ಬೆಂಗಳೂರು ಸಿಟಿ ವೀಕೆಂಡ್‌ ಪ್ರೋಗ್ರಾಮ್ ಡೈರಿ

Team Udayavani, Apr 20, 2019, 11:56 AM IST

ವ್ಯಂಗ್ಯಚಿತ್ರ ಪ್ರದರ್ಶನ
ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯಲ್ಲಿ ನಡೆಯು­ತ್ತಿರುವ ಬಂಗಾಳಿ ವ್ಯಂಗ್ಯಚಿತ್ರಕಾರ ಬಿಬೇಕ್‌ ಸೇನ್‌ ಗುಪ್ತಾ ಅವರ ಕಾರ್ಟೂನ್‌ ಪ್ರದರ್ಶನ ಶನಿವಾರ ಮುಕ್ತಾಯಗೊಳ್ಳಲಿದೆ. ಭಾರತದ ಖ್ಯಾತ ವ್ಯಂಗ್ಯಚಿತ್ರ­ಕಾರರ ಮತ್ತು ಹೆಸರಾಂತ ಸಂಗೀತಕಾರರ ಕ್ಯಾರಿಕೇಚರ್‌ಗಳನ್ನು, ಅನ್‌ಸೀನ್‌ ಪಾಕೆಟ್‌ ಕಾರ್ಟೂನುಗಳನ್ನು, ಒಲಿಂಪಿಕ್ಸ್‌, ಫ‌ುಟ್ಬಾಲ್‌ ಆಟಗಳಲ್ಲಿನ ಹಾಸ್ಯ ಸನ್ನಿವೇಶ­ಗಳ ವ್ಯಂಗ್ಯಚಿತ್ರಗಳು ಪ್ರದರ್ಶನದಲ್ಲಿವೆ. ಆಸಕ್ತರು ಗ್ಯಾಲರಿಗೆ ಭೇಟಿ ನೀಡಬಹುದು

ಯಾವಾಗ?: ಏ.20, ಶನಿವಾರ, ಬೆ.11ರಿಂದ
ಎಲ್ಲಿ?: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ಮಿಡ್‌ಪೋರ್ಡ್‌ ಹೌಸ್‌, ಟ್ರಿನಿಟಿ ವೃತ್ತ ಸಮೀಪ

ನೃತ್ಯ ರಂಗೋಲಿಯಲ್ಲಿ ನವರಸ ಹಬ್ಬ

ರಾಜರಾಜೇಶ್ವರಿ ಕಲಾನಿಕೇತನ ಸಂಸ್ಥೆಯು, ಅಕಾಡೆಮಿ ಆಫ್ ಮ್ಯೂಸಿಕ್‌ ಸಹಭಾಗಿತ್ವದಲ್ಲಿ “ನೃತ್ಯ ರಂಗೋಲಿ’ ಎಂಬ ಕಲಾ ಹಬ್ಬವನ್ನು ಹಮ್ಮಿಕೊಂಡಿದೆ. ಈ ಉತ್ಸವ ಶುಕ್ರವಾರದಿಂದ ಭಾನುವಾರದವರೆಗೆ ನಡೆಯಲಿದ್ದು, ಕಲಾನಿಕೇತನದ ಡಾ. ವೀಣಾ ಮೂರ್ತಿ ವಿಜಯ್‌, ಉತ್ಸವದ ನೇತೃತ್ವ ವಹಿಸಿದ್ದಾರೆ.

ಶನಿವಾರದ ಕಾರ್ಯಕ್ರಮಗಳು
ಸಂಜೆ 6- ದೀಪ್ತಿ ಸುಧೀಂದ್ರ ಅವರಿಂದ ಭರತನಾಟ್ಯ
ಸಂಜೆ 6.30 ‘ಭಾಮ’ ಪ್ರದರ್ಶನ , ಗೋಪಿಕ ವರ್ಮ- ಮೋಹಿನಿಯಾಟ್ಟಂ , ವಿಧಾ ಲಾಲ್‌ ಮತ್ತು ಅಭಿಮನ್ಯು ಲಾಲ್‌ -ಕಥಕ್‌, ಪ್ರೊ. ಅಲೇಖ್ಯ ಪಂಜಾಲ- ಕೂಚಿಪುಡಿ, ಶಮಾ ಕೃಷ್ಣ – ಕೂಚಿಪುಡಿ

