ಟ್ಯಾಕ್ಸ್‌ ರೀಫ‌ಂಡ್‌ನ‌ 9 ಸತ್ಯಗಳು 


Team Udayavani, Aug 7, 2017, 12:15 PM IST

07-ISIRI-7.jpg

ತೆರಿಗೆದಾರರು ಇ-ವೆರಿಫಿಕೇಶನ್‌ ಮಾಡಬೇಕು
3-4 ವಾರದಲ್ಲಿ ನೇರ ಖಾತೆಗೆ ಜಮೆ
ಫೈಲ್‌ ಮಾಡಿದ ನಂತರ ಇಲಾಖೆ ಪರಶೀಲಿಸುತ್ತದೆ

ವರಮಾನ ತೆರಿಗೆ ಪಾವತಿದಾರರಿಗೆ ಇದು ಗೊತ್ತಿರುತ್ತದೆ. ತ್ರೆ„ಮಾಸಿಕ ಅವಧಿಗೊಮ್ಮೆ ತನ್ನ ಕೆಲಸಗಾರನ ಸಂಬಳ,ಆತ ಆ ವರ್ಷದಲ್ಲಿ ಮಾಡಿರುವ ಹೂಡಿಕೆಗಳನ್ನು ಪರಿಗಣಿಸಿ ಮಾಸಿಕ ವೇತನದಿಂದ ನಿರ್ದಿಷ್ಟ  ಮೊತ್ತವನ್ನು ತೆರಿಗೆ ಬಾಬಿ¤ಗೆ ಕಟಾವಣೆ ಮಾಡಿ ಕೇಂದ್ರ ಸರಕಾರಕ್ಕೆ ಠೇವಣಿ ಮಾಡಿರುತ್ತಾರೆ.  ಸ್ವಂತ ವ್ಯವಹಾರಸ್ಥರು ಮತ್ತು ಉದ್ದಿಮೆದಾರರು ತಾವೇ ಸ್ವತಃ ಮುಂಗಡ ತೆರಿಗೆ ರೂಪದಲ್ಲಿ ತಮ್ಮ ಆದಾಯಕ್ಕನುಗುಣವಾದ ಮೊತ್ತವನ್ನು ಪಾವತಿ ಮಾಡಿರುತ್ತಾರೆ. 

ಇನ್ನೆಲ್ಲೋ ಬ್ಯಾಂಕಿನಲ್ಲಿ ಇಟ್ಟ ಎಫ್ಡಿ. ಬಾಬಿ¤ಗೆ ಟಿ.ಡಿ.ಎಸ್‌. ಎಂದು ಒಂದಷ್ಟು ಮೊತ್ತ ಕಟಾವಣೆ ಆಗಿರುತ್ತದೆ. ಹೀಗೆ ಅನೇಕ ವಿಧಗಳಲ್ಲಿ ತೆರಿಗೆ ಪಾವತಿ ಆಗಿರುತ್ತದೆ. ವರ್ಷಾಂತ್ಯ ಕಳೆದ ನಂತರದಲ್ಲಿ ತೆರಿಗೆ ಲೆಕ್ಕ ಸಲ್ಲಿಕೆ ಮಾಡುವಾಗ ಪಾವತಿ ಮಾಡಿರುವ ಮುಂಗಡ ತೆರಿಗೆಗಳನ್ನು ಗಣನೆಗೆ ತೆಗೆದುಕೊಂಡು ಹೆಚ್ಚುವರಿಯಾಗಿ ತೆರಿಗೆ ಪಾವತಿ ಮಾಡಬೇಕಾಗಿ ಬಂದಲ್ಲಿ ಪಾವತಿಸ ಬೇಕಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ವರಮಾನ ತೆರಿಗೆ ಕಾಯಿದೆಯ ಸೆಕ್ಷನ್‌ 80ಸಿ ಸೇರಿದಂತೆ ಅನೇಕ ವಿಧಿಗಳನ್ವಯ ತೆರಿಗೆದಾರನಿಗೆ ಲಭ್ಯವಾಗತಕ್ಕ ವಿನಾಯಿತಿಗಳನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ಅನೇಕ ಮಂದಿಗೆ ತಾವು ಪಾವತಿ ಮಾಡಿದ ಮುಂಗಡ ತೆರಿಗೆ ಬಾಬಿ¤ನಲ್ಲಿ ಮೊತ್ತ ವಾಪಾಸು (ರೀಫ‌ಂಡ್‌) ಬರಬೇಕಾಗಿರುತ್ತದೆ.   

