ಬಲೆಗೆ ಬಿದ್ದವನ ಭಲೇ ಮನಸ್ಸು

Team Udayavani, Feb 11, 2017, 2:34 PM IST

666.jpg

ಇಂಟ್ರೊ ಬದುಕಿಗೆ ಹತ್ತಿರವಾಗುವ ಸಿನಿಮಾಗಳನ್ನು ಕೊಟ್ಟ ದಕ್ಷಿಣ ಕೊರಿಯಾದ ಕಿಮ್‌  ಕಿ ಡಕ್‌ ಪ್ರತಿ ಚಿತ್ರೋತ್ಸವಗಳಲ್ಲೂ ಎದುರಾಗುತ್ತಾರೆ. ಈ ಬಾರಿ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ದಿ ನೆಟ್‌ ಸಿನಿಮಾವನ್ನು ಪ್ರೇಕ್ಷಕನ ಮುಂದಿಟ್ಟರು. ಬದುಕಿನ ಬಲೆಯಲ್ಲಿ ಸಿಲುಕಿದ ಮುಗ್ಧ ಮೀನುಗಾರನ ಒದ್ದಾಟಕ್ಕೆ ಹೃದಯ ಕಣ್ಣೀರಿಟ್ಟಿತು.

ಯುದ್ಧದಾಹಿ ಉತ್ತರ ಕೊರಿಯಾ ಒಳ್ಳೆಯ ಸಿನಿಮಾ ಉತ್ಪಾದಿಸಿಲ್ಲ. ಆದರೆ, ದಕ್ಷಿಣ ಕೊರಿಯಾದಲ್ಲಿ ಅದು ನೂರಾರು ಅದ್ಭುತ ಸಿನಿಮಾ ಕತೆಗಳನ್ನು ಹುಟ್ಟಿಸಿದೆ. ಇದನ್ನೇ ನೆಪವಾಗಿರಿಸಿ ಕಿಮ… ಜಾಂಗ್‌ ಉನ್‌ ನಮ್ಮಂಥ ನಿರ್ದೇಶಕರ ತಲೆ ಮೇಲೆ, ನಮ್ಮ ಅವಾರ್ಡುಗಳ ಮೇಲೆ ಜಲಜನಕ ಬಾಂಬುಗಳನ್ನು ಸಿಡಿಸಿದರೆ ಏನು ಗತಿ? ವರ್ಷದ ಕೆಳಗೆ ದಕ್ಷಿಣ ಕೊರಿಯಾ ನಿರ್ದೇಶಕ ಕಿಮ… ಕಿ ಡಕ್‌ ಹೀಗೆ ಆತಂಕಿಸಿದ್ದಕ್ಕೆ ಒಂದೇ ಕಾರಣ ದಿ ನೆಟ್‌ ಚಿತ್ರ. ಮೊನ್ನೆ ಅದೇ ಬಲೆ ಬೆಂಗಳೂರಿನಲ್ಲಿ ಚಾಚಿಕೊಂಡಿತ್ತು. ಅಂತಾರಾಷ್ಟ್ರೀಯ ಸಿನಿ ಸುಗ್ಗಿಯ ಪ್ರೇಕ್ಷಕ ಆ ನೆಟ್‌ನಲ್ಲಿ ಮರುಮಾತಿಲ್ಲದೆ ಸೆರೆಯಾಗಿದ್ದ.

ಮೀನುಗಾರನ ಬದುಕನ್ನು ಒಂದು ಬಲೆ ನುಂಗುವ ಕತೆ ದಿ ನೆಟ್‌. ಮಾತಿಗೆ ಜಾಸ್ತಿ ಜಾಗ ಕೊಡದೆ, ಚಿತ್ರಕಥೆಯಿಂದಲೇ ನೋಡುಗನ ಮನಸ್ಸಿಗೆ ಸೇತುವೆ ಕಟ್ಟುವ ನಿರ್ದೇಶಕ ಕಿಮ… ಕಿ ಡಕ್‌. ಹಾವು, ಕಪ್ಪೆ, ಮೀನು, ಕಲ್ಲನ್ನು ತೋರಿಸಿ ಬದುಕು ಇಷ್ಟೇ ಸರಳ ಕಣೊ ಎನ್ನುತ್ತಾ ಸ್ಪ್ರಿಂಗ್‌, ಸಮ್ಮರ್‌ ಫಾಲ್‌, ವಿಂಟರ್‌ ಆಂಡ್‌ ಸ್ಪ್ರಿಂಗ್‌ನ ರೂಪಕಗಳ ರೀಲು ಹಾಸಿದ್ದ ದಿಗªರ್ಶಕ ಈ ನೆಟ್‌ನಲ್ಲಿ ಪ್ರತಿಮೆಗಳನ್ನು ಸಾಲುಗಟ್ಟಿಸದೆ ಸೆಳೆದರು. ಉತ್ತರ ಮತ್ತು ದಕ್ಷಿಣ ಕೊರಿಯಾ ಎಂಬ ಎರಡೂ ವೈಚಾರಿಕ ಮುಖಗಳ ಹಿರಿಮೆ, ಹುಳುಕುಗಳನ್ನು ತೋರಿಸುವಾಗ ಕಿಮ್‌ ಹೊರಗಿನ ಪ್ರಜೆಯಂತೆ ಕ್ಯಾಮೆರಾ ಹಿಡಿದಿದ್ದರು.

