ಕಾಡುವ ಹನುಮನ ಪ್ರಸಂಗವೂ…

ನಾಟಕ ವಿಮರ್ಶೆ : ಊರು ಸುಟ್ಟರೂ ಹನುಮಪ್ಪ ಹೊರಗ

Team Udayavani, Apr 20, 2019, 12:21 PM IST

ರಾಜಕೀಯ ಆಟಕ್ಕೆ ಬಳಕೆಯಾಗು­ತ್ತಿರುವ ಸಾಮಾನ್ಯರ ನಂಬಿಕೆ­ಗಳನ್ನು ಪ್ರತಿಧ್ವನಿಸುವ “ಊರು ಸುಟ್ಟರೂ ಹನುಮಪ್ಪ ಹೊರಗ’ ನಾಟಕ, ಇತ್ತೀಚಿಗೆ ಬೆಂಗ­ಳೂ­ರಿನ ಹನುಮಂತ­ನಗರದ ಕೆ.ಹೆಚ್‌. ಕಲಾಸೌಧದಲ್ಲಿ ಪ್ರದರ್ಶನಗೊಂಡಿತು. ಹನುಮಂತ ಹಾಲಿಗೇರಿಯವರ ರಚನೆಯ, ಭಾಸ್ಕರ್‌ ನಾಗಮಂಗಲರವರ ನಿರ್ದೇಶನದ ಈ ನಾಟಕವನ್ನು ಅಶೋಕ್‌ ಬಿ. ಅವರ ವಿಶ್ವಪಥ ಕಲಾ ಸಂಗಮ ತಂಡದ ಕಲಾವಿದರು ಸಮರ್ಥವಾಗಿ ಅಭಿನಯಿಸಿದರು. ಹಾಸ್ಯದೊಂದಿಗೆ ವೈಚಾರಿಕತೆಯನ್ನು ಬಿತ್ತುವಲ್ಲಿ ನಾಟಕ ಯಶಸ್ವಿಯಾಯಿತು.

ಒಂದು ಕಾಲದಲ್ಲಿ ಒಂದಾಗಿದ್ದ ಧರೆಗಟ್ಟಿ ಮತ್ತು ವಜ್ರಮಟ್ಟಿ ಗ್ರಾಮಗಳು ಪ್ರಾಕೃತಿಕ ಕ್ಷಾಮಗಳ ಕಾರಣಕ್ಕಾಗಿ ಅಕ್ಕಪಕ್ಕದಲ್ಲೇ ಇರುವ ಎರಡು ಗುಡ್ಡಗಳಿಗೆ ಹೋಗಿ ನೆಲೆಗೊಂಡು ಎರಡೂ ಊರುಗಳಾಗಿ ಮಾರ್ಪಟ್ಟಿರುತ್ತವೆ. ಆದರೆ, ಊರಲ್ಲಿ ಜನರನ್ನು ಪೊರೆಯುತ್ತಿದ್ದ ಹನುಮಪ್ಪ ದೇವರು, ಯಾವ ಊರಿಗೆ ಸೇರಬೇಕು ಎಂದು ಎರಡೂ ಊರುಗಳ ನಡುವೆ ಆಗಾಗ ಜಗಳ- ಕಿತ್ತಾಟಗಳು ನಡೆಯುತ್ತಲೇ ಇರುತ್ತವೆ. ಎರಡೂ ಊರಿನವರು ತಮ್ಮ ತಮ್ಮ ಪ್ರತಿಷ್ಠೆಗಾಗಿ ಜಿದ್ದಿಗೆ ಬಿದ್ದು ಹನುಮಪ್ಪನನ್ನು ತಮ್ಮೂರಿಗೆ ತರಲೆತ್ನಿಸುತ್ತಲೇ ಇರು­ತ್ತಾರೆ. ಕೊನೆಗೊಂದು ದಿನ ಒಂದೂರಿನವರು ಹನುಮಪ್ಪನನ್ನು ರಾತ್ರೋರಾತ್ರಿ ಕಳ್ಳತನ ಮಾಡುವ ಮೂಲಕ ಎರಡು ಊರುಗಳ ನಡುವಿನ ಜಗಳ ತಾರಕಕ್ಕೇರುತ್ತದೆ.

