Udayavni Special

ಪರಕಾಸು ಪ್ರವೇಶ! ಬ್ಯಾಂಕ್‌ ಖಾತೆಯಲ್ಲಿ ಯಾರದೋ ದುಡ್ಡು!


Team Udayavani, Oct 7, 2019, 4:43 AM IST

hhh

ಅಚಾನಕ್ಕಾಗಿ ನಿಮ್ಮ ಬ್ಯಾಂಕ್‌ ಖಾತೆಗೆ ಲಕ್ಷಾಂತರ ಮೊತ್ತ ಜಮೆಯಾಗಿರುವ ಸಂದೇಶ ನಿಮ್ಮ ಮೊಬೈಲಿಗೆ ಬರುತ್ತದೆ. ಯಾರಿಗೋ ಕಳಿಸಬೇಕಿದ್ದ ಮೊತ್ತ, ತಪ್ಪಿನಿಂದಾಗಿ ನಿಮ್ಮ ಖಾತೆಗೆ ಬಂದಿರುತ್ತದೆ. ಅಷ್ಟು ಮಾತ್ರಕ್ಕೆ ಲಾಟರಿ ಹೊಡೆಯಿತೆಂದು ತಿಳಿದು ಖಾತೆದಾರರು ಆ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳಬಾರದು. ಹಾಗೊಂದು ವೇಳೆ ಮಾಡಿದಲ್ಲಿ ಮುಂದೊಮ್ಮೆ ಪೊಲೀಸರ ಅತಿಥಿ ಆಗಬೇಕಾಗುತ್ತದೆ!

ಬ್ಯಾಂಕುಗಳಲ್ಲಿ ಸಾಮಾನ್ಯವಾಗಿ ನಿಮಗೆ ಸೇರಬೇಕಾದ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಹಾಗೆಯೇ ನೀವು ಕೊಡಬೇಕಾದ ಹಣ ನಿಮ್ಮ ಖಾತೆಯಿಂದ ಡೆಬಿಟ್‌ ಆಗುತ್ತದೆ. ಈ ನಿಟ್ಟಿನಲ್ಲಿ ಬ್ಯಾಂಕಿನವರು ಸಾಕಷ್ಟು ಎಚ್ಚರಿಕೆ ವಹಿಸುತ್ತಾರೆ ಮತ್ತು ತೀವ್ರ ನಿಗಾ ಇಡುತ್ತಾರೆ. ಈ ಪ್ರಕ್ರಿಯೆಯಲ್ಲಿ ಸ್ವಲ್ಪ ಎಡವಿದರೂ ಬ್ಯಾಂಕುಗಳು ಭಾರೀ ದಂಡ ತೆರಬೇಕಾಗುತ್ತದೆ. ಇದು ಸಿಬ್ಬಂದಿಗಳ ತಪ್ಪಿನಿಂದಾಗಿ ನಡೆದರೆ, ಸಂಬಂಧಪಟ್ಟವರಿಂದ ವಸೂಲು ಮಾಡಲು ಸಾಧ್ಯವಾಗದಿದ್ದರೆ, ಹಣ ಕಳೆದುಕೊಂಡವನಿಗೆ ಪರಿಹಾರ ನೀಡಿ, ನಂತರ ಅದನ್ನು ತಪ್ಪು ಮಾಡಿದ ಸಿಬ್ಬಂದಿಯಿಂದ ವಸೂಲು ಮಾಡಿಕೊಳ್ಳುತ್ತಾರೆ. ಹೀಗಾಗಿಯೇ, ಸಿಬ್ಬಂದಿ ಕೂಡಾ ಅತಿ ಎಚ್ಚರಿಕೆಯಿಂದ ಇರುತ್ತಾರೆ. ಆದರೂ, ಎಷ್ಟೇ ಜಾಗರೂಕತೆಯಿಂದ ಇದ್ದರೂ ತಪ್ಪು ಮಾಡುವುದು ಮಾನವನ ಸಹಜ ಗುಣ.ಹಾಗಾಗಿ, ತಪ್ಪುಗಳು ಅಗುತ್ತಲೇ ಇರುತ್ತವೆ.

