ಮನೆಯಲ್ಲಿ ಕಸಬರಿಗೆ ಪ್ರದರ್ಶನ ಬೇಡ


Team Udayavani, Mar 5, 2018, 12:55 PM IST

kasa.jpg

ಕಸಬರಿಗೆ ಇತ್ಯಾದಿಗಳನ್ನು ಅವುಗಳ ಉಪಯೋಗ ಮುಗಿಯುತ್ತಿದ್ದಂತೆ ಒಂದೆಡೆ ಪೂರ್ತಿಯಾಗಿ ಯಾರಿಗೂ ಕಾಣಿಸದಂತೆ ಮುಚ್ಚಿಡುವುದು ಅಗತ್ಯವಾಗಿದೆ. ಈ ಕಸಬರಿಗೆ ಇತ್ಯಾದಿ ಮನೆಯೊಳಗೆಡೇ ಇರಲಿ, ಹೊರಗಡೆಯೇ ಇರಲಿ, ಬೇಕಾಬಿಟ್ಟಿಯಾಗಿ ಕಾಣುವಂತೆ ಇರಕೂಡದು. ಮನೆಯೊಳಗಿನವರಿಗೇ ಆಗಲಿ, ಮನೆಯ ಹೊರಗಿನವರಿಗೇ ಇರಲಿ ಕಾಣುವಂತೆಯೂ ಇರಬಾರದು.

ಮನೆಯಲ್ಲಿ ಕಸಬರಿಗೆಗಳಿರದೆ, ನೆಲ ಒರೆಸುವ ಮೇಜು, ಟೇಬಲ್‌, ಊಟದ ಟೇಬಲ್‌ ಒರೆಸುವ ಬಟ್ಟೆ ತುಂಡುಗಳೇ ಇರದೆ ಯಾರ ಮನೆಯೂ ಇರದು. ಆದರೆ ಈ ಕಸಬರಿಗೆ ಇತ್ಯಾದಿಗಳನ್ನು ಅವುಗಳ ಉಪಯೋಗ ಮುಗಿಯುತ್ತಿದ್ದಂತೆ ಒಂದೆಡೆ ಪೂರ್ತಿಯಾಗಿ ಯಾರಿಗೂ ಕಾಣಿಸದಂತೆ ಮುಚ್ಚಿಡುವುದು ಅವಶ್ಯವಾಗಿದೆ. ಈ ಕಸಬರಿಗೆ ಇತ್ಯಾದಿಗಳು ಮನೆಯೊಳಗೆಡೇ ಇರಲಿ, ಹೊರಗಡೆಯೇ ಇರಲಿ, ಬೇಕಾಬಿಟ್ಟಿಯಾಗಿ ಕಾಣುವಂತೆ ಇರಕೂಡದು.

ಮನೆಯೊಳಗಿನವರಿಗೇ ಆಗಲಿ, ಮನೆಯ ಹೊರಗಿನವರಿಗೇ ಇರಲಿ ಇದು ಕಾಣುವಂತಿರಬಾರದು. ಇದಕ್ಕೆ ಕಾರಣ ಸರಳ. ಈ ಕಸಬರಿಗೆ ಇತ್ಯಾದಿಗಳು ಮಾನವನಲ್ಲಿ ಒಂದು ಕ್ಷಣ ಅವನೊಳಗೆ ಪ್ರವಹಿಸುವ ಧನಾತ್ಮಕ ಭಾವನೆಗಳನ್ನು ಒಮ್ಮೆ ಸ್ಥಂಭನಗೊಳಿಸಿ ಬಿಡುತ್ತದೆ. ಧನಾತ್ಮಕ ಭಾವನೆಗಳು ಒಮ್ಮೆ ತಟಸ್ಥಗೊಳ್ಳುವ ವಿಷಯ ಹದಗೆಟ್ಟಿತಾದರೆ ಮೊದಲಿನ ಸುಹಾಸಕರತೆಯಲ್ಲೇ ಅದನ್ನು ಮುಂದುವರಿಸಲು ಸಾಧ್ಯವಾಗದು. ಮನೆಯ ಹೊರಗಿನ ಜನರಿಗೆ ಕಸಬರಿಗೆ ಇತ್ಯಾದಿಗಳು ಕಾಣುವಂತಿದ್ದರೆ ಅವು ಆ ವ್ಯಕ್ತಿಗಳಲ್ಲೂ ನಕಾರಾತ್ಮಕ ಭಾವನೆಗಳನ್ನು ಹೊಂದಲು ಕಾರಣವಾಗಬಹುದು.

