Udayavni Special

ಲೈಫ್ ಈಸ್‌ ಬುಟ್ಟಿ ಫ‌ುಲ್‌

ಹೊಟ್ಟೆತುಂಬಿಸುವ ಬುಟ್ಟಿ

Team Udayavani, Oct 19, 2020, 8:11 PM IST

isiri-tdy-1

ಬಿದಿರಿನ ಬುಟ್ಟಿ ಹೆಣೆಯುವ ಕೆಲಸವನ್ನು ಆಂಧ್ರ ಪ್ರದೇಶದಕಡೆಯಿಂದ ವಲಸೆ ಬಂದಿರುವ ಜನ ಮಾಡುತ್ತಾರೆ. ಆ ಬುಟ್ಟಿಗಳನ್ನು ಹೋಲ್‌ಸೇಲ್‌ ದರದಲ್ಲಿಖರೀದಿಸಿ ಮಾರುವುದಕ್ಕೆಕರ್ನಾಟಕದ ಕೆಲವು ವ್ಯಾಪಾರಿಗಳು ಮುಂದಾಗಿದ್ದಾರೆ. ಹೀಗೆ ಬುಟ್ಟಿ ತಯಾರಿಕೆಯ ಉದ್ಯಮವು ಈಗಕರ್ನಾಟಕ-ಆಂಧ್ರದ ಹಲವು ಮಂದಿಗೆ ಬದುಕುಕೊಟ್ಟಿದೆ.

 

ಹಿಂದೊಮ್ಮೆ, ಬುಟ್ಟಿ ಹೆಣೆಯುವುದು, ಹಣ ಸಂಪಾದನೆಗೆ ಇದ್ದ ಪ್ರಮುಖ ಮಾರ್ಗವಾಗಿತ್ತು. ಅದರಲ್ಲೂ ಹಿಂದುಳಿದ ವರ್ಗಕ್ಕೆ ಸೇರಿದ ಕೊರಮ ಜನಾಂಗದ ಅದೆಷ್ಟೋ ಜನರಿಗೆ, ಬಿದಿರಿನ ಬುಟ್ಟಿ ಹೆಣೆಯುವುದು ಪೂರ್ಣಾವಧಿ ಕಾಯಕವಾಗಿತ್ತು. ಬುಟ್ಟಿ, ಮೊರ, ಧಾನ್ಯಗಳನ್ನು ಶೇಖರಿಸಿ ಇಡಲು ಬಳಕೆಯಾಗುತ್ತಿದ್ದ ಹಲವು ಬಗೆಯ ವಸ್ತುಗಳನ್ನು ಈ ಜನ ತಯಾರಿಸಿ, ಮಾರಾಟ ಮಾಡುತ್ತಿದ್ದರು. ಆನಂತರದಲ್ಲಿ ಪ್ಲಾಸ್ಟಿಕ್‌ ಬಂದಿದ್ದೇ ನೆಪ; ಜನರೆಲ್ಲಾ ಬಿದಿರಿನ ಬುಟ್ಟಿಯನ್ನು ಮರೆತು ಪ್ಲಾಸ್ಟಿಕ್‌ ವಸ್ತುಗಳ ಹಿಂದೆಬಿದ್ದರು. ಪರಿಣಾಮ; ಬುಟ್ಟಿಗಳನ್ನು ಕೇಳುವವರೇ ಇಲ್ಲವಾದರು. ಕ್ರಮೇಣ, ಬುಟ್ಟಿತಯಾರಿಸುತ್ತಿದ್ದವರು ಕೂಡ ಸೋಫಾ ಮಾರಾಟದಕೆಲಸಕ್ಕೆ ಮುಂದಾಗಿ, ಕ್ರಮೇಣ ಬುಟ್ಟಿ ಮಾರಾಟದವ್ಯವಹಾರಕ್ಕೆ ಗುಡ್‌ ಬೈ ಹೇಳಿದ್ದರು.