ಯಾವ ರೀತಿಯ ತಪ್ಪುಗಳು?
ಗ್ರಾಹಕರು ಚಲನ್‌ಗಳಲ್ಲಿ ಮತ್ತು ಇನ್ನಿತರ ದಾಖಲೆಗಳಲ್ಲಿ ತಪ್ಪು ಖಾತೆ ನಂಬರ್‌ಗಳನ್ನು ನಮೂದಿಸುವುದರಿಂದ, ಸಲ್ಲಬೇಕಾದ ಗ್ರಾಹಕನಿಗೆ ಹಣ ಸಿಗದೇ ತಪ್ಪು ಗ್ರಾಹಕನಿಗೆ (wrong customer) ಸಂದಾಯವಾಗುತ್ತದೆ. ಈ ತಪ್ಪು ಗ್ರಾಹಕರಿಂದ ಅಗುತ್ತದೆ ಮತ್ತು ಬ್ಯಾಂಕ್‌ ಸಿಬ್ಬಂದಿಗಳಿಂದಲೂ ಅಗುತ್ತದೆ. ಬ್ಯಾಂಕುಗಳಲ್ಲಿ ಖಾತೆ ನಂಬರ್‌ ಮತ್ತು ಹೆಸರು ಟ್ಯಾಲಿಯಾಗಬೇಕು. ಆದರೆ, ಬ್ಯಾಂಕಿನ ಕೆಲವು ವ್ಯವಹಾರಗಳಲ್ಲಿ ಮುಖ್ಯವಾಗಿ RTGS ಮತ್ತು NEFTಗಳಲ್ಲಿ ಕೇವಲ ಖಾತೆ ನಂಬರ್‌ಗಳನ್ನು ಗುರುತಿಸಿ ಕ್ರೆಡಿಟ್‌ ನೀಡುವುದರಿಂದ ಅನಾಹುತಗಳು ಆಗುವುದು ಹೆಚ್ಚು.

ಹಲವು ಸಂದರ್ಭಗಳಲ್ಲಿ ನಮೂದಿಸುವ ಹಣದ ಮೊತ್ತವು ತಪ್ಪಾಗಿ ಅವಾಂತರವಾಗುತ್ತದೆ. ಎಷ್ಟೋ ಬಾರಿ ಮೊತ್ತದಲ್ಲಿ ಇರುವ ಜೀರೋಗಳು ಹೆಚ್ಚಾಗಿ ಅಥವಾ ಕಡಿಮೆಯಾಗಿ ಗೊಂದಲವಾಗುತ್ತದೆ. ಒಂದು ಸೊನ್ನೆ ಹೆಚ್ಚುಕಮ್ಮಿಯಾದರೂ ಅದರಿಂದಾಗುವ ಪ್ರಮಾದ ಗಂಭೀರವಾದದ್ದು. ಹಾಗೆಯೇ ಬರೆಯುವಾಗ ಮತ್ತು ಗಣಕಯಂತ್ರದಲ್ಲಿ ಅಂಕೆಗಳನ್ನು ಪಂಚ್‌ ಮಾಡುವಾಗ ಅಂಕೆಗಳು ಜಂಬ್ಲಿಂಗ್‌ ಆಗಿ ಎಡವಟ್ಟುಗಳಾದ ಪ್ರಮೇಯಗಳು ಸಾಕಷ್ಟಿವೆ. ಈ ತಪ್ಪುಗಳು ಹೆಚ್ಚಾಗಿ ಗೊತ್ತಾಗುವುದು ಪಾಸ್‌ಬುಕ್‌ ಅಥವಾ ಅಕೌಂಟ್‌ ಸ್ಟೇಟ್‌ಮೆಂಟ್‌ ನೋಡಿದಾಗಲೇ.

