ಸೀತಾ- ದಿ ವಾರಿಯರ್‌ ಆಫ್ ಮಿಥಿಲಾ


Team Udayavani, Jun 10, 2017, 4:39 PM IST

1-a.jpg

 ಈವರೆಗೆ ಬರೆದಿರುವ ಪುಸ್ತಕಗಳು 4. ಮಾರಾಟವಾಗಿರುವ ಪ್ರತಿಗಳು, 35 ಲಕ್ಷಕ್ಕೂ ಹೆಚ್ಚು! ಈ ನಾಲ್ಕು ಪುಸ್ತಕಗಳು ಮಾಡಿರುವ ವ್ಯಾಪಾರ 100 ಕೋಟಿಗೂ ಅಧಿಕ! ಭಾಷಾಂತರಗೊಂಡಿರುವುದು 19 ಭಾಷೆಗಳಿಗೆ. ಜೀವಮಾನದ ಸಾಧನೆಗಾಗಿ ಪೋಬ್ಸ್ìನ ಜಗತ್ತಿನ 100 ಮಂದಿ ಪ್ರಬಾವಶಾಲಿಗಳ ಪಟ್ಟಿಯಲ್ಲಿ ಸ್ಥಾನ. ಆರೇಳು ವರ್ಷದ ಹಿಂದಷ್ಟೇ ಬ್ಯಾಂಕರ್‌ ಆಗಿ ಬೋರಿಂಗ್‌ ಜೀವನ ನಡೆಸುತ್ತಿದ್ದ ಅಮಿಶ್‌ ಈಗ ಭಾರತದ ಬೆಸ್ಟ್‌ ಸೆಲ್ಲರ್‌ ಲೇಖಕ. ಅವರ ರಾಮಚಂದ್ರ ಸರಣಿಯ ಎರಡನೆ ಪುಸ್ತಕ ಸೀತಾ- ದಿ ವಾರಿಯರ್‌ ಆಫ್ ಮಿಥಿಲಾ ಪುಸ್ತಕ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ. ಅದರ ಪ್ರಚಾರಕ್ಕೆಂದು ಬೆಂಗಳೂರಿಗೆ ಬಂದಿದ್ದರು. “ಉದಯವಾಣಿ’ ಜೊತೆ ಮಾತುಕತೆಗೆ ಸಿಕ್ಕರು. 

ನನ್ನ ಸೀತೆ
ನಾನು ಚಿಕ್ಕಂದಿನಿಂದಲೂ ಪುರಾಣ ಕತೆಗಳನ್ನು ಕೇಳುತ್ತಾ ಬೆಳೆದವನು. ಅಪ್ಪ ಬನಾರಸ್‌ನಲ್ಲಿ ಪಂಡಿತರಾಗಿದ್ದರು. ಸೀತೆ, ಮುಂಚಿನಿಂದಲೂ ನನ್ನಲ್ಲಿ ಅತೀವ ಕುತೂಹಲ ಹುಟ್ಟಿಸಿದ ಪುರಾಣ ಪಾತ್ರ. ಇಲ್ಲಿನ ತನಕ, ಭಾರತೀಯರಾದ ನಮಗೆ ಗೊತ್ತಿರುವ ಸೀತೆ ಎಂದರೆ ರಮಾನಂದ ಸಾಗರ್‌ರವರು 80ರ ದಶಕದಲ್ಲಿ ತಯಾರಿಸಿದ ರಾಮಾಯಣ ಧಾರಾವಾಹಿಯ “ಅಪ್ಪಟ ಭಾರತೀಯ ನಾರಿ’ ಸೀತೆ. ಆದರೆ ನನಗೆ ಕಾಣುವ ಸೀತೆಯೇ ಬೇರೆ. ನನ್ನ ಸೀತೆ ಬಾರತೀಯಳೂ ಹೌದು. ಧೈರ್ಯವಂತೆ, ಛಲಗಾರ್ತಿಯೂ ಹೌದು. ಅದೆಲ್ಲವನ್ನೂ ಈ ಪುಸ್ತಕದಲ್ಲಿ ಚಿತ್ರಿಸಿದ್ದೇನೆ. ನಮ್ಮ ಸನಾತನ ಸಂಸ್ಕೃತಿ ಈಗಿನ ಪಾಶ್ಚಾತ್ಯ ಸಂಸ್ಕೃತಿಗಳಿಗಿಂತಲೂ ಮುಂದುವರಿದಿತ್ತು. ಅಂದಿನ ಸಮಾಜದಲ್ಲಿ ಹೆಣ್ಣು ಮತ್ತು ಗಂಡಿಗೆ ಸಮಾನ ಸ್ಥಾನ ಪ್ರಾಪ್ತವಾಗಿತ್ತು. ಆ ಎಳೆಯನ್ನು ಪುಸ್ತಕದಲ್ಲಿ ತಂದಿದ್ದೇನೆ. 