ಈಗ ಕಾಲ ಒಂದು ಸುತ್ತು ತಿರುಗಿದೆ. ಕೋವಿಡ್ ಕಾರಣಕ್ಕೆ ಎಲ್ಲಾ ಬಗೆಯ ಉದ್ಯಮವೂ ಹೊಡೆತ ತಿಂದಿದೆ. ಸಂಪಾದನೆಯೇ ಇಲ್ಲ ಅಂದಮೇಲೆ ಸೋಫಾ ಬೇಕು ಅನ್ನುವವರು ಎಲ್ಲಿ ಸಿಗುತ್ತಾರೆ? ಹಾಗಂತ ಅದನ್ನೇ ನಂಬಿದ್ದವರು ಉಪವಾಸ ಕೂರಲು ಸಾಧ್ಯವೆ?ಆಜನ ಈಗ ಮತ್ತೆ ಹಳೆಯ ಕಾಯಕಕ್ಕೆ ಮರಳಿದ್ದಾರೆ. ಬುಟ್ಟಿ ಹೆಣೆದು ಮಾರಲು ಶುರುವಿಟ್ಟಿದ್ದಾರೆ.ಬುಟ್ಟಿಎಂಬುದು ಅನ್ನದ ಬಟ್ಟಲಾಗಿ ಹಣ ಮತ್ತು ಅನ್ನ- ಎರಡನ್ನೂ ಕೊಡುತ್ತಲಿದೆ! ಇಡೀ ಕುಟುಂಬದ ಆರ್ಥಿಕ ಬವಣೆ ನೀಗಿಸುತ್ತಿದೆ!

ಕುಲಕುಸುಬು… :  ಆಂಧ್ರದ ನೆಲ್ಲೂರು ಜಿಲ್ಲೆಯಾದ್ಯಂತ ಕೊರಮ ಶೆಟ್ರಾ ಜನಾಂಗಕ್ಕೆ ಸೇರಿದ ನೂರಾರು ಕುಟುಂಬಗಳಿವೆ. ಇವರ ಕುಲಕಸುಬುಗಳ ಪೈಕಿ ಬುಟ್ಟಿ ಹೆಣಿಯುವುದೂ ಒಂದು. ಮೊದಲೆಲ್ಲ ಬಿದಿರಿನ ಮಡಿ-ಮೈಲಿಗೆ ಬಟ್ಟೆ ಬುಟ್ಟಿ, ಹೂವಿನ ಹೂಜಿ, ಕೋಳಿ ಬುಟ್ಟಿ ಹೆಣೆದು ಕರ್ನಾಟಕ, ಆಂಧ್ರ, ಮಹಾರಾಷ್ಟ್ರದಲ್ಲಿ ಓಡಾಡಿ ಮಾರಿ, ಇದರಲ್ಲಿಯೇ ಬದುಕುಕಟ್ಟಿಕೊಂಡಿದ್ದರು.

ಪ್ಲಾಸ್ಟಿಕ್‌ ನಿಂದ ಬದುಕು ಬರ್ಬಾದ್‌! :  ಮಾರುಕಟ್ಟೆಗೆ ನಾನಾ ಪ್ಲಾಸ್ಟಿಕ್‌ ಉತ್ಪನ್ನಗಳು ಲಗ್ಗೆಇಟ್ಟಿದ್ದೇ ತಡ; ಈಚಲು, ಬಿದಿರಿನ ಪರಿಕರಗಳಿಗೆ ಇದ್ದ ಬೇಡಿಕೆ ಕುಸಿಯಿತು. ಪ್ಲಾಸ್ಟಿಕ್‌ ಉತ್ಪನ್ನಗಳು ನೋಡುವುದಕ್ಕೂ ಆಕರ್ಷಕವಾಗಿದ್ದವು ಮತ್ತು ಹೆಚ್ಚು ಕಾಲದವರೆಗೆ ಬಾಳಿಕೆಯೂ ಬರುತ್ತಿದ್ದವು. ಜನ ಸಹಜವಾಗಿಯೇ ಹೊಸ ಉತ್ಪನ್ನಗಳ ಕಡೆಗೆ ತಿರುಗಿ ಕೊಂಡರು. ಪರಿಣಾಮ, ಬುಟ್ಟಿ ಮಾರಾಟದಬ್ಯುಸಿನೆಸ್‌ ನೆಲ ಕಚ್ಚಿತು. ಈ ಜನ ಆಗಅನಿವಾರ್ಯವಾಗಿ ಅನ್ಯ ಉದ್ಯೋಗದತ್ತವಾಲಿದರು.