ಧೂಳು, ಜೇಡರ ಬಲೆ, ಕೊಳೆ ಹಾಗೂ ಕಸಗಳನ್ನು ತಮ್ಮಲ್ಲಿ ಹೊಂದಿರುವ ಕಸಬರಿಗೆ ಇತ್ಯಾದಿಗಳು ಶುಭ ಸೂಚಕವಾಗಿರಲು ಸಾಧ್ಯವಾಗದು ಎಂಬುದು ಒಂದೆಡಯಾದರೆ, ಇವು ಮನಸ್ಸಿನ ಹೊಯ್ದಾಟಗಳಿಗೆ ಇನ್ನಿಷ್ಟು ವಿಕಾರಗಳನ್ನು ಒದಗಿಸಿ, ನಿಷ್ಕ್ರಿಯತೆಯನ್ನು ಉಂಟು ಮಾಡಬಲ್ಲವು. ಯಾಕೆ ಹೀಗಾಗುತ್ತದೆ ಎಂಬುದಕ್ಕೆ ನೇರ ಕಾರಣಗಳಿಲ್ಲ.

ಒಂದು ಸುಂದರ ನಾಯಿಯನ್ನೋ, ಮೊಲವನ್ನೋ, ಜಿಂಕೆಯನ್ನೋ ನೋಡುವುದಕ್ಕೂ, ಒಂದು ಇಲಿ, ಒಂದು ಜಿರಲೆ, ಅಲ್ಲಾ ತಿಗಣೆ ಅಥವಾ ಜೇಡವನ್ನು ಮನೆಯೊಳಗೆ ಕಾಣುವುದಕ್ಕೂ ವ್ಯತ್ಯಾಸವಿದೆ. ಮನಸ್ಸು ಇಲಿ ಅಥವಾ ಜಿರಲೆಗಳನ್ನು ನೋಡುತ್ತ ಕ್ರಿಯಾಶೀಲಗೊಳ್ಳದು. ಇದೇ ಸೂತ್ರ ಕಸಬರಿಗೆ ಇತ್ಯಾದಿಗಳ ವಿಷಯದಲ್ಲೂ ನಾವು ವಿಶ್ಲೇಷಿಸಬಹುದು. ಮನಸ್ಸು ಬಹಳ ಸೂಕ್ಷ್ಮವಾದದ್ದು. ಅದು ತನ್ನ ಆಯ್ಕೆಯನ್ನ, ನಿರಾಸಕ್ತಿಗಳನ್ನ ಒಬ್ಬನಿಂದ ಇನ್ನೊಬ್ಬನಿಗೆ ಬಹುತೇಕ ಸಂದರ್ಭಗಲ್ಲಿವಿಧವಿಧವಾಗಿಒಡಮೂಡಿಸುವುದು ಸತ್ಯವಾದರೂ, ಇಲಿ, ಜಿರಲೆ, ಕಸಬರಿಗೆಗಳಂಥ ವಿಚಾರಗಳಲ್ಲಿ
ವಿಧವಿಧವಾದ ಭಾವನೆಗಳನ್ನು ಹೊಮ್ಮಿಸದು. ಕೇವಲ ಜಿಗುಪ್ಸೆ ಅಷ್ಟೇ, ಇದು ಎಲ್ಲರಿಗೂ ಸ್ವಾಭಾವಿಕ. ಎಲ್ಲರಲ್ಲೂ
ಸ್ವಾಭಾವಿಕ.