ಗ್ರಾಹಕರೂ ಜವಾಬ್ದಾರರು
ಇತ್ತೀಚಿನ ದಿನಗಳಲ್ಲಿ, ಬ್ಯಾಂಕ್‌ ವ್ಯವಹಾರಗಳ ಸಂಕ್ಷಿಪ್ತ ಮಾಹಿತಿ ಎಸ್‌ಎಮ್‌ಎಸ್‌ ಸಂದೇಶದ ಮೂಲಕ ಬರುತ್ತಿದೆ. ಸಾಮಾನ್ಯವಾಗಿ ಖಾತೆಗೆ ಹೆಚ್ಚಿಗೆ ಡೆಬಿಟ್‌ ಆದರೆ, ನಿರೀಕ್ಷೆಗಿಂತ ಕಡಿಮೆ ಕ್ರೆಡಿಟ್‌ ಆದರೆ, ಅಥವಾ ಅನಿರೀಕ್ಷಿತ ಡೆಬಿಟ್‌ ಅಥವಾ ಕ್ರೆಡಿಟ್‌ ಆದರೆ, ಕೂಡಲೇ ಗ್ರಾಹಕರು ಬ್ಯಾಂಕುಗಳನ್ನು ಸಂಪರ್ಕಿಸಿ ಸಮಜಾಯಿಷಿ ಪಡೆಯುತ್ತಾರೆ. ಇನ್ಯಾವಾಗಲಾದರೂ ಬ್ಯಾಂಕಿಗೆ ಭೇಟಿ ನೀಡಿದಾಗ ವಿಚಾರಿಸಿದರಾಯಿತು ಎನ್ನುವವರೂ ಇದ್ದಾರೆ. ಅಂಥವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಮೊತ್ತವು ಗಮನಾರ್ಹವಾಗಿದ್ದರೆ ಮಾತ್ರ ತುರ್ತಾಗಿ ಸಂಪರ್ಕಿಸುತ್ತಾರೆ. ಅಕಸ್ಮಾತ್‌ ಹೆಚ್ಚಿಗೆ ಕ್ರೆಡಿಟ್‌ ಬಂದರೆ, ಬಹುತೇಕ ಗ್ರಾಹಕರು ಮಾಹಿತಿ ದೊರೆತ ತಕ್ಷಣ ಪ್ರಾಮಾಣಿಕವಾಗಿ ಬ್ಯಾಂಕಿನ ಗಮನಕ್ಕೆ ತರುತ್ತಾರೆ. ಕೆಲವರು ಬ್ಯಾಂಕುಗಳ ತಪ್ಪನ್ನು ದುರುಪಯೋಗ ಮಾಡಿಕೊಳ್ಳುವವರೂ ಇರುತ್ತಾರೆ. ಗ್ರಾಹಕರು ತಪ್ಪು ಡೆಬಿಟ್‌ ಮತ್ತು ಕ್ರೆಡಿಟ್‌ಗಳ ಬಗೆಗೆ ತಮಗೆ ಮಾಹಿತಿ ಇಲ್ಲ ಎನ್ನುವ ನೆವ (excuse) ಹೇಳುವಂತಿಲ್ಲ.

