Udayavni Special

ಮೆಸೇಜ್‌ ಮಾಡಿ ಕಾಸು ಕೇಳ್ತಾರೆ, ಹುಷಾರ್‌

ಕೊಟ್ಟು ಕೋಡಂಗಿ ಆಗಬೇಡಿ!

Team Udayavani, Sep 21, 2020, 8:32 PM IST

ಮೆಸೇಜ್‌ ಮಾಡಿ ಕಾಸು ಕೇಳ್ತಾರೆ, ಹುಷಾರ್‌

ಸಾಂದರ್ಭಿಕ ಚಿತ್ರ

ಅವರು ಬೆಂಗಳೂರಿನ ಪೊಲೀಸ್‌ ಅಧಿಕಾರಿ. ಫೇಸ್‌ ಬುಕ್ನಲ್ಲಿದ್ದಾರೆ. ಮೊನ್ನೆ ಅವರ ಹೆಸರಿನಲ್ಲಿ ಫೇಸ್‌ ಬುಕ್‌ ಫ್ರೆಂಡ್‌ ರಿಕ್ವೆಸ್ಟ್ ಬಂತು. ಪರಿಚಯದ ಪತ್ರಕರ್ತರೊಬ್ಬರು ಫ್ರೆಂಡ್‌ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದರು.

ಮರುದಿನವೇ ಆ ಅಧಿಕಾರಿಯ ಹೆಸರಿನಲ್ಲಿ ಮೆಸೆಂಜರ್‌ನಲ್ಲಿ- “ಹಲೋ, ಹೌ ಆರ್‌ಯೂ? ಎಂಬ ಮೆಸೇಜ್‌ ಬಂತು. ಇವರು- “ಫೈನ್‌ ಸರ್‌, ಹೌ ಆರ್‌ ಯೂ?’ ಎಂದುಕೇಳಿದರು. “ಗುಡ್‌’ ಎಂದ ಆ ಕಡೆಯ ಮೆಸೇಜು, “ಐ ವಾಂಟ್‌ ಎ ಹೆಲ್ಪ್ ಅಂತಕೇಳಿತು. ಇವರಿಗೆ ಅಚ್ಚರಿ! ಒಬ್ಬ ಪೊಲೀಸ್‌ ಅಧಿಕಾರಿಗೆ ನನ್ನಂಥ ಪತ್ರಕರ್ತನಿಂದ ಏನು ಸಹಾಯ ಬೇಕಿದೆ ಎಂದು ಹುಬ್ಬೇರಿಸಿದರು. ಆದರೂ, “ಟೆಲ್‌ ಮಿ ಸರ್‌ ಅಂತ ಮೆಸೇಜ್‌ ಹಾಕಿದರು.15000 ರುಪೀಸ್‌ ನೀಡ್‌, ಅರ್ಜೆಂಟ್‌ ಸೆಂಡ್‌ ಮಿ ಥ್ರೂ ಗೂಗಲ್‌ ಪೇ… ಐ ರಿಟರ್ನ್ ಯುವರ್‌ ಮನಿ ಬೈ8 ಪಿಎಂ’. ಎಂಬ ಮೆಸೇಜ್‌ ಆ ಕಡೆಯಿಂದ ಬಂತು! ಪತ್ರಕರ್ತರಿಗೆ ಸಂಶಯ ಬಂತು! ಒಬ್ಬ ಪೊಲೀಸ್‌ ಅಧಿಕಾರಿ, ನನ್ನ ಬಳಿ 15 ಸಾವಿರ ರೂ. ಸಾಲ ಯಾಕೆಕೇಳ್ತಾರೆ? ಇದ್ದಕ್ಕಿದ್ದಂತೆ ಮೆಸೇಜ್‌ ಮಾಡಿ ಸಾಲ ಕೇಳುವ ಮಟ್ಟಕ್ಕೆ ಅವರೇಕೆ ಹೋಗುತ್ತಾರೆ? ಇದು ಯಾವುದೋ ಫೇಕ್‌ ಅಕೌಂಟ್‌ ಎಂದುಊಹಿಸಿದರು. ಮತ್ತೆ ಅವರ ಹೆಸರು ಹಾಕಿ ಫೇಸ್ಬುಕ್‌ನಲ್ಲಿ ಶೋಧ ಮಾಡಿದರು. ಅವರ ಅದೇ ಹೆಸರಿನ (ಸ್ಪೆಲ್ಲಿಂಗ್‌ಕೂಡ ವ್ಯತ್ಯಾಸ ಇಲ್ಲ!) ಅದೇ ಫೋಟೋ ಉಳ್ಳ ಎರಡು ಅಕೌಂಟ್‌ ಇದ್ದವು. ಅವರ ಒರಿಜಿನಲ್‌ ಅಕೌಂಟಿನಲ್ಲಿ 4 ಸಾವಿರಕ್ಕೂ ಹೆಚ್ಚು ಫ್ರೆಂಡ್ಸ್ ಇದ್ದರು. ಮತ್ತು ಈ ಫೇಕ್‌ ಅಕೌಂಟಿನಲ್ಲಿ87 ಜನ ಮಾತ್ರ ಫ್ರೆಂಡ್‌ ಇದ್ದರು. ಅವರ ಒರಿಜಿನಲ್‌ ಅಕೌಂಟಿನಲ್ಲಿ, ಆ ಅಧಿಕಾರಿಯೇ ಬರೆದುಕೊಂಡಿದ್ದರು. “ಯಾರೋ ನನ್ನ ಹೆಸರಿನಲ್ಲಿ ಫೇಕ್‌ ಅಕೌಂಟ್‌ ರಚಿಸಿ, ಮೆಸೆಂ ಜರ್‌ ಮೂಲಕ ಹಣ ಕೇಳುತ್ತಿದ್ದಾರೆ.