ಅಡುಗೆ ಮನೆಯಲ್ಲಿ, ಹೊರ ಜಗುಲಿಯಲ್ಲಿ, ಊಟದ ಕೋಣೆಯಲ್ಲಿ ಕಸಬರಿಗೆಗಳು ಕಾಣುವಂತೆ ಇರಲೇಕೂಡದು. ತಿನ್ನುವ ಅನ್ನ, ತಿನಿಸುಗಳ ವಿಷಯದಲ್ಲಿ ಇವು ಒಂದು ರೀತಿಯ ಅಭಾವವನ್ನು ನಿರ್ಮಿಸುವಲ್ಲಿ ಪ್ರಧಾನ ಪಾತ್ರ ವಹಿಸಿಬಿಡಬಲ್ಲವು. ಒಟ್ಟಿನಲ್ಲಿ ಇಂಥ ಅಭಾವಗಳ ಸೃಷ್ಟಿಗೆ ನಮಗೆ ನಾವೇ ಅವಕಾಶ ಒದಗಿಸಬಾರದು. ಒಂದರ್ಥದಲ್ಲಿ ಮನೆ ಬಾಗಿಲ ಎದುರುಗಡೆ ಕಸಬರಿಗೆ ಇತ್ಯಾದಿಗಳನ್ನು ಮೇಲ್ಮುಖವಾಗಿ ಇಡಿಸುವುದು ದುಷ್ಟ ಹಾಗೂ ಅನಪೇಕ್ಷಿತ ಸ್ಪಂದನಗಳನ್ನು ಮನೆಯೊಳಗಡೆ ಬಂದು ಸೇರುವ ಕ್ರಿಯೆಗೆ ಪೂರಕವಾಗಿ ಒಳಿತಾಗಬಲ್ಲದು. ಆದರೆ ರಾತ್ರಿಯ ಹೊತ್ತು ಮಾತ್ರ ಇದು ಸ್ವಾಗತಾರ್ಹ. ಹಗಲ ಹೆಗಲಿಗೆ ಮಾತ್ರ ಈ ಅನುಬಂಧ ಸಾಹಸ ಬೇಡ.

ಮನೆಯೊಳಗಿನ ಕಸ ಹಾಗೂ ಕೊಳೆಗಳನ್ನು, ಧೂಳು ಹಾಗೂ ಮಣ್ಣನ್ನ ವಿಶೇಷವಾಗಿ ರಾತ್ರಿ ಹೊತ್ತು ಕಸಬರಿಗೆಗಳಿಂದ
ಒತ್ತಿ, ಜಾಡಿಸಿ ಹೊರದೂಡುವಂತೆ ಮಾಡಲೇ ಕೂಡದು. ರಾತ್ರಿಯ ಹೊತ್ತು ಕಸ, ಧೂಳು ಹಾಗೂ ಕೊಳೆಗಳೊಂದಿಗೆ ಕಣ್ತಪ್ಪಿ ಬಿದ್ದ ಅಥವಾ ಬೆಲೆ ಬಾಳುವ ವಸ್ತುಗಳೂ ಹೊರತಳ್ಳಲ್ಪಡುವ ಸಾಧ್ಯತೆ ಇರುವುದರಿಂದ, ರಾತ್ರಿ ಹೊತ್ತು
ಕಸಬರಿಗೆಗಳ ಉಪಯೋಗ ಮಾಡಿದರೆ, ಮನೆಯಲ್ಲಿ ಲಕ್ಷಿ$¾àದೇವಿ ನೆಲೆ ಊರಲಾರಳು ಎಂಬ ನಂಬಿಕೆ ಇದೆ.

ಕೆಲವು ವಿಚಾರಗಳು ಆಧುನಿಕತೆಯನ್ನು ಅಣಕಿಸುವಂತಿದ್ದರೂ, ಲಾಗಾಯ್ತಿನಿಂದ ರೂಢಿಯಾಗಿ ಬಂದ ವಿಚಾರಗಳ ಕುರಿತು ಅಲಕ್ಷ್ಯ ಬೇಡ. ವರ್ತಮಾನದ ಆಧುನಿಕ ಬೆಳವಣಿಗೆಗಳು ಮಾನವನ ಎಲ್ಲ ನೋವು ಹಾಗೂ ಕಷ್ಟಗಳನ್ನು
ನೀಗಿಸುವಷ್ಟು ಆಧುನಿಕವಲ್ಲ. ಹೀಗಾಗಿ ಯಾವುದೂ ಹಳೆಯ ವಿಚಾರವಲ್ಲ. ಆಧುನಿಕತೆಗೆ ಪೂರಕವಾಗೇ ಇರುತ್ತವೆ.

ಮಾಹಿತಿಗೆ: 8147824707

– ಅನಂತಶಾಸ್ತ್ರಿ

ಟಾಪ್ ನ್ಯೂಸ್

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.