ಆಕಾಶ ದೀಪ, ಸ್ಕೈ ಲೈಟ್‌ಗಳನ್ನು ಅಳವಡಿಸುವ ಮುನ್ನ…


Team Udayavani, Feb 12, 2018, 5:05 PM IST

skylight.jpg

ಮಳೆಯ ನೀರು ಸೂರಿನ ಮೇಲೆ ಬಿದ್ದ ನಂತರ ಸರಾಗವಾಗಿ ಹರಿದುಹೋಗುವಂತಿದ್ದರೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಒಮ್ಮೆ ನಾವು ನೀರಿಗೆ ಯಾವುದಾದರೂ ಅಡೆತಡೆಗಳನ್ನು ಹಾಕಿದರೆ, ತೇವಾಂಶ ಒಳನುಸುಳಲು ಅನುವು ಮಾಡಿಕೊಟ್ಟಂತೆ ಆಗುತ್ತದೆ.  

ನಿವೇಶನದ ಬೆಲೆ ಗಗನಕ್ಕೆ ಏರುತ್ತಿದ್ದಂತೆ ಮನೆಗಳ ನಡುವಿನ ಅಂತರ ಕಡಿಮೆಯಾಗುತ್ತಿದೆ. ಕಿಟಕಿ ತೆಗೆದರೆ ಪಕ್ಕದ ಮನೆಯೊಳಗೆ ಇಣುಕಿದಂಥ ಅನುಭವ. ಅದೇ ರೀತಿಯಲ್ಲಿ ಪಕ್ಕದ ಮನೆಯವರಿಗೂ ನಮ್ಮ ಮನೆಯೊಳಗಿನ ದೃಶ್ಯ ಅಷ್ಟೇ ಹತ್ತಿರವಾಗಿ ಕಾಣುತ್ತದೆ. ಹಾಗಾಗಿ ನಗರ ಪ್ರದೇಶದಲ್ಲಿ ಖಾಸಗಿತನಕ್ಕೆ ಅತಿಹೆಚ್ಚು ಧಕ್ಕೆ ಆಗುತ್ತಿದೆ. ಇನ್ನು ಬಹುತೇಕ ಬಯಲು ಸೀಮೆಯ ಹಳ್ಳಿಗಳಲ್ಲೂ ಮನೆಗಳು ಒಂದಕ್ಕೊಂದು ಅಂಟಿಕೊಂಡಂತಿದ್ದು, ಮನೆಯ ಮುಂದೆ ಮತ್ತು ಹಿಂದೆ ಮಾತ್ರ ಕಿಟಕಿ ಇಡುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಇದು ಗಾಳಿಬೆಳಕನ್ನು ಇಡೀ ಮನೆಯೊಳಗೆ ತರಲು ಅಷ್ಟೇನೂ ಸಹಾಯಕವಾಗಿರುವುದಿಲ್ಲ. ಇಂಥ ಸಂದರ್ಭದಲ್ಲಿ ನಾವು ಅನಿವಾರ್ಯವಾಗಿ ಸ್ಕೈಲೈಟ್‌ಗೆ ಮೊರೆಹೋಗಬೇಕಾಗುತ್ತದೆ. ಈಗೀಗ ನಮ್ಮ ಅನೇಕ ಸಾಂಪ್ರದಾಯಿಕ ವಿಶೇಷಣಗಳು ಹೊಸರೂಪ ಪಡೆದುಕೊಂಡು ಆಧುನಿಕವಾಗಿಯೂ ಕಾಣಿಸಿಕೊಳ್ಳಲು ತೊಡಗುತ್ತಿವೆ. ಇವುಗಳಲ್ಲಿ ಸ್ಕೈಲೈಟ್‌ ಕೂಡ ಒಂದು.

