ಡಿಜಿಟಲ್‌ ಹೆಜ್ಜೆ; ವ್ಯಾಪಾರ ವೃದ್ಧಿಗೆ ಕಂಪನಿಗಳ ನೆರವಿನ ಹಸ್ತ


Team Udayavani, Feb 17, 2020, 6:10 AM IST

465653942

ಭಾರತದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ತಮ್ಮ ತಂತ್ರಜ್ಞಾನದ ನೆರವನ್ನು ಗುತ್ತಿಗೆಯನ್ನು ನೀಡುವ ಬಗ್ಗೆ ಬಹುರಾಷ್ಟ್ರೀಯ ಕಂಪನಿಗಳು ಉತ್ಸುಕವಾಗಿವೆ. ವ್ಯಾಪಾರದಲ್ಲಿ ಡಿಜಿಟಲೀಕರಣ ಒಳ್ಳೆಯದೇ. ಆದರೆ ಅವರ ಸೇವೆಗಳನ್ನು ಬಳಸಿಕೊಳ್ಳುವ ಮುನ್ನ ವ್ಯಾಪಾರಸ್ಥರು ಹಲವು ವಿಚಾರಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. 

ಭಾರತದ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಂಸ್ಥೆಗಳು ಇಂಟರ್‌ನೆಟ್‌ ಮತ್ತು ಇ-ಕಾಮರ್ಸ್‌ ಸೌಲಭ್ಯಗಳ ನೆರವು ಪಡೆದುಕೊಳ್ಳಬೇಕು. ಇದರಿಂದಾಗಿ ಗ್ರಾಹಕರ ಸಂಖ್ಯೆ ಹೆಚ್ಚುತ್ತದೆ ಎನ್ನುವುದು ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ತಜ್ಞರ ವಾದ. ಭಾರತದ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಂಸ್ಥೆಗಳಲ್ಲಿ ಇದುವರೆಗೆ 26 ದಶಲಕ್ಷ ಸಂಸ್ಥೆಗಳು ಗೂಗಲ್‌ ಆ್ಯಪ್‌ಗ್ಳ ನೆರವಿನಿಂದ ಡಿಜಿಟಲ್‌ ವ್ಯವಹಾರ ನಡೆಸಲು ಸಾಧ್ಯವಾಗಿದೆ. ಸುಮಾರು 10 ಲಕ್ಷ ಸಂಸ್ಥೆಗಳು ಗೂಗಲ್‌ನ “ಮೈ ಬಿಸಿನೆಸ್‌’ ಸೌಲಭ್ಯ ಬಳಸಿ ಜಾಲತಾಣಗಳನ್ನು ನಿರ್ಮಿಸಿಕೊಂಡಿವೆ, ಎಂದು ಗೂಗಲ್‌ ಸಂಸ್ಥೆಯ ವಕ್ತಾರರು ಹೇಳಿಕೊಂಡಿದ್ದಾರೆ. ಇ- ಕಾಮರ್ಸ್‌ ದೈತ್ಯ ಅಮೆಜಾನ್‌ 100 ಕೋಟಿ ಡಾಲರ್‌ಗಳನ್ನು ಖರ್ಚು ಮಾಡಿ, ಭಾರತದ ಸಣ್ಣ ಮತ್ತು ಮಧ್ಯಮ ವಾಣಿಜ್ಯ ಸಂಸ್ಥೆಗಳಿಗೆ ಅಗತ್ಯ ಡಿಜಿಟಲ್‌ ತಂತ್ರಜ್ಞಾನ ಮತ್ತು ಸೇವೆಗಳನ್ನು ನೀಡುವುದಾಗಿ ಘೋಷಿಸಿದೆ.

ಇದರಿಂದಾಗಿ 2025ರ ಹೊತ್ತಿಗೆ ಈ ಸಂಸ್ಥೆಗಳು ಭಾರತದಿಂದ ಸುಮಾರು 1000 ಕೋಟಿ ಡಾಲರ್‌ ಮೌಲ್ಯದ ಉತ್ಪನ್ನಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡುವ ಸಾಮರ್ಥ್ಯವನ್ನು ಹೊಂದಲಿವೆ ಎನ್ನುವುದು ಅಮೆಜಾನ್‌ ಅಭಿಪ್ರಾಯ. ಬಹುರಾಷ್ಟ್ರೀಯ ಸಂಸ್ಥೆ ವಾಲ್‌ಮಾರ್ಟ್‌ ಕೂಡ, ಭಾರತದ 50,000 ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಡಿಜಿಟಲ್‌ ತಂತ್ರಜ್ಞಾನ ಮತ್ತು ಸೌಲಭ್ಯಗಳನ್ನು ನೀಡುವ ಕುರಿತು ತರಬೇತಿ, ಮಾರ್ಗದರ್ಶನ ನೀಡಿ, ಈ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲು ಸಾಧ್ಯವಾಗುವಂತೆ ವ್ಯವಸ್ಥೆ ರೂಪಿಸುತ್ತಿದೆ. ಇವೆಲ್ಲಾ ಒಳ್ಳೆಯ ಬೆಳವಣಿಗೆಯೇ… ಆದರೆ ಇವುಗಳ ಮೊರೆ ಹೋಗುವ ಮುನ್ನ ವ್ಯಾಪಾರಸ್ಥರು ಹಲವು ವಿಚಾರಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.

