7 ಹೂಡಿಕೆ ಸತ್ಯ ತಿಳಿದಿರಲೇ ಬೇಕು ನಿತ್ಯ


Team Udayavani, Mar 12, 2018, 3:50 PM IST

investment.jpg

ಕೆಲವೊಮ್ಮೆ ದುಡಿಮೆಗಿಂತ ಹೆಚ್ಚಿನ ಲಾಭ ಬಂದಾಗ, ಅಥವಾ ಉಡುಗೊರೆ, ಬಹುಮಾನ, ಪ್ರಶಸ್ತಿ ರೂಪದಲ್ಲಿ ಹಣ ಬಂದಾಗ ಅದಕ್ಕೆ ತೆರಿಗೆ ಇದೆಯೆ? ಈ ಹೆಚ್ಚುವರಿ ಸಂಪಾದನೆಗೂ ಲೆಕ್ಕ ಕೊಡಬೇಕು ಇತ್ಯಾದಿ ಗೊಂದಲಗಳು ಸೃಷ್ಟಿಯಾಗುತ್ತವೆ. ಇಂಥ ಹಣವನ್ನು ಆರ್ಥಿಕ ಯೋಜನೆಗಳಿಗೆ ಕಟ್ಟಿ ಮೋಸ ಹೋದವರೂ ಇದ್ದಾರೆ. ಇಂತಹ ಸ್ಥಿತಿಯಲ್ಲಿ ಏನು ಮಾಡಬೇಕು ಇಲ್ಲಿದೆ ಕೆಲವು ನಿದರ್ಶನಗಳು…

ಹಣದ ಲೆಕ್ಕಾಚಾರದಲ್ಲಿ ನಾವು ಮಾಡುವ ಲೆಕ್ಕಕ್ಕಿಂತ ಅದು ತೋರಿಸುವ ಲೆಕ್ಕವೇ ವಿಚಿತ್ರವಾಗಿರುತ್ತದೆ. ಅನಗತ್ಯ ಲಾಭ, ಹೆಚ್ಚಿನ ಕಂತು ಅಥವಾ ಪ್ರೀಮಿಯಂ, ಫ‌ಂಡ್‌, ಬಾಂಡ್‌, ಇನುÏರೆನ್ಸ್‌ ಮತ್ತು ಆರ್ಥಿಕ ಯೋಜನೆಗಳಲ್ಲಿ ಹಣ ಹೂಡಿ ಜಾಣ್ಮೆಯ ಪ್ರಯೋಜನ ಪಡೆದವರೂ ಇದ್ದಾರೆ. ಅಂತೆಯೇ ಏಜೆಂಟರುಗಳು ಆಡಿದ ಬೆಣ್ಣೆಯ ಮಾತುಗಳಿಗೆ ತಲೆಯಾಡಿಸಿ ಕಂತುಗಳ ಮೇಲೆ ಕಂತುಗಳ ರೂಪದಲ್ಲಿ ಹಣ ಹೂಡಿ ಅದನ್ನು ಪಡೆಯಲಾರದೆ ಪರಿತಪಿಸಿದವರೂ ಇದ್ದಾರೆ. ಆರ್ಥಿಕ ಯೋಜನೆಯೇ ಇರಲಿ, ವಿಮಾ, ಚಿಟ್ಸ್‌ ಇತ್ಯಾದಿ ಪ್ಲಾನ್‌ಗಳಿರಲಿ, ಮೊದಲು ಅದರ ಸೂಕ್ಷ್ಮ ನಿಯಮಗಳ ಬಗ್ಗೆ ತಿಳಿವಳಿಕೆ ಪಡೆದು ನಂತರ ಅದರ ಬಗ್ಗೆ ವ್ಯವಹರಿಸುವುದು ಸೂಕ್ತ. ಈ ಕುರಿತಂತೆ ಕೆಲವೊಂದು ಮಾಹಿತಿ ಇಲ್ಲಿದೆ.

1 ಉಡುಗೊರೆ
ಕಂಪನಿಯೊಂದು ತಾನು ಗಳಿಸಿದ ಲಾಭದಲ್ಲಿ ಎಲ್ಲ ನೌಕರರಿಗೂ ಉಡುಗೊರೆ ರೂಪದಲ್ಲಿ ಹಣವನ್ನು ನೀಡಿದೆ ಎಂದಿಟ್ಟುಕೊಳ್ಳೋಣ,  ಅದರ ಮೊತ್ತ ಪ್ರತಿ ಉದ್ಯೋಗಿಗೂ 20 ಸಾವಿರಕ್ಕೂ ಹೆಚ್ಚಿನದಾಗಿ ಸಿಗುತ್ತಿದೆ ಅಂದುಕೊಳ್ಳಿ. ಇದು ತೆರಿಗೆ ವ್ಯಾಪ್ತಿಗೆ ಬರುವುದೇ ಎನ್ನುವ ಅನುಮಾನ ಎಲ್ಲಿರಿಗೂ ಬಂದಿರುತ್ತದೆ.

