ಮಕ್ಕಳಿಗಾಗಿ ಸಾಲ ಮಾಡಬೇಕೇ ಬೇಡವೇ?


Team Udayavani, Nov 26, 2018, 6:00 AM IST

shutterstock71287714.jpg

ಮಕ್ಕಳನ್ನು ಜಾಸ್ತಿ ಓದಿಸಬೇಕು, ಸಾಧ್ಯವಾದರೆ, ವಿದೇಶದಲ್ಲೇ ಓದಿಸಬೇಕು ಎಂಬ ಹಿರಿಯಾಸೆ ಹೆಚ್ಚಿನ ಪೋಷಕರಿಗೆ ಇರುತ್ತದೆ. ಆದರೆ, ಶಿಕ್ಷಣ ವೆಚ್ಚ ದುಬಾರಿಯಾಗಿರುವುದರಿಂದ, ಎಲ್ಲ ಖರ್ಚು ಹೊಂದಿಸುವ ತ್ರಾಣವಿಲ್ಲದೆ ಕಂಗಾಲಾಗುತ್ತಾರೆ. ಅಂಥ ಸಂದರ್ಭದಲ್ಲಿ ನೆರವಾಗುವುದೇ ಎಜುಕೇಷನ್‌ ಲೋನ್‌. ಮಕ್ಕಳ ಶಿಕ್ಷಣಕ್ಕೆ, ಅವರ ಭವಿಷ್ಯ ರೂಪಿಸಲಿಕ್ಕೆ ಹೀಗೆ ಸಾಲ ಮಾಡುವುದರಿಂದ ಇರುವ ಸಾಧಕ-ಬಾಧಕಗಳ ಕುರಿತು ಇಲ್ಲಿ ವಿವರಣೆಯಿದೆ. 

ಮಕ್ಕಳಿಗಾಗಿ ಆಸ್ತಿ ಕೂಡಿಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಅನ್ನೋ ಮಾತಿದೆ. ಆದರೆ, ಯಾರೂ ಹಣ ಆಸ್ತಿ ಕೂಡಿಡುವುದನ್ನು ಮಾತ್ರ ಬಿಡುವುದಿಲ್ಲ.  ತಮ್ಮ ಪುತ್ರ ಪೌತ್ರರಿಗಾಗಿ ಹಣ, ಆಸ್ತಿ ಕೂಡಿಡುವುದು ನಮ್ಮ ಸುತ್ತಲ ಬಹುತೇಕರ ಮನಸ್ಥಿತಿಯಲ್ಲಿ ಸ್ಥಾಪಿತವಾಗಿರುವ ಸಂಗತಿ. ಹೀಗೆ ಮಾಡುವುದು ತಪ್ಪೆಂದು ಹೇಳುತ್ತಿಲ್ಲ.  ಆದರೆ ನಾವಿಲ್ಲಿ ಹೇಳಲಿರುವ ಸಂಗತಿ ಅದಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ವೃತ್ತಿಪರ ಕೋರ್ಸುಗಳಿಗಾಗಿ, ಉನ್ನತ ವ್ಯಾಸಂಗಕ್ಕಾಗಿ, ವಿದೇಶದಲ್ಲಿನ ಓದಿಗಾಗಿ ಮಕ್ಕಳಿಗೆ ವ್ಯಯಿಸುವ ಹಣವಿದೆಯಲ್ಲ, ಅದಕ್ಕೆ ಸಾಲಸೌಲಭ್ಯವನ್ನು ಖಾಸಗಿ ಸೇರಿದಂತೆ ಅನೇಕ ರಾಷ್ಟ್ರೀಕೃತ ಬ್ಯಾಂಕುಗಳು ನೀಡುತ್ತಿವೆ.  ಒಂದೊಂದು ಬ್ಯಾಂಕಿನಲ್ಲೂ ಒಂದು ವಿಶಿಷ್ಟತೆ ಇದೆ. ಬೇರೆ ಸಾಲಗಳಿಗೆ ಹೋಲಿಸಿದಲ್ಲಿ ಬಡ್ಡಿದರವೂ ಕಡಿಮೆಯೇ ಎನ್ನಬಹುದು.  ಇಂತಹ ಸಾಲಗಳನ್ನು ಮಾಡುವುದರಿಂದ ಏನು ಪ್ರಯೋಜನ ಅಂದಿರ? ಅಂಥ ಕುತುಹೂಲದ ಪ್ರಶ್ನೆಗೆ ಇಲ್ಲಿದೆ ಉತ್ತರ.

