ಶಂಕರನ ನೆನಪಿನ ಅಂಗಳ

15ನೇ ವಸಂತದ ಸಂಭ್ರಮ

Team Udayavani, Nov 2, 2019, 4:06 AM IST

ಶಂಕರನ ನೆನಪಲ್ಲಿ…: ಕನ್ನಡದ ಮೇರು ನಟ ಶಂಕರ್‌ ನಾಗ್‌ ಅವರ ಸ್ಮರಣಾರ್ಥ ಪತ್ನಿ ಅರುಂಧತಿ ನಾಗ್‌ ಸ್ಥಾಪಿಸಿದ ಸಂಸ್ಥೆ ಇದು. ರಂಗಪ್ರಿಯರಿಗೆ ಕೈಗೆಟಕುವ ದರದಲ್ಲಿ ರಂಗಮಂದಿರವನ್ನು ನಿರ್ಮಿಸುವುದು ಶಂಕರ್‌ ನಾಗ್‌ರ ಕನಸಾಗಿತ್ತು. ಅದರ ಸಾಕಾರ ರೂಪವೇ ಈ ರಂಗಶಂಕರ.

ದಾನಿಗಳ ನೆರವು: 1990ರಲ್ಲಿ ಶಂಕರ್‌ ನಾಗ್‌ರ ಅಕಾಲಿಕ ಮರಣದ ನಂತರ, ಸಂಕೇತ್‌ ಟ್ರಸ್ಟ್‌ ವತಿಯಿಂದ ಶಂಕರ್‌ ಸ್ಮರಣಾರ್ಥ ರಂಗಮಂದಿರ ನಿರ್ಮಿಸಲು ಯೋಚಿಸಲಾಯ್ತು. 1994ರಲ್ಲಿ ಸರ್ಕಾರದಿಂದ ಭೂಮಿಯೂ ಸಿಕ್ಕಿತು. ಆದರೆ, ನಿಧಿಯ ಕೊರತೆಯಿಂದಾಗಿ ನಿರ್ಮಾಣ ಕೆಲಸ 2001ರವರೆಗೆ ಶುರುವಾಗಲಿಲ್ಲ. ನಂತರ, ರಂಗಭೂಮಿ ಕಲಾವಿದರು, ರಂಗಪ್ರೇಮಿಗಳು ಮತ್ತು ದಾನಿಗಳಿಂದ ದೇಣಿಗೆ ಸಂಗ್ರಹಿಸಿ, ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ರಂಗಶಂಕರ ತಲೆ ಎತ್ತಿ ನಿಂತಿತು.

ವೈಶಿಷ್ಟಗಳು: 1750 ಚದರ ಅಡಿಯ ವೇದಿಕೆ, 4 ಗ್ರೀನ್‌ ರೂಮ್ಸ್‌, ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ, ಎ.ಸಿ., ವಿಶೇಷಚೇತನ ಪ್ರೇಕ್ಷಕರಿಗಾಗಿ ವೀಲ್‌ಚೇರ್‌ ವ್ಯವಸ್ಥೆ, ಪ್ರತ್ಯೇಕ ಶೌಚಾಲಯ, ಎಲಿವೇಟರ್‌ ಇಲ್ಲಿದೆ. ರಂಗಶಂಕರದ ಆವರಣದಲ್ಲಿಯೇ ಪುಸ್ತಕದ ಅಂಗಡಿ, ರುಚಿರುಚಿ ಖಾದ್ಯಗಳನ್ನು ಉಣಬಡಿಸುವ ಕೆಫೆ ಕೂಡಾ ಇದೆ.

ಆಸನ ಸಾಮರ್ಥ್ಯ: 320

ಎಲ್ಲಿದೆ?: ಜೆ.ಪಿ. ನಗರ 2ನೇ ಹಂತ

ಉದ್ಘಾಟನೆ: ಅಕ್ಟೋಬರ್‌ 28, 2004

ನಿರ್ಮಾಣ ಅವಧಿ: 3 ವರ್ಷ (2001-04)

ವಿನ್ಯಾಸ: ವಾಸ್ತುಶಿಲ್ಪಿ ಶಾರುಖ್‌ ಮಿಸ್ತ್ರಿ ಅವರ ಯೋಜನೆಯಂತೆ ನಿರ್ಮಾಣವಾದ ಕಟ್ಟಡ.

