ದೋಸೆಗೆ ದಾಸನಾಗು 


Team Udayavani, Nov 24, 2018, 12:07 PM IST

66.jpg

ಗಾಂಧಿಬಜಾರ್‌, ಬಸವನಗುಡಿ, ಚಾಮರಾಜಪೇಟೆ, ಸಜ್ಜನರಾವ್‌ ಸರ್ಕಲ್‌ನ ಫ‌ುಡ್‌ಸ್ಟ್ರೀಟ್‌… ಇವೆಲ್ಲಾ ರುಚಿರುಚಿಯ ತಿಂಡಿಗೆ, ತರಹೇವಾರಿ ಹೋಟೆಲ್‌ಗೆ ಹೆಸರಾದ ಸ್ಥಳಗಳು. ಇದೇ ಕೆಟಗರಿಗೆ, ಶೇಷಾದ್ರಿಪುರಂ ಕಾಲೇಜು ಸಮೀಪದ ಫ‌ುಡ್‌ಸ್ಟ್ರೀಟ್‌ ಕೂಡ ಸೇರುತ್ತದೆ. ಅಲ್ಲಿರುವ “ಉಮೇಶ್‌ ದೋಸೆ ಪಾಯಿಂಟ್‌’ನ ತಿನಿಸುಗಳ ಸ್ವಾದಕ್ಕೆ ಮರುಳಾಗದವರೇ ಇಲ್ಲ ಅನ್ನಬಹುದು.

ಏಳೆಂಟು ಬಗೆಯ ದೋಸೆ, ಇಡ್ಲಿ, ರೈಸ್‌ ಬಾತ್‌ ಐಟಂಗಳಿಂದಲೇ ಉಮೇಶ್‌ ದೋಸೆ ಪಾಯಿಂಟ್‌ ಹೋಟೆಲು ಹೆಸರುವಾಸಿ. ಅದರಲ್ಲೂ ಇಲ್ಲಿ ಸಿಗುವ ತುಪ್ಪದ ದೋಸೆ, ಇಡ್ಲಿ ತಿನ್ನಲು ಪ್ರತಿದಿನವೂ ಸಂಜೆ ವೇಳೆ ಜಾತ್ರೆಗೆ ಬಂದಂತೆ ಜನ ಬರುತ್ತಾರೆ. ತಿಂಡಿಯ ಪ್ಲೇಟ್‌ ಕೈಲಿ ಹಿಡಿದುಕೊಂಡು ಜೊತೆಗಿದ್ದವರೊಂದಿಗೆ ಖುಷಿಯಿಂದ ಹೇಳುತ್ತಾರೆ: “ಇಡ್ಲಿ ಬಿಸಿಬಿಸಿಯಾಗಿದೆ. ಕೆಂಪುಚಟ್ನಿ, ಸಾಗು ಮತ್ತು ತುಪ್ಪದ ಕಾಂಬಿನೇಷನ್‌ ಸೂಪರ್‌… ದೋಸೆಯ ರುಚಿಯಂತೂ ಫ‌ಸ್ಟ್‌ಕ್ಲಾಸ್‌. ನಾಳೆ ಸಂಜೆ ಮತ್ತೆ ಇಲ್ಲಿಗೇ ತಿಂಡಿಗೆ ಬರೋಣ…’