ಯಾರಿಗೆ ಅಗತ್ಯ?
ಇಂದು ವಿದ್ಯಾಭ್ಯಾಸದ ವೆಚ್ಚ ತುಂಬಾ ತುಟ್ಟಿಯಾಗಿರುವುದು ಎಲ್ಲರಿಗೂ ಗೊತ್ತು. ಸ್ನಾತಕ ಅಥವಾ ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್‌, ಡಿಪ್ಲೊಮಾ… ಹೀಗೆ ಅನೇಕ ಬಗೆಯ ವಿದ್ಯಾಭ್ಯಾಸ ಮಾಡುವವರಿಗೆ ಹಣಕಾಸಿನ ಸಂಪನ್ಮೂಲ ಇರಲೇಬೇಕು. ಇಲ್ಲವಾದಲ್ಲಿ ಅಂದುಕೊಂಡಿದ್ದನ್ನು ಪಡೆಯಲು ಸಾಧ್ಯವಿಲ್ಲ.  ಎಲ್ಲರೂ ಹುಟ್ಟಿನಿಂದ ಶ್ರೀಮಂತರಾಗಿರುವುದಿಲ್ಲ, ಪೋಷಕರೂ ಅವರದೇ ಸಮಸ್ಯೆಗಳಲ್ಲಿರುತ್ತಾರೆ. ಹೀಗಿರುವುದರಿಂದಲೇ, ವಿದ್ಯಾರ್ಜನೆಗೆ ಸಾಲ ಕೊಡುವ ಪರಿಕಲ್ಪನೆ ಬಹಳ ವರ್ಷಗಳ ಹಿಂದೆಯೇ ಜಾರಿಗೆ ಬಂದಿದೆ.

ತಮ್ಮ ಮಕ್ಕಳು ವಿದೇಶಿ ಯುನಿವರ್ಸಿಟಿಯಲ್ಲಿ ಓದಬೇಕು, ಪೋಸ್ಟ್‌ ಗ್ರಾಜ್ಯುಯೇಶನ್‌ ಮಾಡಬೇಕು, ಉನ್ನತ ಶಿಕ್ಷಣವನ್ನು ಹೆಸರಾಂತ ಯುನಿವರ್ಸಿಟಿಯಲ್ಲಿ ಪಡೆಯಬೇಕು ಎಂಬ ಮಹದಾಸೆ ಬಹುತೇಕ ಎಲ್ಲರ ಪೋಷಕರ ಮನದಲ್ಲಿ ಇರುತ್ತದೆ. ಅದನ್ನು ನೀಗಿಸುವ ನಿಟ್ಟಿನಲ್ಲಿ ಸಹಾಯಕವಾಗುವುದು ಎಜ್ಯುಕೇಶನ್‌ ಲೋನ್‌ ಎಂಬ ಮಂತ್ರದಂಡ.  