(ಬೆಂಗಳೂರಿನಲ್ಲಿ ಚೆಲುವು ಇರುವುದೇ ಹಳೇ ಕಟ್ಟಡಗಳಲ್ಲಿ. ಅಂಥ ಪಾರಂಪರಿಕ ಕಟ್ಟಡಗಳ ಮಾಹಿತಿ ವಿಶೇಷ ಈ ಪಾಕ್ಷಿಕ ಅಂಕಣದ ಅಂತರಾಳ)

ರಂಗೋತ್ಸವ
ಬಹು ನಿರೀಕ್ಷಿತ ರಂಗ ಶಂಕರ ರಂಗೋತ್ಸವವು ಈ ಬಾರಿ ನ. 5-10ರವರೆಗೆ ನಡೆಯಲಿದೆ. ದೇಶದ ವಿವಿಧ ಭಾಗಗಳ ಉತ್ಸಾಹಿ ರಂಗ ತಂಡಗಳು ಭಾಗವಹಿಸುತ್ತಿವೆ. ನಾಟಕದ ಟಿಕೆಟ್‌ಗಳು ರಂಗ ಶಂಕರ ಬಾಕ್ಸ್‌ಆಫೀಸ್‌ ಮತ್ತು ಬುಕ್‌ಮೈಶೋನಲ್ಲಿ ಲಭ್ಯ.

ಪ್ರದರ್ಶನಗೊಳ್ಳುವ ನಾಟಕಗಳು
ನವೆಂಬರ್‌ 5
ನಾಟಕ: ನವ
ಭಾಷೆ: ಕನ್ನಡ
ಕಥಾವಸ್ತು: ಒಂಬತ್ತು ಮಂಗಳಮುಖೀಯರ ಕಥೆ.
ವಯೋಮಿತಿ: 8 ವರ್ಷ ಮೇಲ್ಪಟ್ಟವರು

ನವೆಂಬರ್‌ 6
ನಾಟಕ: ರಿಹ್ಲಾ
ಭಾಷೆ: ಹಿಂದೂಸ್ಥಾನಿ
ಕಥಾವಸ್ತು: ನೂತನ ದೇಶಕ್ಕಾಗಿ ಹಾತೊರೆಯುವ ಯುವ ಜನತೆಯ ಕಥೆ.
ವಯೋಮಿತಿ: 14 ವರ್ಷ ಮೇಲ್ಪಟ್ಟವರು

ನವೆಂಬರ್‌ 7
ನಾಟಕ: ಹೆಲೊ ಫ‌ರ್ಮಾಯಿಶ್‌
ಭಾಷೆ: ಹಿಂದಿ
ಕಥಾವಸ್ತು: ಉದ್ಯಮಶೀಲ ಹರಿಯಾಣದ ಮಹಿಳೆಯರು ಅಂತರಿಕ್ಷಕ್ಕೆ ಹೋಗುವ ಕಥೆ.
ವಯೋಮಿತಿ: 10 ವರ್ಷ ಮೇಲ್ಪಟ್ಟವರು

ನವೆಂಬರ್‌ 8
ನಾಟಕ: ಸಂಗೀತ್‌ ಬಾರಿ
ಭಾಷೆ: ಹಿಂದಿ/ ಮರಾಠಿ
ಕಥಾವಸ್ತು: ಲಾವಣಿ ನೃತ್ಯದ ಮೂಲ ಕಥಾ ಹಂದರವಿದೆ.
ವಯೋಮಿತಿ: 8 ವರ್ಷ ಮೇಲ್ಪಟ್ಟವರು.