  ಇದು ತೆರಿಗೆ ವ್ಯಾಪ್ತಿಗೆ ಬರದೇ ಮತ್ತಿನ್ನೇನು? ಇನ್‌ಕಂಮ್‌ ಟ್ಯಾಕ್ಸ್‌ ಆಕ್ಟ್ 1961 ಅಡಿಯಲ್ಲಿ ಸೆಕ್ಷನ್‌ 17(2)(ಐಐಐ) ಮತ್ತು 1962ರ ನಿಯಮ 3(7)(ಐ) ಅಡಿಯಲ್ಲಿ  ನಗದು ರೂಪದಲ್ಲಿ 5ಸಾವಿರಕ್ಕೂ ಮೇಲ್ಪಟ್ಟು ಬರುವ ಉಡುಗೊರೆ ಅಥವಾ ಗಿಪ್ಟ್ಗಳನ್ನು ತೆರಿಗೆಯುಕ್ತ ವ್ಯವಹಾರ ಎಂದು ಮಾನ್ಯತೆ ಮಾಡಲಾಗುತ್ತದೆ. ನೀಡುವ ಉಡುಗೊರೆ ವಸ್ತುರೂಪದಲ್ಲಿದ್ದಾಗ ತೆರಿಗೆ ವ್ಯಾಪ್ತಿಗೆ ಸಿಲುಕುವುದು ಕಡಿಮೆ.

2 ಆಸ್ತಿ ವರ್ಗಾವಣೆ
ತಾತ ತಾನು ಮಾಡಿದ ಆಸ್ತಿಯನ್ನು ಯಾರಿಗೂ ತಿಳಿಯದಂತೆ ಇನ್ನೊಬ್ಬರ ಹೆಸರಿಗೆ ಬರೆದು ಹೋಗಿದ್ದಾರೆ. ಅದು ಕೋಟಿಗೂ ಮೀರಿ ಬಾಳುತ್ತದೆ. ಅಲ್ಲದೆ ಈಗಾಗಲೇ ಅದನ್ನು ಬರೆಸಿಕೊಂಡಾತ ಜೀವನ ಸೆಟ್ಲ ಆಗಿರುವುದರಿಂದ, ಅದನ್ನು ತೆಗೆದುಕೊಳ್ಳಬೇಕೆಂದೆನಿಸುತ್ತಿಲ್ಲ ಅಂತಿಟ್ಟುಕೊಳ್ಳಿ.  ಹಾಗಾದರೆ ಬರೆಸಿಕೊಂಡವರು ಒಡ ಹುಟ್ಟಿದ ತಂಗಿಗೆ ಅದನ್ನು ವರ್ಗಾಯಿಸಬೇಕೋ ಬೇಡವೋ ಗೊತ್ತಾಗುತ್ತಿಲ್ಲ ಅನ್ನೋ ಗೊಂದಲ ಮನಸ್ಸಿಗೆ ಬಂದು ಕಿರಿಕಿರಿ ಆಗತೊಡಗುತ್ತದೆ.