ಗ್ರಾಹಕರಿಗೆ ನೀಡುವ ಪಾಸ್‌ಬುಕ್‌ ಮತ್ತು ಸ್ಟೇಟ್‌ಮೆಂಟ್‌ಗಳ ಪುಟದ ಕೊನೆಯಲ್ಲಿ ಗ್ರಾಹಕರು ಇಂತಿಷ್ಟು ದಿನಗಳೊಳಗಾಗಿ ಪ್ರತಿಯೊಂದು ಎಂಟ್ರಿಗಳನ್ನು ಪರಾಮರ್ಶಿಸಬೇಕು ಮತ್ತು ಲೋಪದೋಷಗಳನ್ನು ಬ್ಯಾಂಕುಗಳ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು ಎನ್ನುವ ನಿಬಂಧನೆ ಇರುತ್ತದೆ. ಈ ಅವಧಿಯ ನಂತರದ ದಿನಗಳಲ್ಲಿ ಬಂದರೆ ಸರಿಪಡಿಸುವುದು ಸ್ವಲ್ಪ ಕಷ್ಟ. ಇತ್ತೀಚಿಗೆ ಬ್ಯಾಂಕುಗಳು ಎಸ್‌.ಎಮ್‌.ಎಸ್‌ ಸಂದೇಶದ ಮೂಲಕ ತಿಂಗಳಾಂತ್ಯದಲ್ಲಿ ಖಾತೆಯಲ್ಲಿ ಇರುವ ಬ್ಯಾಲೆನ್ಸನ್ನು ಗ್ರಾಹಕನಿಗೆ ತಿಳಿಸುತ್ತಾರೆ. ಇದು ಗ್ರಾಹಕ ತನ್ನ ಖಾತೆಯಲ್ಲಿನ ವ್ಯವಹಾರದಲ್ಲಿನ ಲೋಪ ದೋಷಗಳನ್ನು ತಿಳಿಯಲು ಸಹಕಾರಿ.

ಬ್ಯಾಂಕಿನವರಿಗೆ ಸುದ್ದಿ ಮುಟ್ಟಿಸಿ
ಕೆಲವು ಬಾರಿ ಗ್ರಾಹಕರಿಗೆ ತಮಗೆ ಸಂಬಂಧಿಸಿಲ್ಲದ ಕ್ರೆಡಿಟ್‌ಗಳು ಖಾತೆಗೆ ಬರುತ್ತವೆ. ಅದರ ಹಿಂದಿನ ಕಾರಣ ಏನೇ ಇರಲಿ, ಗ್ರಾಹಕನು ನೈತಿಕವಾಗಿ ಮತ್ತು ಕಾನೂನಾತ್ಮಕವಾಗಿ ಅದರ ವಾರಸುದಾರನಾಗಿರುವುದಿಲ್ಲ. ಒಂದು ಸಮಯದ ಪರಿಮಿತಿಯೊಳಗೆ ಇದನ್ನು ಸಂಬಂಧಪಟ್ಟ ಬ್ಯಾಂಕ್‌ ಶಾಖೆಗೆ ಗ್ರಾಹಕನು ತಿಳಿಸಬೇಕಾಗುತ್ತದೆ. ತಪ್ಪಾಗಿ ನೀಡಿದ ಕ್ರೆಡಿಟ್‌ಅನ್ನು ಸಂಪೂರ್ಣವಾಗಿ ಹಿಂತಿರುಗಿ ಪಡೆಯುವ ಎಲ್ಲಾ ಹಕ್ಕು ಬ್ಯಾಂಕಿಗೆ ಇರುತ್ತದೆ. ಈ ನಿಟ್ಟಿನಲ್ಲಿ ಕಾನೂನು ಸಹಿತ ಎಲ್ಲಾ ಕ್ರಮಗಳನ್ನು ಬ್ಯಾಂಕುಗಳು ತೆಗೆದುಕೊಳ್ಳಬಹುದು. ಒಮ್ಮೊಮ್ಮೆ ದೊಡ್ಡ ಮೊತ್ತದ ಹಣ ಬಂದಿದ್ದು. ಇದರ ಬಗೆಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಹಾಗೆ ಮಾಡದಿದ್ದರೆ, ಈ ವಿವರ ಆದಾಯ ಕರ ಇಲಾಖೆಗಂತೂ ಗೊತ್ತಾಗುತ್ತದೆ. ಅವರು, ಈ ಮೊತ್ತವನ್ನು ಅಘೋಷಿತ ಆದಾಯವೆಂದು ತೆರಿಗೆ ಹಾಕಬಹುದು ಮತ್ತು ಅದಾಯದ ಮೂಲದ ಬಗೆಗೆ ಪ್ರಶ್ನಿಸಬಹುದು. ಇಂಥ ಅನಧಿಕೃತ ಕ್ರೆಡಿಟ್‌ ಬಂದಾಗ, ಅದನ್ನು ಬ್ಯಾಂಕಿಗೆ ಲಿಖೀತವಾಗಿ ತಿಳಿಸಿ ಮುಂದೆ ಬರಬಹುದಾದ ತೆರಿಗೆ ಸಂಬಂಧದ ಸಂಕಷ್ಟಗಳಿಂದ ತಪ್ಪಿಸಿಕೊಳ್ಳಬೇಕಾಗುತ್ತದೆ. ನೈತಿಕವಾಗಿ ಮತ್ತು ಕಾನೂನಾತ್ಮಕವಾಗಿ ಆ ಮೊತ್ತ ನಿಮ್ಮದಲ್ಲದ್ದರಿಂದ ಅದನ್ನು ಅಕಸ್ಮಾತ್‌ ಆಗಿ ಸ್ವಂತ ಖರ್ಚಿಗೆ ಬಳಸಿದರೆ, ಅದನ್ನು ಹಿಂತಿರುಗಿಸಬೇಕಾಗುತ್ತದೆ. ಹಿಂತಿರುಗಿಸಲು ವಿಫ‌ಲರಾದರೆ ಬ್ಯಾಂಕಿನವರು ಕಾನೂನಿನ ಕ್ರಮವನ್ನು ಜರುಗಿಸುತ್ತಾರೆ.

