ಇಳಯ ರಾಜ್ಯೋತ್ಸವ

Team Udayavani, Nov 23, 2019, 5:12 AM IST

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಅವತ್ತು ಗಂಧರ್ವ ಲೋಕ ಧರೆಗಿಳಿದಿತ್ತು. ಸಂಗೀತದ ರಾಜ್ಯೋತ್ಸವ. ಅಲ್ಲಿದ್ದವರೆಲ್ಲ ಸಂಗೀತದ ಕಾವಾಡಿಗಳು. ಸಂಗೀತದ ಸೇನಾನಿಗಳು. ಸಂಗೀತದ ಮಂತ್ರಿಗಳು. ಇವರೆಲ್ಲರಿಗೂ ಸಂಗೀತ ರಾಜರಂತೆ ಇದ್ದಿದ್ದು, ಇಳಯರಾಜ…

ನನ್ನ ಜೀವ ನೀನು, ನನ್ನ ಬಾಳ ಜ್ಯೋತಿ ನೀನು…- ಭಾವ ದುಂಬಿಯಾಗಿ ಎಸ್ಪಿಬಿ ಈ ಹಾಡನ್ನು ಹಾಡಿ, ಮುಗಿಸಿದ್ದಷ್ಟೇ. ಇಳಯರಾಜ ನಗುತ್ತಾ, “ನನ್‌ ಜೀವ ನೀನು ಅಂತ ಈಗ್ಲಾದ್ರೂ ಗೊತ್ತಾಯ್ತಲ್ಲ ನಿಂಗೆ, ಅದೇ ನನ್‌ ಪುಣ್ಯ…’ ಎಂದು ತಮಾಷೆ ತೇಲಿಸಿದರು. ನಾಲ್ಕು ದಶಕ ದಾಟಿದ ಸ್ನೇಹ. ಇಬ್ಬರ ಕಾಂಬಿನೇಷನ್ನಿನಲ್ಲಿ ಸಾವಿರಾರು ಹಾಡುಗಳು, ಕೇಳುಗರ ಎದೆಯಲ್ಲಿ ಗೂಡು ಕಟ್ಟಿವೆ. ಮಕ್ಕಳು ಬುಗುರಿ ಆಡಿದಂತೆ, ವೇದಿಕೆ ಮೇಲೂ ಪದ ಬುಗುರಿ, ಸ್ವರ ಬುಗುರಿ ಆಡುವ ಧೈರ್ಯ ಇಬ್ಬರಿಗೂ ನಾಜೂಕಾಗಿ ಒಲಿದಿದೆ. ಏಕವಚನದ ಸಲುಗೆ. ಅದನ್ನು ನೋಡುವುದೇ ಒಂದು ಖುಷಿ.

ಬೆಂಗಳೂರಿನ ವಿಮಾನ ನಿಲ್ದಾಣದ ಆವರಣದಲ್ಲಿ ಅವತ್ತು ಗಂಧರ್ವ ಲೋಕ ಧರೆಗಿಳಿದಿತ್ತು. ಸಂಗೀತದ ರಾಜ್ಯೋತ್ಸವ. ಅಲ್ಲಿದ್ದವರೆಲ್ಲ ಸಂಗೀತದ ಕಾವಾಡಿಗಳು. ಸಂಗೀತದ ಸೇನಾನಿಗಳು. ಸಂಗೀತದ ಮಂತ್ರಿಗಳು. ಇವರೆಲ್ಲರಿಗೂ ಸಂಗೀತ ರಾಜರಂತೆ ಇದ್ದಿದ್ದು, ಇಳಯರಾಜ. ಈ ಗಾರುಡಿಗನ ಶಿಸ್ತನ್ನು ಮತ್ತೆ ಕಂಡೆ. ಸ್ವರ ನುಡಿಸುವವರು ಒಂದು ಸ್ವರ ಆಚೆಈಚೆ ನುಡಿಸಿದರೂ, ಅದನ್ನು ಮತ್ತೂಮ್ಮೆ ನುಡಿಸಲು ಹೇಳುತ್ತಿದ್ದರು. ಹಾಡುವವರೂ ಒಂದು ಸ್ವರ ಏರಿಸಿ, ತಗ್ಗಿಸಿದರೂ, ತಕ್ಷಣ ಗಮನಿಸಿ, ಮತ್ತೆ ಹಾಡಿಸುತ್ತಿದ್ದರು ಇಳಯರಾಜ. ಎಸ್ಪಿಬಿಯನ್ನೂ ಅವರು ಬಿಡಲಿಲ್ಲ. ಪ್ರೇಕ್ಷಕರು ಅದೆಷ್ಟೇ ಸಾವಿರವಿರಲಿ, ಇಳಯರಾಜ ಅವರಿಗೆ ಸಂಗೀತದ ಅಚ್ಚುಕಟ್ಟುತನ ಮುಖ್ಯ.