ಭಾನುವಾರದ ಕಾರ್ಯಕ್ರಮಗಳು
ಸಂಜೆ 6- ಶ್ರೀವಿದ್ಯಾ ಎನ್‌. ಭಾರದ್ವಾಜ್‌ ರಿಂದ ಕಥಕ್‌
ಸಂಜೆ 6.30- ಶತಾವಧಾನಿ ಆರ್‌. ಗಣೇಶ್‌ ಅವರಿಂದ ‘ನವರಸ’ದ ಕುರಿತು ವರ್ಣನೆ ಹಾಗೂ ಒಂಬತ್ತು ಕಲಾವಿದರು ನವರಸಗಳನ್ನು ನೃತ್ಯದ ಮೂಲಕ ವ್ಯಕ್ತಪಡಿಸಲಿದ್ದಾರೆ. ಲಕ್ಷ್ಮಿ ಗೋಪಾಲಸ್ವಾಮಿ, ಅನುರಾಧ ವಿಕ್ರಾಂತ್‌, ಸೌಂದರ್ಯ ಇಗೂರ್‌, ಮಧುಲಿತ ಮೋಹಪಾತ್ರ, ಸೂರ್ಯ ಎನ್‌.ರಾವ್‌, ಪಾರ್ಶ್ವನಾಥ್‌ ಉಪಾಧ್ಯಾಯ, ಪವಿತ್ರ ಭಟ್‌, ಭಾಗವಹಿಸಲಿದ್ದಾರೆ.

ಎಲ್ಲಿ?: ಚೌಡಯ್ಯ ಮೆಮೊರಿಯಲ್‌ ಹಾಲ್‌, ವೈಯಾಲಿ ಕಾವಲ್‌

ಕಾಮಿಡಿ ಕಗ್ಗ ಬಿಡುಗಡೆ

ಹಾಸ್ಯನಟ ನಾಗರಾಜ ಕೋಟೆ ಅವರ “ಕೋಟೆ ನಾಗನ ಕಾಮಿಡಿ ಕಗ್ಗ’ ಪುಸ್ತಕ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭವನ್ನು, ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನವು ಹಮ್ಮಿಕೊಂಡಿದೆ. ಸಂಸ್ಕೃತ ವಿ.ವಿ.ಯ ವಿಶ್ರಾಂತ ಉಪಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌, ಪುಸ್ತಕ ಬಿಡುಗಡೆ ಮಾಡಲಿದ್ದು, ಕಸಾಪ ಮಾಜಿ ಅಧ್ಯಕ್ಷ ಡಾ. ಆರ್‌.ಕೆ. ನಲ್ಲೂರು ಪ್ರಸಾದ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ವೈ.ವಿ. ಗುಂಡೂರಾವ್‌ ಪುಸ್ತಕ ಪರಿಚಯ ಮಾಡಲಿದ್ದಾರೆ. ನಟಿ ರೂಪಿಕಾ, ಪ್ರಕಾಶಕ ಕೆ.ಬಿ.ಪರಶಿವಪ್ಪ, ಹಿರಿಯ ನಟರಾದ ಎಂ.ಎಸ್‌.ಉಮೇಶ್‌, ಬ್ಯಾಂಕ್‌ ಜನಾರ್ಧನ್‌, ಎಂ. ಶಿವರಾಮ್‌, ಸರಿಗಮ ವಿಜಿ, ಡಿಂಗ್ರಿ ನಾಗರಾಜ್‌, ಮೂಗ್‌ ಸುರೇಶ್‌, ಮೈಸೂರು ರಮಾನಂದ್‌, ವೆಂಕಟಾಚಲ, ಉಪಸ್ಥಿತರಿರುವರು. ಪುಸ್ತಕ ಬಿಡುಗಡೆಗೂ ಮೊದಲು, ಮಧುರ ಗೆಳೆಯರ ಬಳಗ ತಂಡದಿಂದ ಭಾವಗೀತೆಗಳ ಗಾಯನ ನಡೆಯಲಿದೆ.

