ಲೇಡೀಸ್‌ ಕೆಫೆ

ಮಹಿಳಾಮಣಿಗಳ "ಕೆಫೆ ಉಡುಪಿ ರುಚಿ'

Team Udayavani, Sep 21, 2019, 5:17 AM IST

ಮಹಿಳಾಮಣಿಗಳ "ಕೆಫೆ ಉಡುಪಿ ರುಚಿ'

ಮನೆಯಲ್ಲಿ ಅಡುಗೆಯ ಜವಾಬ್ದಾರಿ ಮಹಿಳೆಯರದ್ದಾದರೂ, ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಗಂಡಸರದ್ದೇ ಪಾರುಪತ್ಯ. ಅಡುಗೆ ಮಾಡುವವರಿಂದ ಹಿಡಿದು, ಸರ್ವ್‌ ಮಾಡುವವರೆಗೆ ಎಲ್ಲರೂ ಗಂಡಸರೇ ಆಗಿರುತ್ತಾರೆ. ಆದರೆ, ಇಲ್ಲೊಂದು ಹೋಟೆಲ್‌ನಲ್ಲಿ ಮಹಿಳೆಯರೇ ಬಾಣಸಿಗರು, ಬಡಿಸುವವರು ಕೂಡ!

ವಿಜಯನಗರದಲ್ಲಿರುವ “ಕೆಫೆ ಉಡುಪಿ ರುಚಿ’, ಮಹಿಳಾ ಮಣಿಗಳದ್ದೇ ಪಾಕಶಾಲೆ. ಮಾಲೀಕರಿಂದ ಹಿಡಿದು, ಸರ್ವ್‌ ಮಾಡುವವರು, ಸ್ವತ್ಛಗೊಳಿಸುವವರು… ಇಲ್ಲಿ ಎಲ್ಲ ಪಾತ್ರವನ್ನು ನಿರ್ವಹಿಸುವುದು ಮಹಿಳೆಯರೇ. ಅಪ್ಪಟ ಕರಾವಳಿ ರುಚಿಯನ್ನು ಉಣಬಡಿಸುವ ಈ ಹೋಟೆಲ್‌ನಲ್ಲಿ, ಶಿಸ್ತಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಎಲ್ಲೋ ಫಾರಿನ್‌ ಹೋಟೆಲ್‌ನಲ್ಲಿ ಕುಳಿತು, ಆಹಾರ ಸವಿದ ಭಾವ.

18 ಮಹಿಳಾ ಸಿಬ್ಬಂದಿ
ಲಲಿತಾರಾವ್‌ ಸಾಹೇಬ ಅವರ ಕನಸಿನ ಕೂಸು “ಕೆಫೆ ಉಡುಪಿ ರುಚಿ’. ಇದು ಶುರುವಾಗಿದ್ದು, 2014ರಲ್ಲಿ. ಕೇವಲ ಐದೇ ಐದು ವರ್ಷಗಳಲ್ಲಿ ಈ ಕೆಫೆ ವಿಜಯನಗರದ ಜನತೆಯ ನೆಚ್ಚಿನ ಹೋಟೆಲ್‌ ಆಯಿತು. 18 ಮಹಿಳಾ ಸಿಬ್ಬಂದಿ, ಈ ಹೋಟೆಲ್‌ನ ಯಶಸ್ಸಿನ ಹಿಂದಿರುವ ಶಕ್ತಿ. ಇಲ್ಲಿನ ಕೆಲಸಗಾರರು ಯಾವುದೇ ಹೋಟೆಲ್‌ ಮ್ಯಾನೆಜ್‌ಮೇಂಟ್‌ ಕೋರ್ಸ್‌ಗಳನ್ನು ಒದಿದವರಲ್ಲ. ಬದಲಾಗಿ ಕಡಿಮೆ ಶಿಕ್ಷಣ ಪಡೆದವರು. “ಜನರ ಹಸಿವು ನೀಗಿಸುವ ಕೆಲಸದ ಜೊತೆಜೊತೆಗೇ, ಮಹಿಳೆಯರನ್ನು ಸಶಕ್ತರನ್ನಾಗಿಸುವ ಕಾರ್ಯವನ್ನೂ ಮಾಡುತ್ತಿದ್ದೇವೆ’ ಎನ್ನುತ್ತಾರೆ, ಲಲಿತಾ.