ಯಾರೂ ಹಣ ಕಳುಹಿಸಬೇಡಿ. ಈ ಬಗ್ಗೆ ಪೊಲೀಸ್‌ ಇಲಾಖೆಯ ಸೈಬರ್‌ ವಿಭಾಗ ತನಿಖೆ ನಡೆಸುತ್ತಿದೆ. ಆತನ ವಿರುದ್ಧ ಕ್ರಮಕೈಗೊಳ್ಳಲಾಗುವುದು’- ಎಂದು ತಿಳಿಸಿದ್ದರು. ಅವರ ಆ ಮೆಸೇಜ್‌ಗೆ ಹಲವರುಕಮೆಂಟ್‌ ಹಾಕಿ, ಆತ ತಮ್ಮ ಬಳಿಯೂ ಹಣ ಕೇಳಿದ್ದಾನೆ ಎಂಬ ಸ್ಕ್ರೀನ್‌ಶಾಟ್‌ಗಳನ್ನು ಹಾಕಿದ್ದರು! ಮತ್ತೆ ಈ ಪತ್ರಕರ್ತರು, ಆ ಅಧಿಕಾರಿಯ ಮೊಬೈಲ್‌ಗೆ ಕರೆ ಮಾಡಿ ಹೇಳು ತ್ತಿದ್ದಂತೆಯೇ ಅವರು- “ಹೌದು ಹೌದು, ಈ ರೀತಿ ಅನೇಕರಿಗೆ ಮಾಡಿನೆ. ಆತನನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದರು!

ಈ ಪ್ರಕರಣ ನಡೆದಿದ್ದುಕಳೆದ ಗುರುವಾರವಷ್ಟೇ. ಈ ಪ್ರಕರಣದಲ್ಲಿ ಹಣ ಕೇಳಿದ ಮೆಸೇಜ್‌ ಬಂದದ್ದು ಓರ್ವ ಪೊಲೀಸ್‌ ಅಧಿಕಾರಿಯ ಹೆಸರಿನದ್ದಾದ್ದರಿಂದ ಈ ಕಡೆಯವರಿಗೆ ಅನುಮಾನ ಬಂದೇ ಬರುತ್ತದೆ. ಆದರೆ ಮೋಸ ಮಾಡುವವರು ನಮ್ಮ ಪರಿಚಯದ ಗೆಳೆಯರ, ಸಂಬಂಧಿಕರ ಹೆಸರಿನಲ್ಲಿ ಮೆಸೇಜ್‌ ಹಾಕಿದರೆ?! ಅರ್ಜೆಂಟ್‌2 ಸಾವಿರಕಳುಹಿಸು, ನಾಳೆ ಕೊಡುತ್ತೇನೆ ಎಂದು ಮೆಸೇಜ್‌ ಮಾಡಿದರೆ, ಎಂಥವರೂ ಯಾಮಾರುವ ಸಾಧ್ಯತೆ ಇದ್ದೇ ಇರುತ್ತದೆ. ಆದ್ದರಿಂದ ಈ ರೀತಿಯ ಮೆಸೇಜ್‌ಗಳ ಬಗ್ಗೆ ಹುಷಾರಾಗಿರಿ. ನಮ್ಮ ಬಳಿ ನಿಜವಾದ ಗೆಳೆಯಕೇಳಿದರೇಕೊಡಲು ಹಣವಿಲ್ಲ, ಇನ್ನು ಬೇರೆಯವರಿಗೆ ಎಲ್ಲಿಕೊಡೋಣ ಎಂಬ ಸ್ಥಿತಿಯಲ್ಲಿ ಅನೇಕರಿದ್ದೇವೆ, ಆ ಮಾತು ಬೇರೆ! ಆದರೆ ಹಣ ಇದ್ದವರು, ಗೆಳೆಯ ಸಹಾಯ ಕೇಳುತ್ತಿದ್ದಾನೆ ಎಂದು ಗೂಗಲ್‌ ಪೇ, ಫೋನ್‌ ಪೇ, ಪೇಟಿಎಂಗೆ ಹಣ ಹಾಕಿಬಿಡಬಹುದು. ನೆನಪಿರಲಿ: ಈ ರೀತಿ ಹಣ ಕೇಳುವವನು ದೂರದ ಮುಂಬೈಯಲ್ಲೋ, ಬಿಹಾರದಲ್ಲೋ ಇರುತ್ತಾನೆ. ಯಾರದೋಕದ್ದ ಸಿಮ್‌ ಸಂಖ್ಯೆಗೆ ಗೂಗಲ್ಪೇ ಲಿಂಕ್‌ ಮಾಡಿರುತ್ತಾನೆ. ಹಣ ಹಾಕಿದ ತಕ್ಷಣ, ಅದನ್ನು ಡ್ರಾ ಮಾಡಿ ಆ ಸಿಮ್‌ ಅನ್ನೇ ಬಿಸಾಕುತ್ತಾನೆ. ಆತನನ್ನು ಅಷ್ಟು ಸುಲಭದಲ್ಲಿಕಂಡು ಹಿಡಿಯಲು ಸಾಧ್ಯವೂ ಆಗುವುದಿಲ್ಲ. ಹಾಗಾಗಿ ಇಂಥ ಮೋಸದ ಜಾಲಗಳ ಬಗ್ಗೆ ಎಚ್ಚರದಿಂದಿರಿ.