ಹಣ ಕಳೆದರೆ ಕಾನೂನು ಕ್ರಮ
ಇತ್ತೀಚೆಗೆ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ದಿ ಯೋಜನೆ ಅಡಿಯಲ್ಲಿ (Mಕಔಅಈ) ಒಂದು ಯೋಜನೆಯನ್ನು ಪೂರ್ಣಗೊಳಿಸಲು 40 ಲಕ್ಷ ಮಂಜೂರಾಗಿತ್ತು. ಮೂಲ ಫ‌ಲಾನುಭವಿ ತನ್ನ ಖಾತೆ ನಂಬರ್‌ ನಮೂದಿಸುವ ಕಡೆ ಮಾಡಿದ ಸಣ್ಣ ತಪ್ಪಿನಿಂದ ಹಣ ಬೇರೆಯೊಬ್ಬರ ಖಾತೆಗೆ ಜಮಾ ಆಗಿತ್ತು. ಅವರು ತಮ್ಮದಲ್ಲದ ಹಣ ತಮ್ಮ ಖಾತೆಗೆ ಬಂದಿರುವುದನ್ನು ಬ್ಯಾಂಕಿನ ಗಮನಕ್ಕೆ ತರಬೇಕಾಗಿತ್ತು. ಅದರೆ, ಅವರು ಹಣವನ್ನು ಬ್ಯಾಂಕಿನಿಂದ ಡ್ರಾ ಮಾಡಿ ಸ್ವಂತ ಉದ್ದೇಶಕ್ಕೆ ನೀರಿನಂತೆ ಖರ್ಚು ಮಾಡಿದ್ದರು. ಆ ಹಣದಲ್ಲಿ ಮಗಳ ಮದುವೆ ಮಾಡಿದ್ದರು ಮತ್ತು ಅಸ್ತಿಯನ್ನೂ ಖರೀದಿಸಿದ್ದರು. ಈ ಅಚಾತುರ್ಯ ಗೊತ್ತಾದಾಗ ಅಷ್ಟೂ ಹಣವನ್ನು ಮರಳಿಸುವ ಮುಚ್ಚಳಿಕೆ ಬರೆದುಕೊಡಬೇಕಾಯಿತು. ಆದರೆ ದೊಡ್ಡ ಮೊತ್ತವಾಗಿದ್ದಿದ್ದರಿಂದ ಅವರಿಗೆ ಸಕಾಲದಲ್ಲಿ ಹಣವನ್ನು ಮರಳಿಸಲಾಗಲಿಲ್ಲ. ಕಡೆಗೆ ಅದು ಪೊಲೀಸ್‌ ಪ್ರಕರಣವಾಗಿ ಪರಿಗಣನೆಯಾಗಿ, ಅವರಿಗೆ ನ್ಯಾಯಾಲಯ ಮೂರು ವರ್ಷಗಳ ಶಿಕ್ಷೆ ವಿಧಿಸಿತು. ಈ ಪ್ರಕರಣದಲ್ಲಿ ಬ್ಯಾಂಕ್‌ ಸಿಬ್ಬಂದಿಗಳ ನಿರ್ಲಕ್ಷ್ಯವನ್ನೂ ಗಣನೆಗೆ ತೆಗೆದುಕೊಂಡು ಅವರಿಗೂ ಶಿಕ್ಷೆ ನೀಡಲಾಯಿತು ಎನ್ನುವುದು ಬೇರೆಮಾತು.