ಸೆಕ್ಯುರಿಟಿ ಇಲ್ಲ
ನಮ್ಮ ದೇಶದಲ್ಲಿ ಬಹುತೇಕ ಎಲ್ಲ ಸಾರ್ವಜನಿಕ ವ್ಯವಹಾರದ ಬ್ಯಾಂಕುಗಳು ಈ ಸಾಲವನ್ನು ಕೊಡುತ್ತವೆ. ನಾಲ್ಕು ಲಕ್ಷದವರೆಗಿನ ಸಾಲವನ್ನು ಪಡೆಯಲು ಯಾವುದೇ ಸೆಕ್ಯುರಿಟಿ ಅಥವಾ ಮಾರ್ಜಿನ್‌ ಮನಿ ಅಗತ್ಯವಿರುವುದಿಲ್ಲ. ನಾಲ್ಕು ಲಕ್ಷದಿಂದ ಮೇಲ್ಪಟ್ಟ ಮೊತ್ತದ ಸಾಲವಾಗಿದ್ದಲ್ಲಿ ಥರ್ಡ್‌ ಪಾರ್ಟಿ ಗ್ಯಾರಂಟಿ ಅಗತ್ಯವಿರುತ್ತದೆ.  ದೇಶೀಯವಾಗಿ ಯಾವುದೇ ಯೂನಿವರ್ಸಿಟಿ ಅಥವಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಲು ಸಾಲ ಬೇಕಿದ್ದಲ್ಲಿ ಹತ್ತುಲಕ್ಷ ರೂ.ವರೆಗಿನ ಸಾಲ ಪಡೆಯುವುದಕ್ಕೆ ಅವಕಾಶವಿರುತ್ತದೆ. ಒಂದು ವೇಳೆ ದೇಶದಲ್ಲಿ ವಿದ್ಯಾಭ್ಯಾಸ ಮಾಡುವುದಕ್ಕೆ ಸಾಲದ ಅಗತ್ಯವಿದ್ದರೆ ರೂ. 30 ಲಕ್ಷದವರೆಗಿನ ಮೊತ್ತದ ಸಾಲ ಪಡೆಯುವುದಕ್ಕೆ ಅವಕಾಶವಿರುತ್ತದೆ. ಆದರೆ, ಒಂದೊಂದು ಬ್ಯಾಂಕಿನಲ್ಲಿ ಒಂದೊಂದು ಬಗೆಯ ನಿಯಮಾವಳಿ ಮತ್ತುಬಡ್ಡಿದರಗಳಿವೆ. ವೃತ್ತಿಪರ ಕೋರ್ಸ್‌ ಹೊರತುಪಡಿಸಿ ಇನ್ನುಳಿದ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ದ್ವಿಚಕ್ರ ವಾಹನ ಕೊಳ್ಳಲು ರೂ. 50,000-00 ವರೆಗಿನ ಮೊತ್ತವನ್ನು ಈ ಸಾಲಸೌಲಭ್ಯದಡಿಯಲ್ಲಿ ಪಡೆಯಬಹುದು.  ವಿದೇಶದಲ್ಲಿಯೇ ಓದುವುದಾದರೆ ವಿದೇಶಪ್ರಯಾಣಕ್ಕೆ ಹೋಗಲು ತಗಲುವ ವೆಚ್ಚವನ್ನೂ ಈ ಸಾಲದಲ್ಲಿ ಸೇರಿಸಿಕೊಳ್ಳಬಹುದು. 

ಇವೆಲ್ಲ ಸೇರಿಸಿ
ಉದ್ದೇಶಿತ ಕೋರ್ಸನ್ನು ಪೂರ್ಣಗೊಳಿಸಲು ಬೇಕಾಗುವ ಎಲ್ಲ ಖರ್ಚುಗಳು, ಅಧ್ಯಯನ ಪ್ರವಾಸ, ಥೀಸಿಸ್‌ ಇಂಥವೇ ವಿಚಾರಗಳಿಗೆ ತಗಲುವ ಖರ್ಚನ್ನು ಕೂಡ ಸಾಲದ ಬೇಡಿಕೆಯಲ್ಲಿ ಸೇರಿಸಿಕೊಳ್ಳಬಹುದು. ಬಹು ಮುಖ್ಯವಾಗಿ, ವಿವಾಹಿತರ ಪೈಕಿ ಗಂಡ ಸಾಲ ಪಡೆಯುವುದಾದರೆ ಆತನ ಉದ್ಯೋಗಸ್ಥ ಪತ್ನಿ ಸಹ-ಸಾಲದಾರಳಾಗಿ ಸಾಲ ಪಡೆಯುವುದಕ್ಕೆ ಸಹಕಾರಿಯಾಗಬಹುದು.  ಸಾಲದ ಮೊತ್ತವನ್ನು ನೇರವಾಗಿ ವಿದ್ಯಾಸಂಸ್ಥೆಗೆ ಆಯಾ ಕಾಲಮಿತಿಯಲ್ಲಿ ಡಿ.ಡಿ. ಅಥವಾ ಆನ್‌ ಲೈನ್‌ ಪೇಮೆಂಟ್‌ ಮೂಲಕ ಬ್ಯಾಂಕ್‌ಗಳು ಪಾವತಿಸುತ್ತವೆ.  ವಿದ್ಯಾರ್ಥಿಯ ಕೈಗೆ ಅಥವಾ ಆತನ ಖಾತೆಗೆ ಸಾಲದ ಹಣ ಜಮಾವಣೆ ಆಗುವುದಿಲ್ಲ. 