ಸೋಪಾಸೆಟ್‌ನಲ್ಲಿ ಸೆಟಲ್..! :  ಅದುವರೆಗೂ ಬುಟ್ಟಿ ಮಾರುತ್ತಿದ್ದವರು, ಹಂತಹಂತವಾಗಿ ಸೋಪಾಸೆಟ್‌ ವ್ಯಾಪಾರದಲ್ಲಿ ಸೆಟಲ್‌ಆದರು.ಬೆಂಗಳೂರು ಮತ್ತು ಹೈದ್ರಾಬಾದ್ನಿಂದ ಸೋಫಾ ಸೆಟ್‌ಗಳನ್ನುಕೊಂಡು ತಂದು, ಕರ್ನಾಟಕದ ವಿವಿದೆಡೆ ಕಳೆದೊಂದು ದಶಕದಿಂದ ಮಾರುತ್ತಿದ್ದಾರೆ.ಫ‌ುಟ್‌ಬಾತ್‌ ಇವರ ವ್ಯಾಪಾರ ಕೇಂದ್ರ. ಗಂಡಸರು ವ್ಯಾಪಾರದ ಕೆಲಸಕ್ಕೆ ನಿಂತರೆ, ಮನೆ ಕೆಲಸದ ಜವಾಬ್ದಾರಿಯನ್ನು ಹೆಣ್ಣು ಮಕ್ಕಳು ವಹಿಸಿಕೊಳ್ಳುತ್ತಿದ್ದರು. ಪ್ರತಿವರ್ಷ ಚಳಿಗಾಲದ ಹೊತ್ತಿಗೆ ವ್ಯಾಪಾರದ ಉದ್ದೇಶದಿಂದ ಬಂದು, ಕನಿಷ್ಠ 6-7 ಊರು ತಿರುಗಿ, ಮಳೆಗಾಲದ ಹೊತ್ತಿಗೆ ಊರು ಸೇರಿಕೊಳ್ಳುವುದು ಈ ಜನರಿಗೆ ಅಭ್ಯಾಸವಾಗಿತ್ತು. ಕೋವಿಡ್ ಕಾರಣಕ್ಕೆ ಸೋಫಾ ಮಾರಾಟದ ಬ್ಯುಸಿನೆಸ್‌ ನೆಲ ಕಚ್ಚಿದಾಗ, ಈ ಹೆಣ್ಣುಮಕ್ಕಳು ಮತ್ತೆ ಬುಟ್ಟಿ ಹೆಣೆಯುವ ಕಾಯಕಕ್ಕೆ ಮುಂದಾದರು. ಹಳ್ಳಿಹಳ್ಳಿ ತಿರುಗಿ ಅವನ್ನು ಮಾರುವ ಕೆಲಸ ಗಂಡಸರ ಪಾಲಿಗೆ ಬಂತು. ಬಿದಿರಿನ ಕಡ್ಡಿ ಮತ್ತು ಬಣ್ಣ ಬಣ್ಣದ ಸಿಂಧಿವಯರ್‌ ಸೇರಿಸಿ ಬುಟ್ಟಿ ಹೆಣೆಯುತ್ತಾರೆ.ಬುಟ್ಟಿ ಚಿಕದಾದ್ದ‌ರೂ ಚೊಕ್ಕ ಮತ್ತು ಆಕರ್ಷಕ. ಈ ಬುಟ್ಟಿ ಸಾಕಷ್ಟು ದಿನ ಬಾಳಿಕೆ ಬರುವುದರಿಂದ ಗಿರಾಕಿಗಳನ್ನು ಸೆಳೆಯುತ್ತೆ.ಚೆನ್ನಾಗಿ ಕಾಪಾಡಿಕೊಂಡ್ರೆಬುಟ್ಟಿಐದಾರು ವರ್ಷ ಬಾಳಿಕೆ ಬರುತ್ತೆ.. ಎನ್ನುತ್ತಾರೆ ಬುಟ್ಟಿ ಹೆಣೆಯುವ ವಾಣಿಶ್ರೀ. “ಬಿದಿರು ಬುಟ್ಟಿಗಳಿಗೆ ನೀರು ಬಿದ್ರೆ ಹಾಳಾಗುತ್ತಿದ್ದವು. ಹೀಗಾಗಿ ಜನ ಕೊಳ್ಳುವುದು ಕಮ್ಮಿ ಆಗಿತ್ತು. ಇದರೊಟ್ಟಿಗೆ ಪ್ಲಾಸ್ಟಿಕ್‌ ಬುಟ್ಟಿಗಳು ಬಂದು ಹೊಟ್ಟೆ ಮೇಲೆ ಹೊಡೆದ್ರು. ಈಗ ಅವುಕ್ಕೇ ಸ್ಪರ್ಧೆ ಕೊಡ್ತಿದೀವಿ…’ ಎಂಬುದು ಅವರ ಮಾತು.