ಹಾಗೆಯೇ ಹಿಂದಿ ಮಿಶ್ರಿತ ತಪ್ಪು ಇಂಗ್ಲಿಷ್‌ನಲ್ಲಿ – “ಮೇ ಬ್ಯಾಂಕ್‌ ಮೆನೇಜರ್‌ ಹೂಂ. ಆಪ್‌ಕಿ ಎಟಿಎಂಕಾರ್ಡ್‌ ರಿನ್ಯೂವಲ್‌ ಹೋಗಯಾ’ ಎಂಬ ಕರೆಗಳು ಬರುತ್ತಲೇ ಇರುತ್ತವೆ.ಕರೆ ಮಾಡಿ ನಿಮ್ಮ ಎಟಿಎಂಕಾರ್ಡ್‌ನ ನಂಬರ್‌, ಸಿವಿವಿ, ಪಿನ್‌ ನಂಬರ್‌ಕೇಳುತ್ತಾರೆ. ನಿಮ್ಮ ಮೊಬೈಲ್‌ಗೆ ಓಟಿಪಿ ಬಂದಿದೆ ಹೇಳಿ ಎನ್ನುತ್ತಾರೆ. ಯಾವ ಬ್ಯಾಂಕ್‌ನವರೂ ಹಾಗೆ ಕೇಳುವುದಿಲ್ಲ. ಯಾರಿಗೂ ನಿಮ್ಮಕಾರ್ಡ್‌ ವಿವರಕೊಡಬೇಡಿ. ಮನೆಯಲ್ಲಿ ಹೆಂಡತಿಗೆ, ಮಕ್ಕಳಿಗೂ ಈ ಬಗ್ಗೆ ತಿಳಿವಳಿಕೆ ನೀಡಿ. ­

 

– ಕೆ.ಎಸ್‌. ಬನಶಂಕರ ಆರಾಧ್ಯ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮೀನು ಆಯಲು ಬಾಲ ಕಾರ್ಮಿಕರ ಬಳಕೆ: ಮಲ್ಪೆ ಬಂದರಿನಲ್ಲಿ 17 ಮಕ್ಕಳ ರಕ್ಷಣೆ

ಮೀನು ಆಯಲು ಬಾಲ ಕಾರ್ಮಿಕರ ಬಳಕೆ: ಮಲ್ಪೆ ಬಂದರಿನಲ್ಲಿ 17 ಮಕ್ಕಳ ರಕ್ಷಣೆ

ಭಾರತ ದಾಳಿ ನಡೆಸುವುದು ಎಂಬ ಭೀತಿಯಿಂದ ಅಭಿನಂದನ್ ವರ್ಧಮಾನ್ ಬಿಡುಗಡೆ ಮಾಡಿದ್ದ ಪಾಕ್!

