ಕಾರ್‌ ಸೆಂಟರ್‌!

ಕಾರು ಕೊಳ್ಳಲು ಇಲ್ಲಿವೆ ಟಿಪ್ಸ್‌...

Team Udayavani, Dec 23, 2019, 4:18 AM IST

wd-7

ಕಾರು ಖರೀದಿ ಎಂದರೆ ಅದು ಹುಡುಗಾಟದ ಪ್ರಶ್ನೆಯೇ ಅಲ್ಲ. ಇದು ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರವೂ ಅಲ್ಲ, ನಿಧಾನಗತಿಯಲ್ಲಿ ಯೋಚಿಸಬೇಕು ಅಂತಲೂ ಅಲ್ಲ. ಒಟ್ಟಾರೆಯಾಗಿ ಹೇಳುವುದಾದರೆ, ಇದರಲ್ಲಿ ಬುದ್ಧಿವಂತಿಕೆಯ ಜತೆಗೆ, ಕೆಲ ಸಂಗತಿಗಳನ್ನು ಅರಿತುಕೊಳ್ಳುವುದು ಮುಖ್ಯ. ಅವು ಇಲ್ಲಿವೆ…

ಕಾರು ಖರೀದಿಯ ಪ್ರಕ್ರಿಯೆಯಲ್ಲಿ ಇದು ಬಹಳ ಮುಖ್ಯವಾದ ಸಂಗತಿ. ತುಂಬಾ ಜನ ಕಾರು ಖರೀದಿ ಮಾಡಬೇಕೆಂದು ಮನಸ್ಸು ಮಾಡುವುದೇನೋ ಸತ್ಯ. ಆದರೆ, ಯಾವ ಕಾರು ಖರೀದಿ ಮಾಡಬೇಕು ಎಂದು ನಿರ್ಧರಿಸಿರುವುದೇ ಇಲ್ಲ. ಅಂದರೆ, ಕಾರುಗಳಲ್ಲಿ ಸಣ್ಣ ಕಾರುಗಳಿಂದ ಹಿಡಿದು ದೊಡ್ಡ ಎಸ್‌.ಯು.ವಿ ತನಕ ವಿವಿಧ ಮಾದರಿಗಳು ಸಿಗುತ್ತವೆ. ಆದರೆ, ಈ ಎಲ್ಲಾ ಕಾರುಗಳು ನಮ್ಮ ಇಷc-ಕಷ್ಟಗಳಿಗೆ ಆಗಬೇಕು ಅಂತೇನಿಲ್ಲ. ಹೀಗಾಗಿ, ಮೊದಲಿಗೆ ನಾವು ಯೋಚನೆ ಮಾಡಬೇಕಾಗಿರುವುದು ಯಾವ ಕಾರು ಬೇಕು ಎಂಬುದರ ಬಗ್ಗೆ.

ಮನೆಯಲ್ಲಿ ನೀವು, ನಿಮ್ಮ ಸಂಗಾತಿ ಮತ್ತು ಇಬ್ಬರು ಮಕ್ಕಳು ಇದ್ದರೆ, ನಿಮಗೆ ಎಸ್‌ಯುವಿಯಾಗಲಿ ಅಥವಾ ಸೆಡಾನ್‌ ಕಾರಾಗಲಿ ಬೇಕಾಗಿಯೇ ಇಲ್ಲ. ಅದರ ಬದಲಿಗೆ ಹ್ಯಾಚ್‌ಬ್ಯಾಕ್‌ ಕಾರುಗಳು ಮಾತ್ರ ಸಾಕಾಗುತ್ತದೆ. ಪುಟ್ಟ ಸಂಸಾರಕ್ಕೆ ಪುಟ್ಟದೊಂದು ಗಾಡಿ’ ಎಂಬ ನೀತಿಯಂತೆ ಕಾರು ಖರೀದಿ ಮಾಡಬಹುದು.