 ಇಂಥ ಸಂದರ್ಭದಲ್ಲಿ ಮಾಡಬೇಕಾಗಿರುವ ಮೊದಲ ಕೆಲಸ, ವಿಲ್‌ ಮಾಡಿರುವ ತಾತನ ಆಸ್ತಿ ಪತ್ರಗಳು ಮೊದಲು ಸರಿಯಾಗಿವೆಯೇ ಪರೀಕ್ಷಿಸಿ.  ಏಕೆಂದರೆ ಇದರಲ್ಲಿರುವ ನ್ಯೂನತೆಗಳನ್ನಿಟ್ಟುಕೊಂಡು ಅವರ ಅಣ್ಣ, ತಮ್ಮಂದಿರು  ಯಾವುದೇ ತಕರಾರು ತೆಗೆಯಬಹುದು. ತಾತ ಆಸ್ತಿಯನ್ನು ಕೊಂಡಾಗ ಅಥವಾ ಈಗಿನ ಪರಿಸ್ಥಿತಿಯಲ್ಲಿ ಯಾವುದಾದರೂ ಒತ್ತುವರಿ, ಅಕ್ರಮ ಕಟ್ಟಡ ಇತ್ಯಾದಿ ಇವೆಯೇ ಎಂದೂ ಪರೀಕ್ಷಿಸಬೇಕಾಗುತ್ತದೆ. ಅಲ್ಲದೆ, ತಂಗಿಗೆ ಇದನ್ನು ವರ್ಗಾಯಿಸ ಬಯಸುತ್ತೇನೆ ಎಂದು ಹೇಳಿದ್ದೀರಾ ಅಂದರೆ ನಿಮ್ಮ ತಂಗಿಗೆ ಇದನ್ನು ಉಡುಗೊರೆ ರೂಪದಲ್ಲಿ ನೀಡುತ್ತಿದ್ದೀರಾ ಎಂದಂತಾಯಿತು. ಪರಂಪರಾ ಗತವಾಗಿ ಬಂದ ಆಸ್ತಿ ವರ್ಗಾವಣೆ ಮಾಡುವಾಗ ಅದಕ್ಕೆ ಸಂಬಂಧಿಸಿದ ಹಕ್ಕುಪತ್ರ, ದಾಖಲೆ ಇತ್ಯಾದಿಗಳು ಈಗಿನ ಕಾಲಕ್ಕೆ ಸಂಬಂಧಿಸಿದಂತೆ ಗಣಕೀಕೃತವಾಗಿವೇಯೇ ಪರೀಕ್ಷಿಸಿ, ನೀಡ ಬಯಸುತ್ತಿರುವ ಆಸ್ತಿಯು ಇಂದಿನ ಮಾರುಕಟ್ಟೆ ಮೌಲ್ಯಕ್ಕನುಗುಣವಾಗಿ ತೆರಿಗೆಯುಕ್ತವಾಗಿರುತ್ತದೆ.

3 ಪ್ರಾವಿಡೆಂಟ್‌  ಫ‌ಂಡ್‌
 ಹಿರಿಯ ನಾಗರಿಕರ ಪಬ್ಲಿಕ್‌ ಪ್ರಾಡೆಂಟ್‌ ಫ‌ಂಡ್‌ ಮೆಚ್ಯುರಿಟಿ ಆಗಲಿದೆ. ಅದರೆ ಇನ್ನಷ್ಟು ವರ್ಷಗಳ ಕಾಲ ಖಾತೆಗೆ ಹಣ ಪಾವತಿ ಮಾಡಿ ಅದನ್ನು ಮುಂದರಿಸುವ ಇಚ್ಛೆ ಇದೆ. ಅದನ್ನು ಹಾಗೆಯೇ ಮುಂದುವರಿಸಬಹುದೇ? ಅಥವಾ ಖಾತೆಯನ್ನು ಮುಚ್ಚಿ ಹಣವನ್ನು ಪಡೆಯಬಹುದೇ ಅನ್ನೋ ಗೊಂದಲ ಎಷ್ಟೋ ಜನಕ್ಕೆ ಇರುತ್ತದೆ.

 ಭಾರತೀಯ ನಾಗರಿಕರೇ ಆಗಿದ್ದಲ್ಲಿ ಅವರು ಪಬ್ಲಿಕ್‌ ಪ್ರಾವಿಡೆಂಟ್‌ ಫ‌ಂಡಿನ ಖಾತೆಯಲ್ಲಿ ಮತ್ತಷ್ಟು ಹಣವನ್ನು ತುಂಬಲು ಅರ್ಹರು. ಐದು ವರ್ಷದ ವರೆಗೆ ಅದನ್ನು ಮುಂದುವರಿಸಬಹುದು ಅಥವಾ ಹಣವನ್ನು ಪಡೆಯಬಹುದು. ಇದಕ್ಕೆ ಒಂದು ಆರ್ಥಿಕ ವರ್ಷದ ಕಾಲಾವಕಾಶರುತ್ತದೆ.  ಖಾತೆಯಲ್ಲಿ ಮುಂದುವರಿದು ಪಾವತಿಸದ ಹಣ 1.5 ಲಕ್ಷರೂ. ಗಿಂತ ಅಧಿಕವಾಗಿದ್ದಲ್ಲಿ 1961 ಆದಾಯತೆರಿಗೆ ಕಾಯ್ದೆ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.

ಖಾತೆಯನ್ನು ಮುಚ್ಚದೆ ಹಣವನ್ನು ಪಡೆಯದೇ ಇದ್ದರೂ ಖಾತೆಯಲ್ಲಿರುವ ಹಣಕ್ಕೆ ಅನುಗುಣವಾದ ಬಡ್ಡಿ ಪಾವತಿಯಾಗುತ್ತಿರುತ್ತದೆ. ನಿವೃತ್ತಿಯ ನಂತರ ನಿಮ್ಮ ಪಿಪಿಎಫ್ ಖಾತೆಯಲ್ಲಿ ಐದು ವರ್ಷದ ವರೆಗೆ ಪಾವತಿಸಿದ ಹಣಕ್ಕೆ ನೀಡಲಾದ ಬಡ್ಡಿ ತೆರಿಗೆಯುಕ್ತವಾಗಿರುತ್ತದೆ. ಅದರೆ ನಿವೃತ್ತಿಯವರೆಗೆ ನೀಡಲಾಗುವ ಬಡ್ಡಿದರಕ್ಕೆ ಯಾವುದೇ ತೆರಿಗೆ ವಿಧಿಸುವುದಿಲ್ಲ ಎಂಬುದು ತಿಳಿದಿರಲಿ.