ಈ ಟ್ಯಾಕ್ಸ್‌ ರೀಫ‌ಂಡ್‌ ಹೇಗಾಗುತ್ತದೆ? ಅಲ್ಲಿ ಅನುಸರಿಸಲಾಗುವ ಕ್ರಮಗಳೇನು? ರೀಫ‌ಂಡ್‌ ಕ್ಲೈಮು ಮಾಡುವುದು ಹೇಗೆ? ರೀಫ‌ಂಡಾಗುವ ಮೊತ್ತಕ್ಕೆ ವರಮಾನ ತೆರಿಗೆ ಇಲಾಖೆ ಬಡ್ಡಿ ಕೊಡುತ್ತದೆಯೇ? 

1.    ನೀವು ಆನ್‌ ಲೈನ್‌ ಮಾಧ್ಯಮದಲ್ಲಿ ತೆರಿಗೆ ರಿಟರ್ನ್ ಸಲ್ಲಿಸುತ್ತೀರಿ ಎಂದಾದರೆ ನಿಮ್ಮ ಪಾನ್‌ ಸಂಖ್ಯೆ ಹಾಕಿ ವರಮಾನ ತೆರಿಗೆ ಇಲಾಖೆಯ ಜಾಲತಾಣದಲ್ಲಿ ಲಾಗಿನ್‌ ಆಗಿ ಮುಂದುವರಿಯುತ್ತಿದ್ದಂತೆಯೇ, ನೀವೆಷ್ಟು ಮುಂಗಡ ತೆರಿಗೆ ಪಾವತಿ ಮಾಡಿದ್ದೀರಿ ಎಂಬ ಮಾಹಿತಿ ಕಂಪ್ಯೂಟರ್‌ ತೆರೆಯ ಮೇಲೆ ಮೂಡುತ್ತದೆ.  ಹಳೆಯ ಸಾಂಪ್ರದಾಯಿಕ ಪದ್ಧತಿಯಲ್ಲಿ ಇಲಾಖೆಯ ಕಚೇರಿಗೆ ಹೋಗಿ ರಿಟರ್ನ್ ಸಲ್ಲಿಸುವವರಾದಲ್ಲಿ ನೀವೇ ತೆತ್ತಿರುವ ತೆರಿಗೆಯ ಲೆಕ್ಕವನ್ನು ಒಟ್ಟುಗೂಡಿಸಿಕೊಡಬೇಕು.  ಇನ್ನು ವೇತನದಾರರಾದರೆ ಕಡಿತವಾದ ತೆರಿಗೆಯ ಮೊತ್ತ ನಮೂನೆ-16ರಲ್ಲಿ ಪ್ರತಿಫ‌ಲಿತವಾಗುತ್ತದೆ.  

2.    ಸಾಮಾನ್ಯವಾಗಿ ವರಮಾನ ತೆರಿಗೆ ರಿಟರ್ನ್ ಫೈಲ್‌ ಮಾಡಿದ ನಂತರದಲ್ಲಿ ತೆರಿಗೆ ಇಲಾಖೆ ಪರೀಶೀಲನೆ ಮಾಡುತ್ತದೆ, ಸೆಕ್ಷನ್‌ 143(1)ರ ಅಡಿಯಲ್ಲಿ ಇಂಟಿಮೇಶನ್‌ ಕಳುಹಿಸಿ, ತೆರಿಗೆ ಲೆಕ್ಕಾಚಾರ ಸರಿ ಇದೆ ಎಂದು ಖಾತ್ರಿ ಪಡಿಸುತ್ತದೆ. 

3.    ಒಂದೊಮ್ಮೆ ನೀವು ಇ-ಫೈಲಿಂಗ್‌ ಮಾಡುವವರಾದರೆ ಇಲಾಖೆಯ ವೆಬ್‌ ಸೈಟಿನಲ್ಲಿ ನಿಮ್ಮ ತೆರಿಗೆ ಲೆಕ್ಕದ ತಃಖೆ¤ಗಳು ಅಪ್‌ ಲೋಡ್‌ ಆಗುತ್ತಿದ್ದಂತೆ ಲೆಕ್ಕಾಚಾರಗಳು ಸರಿ ಇವೆಯೇ ಇಲ್ಲವೇ ಎಂಬುದು ಆ ಕ್ಷಣವೇ ಖಾತ್ರಿಯಾಗುತ್ತದೆ.

