ಸಂಚಾರಿ ಟೈಲರ್‌ 

Team Udayavani, Mar 9, 2019, 2:48 AM IST

ಹೊಸದಾಗಿ ಕೊಂಡು ತಂದ ನಿಮ್ಮ ಉಡುಗೆ ತೊಡುಗೆಯಲ್ಲಿ ಆಲ್‌ಟ್ರೇಷನ್‌ ಇದೆಯೇ? ಸೋಫಾ, ದಿಂಬು-ಹಾಸಿಗೆ, ಟೇಬಲ್‌ ಹೊದಿಕೆ ಹರಿದಿದ್ದರೆ ಹೊಲಿಗೆ ಹಾಕಬೇಕೆ? ಇಲ್ಲವೇ ಮನೆಯಲ್ಲಿನ ಯಾವುದೇ ರೀತಿಯ ಹೊಲಿಗೆ ಕೆಲಸ ಇದೆಯೇ? ಕೇವಲ ಒಂದು ಮೊಬೈಲ್‌ ಕರೆ ಮಾಡಿದರೆ ಸಾಕು, ನಿಮ್ಮ ಮನೆ ಬಾಗಿಲಿಗೇ ಸಂಚಾರಿ ಟೈಲರ್‌ ಹಾಜರ್‌!

ಆನ್‌ಲೈನ್‌ನಲ್ಲಿ ಬುಕ್‌ ಮಾಡಿದರೆ ನೀವು ಹೇಳಿದ ಕಡೆಗೆ ಊಟ- ಉಪಹಾರ ತಂದುಕೊಡುವ ರೀತಿಯಲ್ಲೆ ಒಂದೇ ಒಂದು ಮೊಬೈಲ್‌ ಕರೆ ಮಾಡಿದರೆ ಸಾಕು, ಟೈಲರ್‌ ಶ್ರೀಧರ್‌ ತಮ್ಮ ತ್ರಿಚಕ್ರ ವಾಹನದ ಹೊಲಿಗೆ ಯಂತ್ರದೊಂದಿಗೆ ನಿಮ್ಮ ಮನೆಬಾಗಿಲ ಮುಂದೆ ದರ್ಶನ ಕೊಡುತ್ತಾರೆ. ಆಲ್‌ಟ್ರೇಷನ್‌ಗೆ ಸಂಬಂಧಿಸಿದ ಎಲ್ಲಾ ಕೆಲಸವನ್ನೂ ಕ್ಷಣ ಮಾತ್ರದಲ್ಲಿ ಮಾಡಿ ಮುಗಿಸಿ, ಹೊರಡುತ್ತಾರೆ.

ವಾಹನವೇ ಟೈಲರ್‌ ಅಂಗಡಿ

ಶ್ರೀಧರ್‌ ತಮ್ಮ ವಾಹನದಲ್ಲಿ, ಹೊಲಿಗೆಗೆ ಸಂಬಂಧಿಸಿದ ಎಲ್ಲಾ ಪರಿಕರಗಳನ್ನೂ ಇರಿಸಿಕೊರಿಸಿಕೊಂಡಿದ್ದಾರೆ. ಹೊಸ ಬೆಡ್‌ ಶೀಟ್‌ನ ಆಲೆóàಷನ್‌, ಬ್ಯಾಗ್‌ನ ಜಿಪ್‌ ಹಾಳಾಗಿರುವುದು, ಹೊಸ ಬಟ್ಟೆಗಳ ಸ್ಟಿಚಿಂಗ್‌, ಹರಿದು ಹೋಗಿರುವ ಬಟ್ಟೆಗಳಿಗೆ ಹೊಲಿಗೆ, ಟೇಬಲ್‌ ಹೊದಿಕೆ,ಸೋಫಾ, ದಿಂಬುಗಳಿಗೆ ಸಂಬಂಧಿಸಿದ ಹೊಲಿಗೆ ಕೆಲಸದ ಜತೆಗೆ ಮನೆಯಲ್ಲಿರುವ ಪರದೆ ಇನ್ನಿತರ ಆಲೆóàಷನ್‌ ಮಾಡುತ್ತಾರೆ. ಕಮ್ಮನಹಳ್ಳಿಯ ನಿವಾಸಿ ಆಗಿರುವ ಶ್ರೀಧರ್‌, ಲಿಂಗರಾಜಪುರ, ಕಮ್ಮನಹಳ್ಳಿ, ಕಲ್ಯಾಣ ನಗರ, ಕೋರಮಂಗಲ, ಹೆಬ್ಟಾಳ ಸಹಕಾರ ನಗರ, ರಿಚ¾ಂಡ್‌ ಸರ್ಕಲ್‌, ಬಿಟಿಎಂ ಲೇಔಟ್‌, ಶಿವಾಜಿ ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ “ಸಂಚಾರಿ ಟೈಲರ್‌ ಶ್ರೀಧರ್‌’ ಎಂದೇ ಜನಪ್ರಿಯರು.