ಬದುಕನ್ನು ಇಡಿಯಾಗಿ ಪ್ರೀತಿಸುವ ನ್ಯಾಮ್‌ ಚುಲ್‌ವೂ, ಉ. ಕೊರಿಯಾದ ಗಡಿಯಲ್ಲಿನ ಬಡ ಬೆಸ್ತ. ಚೆಂದದ ಹೆಂಡತಿ, ಪುಟಾಣಿ ಮಗಳು, ನದಿಯಲ್ಲಿನ ಮೀನುಧಿ ಅವನ ಜಗತ್ತಿನಲ್ಲಿ ನಾಲ್ಕನೆಯ ಅಂಶ ನಾ ಕಾಣೆ. ಎರಡೂ ದೇಶಗಳಿಗೆ ಮೈ ಹಂಚಿಕೊಳ್ಳುವ ಗಡಿಯ ನದಿಯಲ್ಲಿ ಮೀನು ಹಿಡಿಯಲು ಹೊರಟಾಗ, ದೋಣಿಯ ಎಂಜಿನ್ನಿಗೆ ಬಲೆ ಸಿಲುಕಿ, ಮೋಟಾರು ಕೈಕೊಡುತ್ತದೆ. ದೋಣಿ ದಕ್ಷಿಣ ಕೊರಿಯಾ ದಾಟುತ್ತದೆ. ಗೂಢಚಾರಿ ಎಂಬ ಶಂಕೆಯಲ್ಲಿ ಸೆರೆಯಾಗುವ ನ್ಯಾಮ… ವಿಚಿತ್ರ ವಿಚಾರಣೆ ಅನುಭವಿಸಿ, ತಾಯ್ನಾಡಿಗೆ ಮರಳುವ ಕತೆಯೊಳಗೆ ಎರಡೂ ನೆಲಗಳು ಮುಗ್ಧನಿಗೆ ಕಲಿಸುವ ಪಾಠವೇ ಒಂದು ರಿಯಾಲಿಟಿ ಶೋ. 

ವಿಚಾರಣಾಧಿಕಾರಿಗೆ ಅವನನ್ನು ಗೂಢಚಾರಿ ಎಂದು ಸಾಬೀತು ಮಾಡುವ ಹಠ. ಅವನನ್ನು ಶಿಕ್ಷೆಯಿಂದ ರಕ್ಷಿಸಲು ಒದ್ದಾಡುವ ಇನ್ನೊಂದಿಷ್ಟು ಮನಸ್ಸುಗಳು. ನೀನು ಇÇÉೇ ಇರು. ಆ ಸರ್ವಾಧಿಕಾರಿ ನೆಲಕ್ಕೆ ಯಾಕೆ ಹೋಗುತ್ತೀ? ಈ ನೆಲದಲ್ಲಿ ಎಲ್ಲ ಸ್ವಾತಂತ್ರ್ಯ, ಸವಲತ್ತು ನಿನಗಿರುತ್ತೆ ಎಂದು ಓಲೈಸುವ ಸಾಹಸ. ಪತ್ನಿ, ಮಕ್ಕಳ ತೊರೆದು ನಿಮ್ಮ ನೆಲದಲ್ಲಿ ಹೇಗಿರಲಿ? ಎಂಬ ಪ್ರಶ್ನೆಗೆ ಕಾಣದಾಗುವ ಉತ್ತರ. ಇವರ ಭವ್ಯ ಸಿಯೋಲ್‌ ನಗರಿಯನ್ನು ನೋಡಿದರೆ ಮನಸ್ಸು ಎಲ್ಲಿ ಇವರ ದೇಶದ ವಶವಾಗುತ್ತೋ ಎಂಬ ಆತಂಕದಲ್ಲಿಯೇ ಕಣ್ಮುಚ್ಚಿ ನಗರ ಸುತ್ತುವ ನ್ಯಾಮ… ನ ದೇಶಪ್ರೇಮ, ವೇಶ್ಯೆ ಮೈಮೇಲೆ ಬಿದ್ದರೂ ಇದು ತಪ್ಪು$ಎನ್ನುವ ಅವನ ಎಚ್ಚರ, ಗೂಢಚಾರಿಕೆಯ ಆರೋಪದ ಪೊರೆ ಕಳಚಿ ಮುಗ್ಧನೆಂದು ಸಾಬೀತಾಗುವಾಗ ನ್ಯಾಮ… ದಕ್ಷಿಣ ಕೊರಿಯಾ ಅಧಿಕಾರಿಗಳ ಮನಸ್ಸು ಗೆಲ್ಲುವ ಪರಿಗೆ ಬಹುಪರಾಕು. 

