ಬಾ ಬಾ ಎಂದಿದೆ ಟಾ ಟಾ ಚಾಯ್!
Team Udayavani, Dec 29, 2018, 7:10 AM IST
ಭಾರತದ ಅತಿ ದೊಡ್ಡ ಪ್ಯಾಕ್ಡ್ ಟೀ ಬ್ರ್ಯಾಂಡ್ ಎಂದು ಹೆಸರಾಗಿರುವ ಟಾಟಾ ಬೆವರೇಜಸ್ ಕಂಪನಿ, ಚಹಾ ಪ್ರಿಯರಿಗಾಗಿ “ಟಾಟಾ ಚಾ’ ಮಳಿಗೆಗಳನ್ನು ತೆರೆದಿರುವುದು ಗೊತ್ತೇ ಇದೆ. ಈಗಾಗಲೇ ನಾಲ್ಕು ಮಳಿಗೆಗಳನ್ನು ಹೊಂದಿದ್ದ ಟಾಟಾ ಚಾ, ಈಗ ಕೋರಮಂಗಲದಲ್ಲಿ ಇನ್ನೊಂದು ಮಳಿಗೆಯನ್ನು ಪ್ರಾರಂಭಿಸಿದೆ. ಇದು ಹೆಸರಿಗಷ್ಟೇ ಚಹಾ ಮಳಿಗೆ. ಆದರೆ, ಇಲ್ಲಿ ರುಚಿರುಚಿಯಾದ ಸ್ನ್ಯಾಕ್ಸ್ಗಳೂ ಲಭ್ಯವಿದ್ದು, ಥರಹೇವಾರಿ ಚಹಾದ ಸ್ವಾದದೊಂದಿಗೆ ಸ್ಪರ್ಧೆ ಒಡ್ಡಲಿವೆ.
ಹುಣಸೆ ಚಹಾ, ಚಿಕನ್ ಕಿಚಡಿ
ಹುಣಸೆ ಹಣ್ಣಿನಿಂದ ಚಹಾ ಕುಡಿದಿದ್ದೀರಾ? ಇಲ್ಲವಾದರೆ, ಚಾ ಮಳಿಗೆಗೆ ಬನ್ನಿ. ಇಲ್ಲಿ, ಸಕ್ಕರೆ ರಹಿತ ಹುಣಸೆಹಣ್ಣಿನ ಚಹಾ, ಸಕ್ಕರೆ ರಹಿತ ಸೌತೆಕಾಯಿ ಹಸಿರು ಚಹಾ, ಎಣ್ಣೆರಹಿತ ಸೋಯಾ ಕಬಾಬ್, ದಿಲ್ಲಿವಾಲಿ ಕಾಂಜಿ ಮತ್ತು ಮಸಾಲಾ ಶಿಕಾಂಜಿ, ಸ್ಥಳೀಯ ತಿನಿಸುಗಳಾದ ಮೀಠಾ ಪಾನ್, ರಸಮಲೈ ಮಿಲ್ಕ್ ಶೇಕ್, ಪೀಚ್ ಐಸ್ಡ್ ಟೀ, ಚಿಲ್ಲಿ ಗಾವಾ ಐಸ್ ಸ್ಲಶ್ ಸವಿಯಬಹುದು. ಹಬೆಯಾಡುವ ಬಿಸಿ ಶುಂಠಿ ಚಹಾ, ಗರಮಾ ಗರಂ ಮಸಾಲಾ ಟೀ, ಚಟ್ಪಟಾ ಚುರಾನ್ ಗುಲ್ಕಂದ್ ಟೀ ಲಭ್ಯ. ಇನ್ನೂ ಏನೇನಿದೆ ಅಂತ ಕೇಳುವವರಿಗಾಗಿ, ಬಟರ್ ಚಿಕನ್ ಕಿಚಡಿ, ಗೋವಾದ ಕೆಫೆರಿಯಲ್ ಪಾಕೆಟ್ ಪರಾಠಾ, ಚಟ್ಪಟಾ ಮಟರ್ ಕುಲ್ಚಾ, ದಾಲ್ ಪಕ್ವಾನ್, ಚಪಾತಿ ಚಾಟ್ ಸಿದ್ಧವಿರುತ್ತದೆ.
ನಾಲ್ಕು ಮಳಿಗೆಗಳು ಎಲ್ಲಿವೆ?
ಇಂದಿರಾನಗರ, ಆರ್ಎಂಎಸ್ ಎಕೋವರ್ಲ್ಡ್, ಮಂತ್ರಿ ಮಾಲ್ನ ಫುಡ್ ಕೋರ್ಟ್ ಹಾಗೂ ಚರ್ಚ್ ಸ್ಟ್ರೀಟ್.
ಎಲ್ಲಿದೆ? ಎಚ್ಡಿಎಫ್ಸಿ ಬ್ಯಾಂಕ್ ಶಾಖೆ ಎದುರು, 7ನೇ ಬ್ಲಾಕ್, ಕೋರಮಂಗಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