ಎರಡೂ ಊರುಗಳ ಜನ ಪರಸ್ಪರ ಹೊಡೆದಾಟ- ಬಡಿದಾಟ ಮಾಡಿ ಹನುಮಪ್ಪನೊಂದಿಗೆ ಜೈಲು ಸೇರುತ್ತಾರೆ. ಮುಂದೆ ಪ್ರಕರಣ ಕೋರ್ಟು ಮೆಟ್ಟಿಲೇರುವು­ದರೊಂದಿಗೆ ಮತ್ತೂಂದು ತಿರುವು ಪಡೆಯುತ್ತದೆ. ಕೋರ್ಟು- ಕಚೇರಿಗಳ ಅಲೆದಾಟದಲ್ಲಿ ಹನುಮಪ್ಪ ಮರಳಿ ಸಿಗುವ ಹೊತ್ತಿಗೆ ಊರ ಜನ ಏನಾಗಿರುತ್ತಾರೆ? ಹನುಮಪ್ಪ ತನ್ನ ಭಕ್ತನನ್ನು ನಿಜವಾಗಿಯೂ ಕಾಪಾಡುತ್ತಾನೆಯೇ ಎನ್ನುವುದನ್ನೆಲ್ಲ ರಂಗದ ಮೇಲೆ ನೋಡಿಯೇ ಆನಂದಿಸಬೇಕು.

ಪ್ರಸ್ತುತ ಕಾಲದಲ್ಲಿ ಧರ್ಮ, ದೇವರಿಗಾಗಿ ಮಾನವೀಯ ಗುಣಗಳನ್ನೇ ಮರೆಯುವ ಜನರು ನೋಡಲೇಬೇಕಾದ ನಾಟಕವಿದು. ಸಂಪೂರ್ಣ ಹಾಸ್ಯರಸವಿದ್ದರೂ, ನಾಟಕದ ಕೊನೆಯಲ್ಲಿ ಬದುಕಿನ ಸಶಕ್ತ ವಿಚಾರವನ್ನು ನೋಡುಗರ ಮನಕ್ಕೆ ದಾಟಿಸುತ್ತದೆ. ನಾಟಕ ಮುಗಿದ ಮೇಲೂ ವೈಚಾರಿಕ ಸಂಭಾಷಣೆ­ಗಳು ಕಾಡುತ್ತವೆ. ಈ ಸಂಗತಿ­ಯಲ್ಲೇ ನಾಟಕ ಗೆದ್ದುಬಿಟ್ಟಿದೆ.

ವೈಚಾರಿಕ ನಾಟಕಗಳು ಬೋರು ಹೊಡೆಸುತ್ತವೆ ಎಂಬ ಅಪವಾದವನ್ನು ನಿರ್ದೇಶಕ ಭಾಸ್ಕರ್‌ ನಾಗಮಂಗಲ ಸುಳ್ಳು ಮಾಡಿದ್ದಾರೆ. ಪ್ರತಿ ದೃಶ್ಯಗಳೂ ಕಣ್ಣಿಗೆ ಕಟ್ಟುವಂತಿವೆ. ಸರಳವಾದ ರಂಗಸಜ್ಜಿಕೆಯೊಂದಿಗೆ ಪ್ರತಿ ಕಲಾವಿದನ ಚಲನೆ, ಮಾತು, ಏರಿಳಿತಗಳನ್ನು ಬಹಳ ಚೆನ್ನಾಗಿ ತಿದ್ದಿದ್ದಾರೆ, ನಿರ್ದೇಶಕರು. ಸಂಗೀತವೂ ಈ ನಾಟಕದ ಇನ್ನೊಂದು ಶಕ್ತಿ. ರವಿ ಮುರೂರು ಸಂಯೋಜಿಸಿರುವ ಎಲ್ಲಾ ಹಾಡುಗಳೂ ನಾಟಕಕ್ಕೆ ಪೂರಕ, ಕಿವಿಗೂ ಇಂಪು.