ನವೆಂಬರ್‌ 9
ನಾಟಕ: ದಿ ಹಂಗರ್‌ ಆರ್ಟಿಸ್ಟ್‌
ಭಾಷೆ: ಮರಾಠಿ, ಇಂಗ್ಲಿಷ್‌, ಹಿಂದಿ
ಕಥಾಹಂದರ: ಉಪವಾಸದಿಂದ ಬದುಕು ಸಾಗಿಸುವನ ಕಥೆ.
ವಯೋಮಿತಿ: 14 ವರ್ಷ ಮೇಲ್ಪಟ್ಟವರು

ನವೆಂಬರ್‌ 10
ನಾಟಕ: ಈದ್ಗಾ ಕೆ ಜಿನ್ನತ್‌
ಭಾಷೆ: ಹಿಂದಿ, ಉರ್ದು
ಕಥಾವಸ್ತು: ಇಸ್ಲಾಮಿಕ್‌ ಕಥಾ ಹಂದರ.
ವಯೋಮಿತಿ: 14 ವರ್ಷ ಮೇಲ್ಪಟ್ಟವರು

ನಾಟಕದ ಸಮಯ: ನ. 5-9, ಸಂಜೆ 7.30
ಎಲ್ಲಿ?: ರಂಗಶಂಕರ
ಟಿಕೆಟ್‌ ದರ: 200 ರೂ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಅದು 1993. ಅಪ್ಪನ ಅಸ್ಥಿಯನ್ನು ಗಂಗೆಯಲ್ಲಿ ಬಿಡಲು, ಹರಿದ್ವಾರಕ್ಕೆ ಬಂದರು ಡಾ. ಅನಿಲ್‌. ಸಂಗಾತಿ ಪಮೇಲಾಗೆ ಅಲ್ಲಿ ಕಲುಷಿತಗೊಂಡಿದ್ದ ನದಿ, ಪರಿಸರದ ಮೇಲೆ ಕಾಳಜಿ...

  • ಫೋಟೊಗ್ರಫಿ ಮಾಡಲೆಂದೇ ಸಾಕಷ್ಟು ಸಲ ಅಯೋಧ್ಯೆಯಲ್ಲಿ ಓಡಾಡಿದ್ದೆ. ಮೊದಲ ಬಾರಿಗೆ ಹೋದಾಗ, ಅಲ್ಲೊಬ್ಬ ಪುಟ್ಟ ಹುಡುಗ ಬರಿಮೈಯಲ್ಲಿ ನಿಂತಿದ್ದ. "ಇಕ್ಬಾಲ್‌ ಅನ್ಸಾರಿ...

  • ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಅವತ್ತು ಗಂಧರ್ವ ಲೋಕ ಧರೆಗಿಳಿದಿತ್ತು. ಸಂಗೀತದ ರಾಜ್ಯೋತ್ಸವ. ಅಲ್ಲಿದ್ದವರೆಲ್ಲ ಸಂಗೀತದ...

  • ಬೆಂಗಳೂರು ಇರುವುದು ಇಲ್ಲಿ. ಮೌಂಟ್‌ ಎವರೆಸ್ಟ್‌ ಇರುವುದು ಆ ಹಿಮಾಲಯದ ತುದಿಯಲ್ಲಿ. ಇಲ್ಲಿಗೂ- ಅಲ್ಲಿಗೂ ಇರುವ ಚಾರಿತ್ರಿಕ ನಂಟನ್ನು ಇತಿಹಾಸ ಸಂಶೋಧಕ ಧರ್ಮೇಂದ್ರ...

  • ಬೆಂಗಳೂರಿನ ಸಡಗರವನ್ನು ಮತ್ತಷ್ಟು ಹೆಚ್ಚಿಸುವ ಮಧುರ ಕ್ಷಣವೇ- ಕಡಲೆಕಾಯಿ ಪರಿಷೆ. ಇದು, ಬೆಂಗಳೂರಿನ ಪಾಲಿಗೆ ಪ್ರತಿವರ್ಷವೂ ಜೊತೆಯಾಗುವ ಸಂಭ್ರಮ. ಪರಿಷೆಯಂದರೆ...

ಹೊಸ ಸೇರ್ಪಡೆ