ಯಾಕಾಗಿ ಬೇಕು?
ಯಾವ ಕಾರು ಬೇಕು ಎಂಬ ಬಗ್ಗೆ ಯೋಚಿಸಿ, ನಿಮ್ಮ ಮನೆಯ ಸದಸ್ಯರ ಸಂಖ್ಯೆಯ ಲೆಕ್ಕಾಚಾರದಲ್ಲಿ ನೀವು ಒಂದು ಹ್ಯಾಚ್‌ಬ್ಯಾಕ್‌ಗೆ ಮನಸ್ಸು ಮಾಡಿದ್ದೀರಿ ಅಂತಿಟ್ಟುಕೊಳ್ಳಿ. ಅದು ನಿಮ್ಮ ಲೆಕ್ಕಾಚಾರದಲ್ಲಿ ಉಲ್ಟಾ ಆಗಬಹುದು. ನೀವು ನಿಮ್ಮ ಸಂಗಾತಿ ಮತ್ತು ನಿಮ್ಮ ಮಕ್ಕಳ ಬಗ್ಗೆಯಷ್ಟೇ ಯೋಚನೆ ಮಾಡಿದ್ದೀರಿ. ನಿಮ್ಮ ತಂದೆ- ತಾಯಿಯೋ ಅಥವಾ ನಿಮ್ಮ ಜತೆಯಲ್ಲೇ ವಾಸಿಸುತ್ತಿರುವ ಪೋಷಕರ ಬಗ್ಗೆ ಯೋಚನೆ ಮಾಡಿಯೇ ಇಲ್ಲ. ನಿಮ್ಮ ಜತೆ ತಂದೆ- ತಾಯಿ ಇದ್ದಾರೆಂದು ಅಂದುಕೊಂಡರೆ, ಹ್ಯಾಚ್‌ಬ್ಯಾಕ್‌ನ ಜೀವನ ಕಷ್ಟಕರ. ಆಗ, ಮಿನಿ ಎಸ್‌ಯುವಿಯಂಥ ಕಾರಿನತ್ತ ಮನಸ್ಸು ಮಾಡಬಹುದು.

ಎಲ್ಲಿಗಾಗಿ ಬೇಕು?
ಇದು ನಿಜವಾಗಿಯೂ ಅರಿತಿರಲೇಬೇಕಾದ ಸಂಗತಿ. ಮನೆಯಲ್ಲಿನ ಸದಸ್ಯರ ಸಂಖ್ಯೆಯನ್ನೂ ಇರಿಸಿಕೊಂಡು ದೊಡ್ಡ ಕಾರು ಖರೀದಿಸಲು ಪ್ಲಾನ್‌ ಮಾಡಿಕೊಂಡರೆ ಮುಗಿಯಲಿಲ್ಲ. ಇದರ ಜತೆಗೆ ಕಾರು ಖರೀದಿಯ ಉದ್ದೇಶವನ್ನೇ ಅರ್ಥ ಮಾಡಿಕೊಂಡಂತಾಗುವುದಿಲ್ಲ. ಏಕೆಂದರೆ, ಕಾರು ಎಂದರೆ, ಕಚೇರಿಗೆ ಹೋಗಿ ಬರಲಿಕ್ಕೋ ಅಥವಾ ಅಪರೂಪಕ್ಕೆಂದು ತೆಗೆದು ಪ್ರವಾಸಕ್ಕೋ ಅಥವಾ ದೂರದ ನಿಮ್ಮ ಹಳ್ಳಿಗೋ, ಮದುವೆ ಮುಂಜಿಗೆ ಹೋಗುವುದಕ್ಕೆಂದು ಖರೀದಿಸುತ್ತೀರೋ ಎಂಬ ಬಗ್ಗೆಯೂ ಯೋಚಿಸಬೇಕು. ದಿನವೂ ಕಚೇರಿಗೆ ಕಾರಲ್ಲೇ ಓಡಾಡುತ್ತೀರಿ ಎನ್ನುವುದಾದರೆ, ನಗರಗಳಿಗೆ ಹ್ಯಾಚ್‌ಬ್ಯಾಕ್‌ ಕಾರುಗಳೇ ಸಾಕು. ಇವು ಪುಟ್ಟದಾಗಿದ್ದು, ಟ್ರಾಫಿಕ್‌ನಲ್ಲಿ ಸುಲಭವಾಗಿ ಚಾಲನೆ ಮಾಡಲು ಅನುವು ಮಾಡಿಕೊಡುತ್ತವೆ. ಇದರ ಬದಲಿಗೆ ದೊಡ್ಡ ಕಾರು ಅಥವಾ ಸೆಡಾನ್‌ನಂಥ ಕಾರು ಖರೀದಿ ಮಾಡಿದರೆ, ದಿನನಿತ್ಯದ ಬಳಕೆಗೆ ಕಷ್ಟವಾಗಬಹುದು.