ಈ ಕಾರ್ಯಕ್ರಮದಲ್ಲಿ ಮೂರು ಹಾಡಿಗಾಗಿ, ನಾನು ಇಳಯರಾಜ ಅವರ ಪಕ್ಕ ನಿಂತಿದ್ದೆ. “ನಮ್ಮೂರ ಮಂದಾರ ಹೂವೆ’ ಚಿತ್ರದ “ಹಳ್ಳಿà… ಲಾವಣಿಯಲ್ಲಿ ಲಾಲಿ…’ ಹಾಡುವಾಗ, ಅವರು ನನ್ನೊಳಗಿನ ಹಳೇನೆನಪಿಗೆ ಗಾಳ ಹಾಕಿದರು. ನಾನು ಅವರನ್ನು ಮೊದಲು ಭೇಟಿಯಾಗಿದ್ದು, 23 ವರುಷಗಳ ಹಿಂದೆ. “ನಮ್ಮೂರ ಮಂದಾರ ಹೂವೆ’ ಚಿತ್ರಕ್ಕೆ ಒಂದು ಹಾಡು ಬರೀ ಎಂದು ಕರೆದವರು, ನಾನು ಬರೆದ ಎರಡು ಸಾಲನ್ನು ನೋಡಿ, 3 ಹಾಡು ಬರೆಯಲು ಅವಕಾಶ ಕೊಟ್ಟಿದ್ದರು. “ಹೇಳೇ ಕೋಗಿಲೆ ಇಂಪಾಗಲಾ…’, “ಹಳ್ಳಿà… ಲಾವಣಿಯಲ್ಲಿ ಲಾಲಿ…’, “ಮುತ್ತು ಮುತ್ತು ನೀರ ಹನಿಯ…’ ಹಾಡುಗಳ ಹುಟ್ಟು ಹೀಗಾಯಿತು.

ಒಂದು ಕೋರಸ್‌ ಕಂಪೋಸ್‌ ಮಾಡುವ ಸಂದರ್ಭ. ಚಾಮುಂಡೇಶ್ವರಿ ಸ್ಟುಡಿಯೊದಲ್ಲಿದ್ದೆವು. “ತನನನ ತಕಿಟ ತಕಿಟ ಧೀ, ತನನನ ತಕಿಟ ತಕಿಟ ಧೀ…- ಇದಕ್ಕೆ ಒಂದು ಲೈನ್‌ ಬರಿ’ ಎಂದು ಇಳಯರಾಜ ಸ್ಥಳದಲ್ಲೇ ಸೂಚಿಸಿದ್ದರು. “ಅರೆರೆ ತುಂತುರ ತುಂತುರ ಋತು’ ಅಂದೆ. “ಸೌಂಡಿಂಗ್‌ ಚೆನ್ನಾಗಿದೆ’ ಎನ್ನುತ್ತಾ, ಕಣ್ಣರಳಿಸಿದ್ದರು. ನಾನು ಆಮೇಲೆ, “ಅದಕ್ಕೆ ಒಳ್ಳೆಯ ಮೀನಿಂಗ್‌ ಇದೆ ಸರ್‌. ಅರೆರೆ ತುಂತುರು ತಂತು ಋತು’ ಅಂದೆ! ಅದನ್ನು ಕೇಳಿ ಖುಷಿಪಟ್ಟರು. ಅವರ ಕಂಪೋಸಿಂಗ್‌ ಅಂದ್ರೇನೇ ವಿಶೇಷ ವೈಬ್ರೇಷನ್‌! ಇಳಯರಾಜ- ಎಸ್ಪಿಬಿ ಇಬ್ಬರೂ, ಕಾರ್ಯಕ್ರಮಕ್ಕೆ ಎರಡು ದಿನವಿರುವಾಗಲೇ ಬೆಂಗಳೂರಿಗೆ ಬಂದಿದ್ದರು. 150 ಸಂಗೀತಗಾರರ ಮಧ್ಯದಲ್ಲಿ ಸಾಮಾನ್ಯರಂತೆ ಕುಳಿತು, ಅಭ್ಯಾಸ ಮಾಡಿದರು.

