ಮುಗಿಲ ಹಕ್ಕಿಯಲಿ ಮೊದಲ ಯಾನ 


Team Udayavani, Mar 10, 2018, 4:04 PM IST

2-mjj10.jpg

ಹೆಲಿ ಟ್ಯಾಕ್ಸಿ ಎಂಬ ಹೆಲಿಕಾಪ್ಟರ್‌ ಟ್ಯಾಕ್ಸಿ ಸೇವೆ ಇತ್ತೀಚಿಗಷ್ಟೆ ನಗರದಲ್ಲಿ ಪ್ರಾರಂಭಗೊಂಡಿದೆ. ಇದು ಮೊದಲ ಹೆಜ್ಜೆಯಷ್ಟೇ. ಬೆಂಗಳೂರಿನ ರಸ್ತೆಗಳ ಮೇಲೆ ರಿಕ್ಷಾ, ಟ್ಯಾಕ್ಸಿಗಳು ಓಡಾಡುವಷ್ಟೇ ಸಲೀಸಾಗಿ ಈಗ ಆಗಸದಲ್ಲಿ ಹೆಲಿಕಾಪ್ಟರ್‌ ಟ್ಯಾಕ್ಸಿಗಳ ಓಡಾಟ ಶುರುವಾಗಿದೆ. ಈ ಚಾರಿತ್ರಿಕ ಹಾರಾಟದಲ್ಲಿ ಮೊದಲ ಪುಳಕ ಅನುಭವಿಸಿದ ವ್ಯಕ್ತಿ ಯಾರು? ಆ ಮೊದಲ ಯಾನದ ಅನುಭವ ಕಥನ ಇಲ್ಲಿದೆ …

ಎಲ್ಲಿಂದ ಹತ್ತೋದು?
ಹೆಲಿ ಟ್ಯಾಕ್ಸಿ ಸೌಲಭ್ಯ ಈಗ ಎಲೆಕ್ಟ್ರಾನಿಕ್ಸ್‌ ಸಿಟಿ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಕಾರ್ಯಾಚರಿಸುತ್ತಿದೆ. ಎಲೆಕ್ಟ್ರಾನಿಕ್ಸ್‌ ಸಿಟಿಯಲ್ಲಿ ಸಿ- ಡಾಟ್‌ ಕಟ್ಟಡದ ಹಿಂಭಾಗದ, ಐಟಿಐ ಮೈದಾನದಲ್ಲಿರುವ ಹೆಲಿಪ್ಯಾಡ್‌ನಿಂದ ಹೆಲಿ ಟ್ಯಾಕ್ಸಿ ಹೊರಡುತ್ತದೆ. ನಗರದ ವಿವಿಧೆಡೆಗಳಲ್ಲಿ ಹೆಲಿಪ್ಯಾಡ್‌ ಗಳಿದ್ದು, ಅನುಮತಿ ಸಿಕ್ಕ ನಂತರ ಮಿಕ್ಕ ಕಡೆಗಳಿಂದಲೂ ಹೆಲಿಟ್ಯಾಕ್ಸಿಯನ್ನು ಹತ್ತಬಹುದು.