ಗ್ರಾಹಕ ವಿಚಲಿತಗೊಳ್ಳಬೇಕಾಗಿಲ್ಲ
ಪ್ರತಿಯೊಬ್ಬ ಬ್ಯಾಂಕ್‌ ಗ್ರಾಹಕನೂ ತಮ್ಮ ಬ್ಯಾಂಕಿಂಗ್‌ ವ್ಯವಹಾರದಲ್ಲಿ ಒಮ್ಮೊಮ್ಮೆ ತಮ್ಮ ಖಾತೆಯಲ್ಲಿ ಹೆಚ್ಚು ಕ್ರೆಡಿಟ್‌- ಡೆಬಿಟ್‌, ಕಡಿಮೆ ಕ್ರೆಡಿಟ್‌- ಡೆಬಿಟ್‌, ಅನಿರೀಕ್ಷಿತವಾಗಿ ಹೆಚ್ಚು ಮೊತ್ತದ ಡೆಬಿಟ್‌- ಕ್ರೆಡಿಟ್‌ ಮುಂತಾದವುಗಳನ್ನು ಬೇರೆ ಬೇರೆ ರೂಪದಲ್ಲಿ ನೋಡಬೇಕಾಗುತ್ತದೆ ಮತ್ತು ಇಂಥ ಘಟನೆಗಳು ಅನಿವಾರ್ಯವೂ ಹೌದು. ಗ್ರಾಹಕನ ತಪ್ಪು ಇಲ್ಲದಿದ್ದರೆ, ಗ್ರಾಹಕ ವಿಚಲಿತಗೊಳ್ಳಬೇಕಾಗಿಲ್ಲ. ಬ್ಯಾಂಕಿನ ತಪ್ಪಿದ್ದರೆ ಬ್ಯಾಂಕ್‌ ಗ್ರಾಹಕನ ರಕ್ಷಣೆಗೆ ನಿಲ್ಲುತ್ತದೆ. ಆದರೂ ಗ್ರಾಹಕರು ತಮ್ಮ ಬ್ಯಾಂಕ್‌ ಖಾತೆಯಲ್ಲಿನ ವ್ಯವಹಾರಗಳನ್ನು ನಿರಂತರವಾಗಿ ಪರಿಶೀಲಿಸುತ್ತಿರಬೇಕು.

– ರಮಾನಂದ ಶರ್ಮಾ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ ಕಳವಳ-ಆಗಸ್ಟ್ 07: 6670 ಹೊಸ ಪ್ರಕರಣಗಳು ; 3951 ಡಿಸ್ಚಾರ್ಜ್ ; 101 ಸಾವು

