ಸುರಕ್ಷತೆಯೇ ಮಂತ್ರ

ಡ್ಯುಎಲ್‌ ಚಾನೆಲ್‌ ಎಬಿಎಸ್‌ ಬೈಕ್‌ಗಳು

Team Udayavani, Jun 24, 2019, 5:00 AM IST

ವಾಹನಗಳಿಗೆ ಬ್ರೇಕ್‌ ಇರುವುದು ಸಹಜ. ವೇಗವಾಗಿ ಹೋಗುತ್ತಿರುವ ವಾಹನಕ್ಕೆ ಬ್ರೇಕ್‌ ಹಾಕಿದರೆ, ತನ್ನಿಂದತಾನೇ ಬ್ರೇಕ್‌ ಲಾಕ್‌ ಆಗುತ್ತದೆ (ಹಿಡಿದಿಟ್ಟುಕೊಂಡ ರೀತಿ) ಇದರಿಂದ ಸ್ಕಿಡ್‌ ಆಗಿ ವಾಹನ ನಿಯಂತ್ರಣ ಕಳೆದುಕೊಳ್ಳುತ್ತದೆ. ಇದರಿಂದ ಅಪಘಾತ ಸಾಧ್ಯತೆ ಹೆಚ್ಚು. ಇದನ್ನು ತಪ್ಪಿಸಲು ಆವಿಷ್ಕಾರಗೊಂಡ ಒಂದು ತಾಂತ್ರಿಕ ವಿಧಾನ ಎಬಿಎಸ್‌. ಇದು ಬ್ರೇಕ್‌ ಹಿಡಿದಿಟ್ಟುಕೊಳ್ಳದಂತೆ ನೋಡಿಕೊಳ್ಳುತ್ತದೆ. ಇದಕ್ಕಾಗಿ ಎಲೆಕ್ಟ್ರಾನಿಕ್‌ ಸೆನ್ಸರ್‌ ವ್ಯವಸ್ಥೆ ಇದ್ದು, ಬ್ರೇಕ್‌ ಅನ್ನು ಹಿಡಿದು-ಬಿಟ್ಟು ಎಂಬಂತೆ ಮಾಡುತ್ತದೆ. ಇದರಿಂದ ಚಕ್ರದ ಮೇಲೆ ಒತ್ತಡ ಬೀಳದೆ ಇದ್ದು, ವಾಹನ ಸ್ಕಿಡ್‌ ಆಗುವುದನ್ನು ತಪ್ಪಿಸುತ್ತದೆ.

ರಸ್ತೆ ಅಪಘಾತ ತಡೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಂತ ಹಂತವಾಗಿ ಕಾನೂನುಗಳಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿದೆ. ಅದರಂತೆ, ಈ ಆರ್ಥಿಕ ವರ್ಷದಲ್ಲಿ 150 ಸಿ.ಸಿ. ಮೇಲ್ಪಟ್ಟ ಬೈಕ್‌ಗಳಿಗೆ ಎಬಿಎಸ್‌ (ಆ್ಯಂಟಿ ಲಾಕ್‌ ಬ್ರೇಕಿಂಗ್‌ ಸಿಸ್ಟಂ) ಹೊಂದಿರುವುದು ಕಡ್ಡಾಯವಾಗಿದೆ. ಹಾಗೆಯೇ, 150 ಸಿಸಿ ವರೆಗಿನ ಬೈಕ್‌ಗಳಿಗೆ ಕಾಂಬಿ ಬ್ರೇಕ್‌ ಸಿಸ್ಟಂ (ಒಂದು ಬ್ರೇಕ್‌ ಅದುಮಿದರೆ, ಇನ್ನೊಂದು ಬ್ರೇಕ್‌ ಕಾರ್ಯಾಚರಿಸುವಂತೆ ಇರುವ ವ್ಯವಸ್ಥೆ) ಕಡ್ಡಾಯವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಇದು ಮಹತ್ವದ್ದು.

ಏನಿದು ಎಬಿಎಸ್‌ ವ್ಯವಸ್ಥೆ?
ವಾಹನಗಳಿಗೆ ಬ್ರೇಕ್‌ ಇರುವುದು ಸಹಜ. ವೇಗವಾಗಿ ಹೋಗುತ್ತಿರುವ ವಾಹನಕ್ಕೆ ಬ್ರೇಕ್‌ ಹಾಕಿದರೆ, ತನ್ನಿಂದತಾನೇ ಬ್ರೇಕ್‌ ಲಾಕ್‌ ಆಗುತ್ತದೆ (ಹಿಡಿದಿಟ್ಟುಕೊಂಡ ರೀತಿ) ಇದರಿಂದ ಸ್ಕಿಡ್‌ ಆಗಿ ವಾಹನ ನಿಯಂತ್ರಣ ಕಳೆದುಕೊಳ್ಳುತ್ತದೆ. ಇದರಿಂದ ಅಪಘಾತ ಸಾಧ್ಯತೆ ಹೆಚ್ಚು. ಇದನ್ನು ತಪ್ಪಿಸಲು ಆವಿಷ್ಕಾರಗೊಂಡ ಒಂದು ತಾಂತ್ರಿಕ ವಿಧಾನ ಎಬಿಎಸ್‌. ಇದು ಬ್ರೇಕ್‌ ಹಿಡಿದಿಟ್ಟುಕೊಳ್ಳದಂತೆ ನೋಡಿಕೊಳ್ಳುತ್ತದೆ. ಇದಕ್ಕಾಗಿ ಎಲೆಕ್ಟ್ರಾನಿಕ್‌ ಸೆನ್ಸರ್‌ ವ್ಯವಸ್ಥೆ ಇದ್ದು, ಬ್ರೇಕ್‌ ಅನ್ನು ಹಿಡಿದು-ಬಿಟ್ಟು ಎಂಬಂತೆ ಮಾಡುತ್ತದೆ. ಇದರಿಂದ ಚಕ್ರದ ಮೇಲೆ ಒತ್ತಡ ಬೀಳದೆ ಇದ್ದು, ವಾಹನ ಸ್ಕಿಡ್‌ ಆಗುವುದನ್ನು ತಪ್ಪಿಸುತ್ತದೆ. ಸದ್ಯ 150 ಸಿಸಿ ವರೆಗಿನ ಬೈಕ್‌ಗಳಲ್ಲಿ ಎಬಿಎಸ್‌ ಇರುವುದಾದರೂ ಸಿಂಗಲ್‌ ಚಾನೆಲ್‌ ಎಬಿಎಸ್‌ (ಒಂದೇ ಚಕ್ರಕ್ಕೆ- ಮುಂಭಾಗ ಮಾತ್ರ) ಅಳವಡಿಸಿರಲಾಗುತ್ತದೆ. ಅದಕ್ಕಿಂತ ಮೇಲ್ಪಟ್ಟ ಸಿಸಿಯ ಬೈಕ್‌ಗಳಲ್ಲಿ , ಕೆಲವುಗಳಲ್ಲಿ ಡ್ಯುಎಲ್‌ ಚಾನೆಲ್‌ ಎಬಿಎಸ್‌ ಅಳವಡಿಸಲಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಇದು ಹೆಚ್ಚು ಸೂಕ್ತವಾಗಿವೆ.