ಸರಳ ವಿಧಾನಗಳು
ಮಾರುಕಟ್ಟೆಯಲ್ಲಿ ಗಟ್ಟಿಮುಟ್ಟಾದ ಗಾಜಿನ ಇಟ್ಟಿಗೆಗಳು ಲಭ್ಯ. ಇವನ್ನು ಸೂರಿನಲ್ಲಿ ಅಳವಡಿಸಿದರೆ, ಸುಲಭದಲ್ಲಿ ಒಡೆಯುವುದಿಲ್ಲ.  ನಾವು ಇವುಗಳ ಮೇಲೆ ನಡೆದಾಡಿದರೂ ಏನೂ ಆಗುವುದಿಲ್ಲ. ಆದರೆ ಸೂರಿನ ಸಂಗತಿಯಾದ ಕಾರಣ, ನಾವು ಮಳೆಯ ನೀರು ಒಳ ನುಸುಳದಂತೆ ಎಚ್ಚರ ವಹಿಸುವುದು ಉತ್ತಮ. ನಾವು ಮಳೆ ನೀರಿಗೆ ನೀಡುವ ಇಳಿಜಾರಿಗೆ ಹೊಂದಿಕೊಂಡಂತೆ ಈ ಗಾಜಿನ ಇಟ್ಟಿಗೆಗಳನ್ನು ಅಳವಡಿಸಿದರೆ, ನೀರು ಸರಾಗವಾಗಿ ಹರಿದುಹೋಗಿ,  ಲೀಕ್‌ ಆಗುವ ಸಾಧ್ಯತೆ ಇರುವುದಿಲ್ಲ. ಕಡಿಮೆ ಎಂದರೆ ಒಂದೆರಡು ಇಟ್ಟಿಗೆಗಳನ್ನು ಇಡಬಹುದು, ಹೆಚ್ಚು ಇಟ್ಟಿಗೆಗಳನ್ನು ಬಳಸಿದರೂ ತೊಂದರೆ ಏನಿಲ್ಲ. ಆದರೆ ಮನೆಯೊಳಗೆ ತೀಪಾ ಪ್ರಖರವಾದ ಬೆಳಕು ಬಂದರೆ, ಅದರಲ್ಲೂ ಬಿರು ಬೇಸಿಗೆಯಲ್ಲಿ, ನಮಗೆ ಹೊರಗಿನ ಅನುಭವ ಆಗಿ ಒಳಾಂಗಣ ಬಿಸಿಏರುವ ಸಾಧ್ಯತೆ ಇರುತ್ತದೆ. ಹಾಗಾಗಿ ನಮ್ಮ ಕೋಣೆಯ ವಿಸ್ತಾರ ನೋಡಿಕೊಂಡು, ಸಾಮಾನ್ಯವಾಗಿ ನಾಲ್ಕಾರು ಇಟ್ಟಿಗೆಗಳನ್ನು ಇಟ್ಟರೆ ಸಾಕಾಗುತ್ತದೆ.

ವಿಶೇಷ ಆಕಾರ
ಮನೆ ಸ್ವಲ್ಪ ದೊಡ್ಡದಿದ್ದು, ಹೆಚ್ಚುವರಿ ಬೆಳಕು ಬೇಕೆಂದಿದ್ದರೆ, ಆಗನಾವು ವಿವಿಧ ನಮೂನೆಯ ಸ್ಕೈಲೈಟ್‌ಗಳಿಗೆ ಮೊರೆ ಹೋಗಬಹುದು. ಚೌಕಾಕಾರದ ಆಕಾಶ ದೀಪಗಳು ಹೆಚ್ಚು ಜನಪ್ರಿಯವಾಗಿದ್ದರೂ ನಮ್ಮ ಕೋಣೆ ಅಥವಾ ಹಾಲ್‌ನ ಅಗಲ- ಉದ್ದ ನೋಡಿಕೊಂಡು ಸೂಕ್ತ ಗಾತ್ರ ಅಂದರೆ ಎರಡು ಅಡಿಗೆ ಮೂರು ಅಡಿ ಇಲ್ಲವೇ ನಾಲ್ಕು ಅಡಿ ಅಳತೆಯದನ್ನು ವಿನ್ಯಾಸ ಮಾಡಿಕೊಳ್ಳಬಹುದು. ಅರ್ಧ ಚಂದ್ರಾಕೃತಿ ಹಾಗೆಯೇ ವೃತ್ತಾಕಾರದ ಸ್ಕೈಲೈಟ್‌ಗಳನ್ನೂ ವಿಶೇಷ ವಿನ್ಯಾಸದೊಂದಿಗೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಆಕಾಶಕ್ಕೆ ತೆರೆದುಕೊಂಡಂತೆ ಅಂದರೆ ಮೇಲ್‌ವುುಖವಾಗಿ ಗಾಜನ್ನು ಅಳವಡಿಸಲಾಗುತ್ತದೆ.  ಆದರೆ ಸ್ಕೈಲೈಟ್‌ ಒಂದೆರಡು ಅಡಿ ಎತ್ತರವಿದ್ದರೆ, ಪಕ್ಕಗಳಲ್ಲಿಯೂ ಗಾಜನ್ನು ಹಾಕಿ, ಹೆಚ್ಚು ಬೆಳಕು ಬರುವಂತೆ ಮಾಡಬಹುದು. 