ಕೋವಿಡ್ ಕಳವಳ-ಆಗಸ್ಟ್ 07: 6670 ಹೊಸ ಪ್ರಕರಣಗಳು ; 3951 ಡಿಸ್ಚಾರ್ಜ್ ; 101 ಸಾವು

ಚಾಮರಾಜನಗರ: ಕೋವಿಡ್‌ನಿಂದ ಓರ್ವ ಸಾವು: ಕೋವಿಡೇತರ ಕಾರಣದಿಂದ ಇಬ್ಬರು ಸಾವು

ಚಾಮರಾಜನಗರ: ಕೋವಿಡ್‌ನಿಂದ ಓರ್ವ ಸಾವು: ಕೋವಿಡೇತರ ಕಾರಣದಿಂದ ಇಬ್ಬರು ಸಾವು

ಉಡುಪಿ ಜಿಲ್ಲೆಯಲ್ಲಿಂದು 245 ಜನರಿಗೆ ಕೋವಿಡ್ ಸೋಂಕು ದೃಢ: ಐವರು ಸಾವು

ಉಡುಪಿ ಜಿಲ್ಲೆಯಲ್ಲಿಂದು 245 ಜನರಿಗೆ ಕೋವಿಡ್ ಸೋಂಕು ದೃಢ: ಐವರು ಸಾವು

ಮುನ್ನಾರು ಭೂಕುಸಿತ: ಅವಶೇಷಗಳಡಿಯಿಂದ 15 ಮೃತದೇಹ ಹೊರಕ್ಕೆ

ಮುನ್ನಾರು ಭೂಕುಸಿತ: ಅವಶೇಷಗಳಡಿಯಿಂದ 15 ಮೃತದೇಹ ಹೊರಕ್ಕೆ

‘ವಿದ್ಯಾಗಮʼ ಯೋಜನೆಯು ಗುರುಕುಲ ಮಾದರಿ ಶಾಲೆಗಳನ್ನು ನೆನಪಿಸುತ್ತದೆ: ಸುರೇಶ್ ಕುಮಾರ್

‘ವಿದ್ಯಾಗಮʼ ಯೋಜನೆಯು ಗುರುಕುಲ ಮಾದರಿ ಶಾಲೆಗಳನ್ನು ನೆನಪಿಸುತ್ತದೆ: ಸುರೇಶ್ ಕುಮಾರ್

ವಿಶ್ವನಾಥನ್ ಆನಂದ್ ರನ್ನು ಬೆರಗುಗೊಳಿಸಿದ್ದ ಪೋರ, ತ್ರಿಶೂರಿನ ಚೆಸ್‌ ಶೂರ ನಿಹಾಲ್‌ ಸರಿನ್‌

ವಿಶ್ವನಾಥನ್ ಆನಂದ್ ರನ್ನು ಬೆರಗುಗೊಳಿಸಿದ್ದ ಪೋರ, ತ್ರಿಶೂರಿನ ಚೆಸ್‌ ಶೂರ ನಿಹಾಲ್‌ ಸರಿನ್‌

ಹಾಸನ: 127 ಜನರಿಗೆ ಕೋವಿಡ್-19 ಸೋಂಕು ದೃಢ, 9 ಮಂದಿ ಸೋಂಕಿತರು ಸಾವು

ಹಾಸನ: 127 ಜನರಿಗೆ ಕೋವಿಡ್-19 ಸೋಂಕು ದೃಢ, 9 ಮಂದಿ ಸೋಂಕಿತರು ಸಾವು
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರ್‌ಗೆ ನಮಸ್ಕಾರ ; ಲಾಕ್‌ಡೌನ್‌ ವೇಳೆ ಧೂಳೆಬ್ಬಿಸಿದ ಕಾರ್‌ಗಳು