ಹೋಲ್‌ ಸೇಲ್‌ನಲ್ಲಿಬುಟ್ಟಿ ಬಿಕರಿ… :  ಇಲ್ಲಿ ಒಂದು ಸ್ವಾರಸ್ಯವಿದೆ. ಬುಟ್ಟಿಗಳನ್ನು ಹೆಣೆಯುವವರು ಆಂಧ್ರದ ಕಡೆಯಿಂದ ಬಂದಿರುವ ಜನ. ಅವನ್ನು ಹೋಲ್‌ ಸೇಲ್‌ ದರಕ್ಕೆ ಖರೀದಿಸಿ ಮಾರಾಟ ಮಾಡುವವರುಕರ್ನಾಟಕದ ಜನ. ಅಂದರೆ, ಈ ಬುಟ್ಟಿಗಳ ಉತ್ಪಾದನೆ ಮತ್ತು ಮಾರಾಟದಿಂದ ಕರ್ನಾಟಕ ಮತ್ತು ಆಂಧ್ರದನೂರಾರು ಕುಟುಂಬಗಳು ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಾಗಿದೆ. ಒಂದು ಬುಟ್ಟಿ ಹೆಣೆಯಲು ಕೂತವರಿಗೆ 25-30 ರೂ. ಉತ್ಪಾದನೆಯ ಖರ್ಚು ಆಗುತ್ತಂತೆ. ಗ್ರಾಹಕರಿಗೆ ಒಂದಕ್ಕೆ 50 ರೂ.,ಗೆ ಮಾರುತ್ತಾರೆ. ಅದೇ ವ್ಯಾಪಾರಸ್ಥರು50-100 ಬುಟ್ಟಿಗಳನ್ನು ಒಮ್ಮೆಲೇ ಕೊಂಡರೆ ಆಗ ಒಂದು ಬುಟ್ಟಿಗೆ40 ರೂಪಾಯಿಗಳಂತೆ ನಾವು ಹೋಲ್‌ಸೇಲ್‌ನಲ್ಲಿ ಕೊಡ್ತೇವೆ. ಅವರು ಒಂದು ಬುಟ್ಟಿಗೆ 50-70 ರೂ. ತನಕ ಮಾರ್ತಾರೆ. “ಒಂದೇ ಬಾರಿ ಹೆಚ್ಚು ಬುಟ್ಟಿಗಳು ಮಾರಾಟ ಆದರೆ, ನಮ್ಮದೂ ಜೀವನ ನಡಿತೈತೆ. ಅವರಿಗೂ ನಾಲ್ಕುಕಾಸು ಸಿಗೆôತೆ..’ ಅಂತಾರೆ ಹರಿಕೃಷ್ಣ. ಇವರು ಒಂದು ಸೀಸನ್ ಗೆ ಗಂಡ-ಹೆಂಡತಿ ಸೇರಿ ಸುಮಾರು4 ರಿಂದ5 ಸಾವಿರ ಬುಟ್ಟಿ ಮಾರಿ, 8 ರಿಂದ 10 ಸಾವಿರ ರೂಪಾಯಿ ನಿವ್ವಳ ಲಾಭ ಗಳಿಸುತ್ತಾರೆ! ಒಟ್ಟಿನಲ್ಲಿ ಒಂದೇಉದ್ಯೋಗ ನೆಚ್ಚಿಕೊಂಡು ಸರಿಯಾದ ಆದಾಯವಿಲ್ಲದೆಪರದಾಡುವವರಿಗೆ, ಬುಟ್ಟಿಗಳನ್ನು ಹೆಣೆಯುತ್ತಲೇ ಬದುಕಲು ಕಲಿತ ಈ ಜನ ಮಾದರಿಯಾಗಿದ್ದಾರೆ.