ಗಾಜುಗಳು ನಾನಾ ಬಣ್ಣಗಳಲ್ಲಿ ಲಭ್ಯವಿದ್ದು, ನಮ್ಮ ಮನೆಗೆ ಹೊಂದಿಕೊಳ್ಳುವ ರೀತಿಯಲ್ಲಿ ಸ್ಕೈಲೈಟ್‌ಗಳಿಗೆ ಗ್ಲಾಸನ್ನು ಹಾಕಬಹುದು. ಸಾಮಾನ್ಯವಾಗಿ ಈ ಗಾಜುಗಳು ಒಡೆಯುವುದು ಕಡಿಮೆಯಾದರೂ, ಸೂರಿನ ವಿಚಾರವಾದ ಕಾರಣ, ಟಫ‌ನ್‌x – ಗಟ್ಟಿಗೊಳಿಸಿದ ಗಾಜನ್ನು ಹಾಕಿದರೆ ಉತ್ತಮ. ವೈರ್‌x ಗ್ಲಾಸ್‌ಗಳೂ ಕೂಡ ಲಭ್ಯ, ಇವುಗಳ ಮಧ್ಯೆ ಗಟ್ಟಿಯಾದ ಉಕ್ಕಿನ ವೈರ್‌ಗಳನ್ನು ಹಾಕಿರುವುದರಿಂದ, ಇವು ಸುಲಭದಲ್ಲಿ ಒಡೆಯುವುದಿಲ್ಲ.  ಕೆಲವೊಮ್ಮೆ ನೇರವಾಗಿ ಹೊಡೆತ ಬಿದ್ದರೂ, ತುಂಡುತುಂಡಾಗಿ ಉದುರದೆ, ಬಿರುಕು ಮಾತ್ರ ಬಿಡುತ್ತದೆ.  ಈ ರೀತಿಯಾಗಿ ತಂತಿಹೊಂದಿದ ಗಾಜುಗಳೂ ಕೂಡ ನಾಲ್ಕಾರು ಬಣ್ಣಗಳಲ್ಲಿ ಲಭ್ಯ. ಗಾಜನ್ನು ಅಳವಡಿಸಿದಾಗ , ಅದು ಬಿಸಿಲಿಗೆ ಹಿಗ್ಗಿ, ಚಳಿಗೆ ಕುಗ್ಗುವ ಸಾಧ್ಯತೆ ಇರುವುದರಿಂದ, ತೀರ ಬಿಗಿಯಾಗಿ ಸಿಗಿಸದೆ. ನೀರು ನಿರೋಧಕ ಗುಣ ಹೊಂದಲು, ಸೂಕ್ತ ಸಿಲಿಕಾನ್‌ ಸೀಲಂಟ್‌ಗಳನ್ನು ಬಳಸುವುದು ಒಳ್ಳೆಯದು.

ನೀರು ಒಳನುಸುಳದಂತೆ ಎಚ್ಚರಿಕೆ ಹೇಗೆ?
ಮಳೆಯ ನೀರು ಸೂರಿನ ಮೇಲೆ ಬಿದ್ದ ನಂತರ ಸರಾಗವಾಗಿ ಹರಿದುಹೋಗುವಂತಿದ್ದರೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಒಮ್ಮೆ ನಾವು ನೀರಿಗೆ ಯಾವುದಾದರೂ ಅಡೆತಡೆಗಳನ್ನು ಹಾಕಿದರೆ, ತೇವಾಂಶ ಒಳನುಸುಳಲು ಅನುವು ಮಾಡಿಕೊಟ್ಟಂತೆ ಆಗುತ್ತದೆ.  ಹಾಗಾಗಿ ಯಾವುದೇ ತೆರನಾದ ತೆರೆದ ಸ್ಥಳ ಸೂರಿನಲ್ಲಿದ್ದರೆ, ನೀರುನಿರೋಧಕ ಪದರ ಹಾಕುವಾಗ ಇಂಥ ಜಾಗದಲ್ಲಿ ವಿಶೇಷ ಗಮನ ನೀಡಬೇಕು. ಸಾಮಾನ್ಯವಾಗಿ ಸ್ಕೈಲೈಟ್‌ಗಳು ಹಾಲಿನ ಮಧ್ಯೆ ಬರುವ ಕಾರಣ, ಒಂದು ಬದಿಯ ನೀರಿನ ಇಳಿಜಾರು ಇಲ್ಲಿಗೆ ಬಂದು ನಿಲ್ಲುವ ಸಾಧ್ಯತೆ ಇರುತ್ತದೆ.  ಹಾಗಾಗಿ ನಾವು ಈ ಸ್ಥಳದಲ್ಲಿ, ನೀರು ಎರಡೂ ಬದಿಗೆ ಹರಿದುಹೋಗುವಂತೆ, ಸ್ಕೈಲೈಟ್‌ ಸುತ್ತಲೂ ಸೂಕ್ತ ಕೊಳವೆಗಳನ್ನು  ನೀಡಬೇಕಾಗುತ್ತದೆ.