ಬುಕ್‌ ಮಾಡೋದು ಹೇಗೆ?
1. ಹೆಲಿ ಟ್ಯಾಕ್ಸಿ ಮೊಬೈಲ್‌ ಆ್ಯಪ್‌ ಅನ್ನು ಮೊಬೈಲ್‌ ಫೋನಿನಲ್ಲಿ ಇನ್‌ ಸ್ಟಾಲ್‌ ಮಾಡಿಕೊಂಡು ಅದರ ಮುಖಾಂತರ ಬುಕ್‌ ಮಾಡಬಹುದು. ಹೆಲಿ ಟ್ಯಾಕ್ಸಿಯನ್ನು ಮುಂಗಡವಾಗಿಯೂ ಬುಕ್‌ ಮಾಡಬಹುದು. ಅಂದರೆ, ಎಷ್ಟೋ ದಿನಗಳ ಬಳಿಕ ಬುಕ್‌ ಮಾಡಬೇಕೆಂದರೆ “ಪ್ಲೆ„ ಲೇಟರ್‌’ ಆಯ್ಕೆಯನ್ನು ಆರಿಸಿಕೊಳ್ಳಬಹುದು.
2. ವಿಮಾನ ನಿಲ್ದಾಣದಲ್ಲಿ ಹೆಲಿ ಟ್ಯಾಕ್ಸಿಯ ಕೌಂಟರ್‌ ಇದ್ದು, ಅದನ್ನು ಪ್ರಯಾಣಿಕರು ಬಳಸಿಕೊಳ್ಳಬಹುದಾಗಿದೆ.
3. ಕಸ್ಟಮರ್‌ ಕೇರ್‌ ಸೌಲಭ್ಯವೂ ಇರುವುದರಿಂದ ದಿನದ ಯಾವುದೇ ಹೊತ್ತಿನಲ್ಲಿ ಬೇಕಾದರೂ ಹೆಲಿ ಟ್ಯಾಕ್ಸಿ ಬುಕ್‌ ಮಾಡಬಹುದು.

“ಸ್ಟಾರ್ಟಪ್‌ ಕಂಪನಿಯೊಂದನ್ನು ಹುಟ್ಟುಹಾಕಿದ್ದ ನನಗೆ ಕೆಲಸದ ನಿಮಿತ್ತ ಗೋವಾ ಮತ್ತು ಬೆಂಗಳೂರಿನ ಓಡಾಟ ಯಾವಾಗಲೂ ಇದ್ದಿದ್ದೇ. ತಿಂಗಳ ಹಿಂದೆ ಯಾವುದೋ ಪತ್ರಿಕೆಯ ಪುಟ ತಿರುವಿದಾಗ, ನಮ್ಮ ಬೆಂಗಳೂರಿನಲ್ಲಿ ಹೆಲಿ ಟ್ಯಾಕ್ಸಿ ಶುರುವಾಗಲಿದೆ ಎಂಬ ಸುದ್ದಿ ಕಣ್ಣಿಗೆ ಬಿದ್ದಿತ್ತು. ಆದಷ್ಟು ಬೇಗ ಆ ದಿನ ಬರಲಿಯೆಂದು ಕಾದಿದ್ದೆ. ಆದರೆ, ಹೆಲಿ ಟ್ಯಾಕ್ಸಿಯ ಪ್ರಥಮ ಹಾರಾಟದಲ್ಲಿ ನಾನೂ ಭಾಗಿಯಾಗುತ್ತೇನೆಂದು ಯಾವತ್ತೂ ಅಂದುಕೊಂಡಿರಲಿಲ್ಲ.