ಸಾವಿರಾರು ಹಾಡು ಕಂಪೋಸ್‌ ಮಾಡಿರಬಹುದು; ಸಾವಿರಾರು ಹಾಡು ಹಾಡಿರಬಹುದು; ಸಾವಿರಾರು ವೇದಿಕೆ ಹತ್ತಿರಬಹುದು. ಆದರೂ ಸಾವಿರದ ಒಂದನೇ ವೇದಿಕೆ ಹತ್ತಬೇಕು ಎಂದಾಗ, ಪೂರ್ವತಯಾರಿ ಎನ್ನುವುದು ಅವರ ಪಾಲಿಗೆ ತಪಸ್ಸು. ಅದೇ ಶ್ರದ್ಧೆ. ಇವರ ಪಫೆìಕ್ಷನ್‌ಗೆ ಇದೇ ಕಾರಣ. ಇಳಯರಾಜ ಅವರಿಗೀಗ ಎಪ್ಪತ್ತಾರು ವರುಷ. ಒಂದು ಸಲ ವೇದಿಕೆ ಹತ್ತಿದವರು, ನಾಲ್ಕು ತಾಸು ನಿಂತೇ ಇದ್ದ ತರುಣ. ಒಂದು ನಿಮಿಷವೂ ಕೂರಲಿಲ್ಲ. ಹಾರ್ಮೋನಿಯಂ ಮುಂದೆ ನಿಂತೇ ಇದ್ದರು. ಆ ಎನರ್ಜಿ ಎಲ್ಲಿಂದ ಬರೋದಿಕ್ಕೆ ಸಾಧ್ಯ? ಸಂಗೀತದಿಂದ, ಸ್ವರತಪಸ್ಸಿನಿಂದ ಮಾತ್ರ!

ಇಳಯರಾಜ ಅವರಿಗೀಗ ಎಪ್ಪತ್ತಾರು ವರುಷ. ಒಂದು ಸಲ ವೇದಿಕೆ ಹತ್ತಿದವರು, ನಾಲ್ಕು ತಾಸು ನಿಂತೇ ಇದ್ದ ತರುಣ. ಒಂದು ನಿಮಿಷವೂ ಕೂರಲಿಲ್ಲ…

* ಕೆ. ಕಲ್ಯಾಣ್‌, ಖ್ಯಾತ ಗೀತರಚನೆಕಾರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಕರಾವಳಿಯ ಕಂಬಳದ ಕಹಳೆ ಜಗದಗಲ ಮೊಳಗಿದೆ. ಕಂಬಳ ಓಟಗಾರನಿಗೆ ಬಹುಪರಾಕ್‌ ಸಿಗುತ್ತಲೇ ಇದೆ. ರಾಜ್ಯಕ್ರೀಡಾಕೂಟದಲ್ಲೂ ಕಂಬಳ ಪ್ರವೇಶಿಸುವ ಮಾತುಗಳು ಕೇಳಿಬರುತ್ತಿವೆ....

  • ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಈಗಾಗಲೇ ಆಸೆ- ನಿರೀಕ್ಷೆಗಳ ತೋರಣ ಕಟ್ಟಿದೆ. ಫೆ.26ರಿಂದ ಮಾ.4ರ ವರೆಗೆ, 7 ದಿನಗಳ ಕಾಲ, ವಿಶ್ವದ ಅನೇಕ ದೇಶಗಳಲ್ಲಿ ಪ್ರಸಿದ್ಧಿ...

  • ಕೈಗಳೇ ಇಲ್ಲದವರು ಕಲಾವಿದರಾಗಬಹುದಾ? ಕಾಲಿನಲ್ಲೋ, ಬಾಯಿಯಲ್ಲೋ ಬ್ರಷ್‌ ಕಚ್ಚಿಕೊಂಡು ಗೆರೆ ಎಳೆಯಲು, ಕಲ್ಪನೆಗೆ ಬಣ್ಣ ತುಂಬಲು ಸಾಧ್ಯವಾ? ಸಿಕೆಪಿಯಲ್ಲಿ ಇದಕ್ಕೆ...

  • ಕನ್ನಡ, ಹಿಂದಿ ಚಿತ್ರಭೂಮಿಕೆಗಳಲ್ಲಿ ನಟಿಸಿದ್ದ, ಹಿರಿಯ ಅಭಿನೇತ್ರಿ ಕಿಶೋರಿ ಬಲ್ಲಾಳ್‌ ಇತ್ತೀಚೆಗಷ್ಟೇ ಇಹವನ್ನು ಅಗಲಿದರು. ಆಪ್ತ ಬಳಗದಲ್ಲಿ ಅವರು ಬಿತ್ತಿದ...

  • ರಾವಣ, ಸೀತೆಯನ್ನು ಅಪಹರಿಸಿ, ಲಂಕೆಗೆ ಕರೆತಂದಿದ್ದಾನೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ರಾಮ ಬಳಗದಲ್ಲಿ ಮುಂದಿನ ಪ್ರಶ್ನೆ ಎದ್ದು ಕುಳಿತಿತ್ತು: ಲಂಕೆಗೆ ಹೋಗುವುದು...

ಹೊಸ ಸೇರ್ಪಡೆ