ಟ್ಯೂಸ್‌ಡೇ ಟ್ರೀಟ್‌
ಪ್ರತಿ ಮಂಗಳವಾರದಂದು ಕೆಫೆಯಲ್ಲಿ “ಟ್ಯೂಸ್‌ಡೇ ಟ್ರೀಟ್‌’ ಹೆಸರಲ್ಲಿ, ಗ್ರಾಹಕರಿಗೆ ವಿಶೇಷ ಡಿಸ್ಕೌಂಟ್‌ ನೀಡಲಾಗುತ್ತದೆ. ಅದೇನೆಂದರೆ, ವಾರದ ಹಿಂದೆಯೇ ಮೂರು ಅಕ್ಷರಗಳನ್ನು ಆಯ್ಕೆ ಮಾಡಿ, ಅದನ್ನು ಫೇಸ್‌ಬುಕ್‌ ಮತ್ತು ಕೆಫೆಯ ಡಿಸ್‌ಪ್ಲೇನಲ್ಲಿ ಘೋಷಿಸುತ್ತಾರೆ. ಉದಾ: ಈ ವಾರದ ಅಕ್ಷರ “WIN’ ಅಂತಿದ್ದರೆ, ಕೆಫೆಗೆ ಬರುವ ಗ್ರಾಹಕರ ಹೆಸರಿನಲ್ಲಿ ಆ 3 ಅಕ್ಷರ ಕ್ರಮವಾಗಿ ಇರಬೇಕು. ಉದಾಹರಣೆ: ASH’WIN’I. ಆ ಗ್ರಾಹಕರು ತಮ್ಮ ಗುರುತಿನ ಚೀಟಿ ತೋರಿಸಿ, ಉಚಿತವಾಗಿ ಊಟ ಮಾಡಬಹುದು. ಆದರೆ, ಊಟವನ್ನು ಬೇರೆಯವರೊಂದಿಗೆ ಶೇರ್‌ ಮಾಡುವಂತಿಲ್ಲ ಮತ್ತು ವ್ಯರ್ಥ ಮಾಡುವಂತಿಲ್ಲ. ಒಂದುವೇಳೆ, ಊಟ ಚೆಲ್ಲಿದರೆ ಪೂರ್ತಿ ಹಣ ಪಾವತಿಸಬೇಕು. ಪ್ರತಿ ಟ್ಯೂಸ್‌ಡೇ ಟ್ರೀಟ್‌ನಲ್ಲಿ 50-65 ಗ್ರಾಹಕರು ಇರುತ್ತಾರೆ. ಒಂದು ಬಾರಿ ಮಾತ್ರ 250 ಜನ ಟ್ರೀಟ್‌ ಪಡೆದಿದ್ದರಂತೆ.

ಪ್ರತಿದಿನ 600-800 ಮಂದಿ ಈ ಹೋಟೆಲ್‌ನ ಅಡುಗೆ ರುಚಿ ಸವಿಯಲು ಬರುತ್ತಾರೆ. ಭಾನುವಾರದಂದು ಈ ಸಂಖ್ಯೆ 900 ದಾಟುತ್ತದೆ. ಖ್ಯಾತ ಬಾಲಿವುಡ್‌ ನಟ ವಿವೇಕ್‌ ಒಬೇರಾಯ್‌, ಸಂಗೀತ ನಿರ್ದೇಶಕ ವಿ. ಮನೋಹರ್‌, ನಟ ಸಿಹಿಕಹಿ ಚಂದ್ರು ಅವರಿಗೆ ಈ ಹೋಟೆಲ್‌ ಅಚ್ಚುಮೆಚ್ಚು.