ಗಾಜು ಫಿಕ್ಸಿಂಗ್‌
ಸ್ಕೈಲೈಟ್‌ಗಿಂತ ನಾಲ್ಕಾರು ಇಂಚಿನಷ್ಟು ದೊಡ್ಡದಾದ ಗಾಜನ್ನು ಹಾಕಿದರೆ, ಅದೇ ಸುತ್ತಲೂ ಸಜಾj ಮಾದರಿಯಲ್ಲಿ ಕಾರ್ಯ ನಿರ್ವಹಿಸಿ, ಮಳೆಯ ನೀರು ಒಳನುಸುಳದಂತೆ ತಡೆಯಬಲ್ಲದು. ಗಾಜು ದೊಡ್ಡದಿದ್ದು, ಮಧ್ಯೆ ಸಂದಿ ಇದ್ದರೆ ಹೆಚ್ಚುವರಿಯಾಗಿ ಮತ್ತೂಂದು ಪದರವನ್ನೂ ಹಾಕಬಹುದು. ಇತ್ತೀಚಿನ ದಿನಗಳಲ್ಲಿ ಉತ್ತಮ ದರ್ಜೆಯ ಅಂಟುಗಳು- ಸಿಲಿಕಾನ್‌  ಸೀಲಂಟ್‌ಗಳು ಲಭ್ಯವಿದ್ದು, ಇವನ್ನು ಹೆಚ್ಚು ಒತ್ತಡಕ್ಕೆ ಸಿಲುಕುವ ಕಾರು ಹಾಗೂ ಬಸ್ಸಿನಂಥ ವಾಹನಗಳಿಗೂ ಗಾಜನ್ನು ಸಿಗಿಸಲು ಉಪಯೋಗಿಸುತ್ತಾರೆ. ಹಾಗಾಗಿ ಅಷ್ಟೇನೂ ಒತ್ತಡಕ್ಕೆ ಸಿಲುಕದ ಮನೆಯ ಸ್ಕೈಲೈಟ್‌ಗಳಿಗೆ ಈ ಮಾದರಿಯ ಅಂಟುಗಳನ್ನು ಉಪಯೋಗಿಸುವುದು ಉತ್ತಮ. ಇವು ಸಿಮೆಂಟ್‌ನಂತೆ ಗಟ್ಟಯಾಗದೆ, ರಬ್ಬರಿನಂತೆ ಹೊಂದಿಕೊಳ್ಳುವ ಗುಣ ಇರುವುದರಿಂದ, ಸೂರಿಗೆ ಗಾಜನ್ನು ಸಿಗಿಸಲು ಸೂಕ್ತ.

ಒಂದೇ ಮಹಡಿ ಅಂದರೆ, ನೆಲಮಹಡಿ ಮನೆಗಳಲ್ಲಿ ಆಕಾಶಬೆಳಕುಗಳನ್ನು ಅಳವಡಿಸುವುದು ಹೆಚ್ಚು ಸುಲಭ. ಆದರೆ ಒಂದೆರಡು ಮಹಡಿ ಇರುವ ಮನೆಗಳಲ್ಲೂ ಮೆಟ್ಟಿಲು ಇಲ್ಲವೆ ಡಬಲ್‌ ಹೈಟ್‌ ಇರುವ ವಿನ್ಯಾಸಗಳಲ್ಲಿ ಹೆಚ್ಚು ಶ್ರಮವಿಲ್ಲದೆ ಸೂಕ್ತ ಸ್ಥಳದಲ್ಲಿ ಅಂದರೆ ಮೆಟ್ಟಿಲಿನ ಮೇಲೆ ಇಲ್ಲವೆ ಇತರೆ ತೆರೆದ ಸ್ಥಳದಲ್ಲಿ ಸ್ಕೈಲೈಟ್‌ಗಳನ್ನು ಅಳವಡಿಸಬಹುದು.

ಹೆಚ್ಚಿನ ಮಾತಿಗೆ 98441 32826
ಮುಂದಿನ ವಾರ – ನೈಸರ್ಗಿಕ ಬೆಳಕಿನ ಶೇಷಣಗಳು

– ಆರ್ಕಿಟೆಕ್ಟ್  ಕೆ. ಜಯರಾಮ್‌

ಟಾಪ್ ನ್ಯೂಸ್

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.