ನೌಕರಿಗೆ ವಿದಾಯ ಹೇಳಿದ್ದೇಕೆ?
ನೀವು ನಂಬುತ್ತೀರೋ ಇಲ್ಲವೋ, ನನ್ನ ಮೊದಲ ಪುಸ್ತಕ “ಇಮ್ಮೊàರ್ಟಲ್ಸ್‌ ಆಫ್ ಮೆಲೂಹಾ'(2010) ಬರೆಯೋ ಮುಂಚೆ ಪೂರ್ಣ ಪ್ರಮಾಣದ ಸಾಹಿತ್ಯವನ್ನು ನಾನು ಬರೆದಿಲ್ಲ. ಲೇಖಕರು ಒಂದು ಸಿಟ್ಟಿಂಗ್‌ನಲ್ಲಿ ಪುಸ್ತಕ ಬರೆಯುವುದಕ್ಕೆ ಮೊದಲು ಕಡೇ ಪಕ್ಷ ಕತೆ ಕವನಗಳನ್ನಾದರೂ ಬರೆದಿರುತ್ತಾರೆ. ಪತ್ರಿಕೆಗಳಲ್ಲಿ ಅವು ಪ್ರಕಟವಾಗಿರುತ್ತವೆ. ನನ್ನ ವಿಷಯದಲ್ಲಿ ಹಾಗಾಗಲಿಲ್ಲ. ಮೊದಲ ಪ್ರಯತ್ನದಲ್ಲೇ ಪುಸ್ತಕ ಬರೆದಿದ್ದು, ಮತ್ತದು  ಹಿಟ್‌ ಆಗಿದ್ದು ನನ್ನ ಅದೃಷ್ಟ. ಅದಕ್ಕೆ ಮುಂಚೆ ಕಾಲೇಜು ದಿನಗಳಲ್ಲಿ ಪ್ರೀತಿ- ಪ್ರೇಮ, ಫಿಲಾಸಫಿಗಳ ಕುರಿತು ನಾಲ್ಕೈದು ಸಾಲುಗಳ ತುಕಡಾಗಳನ್ನು ಬರೆಯುತ್ತಿದ್ದೆ. ಆದರೆ ಬರವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ನನ್ನ ಎರಡನೇ ಪುಸ್ತಕ ಹೊರಬರುವವರೆಗೆ ನಾನು ಖಾಸಗಿ ಕಂಪನಿಯೊಂದರ ನೌಕರನಾಗಿದ್ದೆ. ಯಾವಾಗ ನನ್ನ ಸಂಬಳಕ್ಕಿಂತ ಹೆಚ್ಚಿನ ಮೊತ್ತದ ಚೆಕ್‌, ಪುಸ್ತಕಗಳ ಸಂಭಾವನೆ ರೂಪದಲ್ಲಿ ಬಂತೋ ಆವತ್ತೇ ನೌಕರಿಗೆ ವಿದಾಯ ಹೇಳಿದೆ. ಈಗ ನಾನು ಫ‌ುಲ್‌ಟೈಮ್‌ ರೈಟರ್‌.

