ಬಾಳು ಬೆಳಗಿದ ಬಾಳೆ ; ನಿರುದ್ಯೋಗಿಯ ಕೈ ಹಿಡಿದ ಭೂಮಿ ತಾಯಿ


Team Udayavani, Mar 2, 2020, 4:00 AM IST

banana-plant-min

ಡಿಗ್ರಿ, ಡಬಲ್‌ ಡಿಗ್ರಿ ಪಡೆದ ಯುವಕರು ಬೆಂಗಳೂರಿನಂಥ ಮಹಾನಗರಗಳಿಗೆ ಉದ್ಯೋಗ ಅರಸಿ ಹೋಗುತ್ತಾರೆ. ಇಲ್ಲೊಬ್ಬ ಎಂ.ಎಸ್‌.ಡಬ್ಲ್ಯೂ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಯುವಕ ರೈತನಾಗಿ ಸ್ವಂತ ದುಡಿಮೆಯಿಂದ ಬದುಕು ಸಾಗಿಸುತ್ತಿದ್ದಾರೆ.

ಕೊಪ್ಪಳ ಜಿಲ್ಲೆಯ ಮೆಳ್ಳಿಕೇರಿ ಗ್ರಾಮದ ಹನಮೇಶ ಮ್ಯಾಗಳಮನಿ ಎನ್ನುವವರು ಡಬಲ್‌ ಡಿಗ್ರಿ ಪಡೆದ ನಂತರ ಉದ್ಯೋಗ ಅರಸಿ ನಗರಗಳಿಗೆ ತೆರಳಿದ್ದರು. ಕೆಲಸ ಸಿಗದೇ ಹೋದಾಗ, ತಾವೇ “ಪುನರ್ಜನ್ಮ’ ಎಂಬ ವಾರಪತ್ರಿಕೆಯನ್ನು ಆರಂಭಿಸಿ, ಪತ್ರಕರ್ತರಾಗಿ, ಸಾಮಾಜಿಕ ಕಾರ್ಯಕರ್ತರಾಗಿ, ಹೋರಾಟಗಾರರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅದರಿಂದ ಜೀವನ ಸಾಗುತ್ತಿಲ್ಲ ಎಂದರಿವಾದಾಗ ಅದಕ್ಕೂ ಗುಡ್‌ ಬೈ ಹೇಳಿದರು. ಮುಂದೆ ಜೀವನಕ್ಕೆ ದಾರಿ ಮಾಡಿಕೊಳ್ಳಲು ಕೃಷಿಯತ್ತ ಹೆಜ್ಜೆಯಿಟ್ಟರು. ತಮ್ಮ 2 ಎಕರೆ ಜಮೀನಿನಲ್ಲಿ 2,000 ಇಸ್ರೇಲ್‌ ಮಾದರಿಯ ವಿಲಿಯಮ್ಸ… ತಳಿಯ ಬಾಳೆ ಸಸಿಗಳನ್ನು 6×6 ಅಡಿಗೊಂದರಂತೆ ನೆಟ್ಟರು. ಪರಿಶ್ರಮ, ನಂಬಿಕೆ ಇವೆರಡನ್ನೂ ಭೂಮಿತಾಯಿ ಹುಸಿ ಮಾಡಲಿಲ್ಲ. 36 ಟನ್‌ ಬಾಳೆ ಇಳುವರಿ ಬಂದಿದ್ದು, ಅವುಗಳ ಮಾರಾಟದಿಂದ 5.50 ಲಕ್ಷ ರೂಪಾಯಿ ಲಾಭ ಸಿಕ್ಕಿದೆ. ಔದ್ಯೋಗಿಕ ಜೀವನ ಒಲಿಯದೇ ಹೋದರೂ ಕೃಷಿಯನ್ನು ನಂಬಿ ಅದಕ್ಕೂ ಮಿಗಿಲಾದ ಸಾಧನೆ, ಸಂಪಾದನೆ ಮಾಡಬಹುದು ಎಂದು ಹನಮೇಶ್‌ ತೋರಿಸಿಕೊಟ್ಟಿದ್ದಾರೆ.