ಪಾರ್ಕಿಂಗ್‌ ಇದೆಯೇ?
ಮನೆಯ ಬಳಿ ಅಥವಾ ಕಚೇರಿ ಬಳಿ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೇ ಹೋದರೆ, ಕಾರು ಖರೀದಿಯೇ ಕಷ್ಟವಾಗಬಹುದು. ಏಕೆಂದರೆ, ನೀವು ಕಾರು ಖರೀದಿ ಮಾಡುತ್ತೀರಿ, ನಿಜ, ಆದರೆ, ನಿಲ್ಲಿಸಲು ಜಾಗವೇ ಇಲ್ಲದೇ ಹೋದರೆ ಏನು ಮಾಡುತ್ತೀರಿ? ಈ ಬಗ್ಗೆಯೂ ಯೋಚಿಸಿ ಮುಂದುವರಿಯುವುದು ಉತ್ತಮ. ನೀವು ಸ್ವಂತ ಮನೆ, ಅಪಾರ್ಟ್‌ಮೆಂಟ್‌ ಅಥವಾ ಫ್ಲ್ಯಾಟ್‌ಗಳಲ್ಲಿ ವಾಸ ಮಾಡುತ್ತಿದ್ದೀರಿ ಎಂದಾದಲ್ಲಿ ಸಾಮಾನ್ಯವಾಗಿ ಅಲ್ಲೆಲ್ಲಾ ಪಾರ್ಕಿಂಗ್‌ ವ್ಯವಸ್ಥೆ ಇದ್ದೇ ಇರುತ್ತದೆ. ಹಾಗಾಗಿ ಚಿಂತಿಸದೆ ಕಾರು ಖರೀದಿ ಮಾಡಬಹುದು.

ಆಟೋಮ್ಯಾಟಿಕ್‌ ಅಥವಾ ಮ್ಯಾನ್ಯುವಲ್‌
ಇತ್ತೀಚಿನ ದಿನಗಳಲ್ಲಿ ಭಾರೀ ಟ್ರೆಂಡ್‌ ಆಗಿರುವ ವಿಷಯವೆಂದರೆ ಇದೇ. ಬೆಂಗಳೂರು, ದೆಹಲಿ, ಮುಂಬೈನಂಥ ನಗರಗಳಲ್ಲಿ ಭಾರೀ ಟ್ರಾಫಿಕ್‌ನಿಂದಾಗಿ ಕಂಗೆಟ್ಟುಹೋಗಿರುವ ಜನ, ಅನಿವಾರ್ಯವಾಗಿ “ಆಟೋಮ್ಯಾಟಿಕ್‌’ಗೆ ಶಿಫ್ಟ್ ಆಗುತ್ತಿದ್ದಾರೆ. ಪದೇಪದೆ ಗೇರ್‌ ಬದಲಾವಣೆ ಮಾಡುವುದು ನಗರವಾಸಿಗಳಿಗೆ ಕಿರಿಕಿರಿ ಎನಿಸತೊಡಗಿದೆ. ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ಜನ ಹೆಚ್ಚಾಗಿ ಆಟೋಮ್ಯಾಟಿಕ್‌ ಕಾರುಗಳ ಮೊರೆ ಹೋಗುತ್ತಿರುವುದು.

ಪೆಟ್ರೋಲ್- ಡೀಸೆಲ್- ಸಿಎನ್‌ಜಿ
ಪೆಟ್ರೋಲ್‌- ಡೀಸೆಲ್‌- ಸಿಎನ್‌ಜಿ- ಎಲೆಕ್ಟ್ರಿಕಲ್‌ ಕಾರುಗಳ ಬೆಲೆ ಅಜಗಜಾಂತರವಿರುತ್ತದೆ. ಇವುಗಳಲ್ಲಿ ಪೆಟ್ರೋಲ್‌ ಕಾರುಗಳ ದರವೇ ಕಡಿಮೆ. ಅದಕ್ಕಿಂತ ಮಿಗಿಲಾಗಿ ಪವರ್‌ ಕೂಡಾ ಹೆಚ್ಚು. ಡೀಸೆಲ್‌ ಕಾರಿಗೆ ಹೋಲಿಸಿದರೆ, ನಿರ್ವಹಣಾ ವೆಚ್ಚವೂ ಕಡಿಮೆ. ಡೀಸೆಲ್‌ ಕಾರಿನ ಬೆಲೆ ಪೆಟ್ರೋಲ್‌ ಕಾರಿಗಿಂತ ತುಸು ಹೆಚ್ಚು. ಆದರೆ ಪೆಟ್ರೋಲ್‌ಗಿಂತ ಡೀಸೆಲ್‌ ರೇಟ್‌ ಕಡಿಮೆಯಿರುವುದರಿಂದ ಆ ಲೆಕ್ಕಾಚಾರ ಅಲ್ಲಿಗಲ್ಲಿಗೆ ಸರಿ ಹೋಗುತ್ತದೆ ಎಂಬ ವಿಚಾರ ಕೆಲವರದು. ಅಷ್ಟೇ ಅಲ್ಲದೆ, ಡೀಸೆಲ್‌ ಗಾಡಿ ಮೈಲೇಜ್‌ ಹೆಚ್ಚು ಕೊಡುತ್ತದೆ. ಹೀಗಾಗಿ ಹೆಚ್ಚಿನ ಮಂದಿ ನಿರ್ವಹಣಾ ಖರ್ಚು ಹೆಚ್ಚು ಎಂಬ ಸಂಗತಿ ಗೊತ್ತಿದ್ದರೂ ಡೀಸೆಲ್‌ ಕಾರನ್ನು ಕೊಳ್ಳುತ್ತಾರೆ. ಇನ್ನು ಸಿಎನ್‌ಜಿ ಮತ್ತು ಎಲೆಕ್ಟ್ರಿಕ್‌ ಕಾರು ಖರೀದಿ ಮಾಡುವ ಮುನ್ನ, ನೀವು ವಾಸವಿರುವ ಪ್ರದೇಶದಲ್ಲಿ ಸಿಎನ್‌ಜಿ ಸ್ಟೇಷನ್‌ ಮತ್ತು ಎಲೆಕ್ಟ್ರಿಕ್‌ ಕಾರುಗಳ ಚಾರ್ಜಿಂಗ್‌ ಸ್ಟೇಷನ್‌ ಇವೆಯೇ ಎಂಬ ಬಗ್ಗೆ ಮೊದಲೇ ಪರಿಶೀಲನೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸಮಸ್ಯೆಗೆ ಸಿಲುಕುವುದು ಖಂಡಿತ.