ಪುರಾಣಕ್ಕೆ ಅಪಚಾರ ಮಾಡುತ್ತಿದ್ದೇನೆಯೇ?
ಖಂಡಿತಾ ಇಲ್ಲ. ನೋಡಿ ಪುರಾಣ ಸಾಹಿತ್ಯ ಬಹಳ ಹಿಂದಿನಿಂದಲೂ ಇದೆ. ಬಹಳಷ್ಟು ವಿದ್ವಾಂಸರು, ಕವಿಗಳು ಪುರಾಣವನ್ನು ತಮ್ಮ ದೃಷ್ಟಿಕೋನಗಳಿಂದ ಈಗಾಗಲೇ ಬರೆದು ಹೋಗಿದ್ದಾರೆ. ಕಾಲಾಂತರದಲ್ಲಿ ಅವು ಶ್ರೇಷ್ಠ ಕೃತಿಗಳೆಂದೂ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ನಾನು ಮಾಡುತ್ತಿರುವುದೂ ಅದನ್ನೇ. ನನಗೆ ಇಷ್ಟವೆನಿಸಿದ ಧಾಟಿಯಲ್ಲಿ, ತೋಚಿದ ಮಾರ್ಗದಲ್ಲಿ ಪುರಾಣ ಕತೆಗಳನ್ನು ಒಂದು ಚೌಕಟ್ಟಿಗೊಳಪಡಿಸಿ ಅತ್ಯಂತ ಪ್ರೀತಿ, ಗೌರವ, ಭಕ್ತಿಯಿಂದ ಬರೆಯುತ್ತಿದ್ದೇನೆ. ಇದು ಅಪಚಾರ ಹೇಗಾಗುತ್ತದೆ? ಇದು ಅಪಮಾನ ಮಾಡಿದ ಹಾಗೆಯೇ? ನಾನು ಅಪಾರ ದೈವಭಕ್ತ. ನಾನು ಪ್ರೀತಿಸುವ, ಪೂಜಿಸುವ ದೇವರನ್ನು ಹೀರೋ ಮಾಡಿ ಬರೆದರೆ ತಪ್ಪೇ? 

ಮಲ್ಟಿ ಲೀನಿಯರ್‌ ನರೇಟಿವ್‌ ಟೆಕ್ನಿಕ್‌
“ರಾಮಚಂದ್ರ’ ಸರಣಿಯ ಪುಸ್ತಕಗಳನ್ನು ಬರೆಯುವಾಗ ವಿಶೇಷ ನಿರೂಪಣಾ ಶೈಲಿಯನ್ನು ಅನುಸರಿಸಿದ್ದೇನೆ. ಇದನ್ನು ಮಲ್ಟಿ ಲೀನಿಯರ್‌ ನಿರೂಪಣಾ ತಂತ್ರ ಎನ್ನುತ್ತಾರೆ. ಈ ಸರಣಿಯ ಮೊದಲ ಪುಸ್ತಕ “ಸಯಾನ್‌ ಆಪ್‌ ಇûಾ$Ìಕು’ ಶ್ರೀರಾಮನ ಜನ್ಮದಿಂದ ಸೀತಾಪಹರಣದ ತನಕದ ಕತೆ ಹೊಂದಿತ್ತು. ಈಗ ಬಿಡುಗಡೆಯಾಗಿರುವ “ಸೀತಾ- ವಾರಿಯರ್‌ ಆಫ್ ಮಿಥಿಲಾ’ದ ಕತೆ, ಸೀತೆಯ ಜನ್ಮದಿಂದ ಸೀತಾಪಹರಣ ತನಕದ್ದು. ಮೂರನೇ ಪುಸ್ತಕ ರಾವಣನ ಜನ್ಮದಿಂದ ಹಿಡಿದು ಸೀತಾಪಹರಣದವೆರೆಗೆ ಇರಲಿದೆ. ಈಗ, ರಾಮಾಯಣದ ಪ್ರಮುಖ ಪಾತ್ರಗಳಾದ ರಾಮ, ಸೀತೆ ಮತ್ತು ರಾವಣ ಇವು ಮೂರರ ಕತೆಗಳೂ ಹುಟ್ಟಿನಿಂದ ಶುರುವಾಗಿ ಸೀತಾಪಹರಣದವರೆಗೆ ಬಂದು ನಿಂತಿದೆ. ನಾಲ್ಕನೇ ಪುಸ್ತಕದ ಕತೆ ಸಮಗ್ರವಾಗಿ ಮೂಡಿಬರಲಿದೆ. ಈ ಪುಸ್ತಕಗಳು ಒಂದು ಇನ್ನೊಂದರ ಮುಂದುವರಿದ ಭಾಗಗಳಲ್ಲ. ಇವು ಪ್ರತ್ಯೇಕ ಅಸ್ತಿತ್ವವನ್ನೂ ಹೊಂದಿರುತ್ತವೆ, ಒಟ್ಟಾಗಿಯೂ ನೋಡಬಹುದು. ಅದು ಈ ನಿರೂಪಣಾ ತಂತ್ರದ ಹೆಗ್ಗಳಿಕೆ. ಜಪಾನಿ ನಿರ್ದೇಶಕ ಅಕಿರಾ ಕುರಸೋವಾರ ಸಿನಿಮಾ “ರಶೋಮನ್‌’, ಹಾಗೂ ಕ್ರಿಸ್ಟೋಫ‌ರ್‌ ನೋಲನ್‌ರ “ಮೆಮೆಂಟೋ’ನಲ್ಲೂ ಈ ತಂತ್ರವನ್ನು ಕಾಣಬಹುದು.

