ಕಂಪ್ಯೂಟರ್‌ ಸೆಕ್ಯುರಿಟಿ ಗಾರ್ಡ್‌!

6 ತಿಂಗಳ ಉಚಿತ ಚಂದಾದಾರಿಕೆ

Team Udayavani, Apr 27, 2020, 12:17 PM IST

ಕಂಪ್ಯೂಟರ್‌ ಸೆಕ್ಯುರಿಟಿ ಗಾರ್ಡ್‌!

ಸಾಂದರ್ಭಿಕ ಚಿತ್ರ

ಕೋವಿಡ್‌-19ನಿಂದಾಗಿ ಎಲ್ಲರೂ ಮನೆಯಲ್ಲೇ ಉಳಿದಿರುವ ಸಂದರ್ಭವಿದು. ಮಕ್ಕಳು ಈಗ ಹೆಚ್ಚಾಗಿ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಬಳಸುತ್ತಿರುತ್ತಾರೆ. ಆನ್‌ಲೈನ್‌ನಲ್ಲಿ ಅವರಿಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಕೆಲವು ಅನಗತ್ಯ, ಅಸಭ್ಯ ವೆಬ್‌ಸೈಟುಗಳನ್ನು ನೋಡಬಹುದು. ಇದರ ಬಗ್ಗೆ ಪೋಷಕರಿಗೂ ಆತಂಕವಿರುತ್ತದೆ. ಎಲ್ಲ ಸಮಯದಲ್ಲೂ ಅವರ ಮೇಲೆ ನಿಗಾ ಇರಿಸಲು ಸಾಧ್ಯವಿಲ್ಲ, ಏನು ಮಾಡುವುದು? ಎಂಬ ಅಸಹಾಯಕತೆಯೂ ಇರುತ್ತದೆ. ಇದರ ಮೇಲೆ ನಿಗಾ ಇಡುವ ಸೆಕ್ಯೂರಿಟಿ ಅಪ್ಲಿಕೇಷನ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡರೆ, ಈ ಸಮಸ್ಯೆ
ನಿವಾರಿಸಿಕೊಳ್ಳಬಹುದು. ಆದರೆ, ಇಂಥ ಅಪ್ಲಿಕೇಷನ್‌ಗಳ ದರ ದುಬಾರಿಯಾಗಿರುತ್ತದೆ.

ಪ್ರಮುಖ ಗ್ರಾಹಕ ಸೈಬರ್‌ ಸೆಕ್ಯೂರಿಟಿ ಬ್ರ್ಯಾಡ್‌ ಆಗಿರುವ ನೊರ್ಟನ್‌ ಲೈಫ್ ಲಾಕ್‌, ಇದೀಗ ನೊರ್ಟನ್‌ ಫ್ಯಾಮಿಲಿ ಸಾಫ್ಟ್ವೇರ್‌ಗೆ ಆರು ತಿಂಗಳ ಉಚಿತ ಚಂದಾದಾರಿಕೆಯ ಕೊಡುಗೆಯನ್ನು ಪ್ರಕಟಿಸಿದೆ. ಈ ಲಾಕ್‌ಡೌನ್‌ ಸಂದರ್ಭದಲ್ಲಿ, ಮಕ್ಕಳ ಆನ್‌ಲೈನ್‌ ಚಟುವಟಿಕೆಗಳ ಮೇಲೆ ನಿಗಾ ಇಡಲು ಇದರಿಂದ ಸಹಾಯವಾಗಲಿದೆ. ಗ್ರಾಹಕರು, family.norton.com ನಲ್ಲಿ ನೋಂದಣಿ ಮಾಡಿಕೊಂಡು ನೊರ್ಟನ್‌ ಫ್ಯಾಮಿಲಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಈ ಆಫ‌ರ್‌ ಮೇ 31, 2020 ರವರೆಗೆ ದೊರಕುತ್ತದೆ. ಅಂದರೆ, ಮೇ 31ರೊಳಗೆ
ಚಂದಾದಾರರಾದರೆ, ಅಲ್ಲಿಂದ 6 ತಿಂಗಳವರೆಗೂ ನಿಮಗೆ ಉಚಿತವಾಗಿ ಬಳಕೆಗೆ ದೊರಕಲಿದೆ.