ಬಜೆಟ್‌- ಫೈನಾನ್ಸ್
ನಿಮ್ಮ ಕಾರಿಗೆ ಯಾವ ಶೋರೂಮ್‌ಗಳಲ್ಲಿ ಹಣಕಾಸಿನ ನೆರವನ್ನು ನೀಡುತ್ತಾರೆ ಎಂಬ ಬಗ್ಗೆಯೂ ಪರಿಶೀಲಿಸಿ. ಕೆಲವು ಬ್ಯಾಂಕಿನವರು ಕಡಿಮೆ ಬಡ್ಡಿದರಕ್ಕೆ ಸಾಲ ಕೊಡುತ್ತಾರೆ. ಇನ್ನೂ ಕೆಲವರು ಪ್ರೊಸೆಸ್ಸಿಂಗ್‌ ಚಾರ್ಜ್‌ಅನ್ನು ಬಿಡುತ್ತಾರೆ. ಇಂಥ ಆಫ‌ರ್‌ಗಳನ್ನು ನೋಡಿಕೊಂಡು ಕಾರು ಖರೀದಿ ಮಾಡಬೇಕು.

ಇವಿಷ್ಟು ತಿಳಿದುಕೊಳ್ಳಿ
-ನೋಂದಣಿ, ತಯಾರಾದ ವರ್ಷ ಮತ್ತು ಮಾಡೆಲ್‌
-ವಿಐಎನ್‌- ಇದು ಕಾರಿನಲ್ಲೇ ಇರುವ ಆ ಕಾರಿನ ಎಲ್ಲಾ ಮಾಹಿತಿ ಹೊತ್ತ ಆಧಾರ್‌ ಮಾದರಿಯ ಸಂಖ್ಯೆ. ಇದು 17 ಸಂಖ್ಯೆಗಳನ್ನು ಹೊಂದಿರುತ್ತದೆ.
-ಸರ್ವೀಸ್‌ ವೇಳಾಪಟ್ಟಿ- ನಿಮ್ಮ ಕಾರು ಚೆನ್ನಾಗಿರಬೇಕಾದರೆ, ಕಾಲಕಾಲಕ್ಕೆ ಮಾಡಿಸಬೇಕಾದ ಸರ್ವೀಸ್‌ನ ವೇಳಾಪಟ್ಟಿ ಮತ್ತು ಉಚಿತ ಸರ್ವೀಸ್‌ ಕುರಿತ ವಿವರ
-ಎಂಜಿನ್‌ ಲೈಟ್‌- ಇತ್ತೀಚಿನ ಕಾರುಗಳು ಎಂಜಿನ್‌ಗೆ ಅಟ್ಯಾಚ್‌ ಮಾಡಿರುವ ಸಾಫr…ವೇರ್‌ ಆಧರಿಸಿ ಕೆಲಸ ಮಾಡುತ್ತವೆ. ನಿಮ್ಮ ಕಾರಿಗೆ ಯಾವುದೇ ರೀತಿಯ ತೊಂದರೆ ಬಂದರೂ, ಈ ಸಾಫr…ವೇರ್‌ ಅದರ ಮಾಹಿತಿ ನೀಡುತ್ತದೆ.

ಟಾಪ್ ನ್ಯೂಸ್

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.