ಬಿಂದಿಗೆಗಳಲ್ಲಿ ನೀರು ಪೂರೈಕೆ
ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಂತೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹಾಗೂ ತೋಟಗಾರಿಕಾ ಇಲಾಖೆಯಿಂದ 1 ಲಕ್ಷ ರೂ. ಸಹಾಯಧನ ಪಡೆದರು. ಮೊದಲು ತಗ್ಗು ದಿಣ್ಣೆಯಂತಿದ್ದ ಹೊಲವನ್ನು ಸಮತಟ್ಟು ಮಾಡಿ, ಬಾಳೆ ಸಸಿಗಳನ್ನು ನಾಟಿ ಮಾಡಿದರು. ಬೇಸಗೆ ಸಮಯದಲ್ಲಿ ಹೊಲದಲ್ಲಿನ ಬೋರ್‌ವೆಲ್‌ನಲ್ಲಿ ನೀರು ಬತ್ತಿಹೋಗಿ ಸಮಸ್ಯೆಯಾಯಿತು. ಆಗ ಪಕ್ಕದ ಜಮೀನಿನ ರೈತರಿಂದ ನೀರಿನ ಸಹಾಯ ಪಡೆದಿದ್ದರು. ಬಿಂದಿಗೆಯಲ್ಲಿ ನೀರು ಹೊತ್ತು ತಂದು ಎರಡು ತಿಂಗಳುಗಳ ಕಾಲ ಸಸಿಗಳನ್ನು ಪೋಷಿಸಿದ್ದರು. ಬಿಸಿಲಿನ ಪ್ರಖರತೆಗೆ ಬಿಂದಿಗೆಯಿಂದ ಹಾಕುವ ನೀರು ಸಾಲದು ಎಂದರಿವಾದಾಗ ಮತ್ತೂಂದು ಬೋರ್‌ವೆಲ್‌ ಕೊರೆಸಿದರು. 500 ಅಡಿ ಆಳ ಕೊರೆದ ನಂತರ 2 ಇಂಚು ನೀರು ಸಿಕ್ಕಿತ್ತು. ಇದರಿಂದ ಖುಷಿಯಾದ ಹನಮೇಶ್‌, ಡ್ರಿಪ್‌ ನೀರಾವರಿ ವ್ಯವಸ್ಥೆ ಮಾಡಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಸಕಾಲಕ್ಕೆ ಮಾಡಬೇಕಾದ ಕೆಲಸಗಳನ್ನೆಲ್ಲ ಅಚ್ಚುಕಟ್ಟಾಗಿ ನಿರ್ವಹಿಸಿದರು. ಉತ್ತಮ ಇಳುವರಿ ಬಂದಿತು. ಬೆಂಗಳೂರು, ಕೊಪ್ಪಳ ಹಾಗೂ ಇತರೆಡೆಗಳ ವ್ಯಾಪಾರಸ್ಥರು ನೇರವಾಗಿ ಇವರ ತೋಟಕ್ಕೇ ಬಂದು ಬಾಳೆಗೊನೆಗಳನ್ನು ಖರೀದಿಸಿರುವುದರಿಂದ ಹನಮೇಶ್‌ ಅವರಿಗೆ ಮಾರುಕಟ್ಟೆ ಹಾಗೂ ಸಾಗಣೆಯ ಖರ್ಚು, ತಾಪತ್ರಯ ಎರಡೂ ಇಲ್ಲವಾಯಿತು.

ಗುಣಮಟ್ಟ ಕಾಯ್ದುಕೊಳ್ಳಬೇಕು
ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದ ಗುಟ್ಟೇನು? ಎಂದು ಕೇಳಿದರೆ, “ಕಠಿಣ ಶ್ರಮ, ರೈತರು ಕಾಟಾಚಾರಕ್ಕೆ ಕೃಷಿ ಮಾಡದೇ ತಾವು ಬೆಳೆಯುವ ಬೆಳೆಯ ಕಾಲ ಕಾಲದ ಅಗತ್ಯಗಳನ್ನು ಅರಿತು ಸಕಾಲಕ್ಕೆ ಪೂರೈಸುವುದರಿಂದ ಖರ್ಚು ಕಡಿಮೆ ಮಾಡಬಹುದು ಹಾಗೂ ಗುಣಮಟ್ಟ ಸಹ ಕಾಯ್ದುಕೊಳ್ಳಬಹುದು’ ಎನ್ನುವುದು ಅವರ ಅನುಭವದ ಮಾತು.

ಹೆಚ್ಚಿನ ಮಾಹಿತಿಗೆ: 9480564244 (ಹನಮೇಶ್‌)

ಟಾಪ್ ನ್ಯೂಸ್

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

Untitled-2

ಸದ್ಯಕ್ಕೆ ಲಾಕ್ ಡೌನ್ ಮಾಡುವ ಉದ್ದೇಶ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

5banahatti

ಕಾಂಗ್ರೆಸ್ ಜಾತಿಯ ಟ್ರಂಪ್ ಕಾರ್ಡ್ ಬಳಸಿ ಮತ ಕೇಳುತ್ತಿದ್ದಾರೆ: ಬನಹಟ್ಟಿ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

4nandibetta

ಚಿಕ್ಕಬಳ್ಳಾಪುರ: 3 ತಿಂಗಳ ಬಳಿಕ ಸಾರ್ವಜನಿಕರಿಗೆ ನಂದಿಬೆಟ್ಟ ಪ್ರವೇಶಕ್ಕೆ ಮುಕ್ತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

covid awarness

ವಾರದ ಹಿಂದೆ ನಗರಕ್ಕೆ ಬಂದಿಳಿದವರ ಶೋಧ..!

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

8bankloan

ಸಾಲ ಪಡೆಯಲು ಜನಜಂಗುಳಿ

Untitled-2

ಸದ್ಯಕ್ಕೆ ಲಾಕ್ ಡೌನ್ ಮಾಡುವ ಉದ್ದೇಶ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.