ಕೆಲವು ಡಾಲರ್‌ ನೋಟುಗಳು, ಪುಟ್ಟ ಗೊಂಬೆಯೊಂದಿಗೆ ಬೀಳ್ಕೊಡುಗೆ ಪಡೆದ ನ್ಯಾಮ ಗೆ ತಾಯ್ನಾಡಿನಲ್ಲೂ ವಿಚಾರಣೆ. ನೀನು ದೇಶಕ್ಕಾಗಿ ಬಂದಿದ್ದಲ್ಲ, ಹೆಂಡ್ತಿಧಿ ಮಗಳಿಗಾಗಿ ಬಂದೆ ಎಂಬ ಶಂಕೆ. ಅಮೆರಿಕವನ್ನು ಉಸಿರು ಉಸಿರಲ್ಲೂ ದ್ವೇಷಿಸುವ ಉತ್ತರ ಕೊರಿಯಾ, ಅವನ ಬಳಿಯಿದ್ದ ಡಾಲರ್‌ ಹಣ ದೋಚಿ, ವಿಚಾರಣೆ ಮುಗಿಸುತ್ತದೆ. ಮನೆಗೆ ಬಂದಾಗ ಪತ್ನಿಯ ಮೇಲೆ ಸೇನಾಧಿಕಾರಿಗಳು ನಡೆಸಿದ ಅತ್ಯಾಚಾರ ಒಂದು ಸಣ್ಣ ಗಾಯದಲ್ಲಿ ಇಣುಕುತ್ತದೆ. ಪುನಃ ಮೀನು ಹಿಡಿಯಲು ಹೋದಾಗ ಅವನ ಲೈಸೆನ್ಸ್‌ ರದ್ದು ಮಾಡಿದ ಪ್ರಭುತ್ವ, ಪ್ರತಿಭಟಿಸಿ ದೋಣಿಗೆ ಕಾಲಿಡುವ ನ್ಯಾಮ…ನನ್ನು ಅದೇ ನದಿಯಲ್ಲಿ ಗುಂಡಿಟ್ಟು ಸಾಯಿಸಿ ಅಮಾನುಷವಾಗಿ ವರ್ತಿಸುತ್ತದೆ. ಅದೇ ಬಲೆಯ ಬುಡದಲ್ಲೇ  ನ್ಯಾಮ್‌ ನ ಉಸಿರು ನಿಲ್ಲುತ್ತದೆ.

ಅಷ್ಟೊತ್ತಿಗಾಗಲೇ ನಮ್ಮ ಮತ್ತೆ ಮುಂಗಾರು ಕಣ್ಮುಂದೆ ಬರುತ್ತದೆ. ಕಿಮ್‌ ಕಿ ಡಕ್‌ನ ಕೈಗೆ ಸಿಕ್ಕಿದ್ದರೆ ಅದೂ ಜಗತ್ತಿನ ತುದಿ ತಲುಪುತ್ತಿತ್ತೇನೋ ಎಂಬ ಆಸೆಗೆ ರೆಕ್ಕೆ ಬರಲು ಸಾಧ್ಯವೇ?

ಕೀರ್ತಿ ಕೋಲ್ಗಾರ್‌

ಟಾಪ್ ನ್ಯೂಸ್

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.