ಬಹುರಾಷ್ಟ್ರೀಯ ಕಂಪನಿಗಳ ನೆರವು
ಗೂಗಲ್‌, ವಾಲ್‌ಮಾರ್ಟ್‌, ಫೇಸ್‌ಬುಕ್‌, ಡೆಲ್‌, ಸಿಸ್ಕೋ, ಅಮೆಜಾನ್‌ ಹೀಗೆ ಸಾಲು ಸಾಲಾಗಿ ಬಹುರಾಷ್ಟ್ರೀಯ ಸಂಸ್ಥೆಗಳು ಭಾರತದ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಂಸ್ಥೆಗಳಿಗೆ ನೆರವು ನೀಡಲು ಮುಂದಾಗುತ್ತಿರುವೆ. ಇದು, ಡಿಜಿಟಲ್‌ ಸಾಕ್ಷರತೆ ದೃಷ್ಟಿಯಿಂದ ಸ್ವಾಗತಾರ್ಹ. ಆದರೆ, ಈ ರೀತಿ ನೆರವು ಪಡೆದ ಎಲ್ಲಾ ಭಾರತೀಯ ಸಂಸ್ಥೆಗಳಿಗೆ ದೇಶ ವಿದೇಶಗಳಲ್ಲಿ ಹೆಚ್ಚು ಗ್ರಾಹಕರು ಸಿಗುತ್ತಾರೆ ಎನ್ನಲು ಸಾಧ್ಯವಿಲ್ಲ. ನಿಮ್ಮ ಉತ್ಪನ್ನಗಳು ಹೆಚ್ಚು ಗ್ರಾಹಕರನ್ನು ತಲುಪಲು, ಅವರ ಜಾಹೀರಾತು ಸೇವೆಯನ್ನು ಬಳಸಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲು, ಆ ಸಂಸ್ಥೆಯ ಪರಿಣತರ ಸಹಾಯವನ್ನೂ ಪಡೆಯಬಹುದು. ಗ್ರಾಹಕರಿಗೆ ಯಾವ ಉತ್ಪನ್ನಗಳು ಬೇಕಾಗಿವೆ ಎಂದು ತಿಳಿಸುವ ಡೇಟಾ ವಿಶ್ಲೇಷಣೆ ಸೇವೆ, ಮತ್ತಿತರ ಮೌಲ್ಯಾಧಾರಿತ ಸೇವೆಗಳನ್ನು ಸಣ್ಣ ಮತ್ತು ವåಧ್ಯಮ ವಾಣಿಜ್ಯ ಸಂಸ್ಥೆಗಳಿಗೆ ಮಾರಾಟ ಮಾಡುವುದರ ಮೂಲಕ ಹಣ ಗಳಿಸುವ ಉದ್ದೇಶವೂ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಇರುತ್ತದೆ.