4 ಮೈನರ್‌ ಖಾತೆಗೆ ಟ್ಯಾಕ್ಸ್‌
ಬ್ಯಾಂಕಿನಲ್ಲಿ ಮಗಳಿಗಾಗಿ ಮೈನರ್‌ ಖಾತೆಯನ್ನು ತೆರೆದಿರುತ್ತೀರಿ. ಬೇರೆ ಖಾತೆಯಗಳಿಗೆ ಬರುವಂತೆಯೇ ಖಾತೆಯಲ್ಲಿಟ್ಟಿರುವ ಹಣಕ್ಕೆ ತೆರಿಗೆಯುಕ್ತ ಬಡ್ಡಿದರ, ತೆರಿಗೆ ಇರುತ್ತದೆಯೇ ? ಆರ್ಥಿಕ ವ್ಯವಹಾರ ನಿಯಂತ್ರಿಸಲು ಜಾಯಿಂಟ್‌ ಖಾತೆ ಬೇರೆ ಇದೆ.  ತೆರಿಗೆ ಬರುವುದಾದರೆ ಯಾರ ಹೆಸರಿಗೆ ಬರುತ್ತದೇ? ಮಕ್ಕಳ ಹೆಸರಲ್ಲಿ ದುಡ್ಡು ಇಟ್ಟೋರ ಪ್ರಶ್ನೆ ಇದು.

ಇಲ್ಲಿ ಎರಡು ಪ್ರಶ್ನೆಇದೆ. ಒಂದನೆಯದು ಮೈನರ್‌ ಖಾತೆಗೆ ತೆರಿಗೆಯುಕ್ತ ಬಡ್ಡಿದರ ಇದೆಯೇ ಎಂಬುದು. ಮತ್ತೂಂದು ತೆರಿಗೆ ಮಗಳಿಗೆ ಅಥವಾ ತಾಯಿಗೆ ಬರುವುದೇ ಎಂಬುದು.

ಮೊದಲ ಪ್ರಶ್ನೆಗೆ ಉತ್ತರ ಎಂದರೆ ಖಾತೆಯಲ್ಲಿ ನಗದಿನ ಜಮೆ ಮತ್ತು ಪಾವತಿ ಕುರಿತ ವ್ಯವಹಾರ ಹೇಗೆ ನಡೆಯುತ್ತಿದೆ ಎಂಬುದರ ಮೇಲೆ ತೆರಿಗೆಯುಕ್ತ ಬಡ್ಡಿದರ ಪಾವತಿಯಾಗುತ್ತದೆ. ಅಲ್ಲದೆ ವಾರ್ಷಿಕವಾಗಿ 1,500ಕ್ಕಿಂತ ಕಡಿಮೆ ಬಡ್ಡಿದರ ಬಂದರೆ ಅದಕ್ಕೆ ಯಾವ ತೆರಿಗೆಯೂ ಪಾವತಿಯಾಗುವುದಿಲ್ಲ.

ಎರಡನೇ ಪ್ರಶೆ;° ತಾಯಿ ಅಥವಾ ಮಗಳ ಯಾರ ಖಾತೆಯಲ್ಲಿರುವ ಹಣಕ್ಕೆ ತೆರಿಗೆ ಪಾವತಿಯಾಗುತ್ತದೆ ಎಂಬುದು. ಇಲ್ಲಿ ತಾಯಿಯ ಖಾತೆಯೇ ಮುಖ್ಯವಾಗುತ್ತದೆ. ಏಕೆಂದರೆ, ಪೂರ್ಣ ಜವಾಬ್ದಾರಿ ಮೇಜರ್‌ ಖಾತೆದಾರನದಾಗಿದ್ದು, ಮೈನರ್‌ ಆಗಿರುವ ಖಾತೆದಾರರು ಕೇವಲ ಆರ್ಥಿಕ ವ್ಯವಹಾರ ನಡೆಸುವವರಾಗಿರುತ್ತಾರೆ. ಹೀಗಾಗಿ ಮೆಜರ್‌ ಖಾತೆದಾರ ತೆರಿಗೆ ಪಾವತಿದಾರನಾಗಿರುತ್ತಾನೆ. ಅಲ್ಲದೆ ಮೊದಲ ಖಾತೆಯ ವ್ಯಕ್ತಿಯಾಗಿರುತ್ತಾನೆ.