ನಷ್ಟದಿಂದ ಸಂತೃಪ್ತಿಯತ್ತ…
ಶ್ರೀಧರ್‌ ಅವರು ಈ ಮೊದಲು ಕುಳಿತಲ್ಲೇ ಟೈಲರಿಂಗ್‌ ಮಾಡುತ್ತಿದ್ದರು. ಯಾಕೋ ದುಡಿಮೆಯಲ್ಲಿ ನಷ್ಟ ಕಂಡರಂತೆ. ಆಗ ಸಹೋದರ, ಸ್ನೇಹಿತರ ಸಲಹೆ ಮೇರೆಗೆ ಸಂಚಾರಿ ಹೊಲಿಗೆ ಯಂತ್ರವನ್ನಿಟ್ಟುಕೊಂಡು, ಸಂಚಾರಿ ಟೈಲರಿಂಗ್‌ ಆರಂಭಿಸಿದರು. ಆ ಐಡಿಯಾ ಕ್ಲಿಕ್‌ ಆಯಿತು.

ಮೊದ ಮೊದಲು ಕಲ್ಯಾಣ ನಗರದ 1ನೇ ಹಂತ, 2ನೇ ಹಂತಗಳಲ್ಲಿ ಈ ಕೆಲಸ ಆರಂಭಿಸಿದರು. ಆನಂತರ ಲಿಂಗರಾಜಪುರ, ಹೆಬ್ಟಾಳಕ್ಕೂ ಕೆಲಸವನ್ನು ವಿಸ್ತರಿಸಿಕೊಂಡರು. ಬಿಟಿಎಂ ಲೇಔಟ್‌, ಕೋರಮಂಗಲ, ರಿಚ¾ಂಡ್‌ ಟೌನ್‌ ಸೇರಿದಂತೆ ಇನ್ನಿತರ ಕಡೆಗಳಿಗೂ ಹೋಗಿಬಂದರು. ಹತ್ತು ವರ್ಷದಿಂದ ಈ ಕೆಲಸದಲ್ಲಿ ನಿತರರಾಗಿದ್ದು ಬದುಕಿನಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ.

ರಜೆ ದಿನಗಳಲ್ಲಿ ಟೆಕ್ಕಿಗಳ ಮನೆಗೆ

ಸಾಫ್ಟ್ವೇರ್‌ ಕ್ಷೇತ್ರದಲ್ಲಿರು ವವರೂ ಶ್ರೀಧರ್‌ ಅವರ ಟೈಲರ್‌ ಕೆಲಸಕ್ಕೆ ಮಾರು ಹೋಗಿದ್ದಾರೆ. ಇವರ ವೀಕೆಂಡ್‌, ಟೆಕ್ಕಿಗಳ ಕೆಲಸಕ್ಕಾಗಿಯೇ ಫಿಕ್ಸ್‌ ಆಗಿದೆ. ಒಂದು ದಿನಕ್ಕೆ ಸುಮಾರು 500 ರೂ.ದಿಂದ 600 ರೂ. ಸಂಪಾದಿಸುವ ಇವರು, ಓಡಾಡಿ ಕೊಂಡು ಮಾಡುವ ಈ ಕೆಲಸದಲ್ಲಿ ಸಂತೃಪ್ತರಾಗಿದ್ದಾರೆ.

ಆನ್‌ ಲೈನ್‌ನಲ್ಲಿ ಬುಕ್‌
ಮಾಡಿದರೆ ನೀವು ಹೇಳಿದ ಕಡೆಗೆ ಊಟ- ಉಪಹಾರ ತಂದುಕೊಡುವ ರೀತಿಯಲ್ಲೆ ಒಂದೇ ಒಂದು ಮೊಬೈಲ್‌ ಕರೆ ಮಾಡಿದರೆ ಸಾಕು, ಟೈಲರ್‌ ಶ್ರೀಧರ್‌ ತಮ್ಮ ತ್ರಿಚಕ್ರ ವಾಹನದ ಹೊಲಿಗೆ ಯಂತ್ರದೊಂದಿಗೆ ನಿಮ್ಮ ಮನೆಬಾಗಿಲಿಗೆ ಬಂದು ಕೆಲಸ ಒಂದು ಕರೆಗೆ ಶ್ರೀಧರ್‌ ಹಾಜರ್‌ ಮಾಡಿಕೊಡುತ್ತಾರೆ…