ಎಲ್ಲಿ?: ಶ್ರೀಕೃಷ್ಣರಾಜ ಪರಿಷನ್ಮಂದಿರ, ಕಸಾಪ, ಚಾಮರಾಜಪೇಟೆ
ಯಾವಾಗ?: ಏ.21,
ಭಾನುವಾರ ಸಂಜೆ 5

ಅಟಿಕೆ ಮಳಿಗೆಯಲ್ಲಿ ಬೇಸಿಗೆ ಶಿಬಿರ

ಅಂತಾರಾಷ್ಟ್ರೀಯ ಮಟ್ಟದ ಅಟಿಕೆ ಮಾರಾಟ ಸಂಸ್ಥೆ “ಟಾಯ್ಸ ಆರ್‌ ಅಸ್‌’ (Toys are us) ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಿದೆ. 16 ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಮಕ್ಕಳಿಗೆ ವಿನೂತನ ಬಗೆಯ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ರೋಮಾಂಚಕ ಆಟಗಳು, ಕಲೆ ಮತ್ತು ಕ್ರಾಫ್ಟ್, ಯಕ್ಷಿಣಿಗಾರರು, ಜೋಕರ್‌ಗಳು ತಮ್ಮ ಅಸಾಧಾರಣ ಪ್ರತಿಭೆ ಹಾಗೂ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ಮಕ್ಕಳನ್ನು ರಂಜಿಸಲಿದ್ದಾರೆ. ಇದರ ಜೊತೆಗೆ ನಾಯಿಗೆ ತಿಂಡಿ ತಿನ್ನಿಸುವುದು, ಬೌಲಿಂಗ್‌, ಪಿಂಗ್‌ ಪಾಂಗ್‌ ಶೂಟರ್‌, ಪೆಬಲ್‌ ಪೇಂಟಿಂಗ್‌ ಮುಂತಾದ ಆಕರ್ಷಕ ಚಟುವಟಿಕೆಗಳೂ ಶಿಬಿರದಲ್ಲಿದೆ.

ಎಲ್ಲಿ?: ಫೀನಿಕ್ಸ್‌ ಮಾರ್ಕೆಟ್‌ಸಿಟಿ ಮಾಲ್‌, ವೈಟ್‌ಫೀಲ್ಡ್‌; ವೇಗ ಸಿಟಿ ಮಾಲ್‌, ಬನ್ನೇರುಘಟ್ಟ, RMZ ಗಲೇರಿಯ ಮಾಲ್‌, ಯಲಹಂಕ, ಟಾಯ್ಸ ಆರ್‌ ಅಸ್‌ ಮಳಿಗೆ, ಯಲಹಂಕ
ಯಾವಾಗ?: ಏಪ್ರಿಲ್‌ 13 ರಿಂದ 28

ಕ್ಯಾನ್ಸರ್‌-ಹೃದ್ರೋಗ ಉಚಿತ ತಪಾಸಣೆ
ನಾರಾಯಣ ಹೆಲ್ತ್‌ ಫೌಂಡೇಷನ್‌ ವತಿಯಿಂದ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ (ಏ.20) ಹಾಗೂ ಹೃದಯ ತಪಾಸಣೆಯ (ಏ.27) ಉಚಿತ ಶಿಬಿರ ನಡೆಯುತ್ತಿದೆ. ಕ್ಯಾನ್ಸರ್‌ ಶಿಬಿರದಲ್ಲಿ ಪ್ರಮುಖವಾಗಿ ಮೂಗು, ಬಾಯಿ, ಗಂಟಲು, ಧ್ವನಿಪೆಟ್ಟಿಗೆ, ಅನ್ನನಾಳ, ಜೊಲ್ಲು ಗ್ರಂಥಿ ಮತ್ತು ಥೈರಾಯಿಡ್‌ ಗ್ರಂಥಿ ಸಮಸ್ಯೆಗಳಿಗೆ ಮೂಲಭೂತ ತಪಾಸಣೆ ಮತ್ತು ಸಲಹೆ ನೀಡಲಾಗುತ್ತದೆ. ಹೃದಯ ತಪಾಸಣೆಯಲ್ಲಿ, ರಕ್ತ ಸಂಶೋಧನೆ, ಸಂಪೂರ್ಣ ರಕ್ತದ ಎಣಿಕೆ (ಸಿಬಿಸಿ), ಮಧುಮೇಹ, ಲಿಪಿಡ್‌ ಪ್ರೊಫೈಲ್‌, ಎಲ್‌ಡಿಎಲ್‌ ಪ್ರಮಾಣ, ಇಸಿಜಿ ಮತ್ತು ಇಸಿಎಚ್‌ಒ ತಪಾಸಣೆ ನಡೆಸಲಾಗುವುದು.