ಎಜುಕೇಶನ್‌ ಲೋನ್‌ – ಲಾಭಗಳೇನು?
ವಿದ್ಯಾರ್ಥಿ ತನ್ನ ವಿದ್ಯಾರ್ಜನೆಯ ಅವಧಿಯಲ್ಲಿ ಬ್ಯಾಂಕ್‌ ಸಾಲ ಮಾಡಿ ಓದುವವನಾಗಿದ್ದರೆ ಆತನಲ್ಲಿ ಜವಾಬ್ದಾರಿ ಮೂಡುತ್ತದೆ.  ಹೀಗಾಗಿ, ಬೇಕಾಬಿಟ್ಟಿಯಾಗಿ ಕಾಲ ಕಳೆಯುವುದಿಲ್ಲ. ತಾನು ಓದಿದ ನಂತರ ಉದ್ಯೋಗಸ್ಥನಾಗಿ ಸಾಲ ತೀರುವಳಿ ಮಾಡಬೇಕು ಎಂಬ ಹೊಣೆಗಾರಿಕೆ ಆತನಲ್ಲಿ ಮೂಡುವುದರ ಜೊತೆಗೆ, ತಾನು ಸರಿದಾರಿಯಲ್ಲಿ ಮುನ್ನುಗ್ಗಬೇಕು ಎಂಬ ಮೂಗುದಾರವಾಗಿ ಈ ವಿದ್ಯಾಸಾಲ ಕೆಲಸ ಮಾಡುತ್ತದೆ. ಪ್ರತಿವರ್ಷ ತಾನು ಪಡೆದ ಅಂಕಗಳ ಮಾಹಿತಿಯನ್ನು ಸಾಲದಾತ ಬ್ಯಾಂಕಿಗೆ ಸಲ್ಲಿಸುತ್ತಿರಬೇಕು ಜೊತೆಗೆ ಫೇಲ್‌ ಆಗುವಂತಿಲ್ಲ. ತೀರಾ ಕಡಿಮೆ ಅಂಕಗಳನ್ನು ಪಡೆಯುವಂತೆಯೂ ಇಲ್ಲ. ಆದ್ದರಿಂದ ಎಜುಕೇಷನ್‌ ಲೋನ್‌ ಪಡೆದವರು ಆತ ಹೆಚ್ಚು ಅಂಕ ಪಡೆಯಲು ಪ್ರಯತ್ನಗಳನ್ನು ಹಾಕುತ್ತಲೇ ಇರುತ್ತಾರೆ. 

ಅಪ್ಪನ ದುಡಿಮೆಯ ದುಡ್ಡಿನಲ್ಲಿ ಓದುವ ಬಹುತೇಕ ಮಕ್ಕಳು ದುಡಿಮೆಯ ಕಷ್ಟದ ಅರಿವಿಲ್ಲದವರಾಗಿರುತ್ತಾರೆ ಮತ್ತು ಅವರು ಅಪ್ಪನ ಹಣವನ್ನು ದುಂದುಗಾರಿಕೆಯಲ್ಲಿ ವುÂಸಿ ಓದಿನಲ್ಲೂ ಂದುಳಿದು ಉದ್ಯೋಗವನ್ನೂ ಪಡೆಯಲಾಗದೇ ನಿರರ್ಥಕ ವ್ಯಕ್ತಿಗಳಾಗುತ್ತಾರೆ.  