5 ಮ್ಯೂಚುಯಲ್‌ ಫ‌ಂಡ್‌
ಮ್ಯೂಚುಯಲ್‌ ಫ‌ಂಡಿನಲ್ಲಿ ಹಣ ಹೂಡಿದರೆ ಯಾವುದೇ ಕಾರಣಕ್ಕೂ ಹಣದಲ್ಲಿ ಶೇರು ಮಾರುಕಟ್ಟೆ ರೀತಿಯಲ್ಲಿ ಮೋಸ ಆಗುವುದಿಲ್ಲ ಎಂದು ಹಲವರು ಹೇಳ್ಳೋದನ್ನು ಕೇಳಿರುತ್ತೀರ.  ಅದಕ್ಕಾಗಿಯೇ ಹೆಚ್ಚಿನ  ಹಣ ಹೂಡಿರುತ್ತಾರೆ. ಆದರೆ, ನಿರೀಕ್ಷಿ$ತ ಮಟ್ಟದಲ್ಲಿ ಹಣ ಬರಲೇಇಲ್ಲ. ಕಟ್ಟಿದ ಹಣಕ್ಕೂ ಸ್ವಲ್ಪ ಕಡಿಮೆಯೇ ನಗದು ಮರುಪಾವತಿಯಾದಾಗ, ಮುಂದೇನು ಅನ್ನೋ ಪ್ರಶ್ನೆ ಆಗ ಕಾಡತೊಡಗುತ್ತದೆ.

 ನಿಜ ಹೇಳಬೇಕೆಂದರೆ, ಮ್ಯೂಚುಯಲ್‌ ಫ‌ಂಡ್‌ಗಳಲ್ಲಿ ಅನೇಕ ಮಾದರಿಗಳಿವೆ. ಇದರಲ್ಲಿ ಶೇರುಪೇಟೆಗೆ ಸಂಬಂಧಿತ ಹೂಡಿಕೆ, ಚಿನ್ನ ಕುರಿತದ್ದು, ಸರ್ಕಾರಿ ವಲಯವಿದ್ದು, ಬಾಂಡ್‌, ಫ‌ಂಡ್‌ಗೆ ಸಂಬಂಧ ಹೊಂದಿರುವಂತದ್ದು ಹೀಗೆ ಅನೇಕ ಮಾದರಿಗಳಿವೆ. ಅಲ್ಲದೆ ಶೇರು ಮಾರುಕಟ್ಟೆ ಮತ್ತು ಎಲ್ಲ ವಲಯಕ್ಕೂ ಸೇರಿದಂತೆ ನಿಯೋಜಿಸಿದ ಫ‌ಂಡ್‌ಗಳೂ ಸಹ ಚಾಲ್ತಿಯಲ್ಲಿವೆ. ಹೀಗಾಗಿ ಕೆಲವೊಮ್ಮೆ ನಿರೀಕ್ಷಿ$ಸಿದ ಹಣ ಬರುತ್ತದೆ ಎಂದು ಹೇಳಲು ಆಗದು.

ಮ್ಯೂಚುಯಲ್‌ ಫ‌ಂಡ್‌ ಖರೀದಿ ವೇಳೆ ಯಾವ ಕಂಪನಿಯ ಫ‌ಂಡ್‌ ತೆಗೆದುಕೊಳ್ಳುತ್ತಿದ್ದೀರಾ, ಅದರಲ್ಲಿ ಯಾವ ಯಾವ ಕಂಪನಿಗಳು ಹಣ ಹೂಡಿವೆ. ಅಲ್ಲದೆ ಯಾವ ಫ‌ಂಡ್‌ನ‌ಲ್ಲಿ ಯಾವಯಾವ ವಲಯಕ್ಕೆ ಎಷ್ಟೆಷ್ಟು ಮೌಲ್ಯವನ್ನು ವಿಭಾಗಿಸಿ ರಚಿಸಿದ್ದಾರೆ. ಶೇರು ಮಾರುಕಟ್ಟೆ ಸೇರಿದಂತೆ ಅನೇಕ ವಲಯಗಳ ಸ್ಥಿತಿಗತಿಯೇನು ಇತ್ಯಾದಿ ವಿವರಗಳನ್ನು ಪರೀಕ್ಷಿಸಬೇಕಾಗುತ್ತದೆ. ಇವೆಲ್ಲವನ್ನೂ ಮೀರಿ ಮುಂಬರುವ ಗಂಡಾಂತರಗಳ ಬಗ್ಗೆಯೂ ಕೆಲವೊಮ್ಮೆ ಯೋಚಿಸಬೇಕಾಗುತ್ತದೆ. ಅಂದರೆ, ರೂಪಾಯಿ ಮೌಲ್ಯದ ಏರಿಕೆ ಇಳಿಕೆ, ರೆಪೋದರ, ಆರ್ಥಿಕ ನೀತಿಗಳ ಬದಲಾವಣೆಗಳನ್ನು ಗಮನದಲ್ಲಿರಿಸಿಕೊಂಡು ಲೆಕ್ಕಾಚಾರ ಮಾಡಿ ಫ‌ಂಡ್‌ಗಳ ಖರೀದಿಗೆ ಮುನ್ನುಗ್ಗಬೇಕಾಗುತ್ತದೆ. ನಿಮಗೆ ನಗದು ಬಂದಿದೆ ಎಂಬುದಕ್ಕೆ ಖುಷಿಪಡಿ. ಯೂಲಿಪ್‌ ಮಾದರಿ ಫ‌ಂಡ್‌ ಗಳಲ್ಲಿ ಹೂಡಿದ ಹಣವೂ ಕೆಲವರಿಗೆ ಪಾವತಿಯಾಗುವುದಿಲ್ಲ ತಿಳಿದಿರಲಿ.