4.    ಹೆಚ್ಚುವರಿ ತೆರಿಗೆ ಪಾವತಿಯಾಗಿದ್ದಲ್ಲಿ ತೆರಿಗೆದಾರನಿಗೆ ರೀಫ‌ಂಡ್‌ ಪಾವತಿಸುವ ಮೊತ್ತಕ್ಕೆ ಇಲಾಖೆ ಬಡ್ಡಿ ಸೇರಿಸಿ ಕೊಡಬೇಕು ಎಂಬ ನಿಯಮ 244-ಎರಲ್ಲಿ ಉಲ್ಲೇಖವಾಗಿದೆ.  ಅಡ್ವಾನ್ಸ್‌ ಟ್ಯಾಕ್ಸ್‌ ಅಥವಾ ಟಿ.ಡಿ.ಎಸ್‌. ರೂಪದಲ್ಲಿ ಪಾವತಿಯಾದ ಹೆಚ್ಚುವರಿ ತೆರಿಗೆ ರೀಫ‌ಂಡ್‌ ಆಗಬೇಕಾದ ಸಂದರ್ಭದಲ್ಲಿ ತೆರಿಗೆ ಪಾವತಿದಾರ ಸಕಾಲದಲ್ಲಿ ರಿಟರ್ನ್ ಸಲ್ಲಿಸಿದ್ದಲ್ಲಿ, ಆ ಅಸೆನ್ಮೆಂಟ್ ವರ್ಷದ ಏಪ್ರಿಲ್‌ ಒಂದರಿಂದ ಮೊದಲ್ಗೊಂಡು ರೀಫ‌ಂಡ್‌ ಕೊಡುವ ದಿನಾಂಕದ ತನಕದ ಅವಧಿಗೆ ಇಲಾಖೆ ಬಡ್ಡಿ ಸೇರಿಸಿ ಕೊಡುತ್ತದೆ.  ಒಂದುವೇಳೆ ರಿಟರ್ನ್ ನಿಗದಿತ ವಾಯಿದೆ ಒಳಗಡೆ ಸಲ್ಲಿಕೆಯಾಗದೇ ಇದ್ದಲ್ಲಿ, ರಿಟರ್ನ್ ಸಲ್ಲಿಕೆಯಾದ ದಿನದಿಂದ ರೀಫ‌ಂಡ್‌ ಕೊಡುವ ದಿನದ ತನಕದ ಅವಧಿಗೆ ಇಲಾಖೆ ಬಡ್ಡಿಕೊಡುತ್ತದೆ.  

5. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ರೀತಿ ಇಲಾಖೆಯಿಂದ ರೀಫ‌ಂಡ್‌ ಮೊತ್ತದ ಮೇಲೆ ಪಡೆಯಲಾದ ಬಡ್ಡಿಯ ಭಾಗವು ತೆರಿಗೆಗೆ ಒಳಪಡಬೇಕಾದ ಮೊತ್ತವೇ ಆಗಿರುತ್ತದೆ. ಅಂದರೆ ಮುಂದಿನ ವರುಷದ ರಿಟರ್ನ್ ಸಲ್ಲಿಕೆಯಾಗುವಾಗ, ಹಳೆಯ ವರುಷದಲ್ಲಿ ಎಷ್ಟು ಮೊತ್ತ ಬಡ್ಡಿಬಾಬಿ¤ನಿಂದ ಬಂದಿತ್ತು ಎಂಬುದು ನಮೂದು ಮಾಡಬೇಕು.

6.    ಒಂದುವೇಳೆ ಲೆಕ್ಕಾಚಾರ ತಪ್ಪಾಗಿ ಹೆಚ್ಚುವರಿ ಮೊತ್ತವೇನಾದರೂ ಆತನಿಗೆ ರೀಫ‌ಂಡ್‌ ಆಗಿದ್ದಲ್ಲಿ ಅದನ್ನು ವಸೂಲಿ ಮಾಡಲು ಸೆಕ್ಷನ್‌ 234-ಡಿ ಅನ್ವಯ ಇಲಾಖೆ ಕ್ರಮ ತೆಗೆದುಕೊಳ್ಳುವುದಕ್ಕೆ ಸ್ವತಂತ್ರವಿರುತ್ತದೆ.  ಅಂತಹ ಸಂದರ್ಭದಲ್ಲಿ ತಾನು ವಸೂಲು ಮಾಡುವ ಮೊತ್ತಕ್ಕೆ ಬಡ್ಡಿ ಸೇರಿಸಿ ವಸೂಲು ಮಾಡುತ್ತದೆ. 