ಓಡಾಟದ ಟೈಲರಿಂಗ್‌ನಿಂದ ಸಾಕಷ್ಟು ಜನರಿಗೆ ಪರಿಚಿತನಾಗಿದ್ದೇನೆ. ಬೆಂಗಳೂರು ನಗರದಲ್ಲಿ ಸಂಚಾರಿ ಹೊಲಿಗೆ ಯಂತ್ರದ ಕೆಲಸಕ್ಕೆ ಸಾಕಷ್ಟು ಬೇಡಿಕೆ ಇದೆ. ನಗರದಲ್ಲಿರುವ ಹಲವು ಟೈಲರ್‌ಗಳು ನಷ್ಟದಲ್ಲಿ ಜೀವನ ಕಳೆಯುತ್ತಿದ್ದಾರೆ. ಅಂಥವರು ಹೆಚ್ಚಿನ ಸಂಖ್ಯೆಯಲ್ಲಿ ಈ ಹಾದಿಗೆ ಬರಬೇಕು.
ಶ್ರೀಧರ್‌, ಸಂಚಾರಿ ಟೈಲರ್‌

ದೇವೇಶ ಸೂರಗುಪ್ಪ 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬಿಸಿಲಿಗೂ ಬೆದರದೆ, ಮಳೆಗೂ ಜಗ್ಗದೆ, ಚಳಿಗೂ ಕುಗ್ಗದೆ ಡ್ಯೂಟಿ ಮಾಡುವ ಟ್ರಾಫಿಕ್‌ ಪೊಲೀಸರಿಗೆ ನೆರಳು ಒದಗಿಸಲು, ಅಂಬ್ರೆಲ್ಲಾಗಳು ನಗರದಾದ್ಯಂತ ಅರಳುತ್ತಿವೆ....

  • ಬಹುತೇಕ ಭಾರತೀಯ ಸಂಸ್ಕೃತಿಗೆ ಹತ್ತಿರವಿರುವ ದೇಶ ಶ್ರೀಲಂಕಾ. ಈ ಸಾಂಸ್ಕೃತಿಕ ಬೆಸುಗೆಗೆ ಕಾರಣ, ರಾಮಾಯಣದ ಖಳನಾಯಕ ರಾವಣ. ರಾವಣನ ಆ ಸಾಮ್ರಾಜ್ಯ ಈಗ ಹೇಗಿದೆ ಎಂಬುದರ...

  • ಮಲೆನಾಡಿನ ಕಲೆಯ ಮತ್ತೂಂದು ಭಾಗವಾದ ಜೋಗಿಗಳು, ಕಾಡುಸಿದ್ದರು, ಹೆಳವರು ಈ ನಾಟಕವನ್ನು ನಿರೂಪಿಸುವ ಬಗೆ ಬಲುಚೆಂದ... ಕುವೆಂಪು ಸರ್ವ ಶತಮಾನಗಳಿಗೂ ಸಲ್ಲುವ ಕವಿ....

  • ಎಲ್ಲಿ ನೋಡಿದರಲ್ಲಿ ಬರೀ ಪುಸ್ತಕಗಳು. ಸಾರ್ವಜನಿಕ ಲೈಬ್ರರಿ ಇರಬೇಕು ಎಂದುಕೊಂಡರೆ, ನಿಮ್ಮ ಊಹೆ ಶುದ್ಧ ಸುಳ್ಳು. ಈ "ಬುಕ್‌ ವರ್ಲ್ಡ್' ಅನ್ನು ಶ್ರದ್ಧೆಯಿಂದ ಕಟ್ಟಿದವರು,...

  • ಮೀನು ಹೋಟೆಲ್‌ ಅಂದ್ರೆ, ಕ್ಲೀನ್‌ ಇದೆಯಾ ಅಂತ ಜನ ಮೊದಲು ನೋಡುತ್ತಾರೆ. ಕ್ಲೀನ್‌ ಇದ್ದರೂ, ಕರಾವಳಿ ಶೈಲಿಯಲ್ಲಿ ಅಡುಗೆ ತಯಾರಿಸಲು ಬಾಣಸಿಗರು ಪರಿಣತರಾ?- ಅಂತಲೂ...

ಹೊಸ ಸೇರ್ಪಡೆ