ಹಾಲಿವುಡ್‌ನ‌ಲ್ಲಿ ಸೀತೆ!
“ರಾಮಚಂದ್ರ’ ಸರಣಿಯ ಪುಸ್ತಕಗಳನ್ನು ಸಿನಿಮಾ ಮಾಡುವ ಕುರಿತು ಹಾಲಿವುಡ್‌ ಮತ್ತು ಬಾಲಿವುಡ್‌ ಚಿತ್ರ ನಿರ್ಮಾಣ ಸಂಸ್ಥೆಗಳು ಉತ್ಸುಕತೆ ತೋರಿವೆ. ಈಗ ತಾನೇ ಮಾತುಕತೆ ನಡೆದಿದೆ. ಶೀಘ್ರದಲ್ಲಿ ಆ ಕುರಿತು ವಿವರ ಬಿಚ್ಚಿಡಲಿದ್ದೇನೆ. 
(ಕಲರ್‌ ಚೇಂಜ್‌)ಅಂದಹಾಗೆ ಈ ಹಿಂದೆ “ಇಮ್ಮೊàರ್ಟಲ್ಸ್‌ ಆಫ್ ಮೆಲೂಹಾ’ ಪುಸ್ತಕದ ಸಿನಿಮಾ ಹಕ್ಕನ್ನು ಕರಣ್‌ ಜೋಹರ್‌ ಅವರ ಧರ್ಮ ಪ್ರೊಡಕ್ಷನ್‌ ಸಂಸ್ಥೆ ಖರೀದಿಸಿತ್ತು. ಇತ್ತೀಚಿಗೆ ತಾನೆ ಬಿಡುಗಡೆಯಾಗಿದ್ದ ಬಾಹುಬಲಿ2 ಚಿತ್ರದ ಹಿಂದಿ ಭಾಷೆಯ ವಿತರಣಾ ಹಕ್ಕನ್ನು ಪಡೆದಿದ್ದು ಕೂಡಾ ಇದೇ ಧರ್ಮ ಪ್ರೊಡಕ್ಷನ್ಸ್‌ ಸಂಸ್ಥೆ. ಹಾಗಾಗಿ ಮತ್ತೂಂದು ಬಾಹುಬಲಿಯ ಮಾದರಿಯ ಬ್ಲಾಕ್‌ಬಸ್ಟರ್‌ ಸಿನಿಮಾವನ್ನು ಭಾರತೀಯ ಪ್ರೇಕ್ಷಕರು ನಿರೀಕ್ಷಿಸಬಹುದು.

ನನ್ನ ದೇವರುಗಳಿಗೆ ಮುಖವಿಲ್ಲ
ನನ್ನೆಲ್ಲಾ ಪುಸ್ತಕದ ಮುಖಪುಟಗಳನ್ನು ನೋಡಿದರೆ ಒಂದು ವಿಷಯ ತಿಳಿಯುತ್ತದೆ. ಚಿತ್ರದ ನಾಯಕ ಪಾತ್ರಗಳು ಒಂದೋ ಬೆನ್ನು ತೋರಿಸುತ್ತಿರುತ್ತವೆ, ಇಲ್ಲಾ ಅವರ ಮುಖಕ್ಕೆ ಕತ್ತಲು ಕವಿದಿರುತ್ತದೆ. ಏಕೆಂದರೆ ನನ್ನ ಕತೆಯ ಪ್ರಧಾನ ಪಾತ್ರಗಳ ಚಹರೆ ಓದುಗನ ಮನಸ್ಸಿನಲ್ಲಿ ಮೂಡಬೇಕೆಂಬುದು ನನ್ನಾಸೆ. ಆಗಲೇ ಅದು ಗ್ರೇಟ್‌ ಅನ್ನಿಸಿಕೊಳ್ಳೋದು. ಅದು ಬಿಟ್ಟು ನಾವೇ ಒಂದು ನಿರ್ದಿಷ್ಟ ರೂಪ ಕೊಟ್ಟು ಬಿಟ್ಟರೆ ಓದುಗನ ಕಲ್ಪನಾ ಸ್ವಾತಂತ್ರÂವನ್ನು ಕಿತ್ತುಕೊಂಡ ಹಾಗೆ. ನಾನು ಕಾದಂಬರಿ ಬರೆಯುವಾಗಲೂ ಈ ಸೂತ್ರವನ್ನು ಪಾಲಿಸುತ್ತೇನೆ. ನನ್ನ ಕಾದಂಬರಿಗಳು ಹೆಚ್ಚು ಹೆಚ್ಚು ಜನರಿಗೆ ತಲುಪುವಲ್ಲಿ ಅದೂ ಒಂದು ಕಾರಣವಿರಬಹುದು!