ಹುಚ್ಚಮಲ್ಲ ಪಾತ್ರಧಾರಿ ಅಶೋಕ್‌ ಬಿ. ಅವರ ಪಾತ್ರ ನೆನಪಿನಲ್ಲಿ ಉಳಿಯುವಂಥದ್ದು. ಪೋಲಿಸ್‌ ಪೇದೆಗಳಾಗಿ ಅಭಿನಯಿಸಿದ ಹರ್ಷವರ್ಧನ್‌, ರಕ್ಷಾ ಕಶ್ಯಪ್‌ ಮತ್ತು ಪೂಜಾರಿ ಪಾತ್ರದಲ್ಲಿ ಅಭಿನಯಿಸಿದ ಮಧುಕರ್‌ ತಮ್ಮ ಅದ್ಭುತ ಹಾಸ್ಯಪ್ರಜ್ಞೆಗಳಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.

— ಸುರೇಶ ಕೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಗರುಡಾ ಮಾಲ್‌ನಲ್ಲಿ ಮೂರು ದಿನಗಳ, ಗೊಂಬೆ ಹಬ್ಬ ಹಾಗೂ ಬೃಹತ್‌ ಪುಸ್ತಕ ಮೇಳ ಹಮ್ಮಿಕೊಳ್ಳಲಾಗಿದೆ. ದಿನದಿಂದ ದಿನಕ್ಕೆ ನಶಿಸುತ್ತಿರುವ ಅಪರೂಪದ ಕಲಾ ಪ್ರಾಕಾರವಾದ...

  • ಬೆಂಗಳೂರು, ವಲಸಿಗರ ಕರ್ಮಭೂಮಿ. ಹೊಟ್ಟೆಪಾಡಿಗಾಗಿ ಇಲ್ಲಿಗೆ ಬಂದವರಿಗೆ ಪ್ರತಿಕ್ಷಣವೂ ಕಾಡುವುದು ಜನ್ಮಭೂಮಿಯ ನೆನಪುಗಳು. ಇಲ್ಲಿ ನೆಲೆನಿಂತು ವರುಷಗಳುರುಳಿದರೂ,...

  • ಜಗತ್ತಿನ ಯಾವ ಭಾಗ ದಿಂದಲೇ ಬಂದಿರಲಿ, ಬೆಂಗಳೂರಿನಲ್ಲಿ ಅವರಿಗೆ ಊಟಕ್ಕೇನೂ ತೊಂದರೆ ಆಗುವುದಿಲ್ಲ. ಮುದ್ದೆಯೂಟ, ಗಂಜಿ ಊಟ, ಉತ್ತರ ಭಾರತೀಯ, ದಕ್ಷಿಣ ಭಾರತೀಯ, ಚೈನೀಸ್‌,...

  • ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶಾಪಿಂಗ್‌ ಮಾಡುವ ಯೋಚನೆಯಲ್ಲಿದ್ದೀರಾ? ಹಾಗಾದ್ರೆ, ನಿಮಗಿದೋ ಸಿಹಿ ಸುದ್ದಿ. ಸಂಪೂರ್ಣ ಸಂಘದ ವತಿಯಿಂದ, "ವಸ್ತ್ರಭೂಷಣ' ಕರಕುಶಲ...

  • ವಿಶ್ವ ಸ್ತನ್ಯಪಾನ ಸಪ್ತಾಹ ಆಗಸ್ಟ್‌ ಮೊದಲ ವಾರ ಆಗಸ್ಟ್‌ ಮೊದಲ ವಾರವನ್ನು, ವಿಶ್ವ ಸ್ತನ್ಯಪಾನ ಸಪ್ತಾಹವೆಂದು ಆಚರಿಸಲಾಗುತ್ತದೆ. ತಾಯಿಯ ಹಾಲು ಅಮೃತಕ್ಕೆ ಸಮಾನ....

ಹೊಸ ಸೇರ್ಪಡೆ