ಭಾರತ ದಾಳಿ ನಡೆಸುವುದು ಎಂಬ ಭೀತಿಯಿಂದ ಅಭಿನಂದನ್ ವರ್ಧಮಾನ್ ಬಿಡುಗಡೆ ಮಾಡಿದ್ದ ಪಾಕ್!

ಕೋವಿಡ್ ಲಸಿಕೆ ವಿತರಣೆ ತಯಾರಿ; ಕೇವಲ ಶೇ.15 ಆರೋಗ್ಯ ಕಾರ್ಯಕರ್ತರ ಮಾಹಿತಿ ಸಂಗ್ರಹ

ಕೋವಿಡ್ ಲಸಿಕೆ ವಿತರಣೆ ತಯಾರಿ; ಕೇವಲ ಶೇ.15 ಆರೋಗ್ಯ ಕಾರ್ಯಕರ್ತರ ಮಾಹಿತಿ ಸಂಗ್ರಹ

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಮುಂದಿನ ವರ್ಷದ ಅಕ್ಟೋಬರ್‌ಗೆ ಲಸಿಕೆ

ಮುಂದಿನ ವರ್ಷದ ಅಕ್ಟೋಬರ್‌ಗೆ ಲಸಿಕೆ

ಸೇವೆಯೆಂಬ ಯಜ್ಞಕ್ಕೆ ಸಂದ ಫ‌ಲ

ಸೇವೆಯೆಂಬ ಯಜ್ಞಕ್ಕೆ ಸಂದ ಫ‌ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

isiri-tdy-3

ಬಾಳು ಜೇನು! ಖರ್ಚು ಕಡಿಮೆ, ಲಾಭ ಜಾಸ್ತಿ…

isiri-tdy-2

ಭೂಮಿಗೆ ಸಿಗುತ್ತದೆ ಬಂಗಾರದ ಬೆಲೆ…

isiri-tdy-1

ಲೈಫ್ ಈಸ್‌ ಬುಟ್ಟಿ ಫ‌ುಲ್‌

isiri-tdy-5

ಕೀ ಬೋರ್ಡ್‌ ಮೇಲೆ ಸಿಟ್ಟಾಗಿ ಕುಟ್ಟಬೇಡಿ ಮಾರಾಯ್ರೇ.

ಆನ್‌ಲೈನ್ ‌ಕ್ಲಾಸಿಗೆ ಲ್ಯಾಪಿ

ಆನ್‌ಲೈನ್ ‌ಕ್ಲಾಸಿಗೆ ಲ್ಯಾಪಿ

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

ಹೊಸ ಸೇರ್ಪಡೆ

ಮೀನು ಆಯಲು ಬಾಲ ಕಾರ್ಮಿಕರ ಬಳಕೆ: ಮಲ್ಪೆ ಬಂದರಿನಲ್ಲಿ 17 ಮಕ್ಕಳ ರಕ್ಷಣೆ

ಮೀನು ಆಯಲು ಬಾಲ ಕಾರ್ಮಿಕರ ಬಳಕೆ: ಮಲ್ಪೆ ಬಂದರಿನಲ್ಲಿ 17 ಮಕ್ಕಳ ರಕ್ಷಣೆ

ಭಾರತ ದಾಳಿ ನಡೆಸುವುದು ಎಂಬ ಭೀತಿಯಿಂದ ಅಭಿನಂದನ್ ವರ್ಧಮಾನ್ ಬಿಡುಗಡೆ ಮಾಡಿದ್ದ ಪಾಕ್!

ಭಾರತ ದಾಳಿ ನಡೆಸುವುದು ಎಂಬ ಭೀತಿಯಿಂದ ಅಭಿನಂದನ್ ವರ್ಧಮಾನ್ ಬಿಡುಗಡೆ ಮಾಡಿದ್ದ ಪಾಕ್!

ಕೋವಿಡ್ ಲಸಿಕೆ ವಿತರಣೆ ತಯಾರಿ; ಕೇವಲ ಶೇ.15 ಆರೋಗ್ಯ ಕಾರ್ಯಕರ್ತರ ಮಾಹಿತಿ ಸಂಗ್ರಹ

ಕೋವಿಡ್ ಲಸಿಕೆ ವಿತರಣೆ ತಯಾರಿ; ಕೇವಲ ಶೇ.15 ಆರೋಗ್ಯ ಕಾರ್ಯಕರ್ತರ ಮಾಹಿತಿ ಸಂಗ್ರಹ

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಅರ್ಹ ಸಾಧಕರಿಗೆ ಗೌರವ

ಅರ್ಹ ಸಾಧಕರಿಗೆ ಗೌರವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.