ಮಸಾಲಾ ಸಿನಿಮಾ ಥರ!
ಲವ್‌ ಸ್ಟೋರಿ ಆಗಿರಲಿ, ಸೈಂಟಿಫಿಕ್‌ ಫಿಕ್ಷನ್‌, ಥ್ರಿಲ್ಲರ್‌ ಆಗಿರಲಿ ಅವೆಲ್ಲಾ ಪ್ರಕಾರಕ್ಕೂ ಒಂದು ಮಿತಿ ಇದೆ. ಆ ಮಿತಿಯನ್ನು ಅವು ಮೀರುವುದಿಲ್ಲ. ಕ್ಯಾಂಪಸ್‌ ಲವ್‌ ಸ್ಟೋರಿಗಳಾದರೆ ಕಾಲೇಜು ಬಿಟ್ಟು ಹೊರಬರುವುದಿಲ್ಲ. ಸಾಮಾಜಿಕವಾದರೆ ನಾಲ್ಕು ಕೋಣೆಗಳೊಳಗೇ ನಡೆಯುವ ಕತೆ. ಆದರೆ ನಾನು ಬರೆಯುವ “ಮೈಥಾಲಜಿ ಫಿಕ್ಷನ್‌’ ಪ್ರಕಾರ ಮಸಾಲಾ ಸಿನಿಮಾ ಇದ್ದ ಹಾಗೆ. ಇಲ್ಲಿ ಮಾರ್ದವತೆ,ಪ್ರಣಯ, ಯುದ್ಧ, ರಾಜಕೀಯ, ದ್ವೇಷ ಎಲ್ಲವೂ ಸೇರಿದೆ.

ಯುವಬರಹಗಾರರಿಗೆ ಟಿಪ್ಸ್‌
ನೀವು ಬರೆದಿದ್ದು, ಯಾರಿಗೆ ಇಷ್ಟವಾಗಲಿ, ಬಿಡಲಿ, ಮೊದಲು ನಿಮಗೆ ಇಷ್ಟವಾಗಬೇಕು. ನಿಮಗೆ ಖುಷಿ ಕೊಡಬೇಕು. ಆಗ ಮಾತ್ರ ಬೇರೆಯವರೂ ಅದನ್ನು ಎಂಜಾಯ್‌ ಮಾಡಲು ಸಾಧ್ಯ. 

ಏಳು- ಬೀಳು
ಬೆಳಗ್ಗೆ 5ಕ್ಕೆ ನಿದ್ದೆಯಿಂದ ಎಚ್ಚರ

ಸತತ ಬರವಣಿಗೆ
ಬಿಡುವಿನ ವೇಳೆ ಕುಟುಂಬ ಮತ್ತು ಸ್ನೇಹಿತರ ಜೊತೆ ಸಾಹಿತ್ಯ ಕಾರ್ಯಕ್ರಮ ಮತ್ತು ಪುಸ್ತಕ ಪ್ರಚಾರಗಳಿಗೂ ಹೋಗ್ತಿನಿ ರಾತ್ರಿ 11ಕ್ಕೆ ನಿದ್ದೆ

ನಿರೂಪಣೆ- ಹರ್ಷವರ್ಧನ್‌ ಸುಳ್ಯ
 

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.