ಮರುಪಾವತಿ ಹೀಗೆ
ಸಾಲ ಪಡೆದು ಓದಿದ ನಂತರದಲ್ಲಿ ಅಂದರೆ ಉದ್ದೇಶಿತ ಪದವಿ ಪಡೆದ ಆರು ತಿಂಗಳ ನಂತರದಲ್ಲಿ ಸಾಲದ ಮರುಪಾವತಿ ಆರಂಭವಾಗುತ್ತದೆ. ಹನ್ನೆರಡು ವರುಷಗಳಲ್ಲಿ ಸಾಲವನ್ನು ಸಂಪೂರ್ಣವಾಗಿ ಚುಕ್ತಾ ಮಾಡಬೇಕಾಗುತ್ತದೆ.  ಸಾಲದ ಅಸಲು ಮರುಪಾವತಿ ಆರಂಭ ಮಾಡುವ ತನಕದ ಅವಧಿಗೆ ಬಡ್ಡಿಯನ್ನು ಮಾತ್ರ ವಿಧಿಸಲಾಗುತ್ತದೆ. ಆ ಬಡ್ಡಿಯನ್ನು ಕೂಡ ಪದವಿ ಮುಗಿಸಿ ಉದ್ಯೋಗ ಪಡೆದ ನಂತರದಲ್ಲಿ ಪಾವತಿ ಮಾಡಬಹುದು. ಸಾಲದ ಮೇಲಿನ ಬಡ್ಡಿ ಕೂಡ ಬೇರೆ ಸಾಲಗಳಿಗೆ ಹೋಲಿಸಿದರೆ ಕಡಿಮೆ ಎನ್ನುವಷ್ಟು ಇರುತ್ತದೆ. ಇದು ಬ್ಯಾಂಕಿನಿಂದ ಬ್ಯಾಂಕಿಗೆ ಭಿನ್ನವಾಗಿರುತ್ತದೆ.  

ವಿಮಾ ಸೌಲಭ್ಯವಿದೆಯೇ?
ಹೌದು, ಎಲ್ಲ ಸಾಲಗಳಿಗೂ ವಿಮಾ ಕವರೇಜ್‌ ಮಾಡಿಸುವುದು ಕಡ್ಡಾಯ. ಅದರಂತೆ ಈ ಸಾಲಕ್ಕೂ ವಿಮೆ ಮಾಡಿಸಬೇಕಾಗುತ್ತದೆ. ಅದಕ್ಕೆ ತಗಲುವ ಪ್ರೀಮಿಯಂ ಮೊತ್ತವನ್ನು ಸಾಲಗಾರ ಕಟ್ಟಬೇಕಾಗುತ್ತದೆ.  ಒಂದೊಮ್ಮೆ ಸಾಲ ಪಡೆದ ವ್ಯಕ್ತಿ ಮರುಪಾವತಿಯ ಅವಧಿಗೆ ಮುನ್ನ ಮರಣಿಸಿದಲ್ಲಿ ವಿಮಾಸಂಸ್ಥೆ ಆ ಸಾಲದ ಬಾಕಿಮೊತ್ತವನ್ನು ಪಾವತಿಸುತ್ತದೆ ಮತ್ತು ಅವಲಂಬಿತರಿಗೆ ಯಾವುದೇ ಹೊರೆ ಬೀಳುವುದಿಲ್ಲ. 