ಕ್ಯಾನ್ಸರ್‌ ತಪಾಸಣೆ
ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್‌, ಜಯನಗರ, 4ನೇ ಬ್ಲಾಕ್‌
ಯಾವಾಗ?: ಏ.20,
ಶನಿವಾರ ಬೆಳಗ್ಗೆ 10- 2
ಹೆಸರು ನೋಂದಣಿ: 8884000991

ಹೃದಯ ತಪಾಸಣೆ
ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್‌, ಎಲೆಕ್ಟ್ರಾನಿಕ್‌ ಸಿಟಿ ಫೇಸ್‌-1
ಯಾವಾಗ?: ಏ. 27,
ಶನಿವಾರ ಬೆಳಗ್ಗೆ 9-12
ಹೆಸರು ನೋಂದಣಿ: 9538898489

ಕಾಫಿ ಬೈಟ್‌ ವಿತ್‌ ಜಾನಕಿ
“ಕಾಫಿ ಬೈಟ್‌ ಮೀಡಿಯಾ ಹೌಸ್‌’ “ಜಾನಕಿ ರಾಗ ‘ ಎಂಬ ಕಾರ್ಯಕ್ರಮ ಆಯೋಜನೆಗೊಳಿಸಿದೆ. ಮೇರು ಗಾಯಕಿ ಎಸ್‌. ಜಾನಕಿಯವರಿಗೆ ಗೌರವ ಸಮರ್ಪಿಸಲಿದೆ ಈ ಸಂಗೀತ ಕಾರ್ಯಕ್ರಮ. ಇದು “ಕ್ರೌಡ್‌ ಫ‌ಂಡೆಡ್‌’ ಕಾರ್ಯಕ್ರಮ. ಸರಿಗಮಪ ಲಿಟ್ಲ್ ಚಾಂಪಿಯನ್‌ ಸ್ಪರ್ಧೆಯ ವಿಜೇತೆ
ಅನ್ವಿತಾ ಅವರು ವಿಕಾಸ್‌ ವಸಿಷ್ಠ ಅವರೊಂದಿಗೆ ಹಾಡುತ್ತಿದ್ದಾರೆ. ಕಾಫಿ ಬೈಟ್‌ ಮೀಡಿಯಾ ಹೌಸ್‌ನ ಸ್ಥಾಪಕರು ಸ್ಪರ್ಶ ಆರ್‌. ಕೆ. ಮತ್ತು ಮಾನಸಾ ಶರ್ಮ. ಕ್ಯಾಮೆರಾ ಹಿಂದೆ ಕೆಲಸ ಮಾಡುವ ಹೆಣ್ಣುಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಾರಂಭಗೊಂಡಿರುವ ಈ ಸಂಸ್ಥೆ ಈಗಾಗಲೇ ಹಲವು ಮ್ಯೂಸಿಕ್‌ ವಿಡಿಯೋ ಮತ್ತು ಕಿರುಚಿತ್ರಗಳನ್ನು ನಿರ್ಮಿಸಿದೆ.

ಎಲ್ಲಿ?: ಎಡಿಎ ರಂಗಮಂದಿರ, ಜೆ.ಸಿ.ರಸ್ತೆ
ಯಾವಾಗ?: ಏಪ್ರಿಲ್‌ 26, ಸಂಜೆ 6- 9

ಕತೆ ಮತ್ತು ಕತೆಗಾರರ ನಡುವೆ…
ಓದುಗನ ಎದುರು ಕತೆ ಮತ್ತು ಕತೆಗಾರ ಒಟ್ಟೊಟ್ಟಿಗೇ ಎದುರಾಗುವುದು ಬಹಳ ಅಪರೂಪ. ಅಂಥ ಅಪರೂಪದ ಸಂದರ್ಭವೊಂದನ್ನು ಟೋಟೊ ಫೌಂಡೇಶನ್‌ ಸೃಷ್ಟಿಸುತ್ತಿದೆ. ಆಕೃತಿ ಬುಕ್ಸ್‌ ಸಹಭಾಗಿತ್ವದಲ್ಲಿ “ಕತೆ ಮತ್ತು ಕತೆಗಾರರ ನಡುವೆ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಟೋಟೊ ಪ್ರಶಸ್ತಿ ಪುರಸ್ಕೃತ ಕಥೆಗಾರರಾದ ಮಂಜುನಾಯಕ್‌ ಚೆಳ್ಳೂರು, ರಾಜೇಂದ್ರ ಪ್ರಸಾದ್‌ ಹಾಗೂ ಪ್ರತೀಕ್‌ ಮುಕುಂದ ಕತೆ ಓದಲಿದ್ದಾರೆ. ಇದೇ ವೇಳೆ, ಮಂಜುನಾಯಕ್‌ ಚೆಳ್ಳೂರು ಅವರ ಮೊದಲ ಕಥಾ ಸಂಕಲನ “ಫ‌ೂ ಮತ್ತು ಇತರ ಕಥೆಗಳು’ ಬಿಡುಗಡೆಯಾಗಲಿದೆ.