ಇಲ್ಲಿನ ಸ್ಪೆಷೆಲ್‌ ಏನು?
ದೋಸಾ ಬರ್ಗರ್‌ ಅನ್ನು ಇಲ್ಲಿ ಒಮ್ಮೆಯಾದರೂ ಚಪ್ಪರಿಸಲೇಬೇಕು. ಉಪ್ಪುಪುಳಿ ದೋಸಾ, ಮ್ಲಪೇರೋಲ್‌ (ಸ್ವೀಟ್‌), ಗುಳ್ಳಾ ಡಿಪ್‌ ದೋಸಾ, ಕುಡ್ಲಾ ಐಸ್‌ಕ್ರೀಮ್‌… ಹೀಗೆ ಕರಾವಳಿ ರುಚಿಗಳಿಗೆ ವಿಭಿನ್ನ ಸ್ಪರ್ಶ ನೀಡಲಾಗಿದೆ.

ಎಲ್ಲಿದೆ?
ವಿಜಯನಗರ ಮೆಟ್ರೋ ಸ್ಟೇಷನ್‌ ಸಮೀಪ, ಸರ್ವೀಸ್‌ ರಸ್ತೆ

ಭಾಗ್ಯ ಎಸ್‌. ಬುಳ್ಳಾ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಜಧಾನಿಯಲ್ಲಿ ನೆಲೆನಿಂತ ಕರಾವಳಿಗರು ಇಡೀ ದಿನ ದುಡಿದು ದಣಿದರೂ, "ಆಟ ಉಂಟು ಮಾರ್ರೆ' ಅಂದಾಗ, ಕೊಂಚ ರಿಲ್ಯಾಕ್ಸ್‌ ಆಗುತ್ತಾರೆ. ರಾತ್ರಿ ಸಂಪೂರ್ಣವಾಗಿ ನಿದ್ದೆ...

  • ಕಣ್ಣಗಲಿಸಿಕೊಂಡು ಅಡುಗೆ ಮಾಡುವವರಿಗೇ, ಒಮ್ಮೊಮ್ಮೆ ಪಾಕಪ್ರಯೋಗಗಳು ಕೈಕೊಡುತ್ತವೆ ಅಥವಾ ರುಚಿಸುವುದೇ ಇಲ್ಲ. ಇನ್ನು ಈ ಹುಡುಗ ಏನು ಮಾಡಿಯಾನು? ಎಂದು ಅಚ್ಚರಿಪಟ್ಟೆ....

  • ನಿತ್ಯವೂ ಮನೆಯಲ್ಲಿ ಸಿಲೋನ್‌ ರೇಡಿಯೊ ಹಾಡುತ್ತಿತ್ತು. ಎಪ್ಪತ್ತರ ದಶಕದ ಆ ಕಾಲಕ್ಕೆ ಅದೇ ನಮ್ಮ ಕಣ್ಣಮುಂದಿನ ಗಾಯಕ. ಕೇಳಲು ಇಂಪಾದ ಚಿತ್ರಗೀತೆಗಳನ್ನು ಹೊತ್ತು...

  • ರಂಗ ನಿರಂತರ ಸಾಂಸ್ಕೃತಿಕ ಸಂಘದ ವತಿಯಿಂದ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ಹಮ್ಮಿಕೊಳ್ಳಲಾಗಿದೆ. ಭಾನುವಾರದಿಂದ, ಐದು ದಿನಗಳ ಕಾಲ ರಂಗೋತ್ಸವ ನಡೆಯಲಿದ್ದು, ಬಹುಭಾಷಾ...

  • ಕಲಾವಿದೆ ರಕ್ಷಾ ಶ್ರೀರಾಮ್‌ ಅವರ ಪರಿಕಲ್ಪನೆಯಲ್ಲಿ "ದಿ ಚಕ್ರಾಸ್‌'- ಪ್ರಜ್ಞೆಯೆಡೆಗಿನ ಯಾತ್ರೆ ಎಂಬ ಕಂಟೆಂಪರರಿ ಡ್ಯಾನ್ಸ್‌ ಮತ್ತು ಫ್ಯೂಷನ್‌ ಮ್ಯೂಸಿಕ್‌...

ಹೊಸ ಸೇರ್ಪಡೆ