ಮೊನ್ನೆ ಮಾರ್ಚ್‌ 4. ಸಂಜೆ 5.30ಕ್ಕೆ ಗೋವಾಗೆ ಹೋಗುವ ವಿಮಾನವನ್ನು ಏರಬೇಕಿತ್ತು. ಸಾಮಾನ್ಯವಾಗಿ ಏರ್‌ಪೋರ್ಟಿಗೆ ಹೋಗಲು ಎರಡೂವರೆ ತಾಸು ಹಿಡಿಯುತ್ತಿದ್ದುದರಿಂದ ಮುಂಚಿತವಾಗಿಯೇ ಕ್ಯಾಬ್‌ ಬುಕ್‌ ಮಾಡಿಕೊಂಡು ಹೋಗುತ್ತಿದ್ದೆ. ಆವತ್ತು ಹೆಲಿ ಟ್ಯಾಕ್ಸಿಯ ನೆನಪಾಗಿ ಬುಕ್‌ ಮಾಡಿಯೇ ಬಿಟ್ಟೆ. ನನ್ನ ಅದೃಷ್ಟಕ್ಕೆ ಅವತ್ತಿನಿಂದಲೇ ಹೆಲಿಟ್ಯಾಕ್ಸಿಯ ಸೇವೆ ಶುರು. ಕೆಲವೇ ಸೆಕೆಂಡುಗಳಲ್ಲಿ ಬುಕ್ಕಿಂಗ್‌ ಕನ್‌ಫ‌ರ್ಮ್ ಆಗಿಯೇ ಹೋಯಿತು. ನಾನು ಹೆಲಿ ಟ್ಯಾಕ್ಸಿಯನ್ನು ಏರಿದಾಗ ಸಮಯ ಮಧ್ಯಾಹ್ನ 3.30. ಅರ್ಧ, ಮುಕ್ಕಾಲು ಗಂಟೆಯಲ್ಲಿ ಹೋದರೆ ಸಾಕು ಎನ್ನುತ್ತಿದ್ದವರಿಗೆ 15 ನಿಮಿಷಗಳಲ್ಲಿ ಏರ್‌ಪೋರ್ಟ್‌ ತಲುಪಿದಾಗ ಬೆರಗಾಗಿದ್ದೆ..’ ಹೆಲಿಟ್ಯಾಕ್ಸಿಯ ಮೊದಲ ಯಾನದ ಪುಳಕ ಅನುಭವಿಸಿದ ಅಗಸ್ಟೀನೋ ಫೆರ್ನಾಂಡಿಸ್‌ ಹೀಗೆ ಅನಿಸಿಕೆ ಹಂಚಿಕೊಂಡರು. ಮೊದಲ ಪ್ರಯಾಣಿಕರ ಸಾಲಲ್ಲಿ ಇವರು ಅಚ್ಚರಿಗಣ್ಣನ್ನು ತೆರೆದು ಕೂತು, ಬೆಂಗಳೂರಿನ ವಿಹಂಗಮ ನೋಟವನ್ನು ಕಣ್ತುಂಬಿಕೊಂಡರು.

ಇಂಥದ್ದೇ ಅನುಭವ ಅಜಯ್‌ ಕುಮಾರ್‌ ಅವರದು ಕೂಡ. ವಿಮಾನ ನಿಲ್ದಾಣವನ್ನು ಹದಿನೈದೇ ನಿಮಿಷಗಳಲ್ಲಿ ತಲುಪಿದ್ದು ಅವರಿಗೆ ಎಷ್ಟೋ ದಿನಗಳ ಕನಸು ನನಸಾದಂತಾಗಿದೆ. ವಾಹನಗಳ ದಟ್ಟಣೆಯಲ್ಲಿ ಕಿಟಕಿ ಬಂದ್‌ ಮಾಡಿಕೊಂಡು ಎಫ್.ಎಂ.ಗೆ ಕಿವಿಗೊಡುತ್ತಾ ಗಂಟೆಗಟ್ಟಲೆ ಕೂತುಕೊಳ್ಳುವುದರಿಂದ ಮುಕ್ತಿ ಸಿಕ್ಕಾಗ ಖುಷಿ ಪಡುವುದು ಸಹಜವೇ. 

ಎಲ್ಲವೂ ಚೆನ್ನ
ಬೇಗ ತಲುಪುವುದರಿಂದ ಸಮಯ ಉಳಿತಾಯವಾಗುತ್ತೆ ಅನ್ನೋದು ಒಂದು ಸಂತಸವಾದರೆ ಮತ್ತೂಂದು ಸಂತಸ ನಮ್ಮ ನಗರವನ್ನು ಮೇಲಿನಿಂದ ನೋಡುವುದು. ಇಷ್ಟು ದಿನ ಪಕ್ಷಿಗಳು ಹೇಗೆ ನೋಡುತ್ತಿದ್ದವೋ ಅಷ್ಟೇ ಎತ್ತರದಿಂದ ನಗರದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದು ಮತ್ತೂಂದು ಸಂತಸ.