ಕೇಂದ್ರ ಸರಕಾರದ ಬಡ್ಡಿ ಸಬ್ಸಿಡಿ ಯೋಜನೆ
ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಸಹಾಯಧನ ಯೋಜನೆ ರೂಪಿತವಾಗಿದ್ದು ವಾರ್ಷಿಕ  ಗರಿಷ್ಠ 4.50 ಲಕ್ಷ ಒಳಗಿನ ವರಮಾನ ಹೊಂದಿರುವ ಪೋಷಕರ ಮಕ್ಕಳಿಗೆ ಈ ಸೌಲಭ್ಯ ಬಳಸಿಕೊಳ್ಳಬಹುದು.   ಇದು ವಿದೇಶೀಯವಾಗಿ ಪಡೆಯಲಾಗುವ ವಿದ್ಯಾಸಾಲಕ್ಕೆ ಮಾತ್ರ ಅನ್ವಯವಾಗುವುದಾಗಿದ್ದು  ಈ ಸೌಲಭ್ಯವನ್ನು ಮಧ್ಯದಲ್ಲಿ ಕೋರ್ಸು ಕೈಬಿಡುವ ವಿದ್ಯಾರ್ಥಿಗಳಿಗೆ ಕೊಡಲಾಗುವುದಿಲ್ಲ.  ಬಡ್ಡಿ ಸಹಾಯಧನವನ್ನು ಸಾಲದಾತ ಬ್ಯಾಂಕಿನವರು ಅವರದೇ ಆದ ವಿಧಾನದಲ್ಲಿ ಅರ್ಧವರ್ಷ ಅಥವಾ ಒಂದು ವರ್ಷದ ಪಾಳಿಯಲ್ಲಿ ಸಾಲಪಡೆದ ವ್ಯಕ್ತಿಯ ಖಾತೆಗೆ ಜಮಾ ಮಾಡುತ್ತಾರೆ.   ಕೋರ್ಸ್‌ ಮುಗಿಸಿದ ಹನ್ನೆರಡು ತಿಂಗಳ ನಂತರದಲ್ಲಿ ಅಥವಾ ಕೆಲಸ ಪಡೆದ ಆರು ತಿಂಗಳ ನಂತರದಲ್ಲಿ ಯಾವುದು ಮೊದಲು ಘಟಿಸುವುದೋ ಆಗ ಸಬ್ಸಿಡಿಯನ್ನು ಕೊಡಲಾಗುವುದು. 

ಸಾಲದ ಹಣವನ್ನು ಹೂಡಿಕೆಗಳಲ್ಲಿ ತೊಡಗಿಸುವುದು ಸೂಕ್ತವೇ?
ಹೀಗೊಂದು ಯೋಚನೆ ನಿಮ್ಮಲ್ಲಿದ್ದರೆ ತಪ್ಪಲ್ಲ. ಮಕ್ಕಳ ಓದಿಗೆ ಲಕ್ಷಗಟ್ಟಲೆ ಹಣವನ್ನು ಒಂದೇ ಬಾರಿಗೆ ತೆರಬೇಕಾಗುತ್ತದೆ. ನಿಮ್ಮ ಬಳಿ ಅಷ್ಟು ಹಣವಿದ್ದರೂ ಅದನ್ನು ನೇರವಾಗಿ ತೆರದೇ, ಮಕ್ಕಳ ಓದಿಗೆಂದು ಸಾಲವನ್ನು ಪಡೆದುಕೊಂಡು, ಆ ಬಾಬಿ¤ಗೆಂದು ನೀವು ಉಳಿತಾಯ ಮಾಡಿರಬಹುದಾದ ಹಣವನ್ನು ಬೇರೆ ಹೂಡಿಕೆಗಳಲ್ಲಿ ತೊಡಗಿಸುವುದು ಜಾಣ ನಿರ್ಧಾರ.  