ಸೂಕ್ತ ಬೆಲೆ ನಿಗದಿ ಪಡಿಸಿ
ಇ-ಕಾಮರ್ಸ್‌ ಸಂಸ್ಥೆಗಳ ಜಾಲತಾಣಗಳಲ್ಲಿ ಉತ್ಪನ್ನ ಅಥವಾ ಸೇವೆಗಳನ್ನು ಮಾರಾಟ ಮಾಡಲು ನೋಂದಣಿ ಮಾಡಿಕೊಳ್ಳುವುದು ಸುಲಭ. ಆದರೆ, ಮಾರಾಟವಾದ ಉತ್ಪನ್ನಗಳ ಮೌಲ್ಯದಲ್ಲಿ ಇ-ಕಾಮರ್ಸ್‌ ಸಂಸ್ಥೆಗೆ ನೀಡಬೇಕಾದ ಕಮಿಷನ್‌, ಸೇವಾ ಶುಲ್ಕಗಳನ್ನು ಕಳೆದು ಎಷ್ಟು ಲಾಭ ಪಡೆಯಬಹುದು ಎಂಬುದರ ಬಗ್ಗೆ ವ್ಯಾಪಾರಸ್ಥರು, ಕೈಗಾರಿಕಾ ಸಂಸ್ಥೆಗಳು ಎಚ್ಚರಿಕೆ ವಹಿಸಬೇಕಾಗುತ್ತದೆ. ಹೆಚ್ಚು ವಹಿವಾಟು ನಡೆಸುವ ಉದ್ದೇಶದಿಂದ ಮೆಗಾ ಸೇಲ್‌ಗ‌ಳನ್ನು ಇ-ಕಾಮರ್ಸ್‌ ಸಂಸ್ಥೆಗಳು ಭಾರತದಲ್ಲಿ ಕೂಡಾ ನಡೆಸುತ್ತವೆ. ಆ ಸಮಯದಲ್ಲಿ ಹೆಚ್ಚಿನ ರಿಯಾಯಿತಿಯನ್ನು ಘೋಷಿಸುವುದು ಭಾರತದ ವ್ಯಾಪಾರಸ್ಥರಿಗೆ ಅನಿವಾರ್ಯವಾಗಬಹುದು. ಉತ್ಪನ್ನ ಮಾರಾಟದ ಜೊತೆಗೆ ಗ್ರಾಹಕರಿಗೆ ಉತ್ಪನ್ನವನ್ನು ತಲುಪಿಸಲು ಆಗುವ ವೆಚ್ಚವನ್ನು ಕೂಡಾ ಭಾರತದ ವಾಣಿಜ್ಯ ಸಂಸ್ಥೆಗಳು ನೀಡಬೇಕು ಎಂದು ಕೆಲವು ಬಾರಿ ಇ-ವಾಣಿಜ್ಯ ಸಂಸ್ಥೆಗಳು ಒತ್ತಾಯಿಸಿದ ಪ್ರಸಂಗಗಳಿವೆ. ಇನ್ನು ಯಾವುದೇ ಕಾರಣಕ್ಕಾಗಿ ಗ್ರಾಹಕ ತಾನು ಖರೀದಿಸಿದ ಉತ್ಪನ್ನವನ್ನು, ನಿರ್ದಿಷ್ಟ ಅವಧಿಯಲ್ಲಿ ಹಿಂತಿರುಗಿಸಿದರೆ, ಅದಕ್ಕೆ ಪ್ರತಿಯಾಗಿ ಹೊಸ ಉತ್ಪನ್ನವನ್ನು ನೀಡುವುದು ಅಥವಾ ಗ್ರಾಹಕನಿಗೆ ಹಣ ಹಿಂತಿರುಗಿಸುವುದು ಭಾರತದ ವಾಣಿಜ್ಯ ಸಂಸ್ಥೆಯ ಹೊಣೆಯಾಗುತ್ತದೆ. ಇಂಥ ಎಲ್ಲಾ ನೇರ ಮತ್ತು ಪರೋಕ್ಷ ವೆಚ್ಚಗಳನ್ನು ಕಳೆದು, ಲಾಭ ಗಳಿಸಲು ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆ ನಿಗದಿಪಡಿಸಬೇಕಾಗುತ್ತದೆ.

ಷರತ್ತುಗಳಿಗೆ ಬಂಧಿಯಾಗದಿರಿ
ಇ- ಕಾಮರ್ಸ್‌ ಜಾಲತಾಣದ ಮೂಲಕ ಪಡೆದ ಗ್ರಾಹಕರನ್ನು ವ್ಯಾಪಾರಸ್ಥರು ನೇರವಾಗಿ ಸಂಪರ್ಕಿಸುವ ಹಾಗಿಲ್ಲ. ಇನ್ನು ನೇರವಾಗಿ ಇ- ಕಾಮರ್ಸ್‌ ಸಂಸ್ಥೆಯ ಗಮನಕ್ಕೆ ತಾರದೆ ತಾವೇ ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನ ಅಥವಾ ಸೇವೆಗಳನ್ನು ಒದಗಿಸುವುದನ್ನು ಮಾಡುವ ಹಾಗೇ ಇಲ್ಲ. ಗ್ರಾಹಕರು ಕೊಡುವ ರೇಟಿಂಗ್‌ ಆಧಾರದ ಮೇಲೆ ಆಯಾ ಉತ್ಪನ್ನ ಅಥವಾ ಸೇವೆಯ ಮಾರಾಟವನ್ನು ಮುಂದುವರಿಸುವ ಅಥವಾ ನಿಲ್ಲಿಸುವ ಹಕ್ಕನ್ನು ಇ-ಕಾಮರ್ಸ್‌ ಸಂಸ್ಥೆಗಳು ಹೊಂದಿರುತ್ತವೆ. ಹೀಗಾಗಿ, ಇ- ಕಾಮರ್ಸ್‌ ಸಂಸ್ಥೆಗಳ ಮೂಲಕ ತಮ್ಮ ಉತ್ಪನ್ನ ಅಥವಾ ಸೇವೆಗಳನ್ನು ಮಾರಾಟ ಮಾಡಲು ಇಚ್ಛಿಸುವ ಭಾರತದ ಸಣ್ಣ ಮತ್ತು ಮಧ್ಯಮ ವಾಣಿಜ್ಯ ಸಂಸ್ಥೆಗಳು, ಮೊದಲು ಇ-ಕಾಮರ್ಸ್‌ ಸಂಸ್ಥೆಯ ನಿಯಮಗಳು, ಷರತ್ತು ಮತ್ತು ಕಮಿಷನ್‌ ಮೊದಲಾದ ವಿಷಯಗಳ ಬಗ್ಗೆ ತಿಳಿದುಕೊಂಡು ನಂತರ ಮುಂದುವರಿಯುವುದು ಸೂಕ್ತ.

-ಉದಯಶಂಕರ ಪುರಾಣಿಕ

ಟಾಪ್ ನ್ಯೂಸ್

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.