳ ಪುಸ್ತಕಗಳ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ.

ಗಣ್ಯರ ದಂಡು
ನಟಿ ರಾಗಿಣಿ ದ್ವಿವೇದಿ ಸೇರಿದಂತೆ, ಬಾನುಲಿ ನಿರೂಪಕರು, ಕ್ರೀಡಾ ಪಟುಗಳು ಹಾಗೂ ಇತರ ಸೆಲೆಬ್ರಿಟಿಗಳು ಗೊಂಬೆಹಬ್ಬದಲ್ಲಿ ಭಾಗವಹಿಸಲಿದ್ದಾರೆ.

ಯಾವಾಗ?: ಆ.17-18
ಎಲ್ಲಿ?: ಗರುಡಾ ಮಾಲ್‌


ಈ ವಿಭಾಗದಿಂದ ಇನ್ನಷ್ಟು

  • ಇಂದು ದೌರ್ಜನ್ಯಗಳಿಗೆ ಮೇರೆಗಳಿಲ್ಲ. ದೆಹಲಿಯಲ್ಲೋ, ಹೈದರಾಬಾದ್‌ನಲ್ಲೋ ಹೆಣ್ಣಿನ ಮೇಲೆ ಹಾಗಾಯ್ತಲ್ಲ ಎನ್ನುತ್ತಾ ಕಳವಳಿಸುತ್ತಿರುವಾಗಲೇ, ಬೆಂಗಳೂರಿನಲ್ಲಿ...

  • ಗಾಂಧಿ ಭವನ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೆನಪಿನಲ್ಲಿ ಸ್ಥಾಪನೆಯಾದ ಕಟ್ಟಡ. ಗಾಂಧಿ ತತ್ತ್ವವನ್ನು ಸಾರುವ ಸಲುವಾಗಿ "ಗಾಂಧಿ ಸ್ಮಾರಕ ನಿಧಿ' ಹೆಸರಿನಲ್ಲಿ...

  • ವೃದ್ಧ ತಂದೆ- ತಾಯಿಯನ್ನು ಹೊತ್ತು, ಯಾತ್ರೆ ಸಾಗಿದ ಶ್ರವಣ ಕುಮಾರನ ಕಥೆ ಕೇಳಿದ್ದೀರಿ. ಅಂಥದ್ದೇ ಒಬ್ಬ ಅಪರೂಪದ ಮಗ ಮೈಸೂರಿನ ಕೃಷ್ಣಕುಮಾರ್‌. ಅಡುಗೆಮನೆಯೇ ಜಗತ್ತು...

  • ಮಿಥಿಲೆ ಪುರಾಣ ಗ್ರಂಥಗಳಿಂದ ಮಾತ್ರವೇ ನಮಗೆ ತಿಳಿದಿರುವ ನಗರ. ಸೀತೆ ಹುಟ್ಟಿದ್ದು, ಜನಕರಾಜನ ಅರಮನೆ ಇದ್ದಿದ್ದು ಇಲ್ಲಿಯೇ ಎಂದು ನಂಬಿದ್ದೇವೆ. ಮಿಥಿಲಾ ನಗರಿ ಈಗ...

  • ಟ್ರಾಫಿಕ್‌ ಪೊಲೀಸರು ದಿನವಿಡೀ ನಿಂತೇ ಇರಬೇಕು. ಜೊತೆಗೆ, ಟ್ರಾಫಿಕ್‌ನ ಅಬ್ಬರ, ನಿಯಮ ಮುರಿದು ತಲೆನೋವು ಕೊಡುವ ವಾಹನ ಚಾಲಕರು, ಬಿಸಿಲು, ಧೂಳು, ಹೊಗೆ, ಕಿವಿಗಡಚಿಕ್ಕುವ...

ಹೊಸ ಸೇರ್ಪಡೆ