ಉದಾಹರಣೆಗೆ ಹೇಳುವುದಾದರೆ, ನಿಮ್ಮ ಮಗನ ಓದಿಗೆ ಈಗ ತುರ್ತಾಗಿ 20 ಲಕ್ಷ ರೂ.ಗಳ ಅಗತ್ಯವಿದೆ ಅಂದುಕೊಳ್ಳಿ. ಅದು ನಿಮ್ಮ ಬಳಿ ಉಳಿತಾಯ ಖಾತೆಯಲ್ಲೋ, ಫಿಕ್ಸೆಡ್‌ ಡಿಪಾಜಿಟ್‌ ನಲ್ಲೋ ಇದೆ ಎಂದಿಟ್ಟುಕೊಳ್ಳಿ,. ಅದನ್ನು ಮುರಿಯದೇ ಆತನಿಗೆ ಎಜುಕೇಶನ್‌ ಲೋನ್‌ ಕೊಡಿಸಿ ನೋಡಿ. ಅದರ ಮರುಪಾವತಿ ಅವಧಿ ಕಳೆದಾಗ ಒಟ್ಟಾರೆಯಾಗಿ ಕಟ್ಟಬೇಕಾಗಬಹುದಾದ ಮೊತ್ತ  ಮತ್ತು ನೀವು ನಿಮ್ಮ ಬಳಿ ಉಳಿಸಿಕೊಂಡ ಇಪ್ಪತ್ತು ಲಕ್ಷ ರೂಪಾಯಿಗಳನ್ನು ಮ್ಯೂಚುವಲ್‌ ಫ‌ಂಡ್‌ ಅಥವಾ ಇನ್ನಾವುದೇ ಹೂಡಿಕೆಯಲ್ಲಿ ತೊಡಗಿಸಿದಾಗ ಕೊನೆಗೆ ಸಿಕ್ಕುವ ಉಪಲಬ್ಧವನ್ನು ಗಮನಿಸಿದರೆ ನೀವು ಸಾಕಷ್ಟು ಲಾಭವನ್ನೇ ಗಳಿಸಿರುತ್ತೀರಿ. ಮ್ಯೂಚುವಲ್‌ ಫ‌ಂಡ್‌, ಸ್ಥಿರಾಸ್ತಿ ಅಥವಾ ಇನ್ನಾವುದೇ ಸುರಕ್ಷಿತ ಹೂಡಿಕೆಯಲ್ಲಿ ನೀವು ಆ ದೊಡ್ಡ ಮೊತ್ತವನ್ನು ಹೂಡಿ, ಮಗನ ಅಥವಾ ಮಗಳ ವಿದ್ಯಾಭ್ಯಾಸಕ್ಕೆ ಸಾಲದ ಮೊರೆ ಹೋಗಿದ್ದೀರಿ ಎಂದಾದರೆ ನೀವು ಜಾಣ ನಿರ್ಧಾರ ತೆಗೆದುಕೊಂಡಿದ್ದೀರಿ ಎಂದರ್ಥ.

ಒಂದುವೇಳೆ ಮಗ ಅಥವಾ ಮಗಳ ವಿದ್ಯಾಭ್ಯಾಸ ಮುಗಿದಾದ ಮೇಲೆ ಸರಿಯಾದ ಉದ್ಯೋಗ ಸಿಕ್ಕದೇ ಆತ ಅಥವಾ ಆಕೆ ಸಾಲ ಮರುಪಾವತಿ ಮಾಡುವುದಕ್ಕೆ ಒದ್ದಾಡುತ್ತಿದ್ದರೆ, ಆಗ ನೀವು ಸಹಾಯಕ್ಕೆ ಹೋಗಿ, ನಿಮ್ಮ ಹೂಡಿಕೆಯಲ್ಲಿದ್ದ ಮೊತ್ತವನ್ನು ನಿಯೋಜಿಸಿ ಮಕ್ಕಳು ಸಾಲದಿಂದ ಹೊರಬರುವಲ್ಲಿ ಸಹಾಯ ಮಾಡಬಹುದು. 