ಹೆಲಿಕಾಪ್ಟರ್‌ ಮೇಲೇರುತ್ತಿದ್ದಂತೆ ಕಟ್ಟಡಗಳು, ರಸ್ತೆಗಳು, ವಾಹನ ಸಾಲುಗಳು, ಕೆರೆಗಳು ಎಲ್ಲವೂ ರಮಣೀಯವಾಗಿ ಕಾಣುವವು. “ರಸ್ತೆಗಳಲ್ಲಿ ಹೋಗುವಾಗ ಟ್ರಾಫಿಕ್‌, ಹಾರ್ನ್, ಹೊಗೆ ಎಲ್ಲವನ್ನೂ ಶಪಿಸಿಕೊಂಡು ಹೋಗುತ್ತಿದ್ದೆವು, ಅವೇ ರಸ್ತೆಗಳನ್ನು ಮೇಲಿಂದ ಹಾರಿ ಹೋಗುವಾಗ ಯಾರಿಗೇ ಆದರೂ ರೋಮಾಂಚನವಾವಾಗುತ್ತೆ’ ಎನ್ನುತ್ತಾರೆ ಅಜಯ್‌ ಕುಮಾರ್‌.ಹ್ರಿಷ್‌ ತೋಟ ಎಂಬುವವರಂತೂ ತಮ್ಮ ಮೊದಲ ಪ್ರಯಾಣದ ಅನುಭವವನ್ನು ಫೋಟೋಗಳಲ್ಲಿ ಬಹಳ ಚೆನ್ನಾಗಿ ಸೆರೆ ಹಿಡಿದಿದ್ದಾರೆ. ಅವರು, “ನಾನು ಇದಕ್ಕೆ ಮೊದಲು ಹೆಲಿಕಾಪ್ಟರ್‌ ಹತ್ತಿದವನಲ್ಲ. ಹೀಗಾಗಿ ಹೆಲಿ ಟ್ಯಾಕ್ಸಿ ಏರುವಾಗ ಮೊದಲಿಗೆ ಭಯ ಆಯ್ತು. ಆದರೆ ಒಳಗೆ ಕೂತ ನಂತರ ಎಲ್ಲಾ ಆರಾಮಾಯ್ತು. ನಮ್ಮ ನಗರ ಎಷ್ಟು ಸುಂದರ ಅಂತ ಅನ್ನಿಸದೇ ಇರದು. ಪ್ರಯಾಣ ಶುಲ್ಕ ಕಡಿಮೆ ಇದ್ದಿದ್ದರೆ ಚೆನ್ನಾಗಿತ್ತು ಅನ್ನೋದು ನನ್ನ ಅಭಿಪ್ರಾಯ.’ ಎಂದು ತಮ್ಮ ಅನುಭವ ಹಂಚಿಕೊಂಡರು. ಹ್ರಿಶ್‌ ಅವರಿಗೆ ತುಂಬಾ ಇಷ್ಟವಾಗಿದ್ದು ನಗರದ ಕೆರೆಗಳ ಸೌಂದರ್ಯ! 

ಹೆಲಿ ಟ್ಯಾಕ್ಸಿಗೆ ಸ್ಪೂರ್ತಿ
ಹೆಚ್ಚು ಕಡಿಮೆ ಬೆಂಗಳೂರಿನಷ್ಟೆ ವಿಸ್ತಾರವಿರುವ ಬ್ರೆಝಿಲ್‌ನ ಸಾವೋ ಪಾಲೋ ನಗರದಲ್ಲಿ ಪ್ರತಿನಿತ್ಯ ಸುಮಾರು 300 ಹೆಲಿಕಾಪ್ಟರ್‌ ಟ್ಯಾಕ್ಸಿಗಳು ಓಡಾಡುತ್ತವಂತೆ. ಬೆಂಗಳೂರಿನಲ್ಲಿ ಹೆಲಿ ಟ್ಯಾಕ್ಸಿ ಆರಂಭಿಸಲು ಸಾವೋ ಪೋಲೋ ಹೆಲಿ ಟ್ಯಾಕ್ಸಿಗಳೇ ಸ್ಫೂರ್ತಿ.