6 ಮೈನರ್‌ ವಿಮೆ
 ಮಗಳಿಗಾಗಿ ಸಾಂಪ್ರದಾಯಿಕ ವಿಮೆ(ಚಿಲ್ಡìನ್‌ ಇನುÏರೆನ್ಸ್‌)ಯೊಂದನ್ನು ಐದು ವರ್ಷದ ಹಿಂದೆ ಖರೀದಿ ಮಾಡಿ, ಈಗ  ಮೆಚ್ಯುರಿಟಿಯಾಗಲಿದೆ.  ಆದರೆ ಮಗಳು ವ್ಯಾಸಂಗಕ್ಕಾಗಿ ವಿದೇಶದಲ್ಲಿದ್ದಾಳೆ. ಮುಂದೇನಪ್ಪಾ ಗತಿ? ಇದು ಮಕ್ಕಳು ವಿದೇಶದಲ್ಲಿ ಓದುತ್ತಿರುವ ಹೆತ್ತವರ ಆತಂಕ.   

ಈ ಸಂದರ್ಭದಲ್ಲಿ ಮಾಡಬೇಕಾಗಿರುವುದಿಷ್ಟೇ; ನೀವು ಕಟ್ಟುತ್ತಿರುವುದು ಸಾಂಪ್ರದಾಯಿಕ ವಿಮೆಯೇ ಎಂದು ಖಾತ್ರಿ ಪಡಿಸಿಕೊಳ್ಳಿ. ನೀಡಿರುವ ದಾಖಲೆ, ರಸೀದಿಯನ್ನು ಪರೀಕ್ಷಿಸಿ. ಸಾಂಪ್ರದಾಯಿಕ ವಿಮೆಯೇ ಆಗಿದ್ದಲ್ಲಿ ಮೆಚ್ಯುರಿಟಿ ಅಮೌಂಟ್‌ ಯಾವಾಗ ಪಾವತಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜೊತೆಗೆ, ನೀವು ಮಾಡಿಸಿರುವುದು ಚಿಲ್ಡ್ರನ್‌ ಇನುÏರೆನ್ಸ್‌ ಆಗಿರುವುದರಿಂದ ಮೈನರ್‌ಗೆ(ಮಗಳಿಗೆ) ಹೆಚ್ಚಿನ ಜವಾಬ್ದಾರಿ ಇರುವುದಿಲ್ಲ. ಮೆಚ್ಯುರಿಟಿ ವೇಳೆಗೆ ನೀವು ಇನುÒರೆನ್ಸ್‌ ಕಚೇರಿಗೆ ಹೋಗಬೇಕಾಗುತ್ತದೆ. ಅಲ್ಲದೆ ಪಾಲಿಸಿದಾರನಿದ್ದರೆ ಕೆಲಸ ಸುಗಮವಾಗುತ್ತದೆ. ಜೊತೆಗೆ ಮೆಚ್ಯುರಿಟಿ ವೇಳೆಗೆ ಮಗಳಿಗೆ 18 ವರ್ಷ ಆಗಿದ್ದರೆ ಆಕೆಯೇ ಆ ಹಣಕ್ಕೆ ಜವಾಬ್ದಾರಳಾಗುತ್ತಾಳೆ. ಆ ವೇಳೆಯಲ್ಲಿ ಮಗಳಿಗೇನಾದರುಊ ವಿದೇಶದಲ್ಲಿದ್ದರೆ ಆಕೆಯನ್ನು ದೇಶಕ್ಕೆ ಕರೆಸಿಕೊಳ್ಳುವುದು ಅಗತ್ಯ.