ಈ ಸಾಲ ಪಡೆಯಲು ಯಾವ್ಯಾವ ದಾಖಲೆ ಬೇಕು?
–  ಫೋಟೋ ಇರುವ ಗುರುತಿನ ಚೀಟಿ, ( ಆಧಾರ್‌ ಕಾರ್ಡ್‌ ಪಾನ್‌ ಕಾರ್ಡ್‌ ವೋಟರ್ ಕಾರ್ಡ್‌)
– ವಾಸಸ್ಥಳದ ಪುರಾವೆಯನ್ನು ತೋರುವ ದಾಖಲೆ ಸಾಲ ಪಡೆಯುವ ವ್ಯಕ್ತಿ ವೇತನದಾರನಾಗಿದ್ದಲ್ಲಿ ಆತನ‌/ಆಕೆಯ 
 ಇತ್ತೀಚಿನ ಸಂಬಳ ಚೀಟಿ. 
– ಸಾಲ ಪಡೆಯುವ ವ್ಯಕ್ತಿ ವಿದ್ಯಾರ್ಥಿ ಆಗಿದ್ದು  ವ್ಯಕ್ತಿಗತ ವರಮಾನ ಇಲ್ಲದೇ ಇದ್ದಲ್ಲಿ ತಂದೆಯ ಅಥವಾ ತಾಯಿಯ ವರಮಾನದ ಪುರಾವೆ ( ಇನ್ಕಮ್‌ ಟ್ಯಾಕ್ಸ್‌ ರಿಟರ್ನ್) – ಇತ್ತೀಚಿನ ಎರಡು ವರುಷಗಳದ್ದು ಬೇಕು. 
 – ಉದ್ದೇಶಿತ ಕೋರ್ಸ್‌ ಮಾಡುವುದಕ್ಕೆ ಸಂಬಂಧಪಟ್ಟಂತೆ ಯುನಿವರ್ಸಿಟಿ ಅಥವಾ ವಿದ್ಯಾಸಂಸ್ಥೆ ನೀಡಿರುವ ಅಡ್ಮಿಶನ್‌ ಲೆಟರ್‌
 – ಭರ್ತಿ ಮಾಡಿದ ಸಾಲದ ಅರ್ಜಿ, ಇತ್ತೀಚಿನ ಎರಡು ಪಾಸ್‌ ಪೋರ್ಟ್‌ ಸೈಜಿನ ಭಾವಚಿತ್ರಗಳು,ವಿದ್ಯಾಭ್ಯಾಸಕ್ಕೆ ತಗಲುವ ವೆಚ್ಚದ ಕುರಿತಾದ ಸವಿವರ ಸ್ಟೇಟ್‌ ಮೆಂಟ್‌,  ವಿದ್ಯಾರ್ಥಿ ಮತ್ತು ಆತನ ಪೋಷಕರ ಪಾನ್‌, ಆಧಾರ್‌ ಕಾರ್ಡುಗಳು
 – ಸಾಲ ಪಡೆಯುವ ವಿದ್ಯಾರ್ಥಿಯ ಪೋಷಕರ ಆಸ್ತಿಮತ್ತು ಹೊಣೆಗಾರಿಕೆಗಳ ಸ್ಟೇಟ್‌ ಮೆಂಟ್‌, ಪೋಷಕರ ವರಮಾನದ ಪೂ›ಫ್

ಈ ವೆಚ್ಚಗಳನ್ನೂ ಸೇರ್ಪಡೆ ಮಾಡಬಹುದು?
    ಟ್ಯೂಷನ್‌ ಫೀ ಮತ್ತು ಕೋರ್ಸ್‌ ಫೀ (ಪೂರ್ಣವಾಗಿ)
    ಪರೀಕ್ಷಾ ಶುಲ್ಕ, ಲೈಬ್ರರಿ ಮತ್ತು ಲ್ಯಾಬೋರೇಟರಿ ಶುಲ್ಕ
    ಕಾಷನ್‌ ಡಿಪಾಜಿಟ್‌ (ಇದ್ದಲ್ಲಿ)
    ಬೇಕಾಗುವ ಪುಸ್ತಕಗಳ, ಉಪಕರಣಗಳು ಮತ್ತು ಇತರೆ ಪರಿಕರಗಳ ವೆಚ್ಚ

– ನಿರಂಜನ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.