ವೇಳಾಪಟ್ಟಿ ಮತ್ತು ದರ
ಬೆಳಗ್ಗೆ ಮೂರು ಟ್ರಿಪ್‌ ಮತ್ತು ಸಂಜೆ ಮೂರು ಟ್ರಿಪ್‌ನಂತೆ ದಿನಕ್ಕೆ ಒಟ್ಟು ಆರು ಟ್ರಿಪ್‌ಗ್ಳನ್ನು ಹೆಲಿಕಾಪ್ಟರ್‌ ಮಾಡಲಿದೆ. ಬೆಳಗ್ಗೆ 6.30ರಿಂದ 9.45ರ ನಡುವೆ ಬೆಳಗ್ಗಿನ ಟ್ರಿಪ್‌ ಕಾರ್ಯಾಚರಿಸಿದರೆ, ಸಂಜೆ 3.15ರಿಂದ 6ರ ನಡುವೆ ಸಂಜೆಯ ಟ್ರಿಪ್‌ ಕಾರ್ಯಾಚರಿಸಲಿದೆ. ಇವೆರಡು ಟ್ರಿಪ್‌ಗ್ಳನ್ನು ಹೊರತುಪಡಿಸಿ ಬೆಳಗ್ಗಿನ ಮತ್ತು ಸಂಜೆಯ ಶಿಫ್ಟಿನ ನಡುವೆಯೂ ಪ್ರಯಾಣಿಕರು ಹೆಲಿಟ್ಯಾಕ್ಸಿಯನ್ನು ಬಳಸಿಕೊಳ್ಳಬಹುದು. ಆದರೆ, ಒಂದೇ ಶರತ್ತು… ಅದೇನೆಂದರೆ, ಪೂರ್ತಿ ಹೆಲಿಕಾಪ್ಟರ್‌ ಅನ್ನು ಬುಕ್‌ ಮಾಡಬೇಕು. ಬೆಳಗ್ಗಿನ ಮತ್ತು ಸಂಜೆಯ ಟ್ರಿಪ್‌ಗ್ಳಲ್ಲಿ ಶೇರಿಂಗ್‌ ಆಧಾರದಲ್ಲಿ ಬಾಡಿಗೆ ಪಡೆಯಬಹುದು. ಅಂದರೆ, ಪ್ರತಿ ಪ್ರಯಾಣಿಕರು 4,130 ರೂ. ತೆರಬೇಕು. ಪೂರ್ತಿ ಹೆಲಿಕಾಪ್ಟರ್‌ ಅನ್ನು ಬುಕ್‌ (ಚಾರ್ಟರ್‌) ಮಾಡಬೇಕೆಂದರೆ ಮೊತ್ತ ಹೆಚ್ಚುತ್ತದೆ. ಅಂದಹಾಗೆ, ಯಾರು ಬೇಕಾದರೂ ಹೆಲಿ ಟ್ಯಾಕ್ಸಿಯಲ್ಲಿ ಪ್ರಯಾಣಿಸಬಹುದು.

ಯಾವ ಹೆಲಿಕಾಪ್ಟರ್‌?
ಬೆಲ್‌- 407 ಎಂಬ ಹೆಲಿಕಾಪ್ಟರ್‌ ಅನ್ನು ಟ್ಯಾಕ್ಸಿಯಾಗಿ ಬಳಸಿಕೊಳ್ಳಲಾಗುತ್ತಿದೆ. 6 ಆಸನಗಳನ್ನು ಇದು ಹೊಂದಿದೆ. ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ತೂಕವನ್ನು ಕೊಂಡೊಯ್ಯಲು ಆಗದಿರುವುದರಿಂದ ಪ್ರಯಾಣಿಕರಿಗೆ 15 ಕೆ.ಜಿ ಲಗೇಜ್‌ ಮಿತಿ ಇದೆ. ತೂಕ ಅದಕ್ಕಿಂತ ಹೆಚ್ಚಿದರೆ ಸಂಸ್ಥೆಗೆ ಸೇರಿದ ಕೊರಿಯರ್‌ ವಾಹನದಲ್ಲಿ ಲಗೇಜನ್ನು ಏರ್‌ಪೋರ್ಟ್‌ಗೆ ಸಾಗಿಸಲಾಗುವುದು. ಅದರ ಶುಲ್ಕ ಪ್ರತ್ಯೇಕ.

ಹರ್ಷ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.