ಅದನ್ನೂ ಮರೆತಿಲ್ಲ… :  ಹಾಗಂತ ನಾವು ಸೋಫಾ ಮಾರಾಟದ ಕೆಲಸವನ್ನು ಸಂಪೂರ್ಣ ತ್ಯಜಿಸಿಲ್ಲ. ಆ ಬ್ಯುಸಿನೆಸ್‌ ಗೆ ಡಿಮ್ಯಾಂಡ್‌ ಶುರುವಾಗುವ ತನಕ ಬುಟ್ಟಿ ಹೆಣೆಯುತ್ತಲೇ ಬದುಕುತ್ತೇವೆ. ಮನೆಮನೆಗೆ ಹೋಗಿ ಬುಟ್ಟಿ ಮಾರಾಟ ಮಾಡುತ್ತೇವೆ. ವಾರದ ಸಂತೆಯಲ್ಲಿಯೂ ಬುಟ್ಟಿಗಳೊಂದಿಗೆ ಕೂರುತ್ತೇವೆ. ಒಂದು ವೇಳೆ ಬುಟ್ಟಿ ಹೆಣೆಯುವುದನ್ನೇನಾದರೂ ನಾವು ತ್ಯಜಿಸಿದ್ದರೆ, ಈ ಕೋವಿಡ್ ಕಾಲದಲ್ಲಿ ಉಪವಾಸ ಬೀಳಬೇಕಾಗುತ್ತಿತ್ತು. ಆದರೆ ಈ ಬುಟ್ಟಿ ಮಾರಾಟದ ಬ್ಯುಸಿನೆಸ್‌ನಿಂದ ನಮಗೆ ಅನ್ನ ಮತ್ತು ಹಣಎರಡೂ ಸಿಕ್ಕಿದೆ ಎನ್ನುತ್ತಾರೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ಬುಟ್ಟಿ ಮಾರಾಟ ಮಾಡುತ್ತಿರುವ ಯಂಕಯ್ಯ.

 

ಚಿತ್ರ-ಲೇಖನ :

ಸ್ವರೂಪಾನಂದ ಎಂ. ಕೊಟ್ಟೂರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ

ನಿದ್ದೆ ಮಾತ್ರೆ ಸೇವಿಸಿ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ

ರಾಜ್ಯ ಸರಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಕನ್ನಡ ಕಡ್ಡಾಯ! ಸರಕಾರದಿಂದ ದಿಢೀರ್ ಸುತ್ತೋಲೆ

ರಾಜ್ಯ ಸರಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಕನ್ನಡ ಕಡ್ಡಾಯ! ಸುತ್ತೋಲೆ ಹೊರಡಿಸಿದ ಸರಕಾರ