ಎಲ್ಲಿ?: ಆಕೃತಿ ಬುಕ್ಸ್‌, ನಂ. 31/1, 12ನೇ ಮೇನ್‌,
3ನೇ ಬ್ಲಾಕ್‌, ರಾಜಾಜಿನಗರ
ಯಾವಾಗ?: ಏ. 20, ಶನಿವಾರ ಸಂಜೆ 6

ಹಿಂದೂಸ್ತಾನಿ ಸಂಗೀತಾ
ಶ್ರೀವಾಣಿ ಕಲಾಕೇಂದ್ರದ ವತಿಯಿಂದ ಶ್ರೀರಾಮ ನವಮಿ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ. ಒಂದು ತಿಂಗಳ ಕಾಲ ನಡೆಯುವ ಉತ್ಸವದ ಈ ವಾರಾಂತ್ಯದ ಕಾರ್ಯಕ್ರಮಗಳು ಹೀಗಿವೆ. ಏಪ್ರಿಲ್‌ 20ರಂದು, ಸಂಜೆ 6.30 ವಿ. ಸಂಗೀತಾ ಕಟ್ಟಿ ಅವರಿಂದ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್‌ 21ರಂದು ಭರತನಾಟ್ಯ ನಡೆಯಲಿದೆ.

ಎಲ್ಲಿ?: ಶ್ರೀವಾಣಿ ವಿದ್ಯಾಕೇಂದ್ರ, ಬಸವೇಶ್ವರನಗರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಗರುಡಾ ಮಾಲ್‌ನಲ್ಲಿ ಮೂರು ದಿನಗಳ, ಗೊಂಬೆ ಹಬ್ಬ ಹಾಗೂ ಬೃಹತ್‌ ಪುಸ್ತಕ ಮೇಳ ಹಮ್ಮಿಕೊಳ್ಳಲಾಗಿದೆ. ದಿನದಿಂದ ದಿನಕ್ಕೆ ನಶಿಸುತ್ತಿರುವ ಅಪರೂಪದ ಕಲಾ ಪ್ರಾಕಾರವಾದ...

  • ಬೆಂಗಳೂರು, ವಲಸಿಗರ ಕರ್ಮಭೂಮಿ. ಹೊಟ್ಟೆಪಾಡಿಗಾಗಿ ಇಲ್ಲಿಗೆ ಬಂದವರಿಗೆ ಪ್ರತಿಕ್ಷಣವೂ ಕಾಡುವುದು ಜನ್ಮಭೂಮಿಯ ನೆನಪುಗಳು. ಇಲ್ಲಿ ನೆಲೆನಿಂತು ವರುಷಗಳುರುಳಿದರೂ,...

  • ಜಗತ್ತಿನ ಯಾವ ಭಾಗ ದಿಂದಲೇ ಬಂದಿರಲಿ, ಬೆಂಗಳೂರಿನಲ್ಲಿ ಅವರಿಗೆ ಊಟಕ್ಕೇನೂ ತೊಂದರೆ ಆಗುವುದಿಲ್ಲ. ಮುದ್ದೆಯೂಟ, ಗಂಜಿ ಊಟ, ಉತ್ತರ ಭಾರತೀಯ, ದಕ್ಷಿಣ ಭಾರತೀಯ, ಚೈನೀಸ್‌,...

  • ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶಾಪಿಂಗ್‌ ಮಾಡುವ ಯೋಚನೆಯಲ್ಲಿದ್ದೀರಾ? ಹಾಗಾದ್ರೆ, ನಿಮಗಿದೋ ಸಿಹಿ ಸುದ್ದಿ. ಸಂಪೂರ್ಣ ಸಂಘದ ವತಿಯಿಂದ, "ವಸ್ತ್ರಭೂಷಣ' ಕರಕುಶಲ...

  • ವಿಶ್ವ ಸ್ತನ್ಯಪಾನ ಸಪ್ತಾಹ ಆಗಸ್ಟ್‌ ಮೊದಲ ವಾರ ಆಗಸ್ಟ್‌ ಮೊದಲ ವಾರವನ್ನು, ವಿಶ್ವ ಸ್ತನ್ಯಪಾನ ಸಪ್ತಾಹವೆಂದು ಆಚರಿಸಲಾಗುತ್ತದೆ. ತಾಯಿಯ ಹಾಲು ಅಮೃತಕ್ಕೆ ಸಮಾನ....

ಹೊಸ ಸೇರ್ಪಡೆ