ಕೆಂಪು ಚಟ್ನಿಪುಡಿಯ ಸವಿ, ಪುದೀನಾ ಚಟ್ನಿಯ ರುಚಿ, ದೋಸೆಯ ಮೃದುತ್ವ, ಅರೆಬೆಂದ ಈರುಳ್ಳಿಯ ತುಣುಕುಗಳು, ಹಿತವಾಗಿ ಕೈತಾಕುವ ಬಿಸಿ, ಜೊತೆಗೆ ಘಮ ಘಮ ತು±³‌… ಇವೆಲ್ಲವೂ ಸೇರಿದಾಗ ದೋಸೆಯ ರುಚಿ ಹೇಗಿರಬಹುದು ಎಂದು ಮಾತಲ್ಲಿ ಹೇಳಲು ಸಾಧ್ಯವಿಲ್ಲ. ಪುಡಿ ಮಸಾಲಾ, ಪುಡಿ ಭಾತ್‌ ಮಸಾಲಾ, ಪುಡಿ ಪ್ಲೇನ್‌ ಮಸಾಲಾ, ಪೇಪರ್‌ ಮಸಾಲಾ, ಪೇಪರ್‌ ಪುಡಿ ಭಾತ್‌, ಪೇಪರ್‌ ಪುಡಿ ಮಸಾಲಾ, ಪುಡಿ ಆನಿಯನ್‌ ಮಸಾಲಾ… ಇವೆಲ್ಲಾ ಉಮೇಶ್‌ ದೋಸೆ ಪಾಯಿಂಟ್‌ನ ವಿಶೇಷಗಳು.

ಶುರುವಾದ ಕತೆ…
ಈ ಹೋಟೆಲ್‌ ಮಾಲೀಕರ ಹೆಸರು ಉಮೇಶ್‌. ಮೂಲತಃ ಬೆಂಗಳೂರಿನವರಾದ ಇವರು, ಈ ಮೊದಲು ಪುಟ್ಟ ಚಾಟ್‌ ಸೆಂಟರ್‌ ನಡೆಸುತ್ತಿದ್ದರು. ದಿನ ಕಳೆದಂತೆಲ್ಲ ಚಾಟ್ಸ್‌ ತಿನ್ನಲು ಬರುವ ಜನರು, “ನೀವೇಕೆ ಫಾಸ್ಟ್‌ಪುಡ್‌ ಸೆಂಟರ್‌ ತೆರೆಯಬಾರದು?’ ಎಂದು ಕೇಳುತ್ತಿದ್ದರಂತೆ. ಇಂಥ ಮಾತುಗಳಿಂದ ನಮಗೂ ಹುಮ್ಮಸ್ಸು ಬಂತು. ನಾವೂ ಹೋಟೆಲ್‌ ಆರಂಭಿಸಬಾರದೇಕೆ ಎಂದು ಯೋಚಿಸಿದೆವು. ಅದಕ್ಕೆ ತಕ್ಕಂತೆ ಶ್ರೀಧರ್‌, ಪ್ರಭುಗೌಡ ಎಂಬ ಗೆಳೆಯರು ಸಹಾಯಕ್ಕೆ ನಿಂತರು. ಅದರ ಫ‌ಲವೇ ಈ ದೋಸಾ ಪಾಯಿಂಟ್‌ ಅಂದರು ಉಮೇಶ್‌.

ದೋಸೆಯೇ ಹೈಲೈಟ್‌

ಇಲ್ಲಿ 10ಕ್ಕೂ ಹೆಚ್ಚು ಬಗೆಯ ದೋಸೆಗಳು ಸಿಗುತ್ತವೆ. ಬೆಳಗ್ಗೆ 8ರಿಂದ 11ರ ವರೆಗೆ, ಸಂಜೆ 5.30ರಿಂದ ರಾತ್ರಿ 11ರವರೆಗೆ ಈ ಹೋಟೆಲ್‌ ತೆರೆದಿರುತ್ತದೆ. ಇದೀಗ, ಪರಭಾಷಿಗರು ಕೂಡ ದೋಸಾ ಪಾಯಿಂಟ್‌ಗೆ ಬರಲಾಂಭಿಸಿದ್ದಾರೆ. ಇದೇ ಕಾರಣಕ್ಕೆ, ಚಿಕ್ಕದಾಗಿದ್ದ ಹೋಟೆಲನ್ನು ವಿಸ್ತರಿಸಿ, ಕಾಲ್ನಡಿಗೆ ಅಂತರದಲ್ಲಿ ಹೋಟೆಲಿನ ಮತ್ತೂಂದು ಬ್ರಾÂಂಚ್‌ ಕೂಡ ಆರಂಭಿಸಲಾಗಿದೆ. ಪ್ರತಿದಿನ ಕನಿಷ್ಠವೆಂದರೂ 600-700 ದೋಸೆಗಳು ಇಲ್ಲಿ ಖರ್ಚಾಗುತ್ತವಂತೆ.