7.    ತೆರಿಗೆದಾರನು ಟಿ.ಡಿ.ಎಸ್‌. ಮೂಲಕ ಕಟಾವಣೆ ಆಗಿರುವ ಮೊತ್ತದ ರೀಫ‌ಂಡ್‌ ಪಡೆಯಲು ಮರೆತಿದ್ದಲ್ಲಿ, ಮೊತ್ತ ಕಟಾವಣೆಯಾದಂದಿನಿಂದ ಒಂದು ವರ್ಷದ ಒಳಗಾಗಿ ರೀಫ‌ಂಡ್‌ ಕ್ಲೈಮು ಮಾಡಬೇಕು. ಆ ನಂತರ ಹಳೆಯ ವರ್ಷಗಳ ಬಾಬಿ¤ನ ರೀಫ‌ಂಡ್‌ಗಳನ್ನು ಕೇಳುವಂತಿಲ್ಲ. ಅದು ಕೇಂದ್ರ ಸರಕಾರದ ಅನ್‌ ಕ್ಲೈಮ್‌ಡ್‌ ರೀಫ‌ಂಡ್‌ ಖಾತೆಗೆ ಜಮಾವಣೆಯಾಗುತ್ತದೆ. 

8.    ಸಾಮಾನ್ಯವಾಗಿ ತೆರಿಗೆ ರಿಟರ್ನ್ ಸಲ್ಲಿಸಿದ 3-4 ವಾರದಲ್ಲಿ ರೀಫ‌ಂಡ್‌ ಆಗಬೇಕಾದ ಮೊತ್ತ ನೇರವಾಗಿ ತೆರಿಗೆದಾರನ ಬ್ಯಾಂಕ್‌ ಖಾತೆಗೆ ಜಮಾವಣೆ ಆಗುತ್ತದೆ.  ಆಧಾರ್‌ ಮತ್ತು ಪಾನ್‌ ಸಂಖ್ಯೆಯನ್ನು ಲಿಂಕ್‌ ಮಾಡುವುದನ್ನು ಸರಕಾರವೇ ಕಡ್ಡಾಯಗೊಳಿಸಿದೆ. 

9.    ಇ-ಫೈಲಿಂಗ್‌ ಮಾಡುವ ತೆರಿಗೆದಾರರು ತಮ್ಮಿಂದ ಸಲ್ಲಿಕೆಯಾದ ರಿಟರ್ನಿನ ಇ-ವೆರಿಫಿಕೇಶನ್‌ ಮಾಡಬೇಕು.  ಇದಕ್ಕೆ ನೆಟ್‌ ಬ್ಯಾಂಕಿಂಗ್‌ ಸೌಲಭ್ಯ ಇರಬೇಕು ಅಥವಾ ಆಧಾರ್‌ ನಂಬರ್‌ ಬಳಸಿ ಇ-ವೆರಿಫಿಕೇಶನ್‌ ಮಾಡಬೇಕು.  ರಿಟರ್ನ್ ಸಲ್ಲಿಸಿದ 120 ದಿನಗಳ ಒಳಗಾಗಿ ವೆರಿಫಿಕೇಶನ್‌ ಪ್ರಕ್ರಿಯೆ ಪೂರ್ಣಗೊಳಿಸಬೇಕು.  ಹೀಗೆ ಸಲ್ಲಿಕೆಯಾದ ರಿಟರ್ನ್ ವೆರಿಫೈ ಆಗಿರುವುದು ಖಾತ್ರಿಯಾದ ನಂತರದ 2-3 ವಾರದಲ್ಲಿ ರೀಫ‌ಂಡ್‌ ಬರಬೇಕಾದ ಮೊತ್ತ ತೆರಿಗೆದಾರನ ಖಾತೆಗೆ ಜಮಾವಣೆಯಾಗುತ್ತದೆ. 

ಟಾಪ್ ನ್ಯೂಸ್

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

7-uv-fsuion

Yugadi: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

6-uv-fusion

UV Fusion: ಯುಗಾದಿ ಸಂಭ್ರಮೋತ್ಸವ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

5-uv-fusion

Yugadi: ವರುಷದ ಆದಿ ಯುಗಾದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.