7 ಡಿಡಿಡಿ ಬಗ್ಗೆ ಗೊತ್ತಾ?
ಜೀವ ಮಿಮೆಯಲ್ಲಿ ಡಿಡಿಡಿ ಪ್ಲಾನ್‌ ಅನ್ನು ತೆಗೆದುಕೊಳ್ಳ ಬಹುದೇ ಅಥವಾ ಸಾಮಾನ್ಯ ಆರೋಗ್ಯ ವಿಮೆಯನ್ನೇ ಕೊಳ್ಳಬಹುದೇ ಅನ್ನೋದು ವಿಮೆ ಮಾಡಿಸುವವರ ಗೊಂದಲ.  ಡಿಡಿಡಿ ಎಂದರೆ ಡೆತ್‌, ಡಿಜಬಲಿಟಿ ಅಂಡ್‌ ಡಿಸೀಸ್‌ ಎಂದು ಕೆಲವು ಇನುÏರೆನ್ಸ್‌ ಕಂಪನಿಗಳು ತುರ್ತು ಆರೋಗ್ಯ ತೊಂದರೆ ಕುರಿತು ಇಂತಹ ಪ್ಲಾನ್‌ಗಳನ್ನು ಆಫ‌ರ್‌ ಮಾಡುವುದುಂಟು. ದೊಡ್ಡ ಪ್ರಮಾಣದ ಅನಾರೋಗ್ಯ ಅಥವಾ ರೋಗದಿಂದ ಬಳಲುತ್ತಿರುವವರಿಗೆ ಈ ವಿಮೆ ಅನುಕೂಲಕ್ಕೆ ಬರುತ್ತದೆ. ಇದಕ್ಕೆ ಮೊದಲೇ ತಿಳಿಸಿ ಒಂದಿಷ್ಟು ಹಣವನ್ನು ಪಾವತಿಸಬೇಕು. ಇದು ಸಾಮಾನ್ಯ ಆರೋಗ್ಯ ುಮೆಗಿಂತ ಹೆಚ್ಚಿನ ನಗದನ್ನು ಬೇಡುತ್ತದೆ. ಅದರೆ ಜೀವ ುಮೆಯಲ್ಲಿ ಈ ಮಾದರಿಯ ಆಫ‌ರ್‌ ಇದ್ದರೆ ಅದನ್ನು ಪಡೆಯುವುದು ಸೂಕ್ತ. ಸಾಮಾನ್ಯ ಆರೋಗ್ಯ ಮೆಯಲ್ಲಿಯೇ ಈ ಅವಕಾಶ ನೀಡಿದರೆ ಅದೂ ಸೂಕ್ತ. ಆದರೆ ನೀವು ತೆಗೆದುಕೊಂಡ ಪ್ಲಾನಿನಲ್ಲಿ ಯಾವ ಕವರೇಜ್‌ಗಳಿವೆ ಎಂಬುದನ್ನು ಕುಲಂಕಷವಾಗಿ ಗಮನಿಸಿ ಪಡೆದುಕೊಳ್ಳಿ. ಉದಾಹರಣೆಗೆ ಪರ್ಸನಲ್‌ ಆಕ್ಸಿಡೆಂಟ್‌ ಪ್ಲಾನ್‌ ಸಣ್ಣ ಪ್ರಮಾಣದ ಅಪಘಾತಕ್ಕೂ ಅವಕಾಶ ನೀಡಿದೆ. ಕ್ರಿಟಿಕಲ್‌ ಇಲ್ನಸ್‌ ಪ್ಲಾನ್‌ ಹಲವು ಅನಾರೋಗ್ಯ ತೊಂದರೆಗಳಿಗೆ ಬಳಕೆಯಾಗುತ್ತದೆ.

ಡಿಡಿಡಿ ಯಲ್ಲಿ ತುರ್ತು ಮತ್ತು ಕ್ರಿಟಿಕಲ್‌ ಆರೋಗ್ಯ ತೊಂದರೆ ಮಾತ್ರ ಬಳಕೆಯಾಗುತ್ತದೆ. ಇದರಲ್ಲಿ ಕೆಲವು ಆರೋಗ್ಯ ತೊಂದರೆ, ಸರ್ಜರಿಗಳು, ಮೆಡಿಸಿನ್‌ ಇತ್ಯಾದಿಗಳಿಗೆ ಪ್ಲಾನ್‌ಗಳಲ್ಲಿ ಅವಕಾಶ ಇರುವುದಿಲ್ಲ. ಆರೋಗ್ಯ ವಿಮೆಗಳು ನೀಡುವಂತೆ ಮೆಡಿಕಲ್‌ ಖರ್ಚುಗಳನ್ನು ಭರಿಸುವುದಿಲ್ಲ.