ಸವಿರುಚಿಯ ರಹಸ್ಯ “ಪ್ರತಿಯೊಂದು ತಿನಿಸುಗಳನ್ನು ಮಾಡುವಾಗಲೂ ಎಣ್ಣೆಯ ಬದಲಿಗೆ ಬೆಂಗಳೂರು ಡೈರಿಯ ನಂದಿನಿ ಶುದ್ಧ ತುಪ್ಪವನ್ನೇ ಬಳಸುತ್ತೇವೆ. ಆಹಾರದಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡಿದ್ದೇವೆ. ಗೋಡಂಬಿ, ದ್ರಾಕ್ಷಿ, ಹಸಿ ಬಟಾಣಿ ಮುಂತಾದ ತರಕಾರಿಗಳನ್ನು ಸಾಕಷ್ಟು ಬಳಸುತ್ತೇವೆ. ಇದೇ ನಮ್ಮಲ್ಲಿ ತಯಾರಾಗುವ ರುಚಿರುಚಿ ತಿನಿಸುಗಳ ಹಿಂದಿರುವ ಗುಟ್ಟು’ ಎನ್ನುತ್ತಾರೆ ಮಾಲೀಕರ ಪತ್ನಿ ದಾಕ್ಷಾಯಿಣಿ ಉಮೇಶ್‌.

ವರ್ಷದಲ್ಲಿ ಎರಡು ದಿನ ಮಾತ್ರ ರಜೆ…
ಉಮೇಶ್‌ ದೋಸೆ ಪಾಯಿಂಟ್‌ನಲ್ಲಿ ಬಾಣಸಿಗರು ರಜೆ ಹಾಕಿಬಿಟ್ಟರೆ ಎಂಬ ಗೊಂದಲವಿಲ್ಲ. ಪ್ರತಿ ನಿತ್ಯವೂ ಬೆಳಗ್ಗೆ ಮತ್ತು ಸಂಜೆ ಎರಡು ತಂಡಗಳು ಶಿಫ್ಟ್ ಪ್ರಕಾರ ಕೆಲಸ ಮಾಡುತ್ತವೆ. ಆದ್ದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಗಣೇಶ ಹಬ್ಬ ಮತ್ತು ಹೋಟೆಲ್‌ ಆ್ಯನಿವರ್ಸರಿಯಂದು ಮಾತ್ರ ಹೋಟೆಲ್‌ಗೆ ರಜೆ ಇರುತ್ತದೆ. 

ಮನಸೋತ ತಾರೆಗಳು
ದೋಸಾ ಪಾಯಿಂಟ್‌ನ ರುಚಿಗೆ ಮನಸೋತವರಲ್ಲಿ ಜನಸಾಮಾನ್ಯರು ಮಾತ್ರವಲ್ಲ. ಅನೇಕ ಸೆಲೆಬ್ರಿಟಿಗಳೂ ಇದ್ದಾ ರೆ. ಸ್ಯಾಂಡಲ್‌ವುಡ್‌ ನಟರಾದ ಪುನೀತ್‌ ರಾಜ್‌ಕುಮಾರ್‌, ಶಿವರಾಜ್‌ ಕುಮಾರ್‌, ರಾಜಕಾರಣಿಗಳಾದ ವಿ. ಸೋಮಣ್ಣ, ಜಮೀರ್‌ ಅಹಮದ್‌ ಸೇರಿದಂತೆ ಹಲವಾರು ಗಣ್ಯರು ಇಲ್ಲಿನ ದೋಸೆಯ ರುಚಿಗೆ ತಲೆದೂಗಿದ್ದಾರೆ. 

ಪುಷ್ಪಲತಾ

ಟಾಪ್ ನ್ಯೂಸ್

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.