ಕಾರ್‌ಗೆ ನಮಸ್ಕಾರ ; ಲಾಕ್‌ಡೌನ್‌ ವೇಳೆ ಧೂಳೆಬ್ಬಿಸಿದ ಕಾರ್‌ಗಳು

ಜಂಟಿ ಖಾತೆಯಿಂದ ಹೆಸರನ್ನು ಕೈಬಿಡುವ ಪರಿ ; ಜಾಯಿಂಟ್‌ ಪೇನ್‌

ಜಂಟಿ ಖಾತೆಯಿಂದ ಹೆಸರನ್ನು ಕೈಬಿಡುವ ಪರಿ ; ಜಾಯಿಂಟ್‌ ಪೇನ್‌

ಕಾರ್ಡು ರಕ್ಷಿಸಿ; ಕ್ರೆಡಿಟ್‌ ಕಾರ್ಡ್‌ ಮಿಸ್ಸಿಂಗ್‌ ಆದಾಗ…

ಕಾರ್ಡು ರಕ್ಷಿಸಿ; ಕ್ರೆಡಿಟ್‌ ಕಾರ್ಡ್‌ ಮಿಸ್ಸಿಂಗ್‌ ಆದಾಗ…

Discount

ಡಿಸ್ಕೌಂಟ್‌; ಬ್ಯುಸಿನೆಸ್‌ನ ಮೋಡಿ

ಮೊಬೈಲು ಸೀಮೆ : ಕಡಿಮೆ ಕಾಸಿಗೆ ಗೆಲಾಕ್ಸಿ

ಮೊಬೈಲು ಸೀಮೆ : ಕಡಿಮೆ ಕಾಸಿಗೆ ಗೆಲಾಕ್ಸಿ

MUST WATCH

udayavani youtube

VP NAGARAದ 75 CENTS ಜಾಗದಲ್ಲಿ ಮಾದರಿ ಕೃಷಿ ತೋಟ| Udayavani

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmer

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavaniಹೊಸ ಸೇರ್ಪಡೆ

ಕೋವಿಡ್ ಕಳವಳ-ಆಗಸ್ಟ್ 07: 6670 ಹೊಸ ಪ್ರಕರಣಗಳು ; 3951 ಡಿಸ್ಚಾರ್ಜ್ ; 101 ಸಾವು

ಕೋವಿಡ್ ಕಳವಳ-ಆಗಸ್ಟ್ 07: 6670 ಹೊಸ ಪ್ರಕರಣಗಳು ; 3951 ಡಿಸ್ಚಾರ್ಜ್ ; 101 ಸಾವು

ಚಾಮರಾಜನಗರ: ಕೋವಿಡ್‌ನಿಂದ ಓರ್ವ ಸಾವು: ಕೋವಿಡೇತರ ಕಾರಣದಿಂದ ಇಬ್ಬರು ಸಾವು

ಚಾಮರಾಜನಗರ: ಕೋವಿಡ್‌ನಿಂದ ಓರ್ವ ಸಾವು: ಕೋವಿಡೇತರ ಕಾರಣದಿಂದ ಇಬ್ಬರು ಸಾವು

ಉಡುಪಿ ಜಿಲ್ಲೆಯಲ್ಲಿಂದು 245 ಜನರಿಗೆ ಕೋವಿಡ್ ಸೋಂಕು ದೃಢ: ಐವರು ಸಾವು

ಉಡುಪಿ ಜಿಲ್ಲೆಯಲ್ಲಿಂದು 245 ಜನರಿಗೆ ಕೋವಿಡ್ ಸೋಂಕು ದೃಢ: ಐವರು ಸಾವು

ಮುನ್ನಾರು ಭೂಕುಸಿತ: ಅವಶೇಷಗಳಡಿಯಿಂದ 15 ಮೃತದೇಹ ಹೊರಕ್ಕೆ

ಮುನ್ನಾರು ಭೂಕುಸಿತ: ಅವಶೇಷಗಳಡಿಯಿಂದ 15 ಮೃತದೇಹ ಹೊರಕ್ಕೆ

‘ವಿದ್ಯಾಗಮʼ ಯೋಜನೆಯು ಗುರುಕುಲ ಮಾದರಿ ಶಾಲೆಗಳನ್ನು ನೆನಪಿಸುತ್ತದೆ: ಸುರೇಶ್ ಕುಮಾರ್

‘ವಿದ್ಯಾಗಮʼ ಯೋಜನೆಯು ಗುರುಕುಲ ಮಾದರಿ ಶಾಲೆಗಳನ್ನು ನೆನಪಿಸುತ್ತದೆ: ಸುರೇಶ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.