ಈ ಅಪ್ಲಿಕೇಷನ್‌ ಡೌನ್ಲೋಡ್ ಮಾಡಿಕೊಂಡಾಗ, ಇದು ನಿಮ್ಮ ಮಕ್ಕಳು ಕಂಪ್ಯೂಟರ್‌, ಲ್ಯಾಪ್‌ಟಾಪ್‌ನಲ್ಲಿ ಆನ್‌ ಲೈನ್‌ ಬಳಸಿದಾಗ ಅವರಿಗೆ ತಕ್ಕುದಲ್ಲದ ವೆಬ್‌ಸೈಟ್‌ ತೆರೆಯುವುದನ್ನು ಬ್ಲಾಕ್‌ ಮಾಡುತ್ತದೆ.

ನಿಮ್ಮ ಮಕ್ಕಳು ಎಷ್ಟು ಸಮಯ ಕಂಪ್ಯೂಟರ್‌ ಬಳಸಿದ್ದಾರೆ? ಅವರು ಯಾವ ವಿಷಯವನ್ನು ಸರ್ಚ್‌ ಮಾಡುತ್ತಿದ್ದರು ಎಂಬುದರ ಮಾಹಿತಿಗಳನ್ನು ಒದಗಿಸುತ್ತದೆ.

ಮಕ್ಕಳು ಏನೇನು ನೋಡಿದರು ಎಂಬ ಬಗ್ಗೆ ನಿಮ್ಮ ಇನ್‌ಬಾಕ್ಸ್ ಗೆ ಮಾಹಿತಿಗಳನ್ನು ರವಾನಿಸುತ್ತದೆ. ಕೊವಿಡ್‌-19 ಲಾಕ್‌ಡೌನ್‌ ಕಾರಣಕ್ಕೆ, ಮಕ್ಕಳು ಹೆಚ್ಚು ಹೆಚ್ಚು ಇಂಟರ್ನೆಟ್‌ ಆಧಾರಿತ ಸಾಧನಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಆಟ, ಮನರಂಜನೆ ಮತ್ತು ಅಧ್ಯಯನಕ್ಕೆ ಆನ್‌ಲೈನ್‌ ಮೊರೆ ಹೋಗಿದ್ದಾರೆ. ಅತಿಯಾಗಿ ಬಳಕೆ ಮಾಡುತ್ತಿರುವುದರಿಂದ, ಸೈಬರ್‌ ದಾಳಿಗಳು ಮತ್ತು ಇತರೆ ಆನ್‌ಲೈನ್‌ ಬೆದರಿಕೆಗಳಿಗೆ ಕಾರಣವಾಗುತ್ತದೆ. ಇತ್ತೀಚಿಗೆ ಬಿಡುಗಡೆಯಾದ NortonLifeLock Cyber Safety Insights Report ಪ್ರಕಾರ, ಭಾರತದಲ್ಲಿ ಪ್ರತಿಕ್ರಿಯೆ
ನೀಡಿರುವ ಪ್ರತಿ 10 ಜನರಲ್ಲಿ ನಾಲ್ವರು ಐಡೆಂಟಿಟಿ ಬೆದರಿಕೆಯ ಅನುಭವ ಹೊಂದಿದ್ದಾರೆ. ಸಂದರ್ಭ ಹೀಗಿರುವಾಗ, ಆನ್‌ಲೈನ್‌ ಜಗತ್ತಿನಲ್ಲಿ ಆನ್‌ ಲೈನ್‌ ಐಡೆಂಟಿಟಿಯ ರಕ್ಷಣೆ ಮಾಡುವುದು ತಕ್ಷಣದ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಗ್ರಾಹಕರಿಗೆ ರಕ್ಷಣೆ ಒದಗಿಸಲೆಂದು ಉಚಿತ ಚಂದಾದಾರಿಕೆ ನೀಡುವ ಯೋಜನೆಯನ್ನು ಆರಂಭಿಸಿದ್ದೇವೆ ಎಂದು ನೊರ್ಟನ್‌ ಲೈಫ್ ಲಾಕ್‌,
ಇಂಡಿಯಾದ ಸ್ಥಳೀಯ ನಿರ್ದೇಶಕ ರಿತೇಶ್‌ ಚೋಪ್ರಾ ತಿಳಿಸಿದ್ದಾರೆ.
ಅಪ್ಲಿಕೇಷನ್‌ ಡೌನ್‌ಲೋಡ್‌ ಲಿಂಕ್‌: nr.tn/2VIZHMT

ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.