ರಾಜ್ಯದ ಅಭಿವೃದ್ಧಿ ಯೋಜನೆ ಕುರಿತು ಎರಡು ತಿಂಗಳಿಗೊಮ್ಮೆ ಸಂಸದರೊಂದಿಗೆ ಸಭೆ: ಸಿಎಂ

ರಾಜ್ಯದ ಅಭಿವೃದ್ಧಿ ಯೋಜನೆ ಕುರಿತು ಎರಡು ತಿಂಗಳಿಗೊಮ್ಮೆ ಸಂಸದರೊಂದಿಗೆ ಸಭೆ: ಸಿಎಂ

ಕಲ್ಲಿದ್ದಲು ಹೊಗೆಯಿಂದ ಉಸಿರುಕಟ್ಟಿ ಯುವತಿ ಸಾವು, ಮೂವರು ಅಸ್ವಸ್ಥ

ಕಲ್ಲಿದ್ದಲು ಹೊಗೆಯಿಂದ ಉಸಿರುಗಟ್ಟಿ ಯುವತಿ ಸಾವು, ಮೂವರು ಅಸ್ವಸ್ಥ

ಆಟವಾಡುತ್ತಿದ್ದ 5 ಮಕ್ಕಳು ನಾಪತ್ತೆ: ಘಟನೆ ನಡೆದ ಒಂದೇ ಗಂಟೆಯಲ್ಲಿ ಪತ್ತೆಹಚ್ಚಿದ ಪೊಲೀಸರು

ಆಟವಾಡುತ್ತಿದ್ದ 5 ಮಕ್ಕಳು ನಾಪತ್ತೆ: ಘಟನೆ ನಡೆದ ಒಂದೇ ಗಂಟೆಯಲ್ಲಿ ಪತ್ತೆಹಚ್ಚಿದ ಪೊಲೀಸರು

ಹುಬ್ಬಳ್ಳಿ : ನಮ್ಮನ್ನು ಬೇರೆ ಠಾಣೆಗೆ ವರ್ಗಾವಣೆ ಮಾಡಿ ಎಂದು ಮನವಿ ಮಾಡಿದ ಸಿಬ್ಬಂದಿಗಳು

ಹುಬ್ಬಳ್ಳಿ :ದಯವಿಟ್ಟು ನಮ್ಮನ್ನು ಬೇರೆ ಠಾಣೆಗೆ ವರ್ಗಾವಣೆ ಮಾಡಿ! ಪೊಲೀಸ್ ಸಿಬ್ಬಂದಿಗಳ ಮನವಿ

ಗೋವಾದಲ್ಲಿ ಲಕ್ಷ್ಮೀ ಹೆಬ್ಟಾಳಕರ್ ಪುತ್ರನ ಅದ್ಧೂರಿ ಮದುವೆ

ಗೋವಾದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಟಾಳಕರ್ ಪುತ್ರನ ಅದ್ಧೂರಿ ಮದುವೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬರುತ್ತಿದೆ ರನೌಲ್ಟ್ ಕಿಗರ್‌

ಬರುತ್ತಿದೆ ರನೌಲ್ಟ್ ಕಿಗರ್‌

ಲಾಕ್‌ಡೌನ್‌ ತಂದ ಲಕ್‌

ಲಾಕ್‌ಡೌನ್‌ ತಂದ ಲಕ್‌

ಶರಾವತಿ ಹೊಳೆಸಾಲಿನಲ್ಲಿ ಹೊನ್ನೆ ಕಾಂತಿಘಮ!

ಶರಾವತಿ ಹೊಳೆಸಾಲಿನಲ್ಲಿ ಹೊನ್ನೆ ಕಾಂತಿಘಮ!

ಬೆಳವಲ ಹಣ್ಣಿನಿಂದ ಹೊಸಬೆಳಕು

ಬೆಳವಲ ಹಣ್ಣಿನಿಂದ ಹೊಸಬೆಳಕು

ಬುಟ್ಟಿಯಿಂದ ಬಾಳು ಗಟ್ಟಿ

ಬುಟ್ಟಿಯಿಂದ ಬಾಳು ಗಟ್ಟಿ

MUST WATCH

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

udayavani youtube

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

udayavani youtube

ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

ಹೊಸ ಸೇರ್ಪಡೆ

ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ

ನಿದ್ದೆ ಮಾತ್ರೆ ಸೇವಿಸಿ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ

ತನಿಖೆ ಚುರುಕು: ಡಾಕ್ಟರ್‌ ಮೋಟು ಮತ್ತಷ್ಟು ದಿನ ಜೈಲಿನಲ್ಲಿ!

ತನಿಖೆ ಚುರುಕು: ಡಾಕ್ಟರ್‌ ಮೋಟು ಮತ್ತಷ್ಟು ದಿನ ಜೈಲಿನಲ್ಲಿ!

ರಾಜ್ಯ ಸರಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಕನ್ನಡ ಕಡ್ಡಾಯ! ಸರಕಾರದಿಂದ ದಿಢೀರ್ ಸುತ್ತೋಲೆ

ರಾಜ್ಯ ಸರಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಕನ್ನಡ ಕಡ್ಡಾಯ! ಸುತ್ತೋಲೆ ಹೊರಡಿಸಿದ ಸರಕಾರ

ರಾಜ್ಯದ ಅಭಿವೃದ್ಧಿ ಯೋಜನೆ ಕುರಿತು ಎರಡು ತಿಂಗಳಿಗೊಮ್ಮೆ ಸಂಸದರೊಂದಿಗೆ ಸಭೆ: ಸಿಎಂ

ರಾಜ್ಯದ ಅಭಿವೃದ್ಧಿ ಯೋಜನೆ ಕುರಿತು ಎರಡು ತಿಂಗಳಿಗೊಮ್ಮೆ ಸಂಸದರೊಂದಿಗೆ ಸಭೆ: ಸಿಎಂ

ಕಲ್ಲಿದ್ದಲು ಹೊಗೆಯಿಂದ ಉಸಿರುಕಟ್ಟಿ ಯುವತಿ ಸಾವು, ಮೂವರು ಅಸ್ವಸ್ಥ

ಕಲ್ಲಿದ್ದಲು ಹೊಗೆಯಿಂದ ಉಸಿರುಗಟ್ಟಿ ಯುವತಿ ಸಾವು, ಮೂವರು ಅಸ್ವಸ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.