– ಎನ್‌ ಅನಂತನಾಗ್‌

ಟಾಪ್ ನ್ಯೂಸ್

ಚಳಿ ಮುಗಿಯುವವರೆಗೆ ಎಚ್ಚರ ಅಗತ್ಯ: ತಜ್ಞ ವೈದ್ಯರ ಸಲಹೆ

ಚಳಿ ಮುಗಿಯುವವರೆಗೆ ಎಚ್ಚರ ಅಗತ್ಯ: ತಜ್ಞ ವೈದ್ಯರ ಸಲಹೆ

HOSAMANI1

ಕುಸಿದಿದ್ದ ನೇತಾಜಿಯ ಕೈಹಿಡಿದಿದ್ದೇ ಕರುನಾಡು!

ಅತ್ತಾವರದ ಯಲ್ಲಪ್ಪ, ನೇತಾಜಿ ಸೇನೆಯ ವಿತ್ತ ಮಂತ್ರಿ

ಅತ್ತಾವರದ ಯಲ್ಲಪ್ಪ, ನೇತಾಜಿ ಸೇನೆಯ ವಿತ್ತ ಮಂತ್ರಿ

ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ಸಿಂಧು-ಮಾಳವಿಕಾ ಫೈನಲ್‌ ಹಣಾಹಣಿ

ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ಸಿಂಧು-ಮಾಳವಿಕಾ ಫೈನಲ್‌ ಹಣಾಹಣಿ

ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ: ವೃಥಾ ವಿವಾದ ಸೃಷ್ಟಿ

ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ: ವೃಥಾ ವಿವಾದ ಸೃಷ್ಟಿ

ಐಪಿಎಲ್‌ ಹರಾಜಿಗೆ 1,214 ಆಟಗಾರರು

ಐಪಿಎಲ್‌ ಹರಾಜಿಗೆ 1,214 ಆಟಗಾರರು

ದ.ಕ.: ಹೋಂ ಐಸೋಲೇಶನ್‌ನಲ್ಲಿ ಇರುವವರಿಗೆ ಔಷಧ ಕಿಟ್‌: 5 ಸಾವಿರ ಕಿಟ್‌ ವಿತರಿಸಲು ಕ್ರಮ

ದ.ಕ.: ಹೋಂ ಐಸೋಲೇಶನ್‌ನಲ್ಲಿ ಇರುವವರಿಗೆ ಔಷಧ ಕಿಟ್‌: 5 ಸಾವಿರ ಕಿಟ್‌ ವಿತರಿಸಲು ಕ್ರಮಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಮಧ್ವರಾಜ್ ಮನದಾಳದ ಮಾತು

udayavani youtube

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ ಆರೋಪ ! ನ್ಯಾಯಾಲಯದ ಮೊರೆ ಸಲ್ಲು

udayavani youtube

ಅಮಿತ್ ಶಾರಿಂದ ಮನೆ ಮನೆ ಪ್ರಚಾರ

udayavani youtube

ಗಣರಾಜ್ಯೋತ್ಸವ paradeಗಾಗಿ ಭಾರತೀಯ ನೌಕಾಪಡೆ ಉತ್ಸಾಹದಿಂದ ತಯಾರಿ ನಡೆಸುತ್ತಿದೆ

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಹೊಸ ಸೇರ್ಪಡೆ

ಚಳಿ ಮುಗಿಯುವವರೆಗೆ ಎಚ್ಚರ ಅಗತ್ಯ: ತಜ್ಞ ವೈದ್ಯರ ಸಲಹೆ

ಚಳಿ ಮುಗಿಯುವವರೆಗೆ ಎಚ್ಚರ ಅಗತ್ಯ: ತಜ್ಞ ವೈದ್ಯರ ಸಲಹೆ

HOSAMANI1

ಕುಸಿದಿದ್ದ ನೇತಾಜಿಯ ಕೈಹಿಡಿದಿದ್ದೇ ಕರುನಾಡು!

ಅತ್ತಾವರದ ಯಲ್ಲಪ್ಪ, ನೇತಾಜಿ ಸೇನೆಯ ವಿತ್ತ ಮಂತ್ರಿ

ಅತ್ತಾವರದ ಯಲ್ಲಪ್ಪ, ನೇತಾಜಿ ಸೇನೆಯ ವಿತ್ತ ಮಂತ್ರಿ

ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ಸಿಂಧು-ಮಾಳವಿಕಾ ಫೈನಲ್‌ ಹಣಾಹಣಿ

ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ಸಿಂಧು-ಮಾಳವಿಕಾ ಫೈನಲ್‌ ಹಣಾಹಣಿ

ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ: ವೃಥಾ ವಿವಾದ ಸೃಷ್ಟಿ

ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ: ವೃಥಾ ವಿವಾದ ಸೃಷ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.