2 ಲಕ್ಷ ರೂ. ಒಳಗಿನ ಬೈಕ್‌ಗಳು
ಹೋಂಡಾ ಸಿಬಿಆರ್‌ 250 ಆರ್‌
ಫ‌ುಲ್‌ಫೇರಿಂಗ್‌ನ ರೇಸಿಂಗ್‌ ಮಾದರಿಯ ಈ ಬೈಕ್‌ ಸುಧಾರಿತ ಆವೃತ್ತಿಯನ್ನು 2018ರಲ್ಲಿ ಹೋಂಡಾ ಬಿಡುಗಡೆ ಮಾಡಿದ್ದು, ಡ್ಯುಎಲ್‌ ಚಾನೆಲ್‌ ಎಬಿಎಸ್‌ ಹೊಂದಿದೆ. 249.6 ಸಿಸಿಯ ಈ ಬೈಕ್‌ 26.5 ಎಚ್‌ಪಿ 22.9 ಎನ್‌ಎಂ ಟಾರ್ಕ್‌ ಹೊಂದಿದೆ. ಬಿಎಸ್‌-4 ಎಂಜಿನ್‌ ಆವೃತ್ತಿ ಹೊಂದಿದೆ. ಎಲ್ಲ ಎಲ್‌ಇಡಿ ಲೈಟ್‌ಗಳನ್ನು ಹೊಂದಿದೆ. ನ್ಪೋರ್ಟ್ಸ್ ಟೂರಿಂಗ್‌ಗೆ ಈ ಬೈಕ್‌ ಅನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ.

ಬಜಾಜ್‌ ಡಾಮಿನೋರ್‌ 400
ಬಜಾಜ್‌ನ ಅತಿ ಶಕ್ತಿಶಾಲಿ ಬೈಕ್‌. 400 ಸಿಸಿಯ ಎಂಜಿನ್‌ ಹೊಂದಿದ ಡಾಮಿನಾರ್‌, 40 ಎಚ್‌ಪಿ, 35 ಎನ್‌ಎಂ. ಟಾರ್ಕ್‌ ಹೊಂದಿದೆ. ಬಿಎಸ್‌6 ಆವೃತ್ತಿಯ ಎಂಜಿನ್‌ ಹೊಂದಿದೆ. ಸಿಂಗಲ್‌ ಸಿಲಿಂಡರ್‌, ತ್ರಿಪಲ್‌ ಸ್ಪಾರ್ಕ್‌, ಸ್ಲಿಪರಿ ಕ್ಲಚ್‌, ಸಂಪೂರ್ಣ ಎಲ್‌ಇಡಿ ಲೈಟ್‌ಗಳು ಈ ಬೈಕ್‌ನ ಹೆಚ್ಚುಗಾರಿಕೆ. ಟೂರಿಂಗ್‌ ಉದ್ದೇಶಕ್ಕಾಗಿ ಈ ಬೈಕ್‌ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಎನ್‌ಫೀಲ್ಡ್‌ 350
ಅತಿ ಹೆಚ್ಚು ಮಾರಾಟವಾಗುವ ಬೈಕ್‌ ಇದು. ಹಲವಾರು ಜನರ ಕನಸು ಎನ್‌ಫೀಲ್ಡ್‌. 346 ಸಿಸಿ ಯುಸಿಇ ಎಂಜಿನ್‌, ಡ್ಯುಎಲ್‌ ಸ್ಪಾರ್ಕ್‌ ಪ್ಲಗ್‌ ವ್ಯವಸ್ಥೆ ಹೊಂದಿದ ಈ ಬೈಕ್‌ನಲ್ಲೂ ಈಗ ಎಬಿಎಸ್‌ ವ್ಯವಸ್ಥೆ ಇದೆ. ಸದ್ಯ ಎನ್‌ಫೀಲ್ಡ್‌ನ ಸ್ಟಾಂಡರ್ಡ್‌ ಆವೃತ್ತಿ ಹೊರತು ಪಡಿಸಿ ಎಲ್ಲದರಲ್ಲೂ ಡಿಸ್ಕ್ಬ್ರೇಕ್‌ ಮತ್ತು ಎಬಿಎಸ್‌ ವ್ಯವಸ್ಥೆ ಇದೆ. ಎನ್‌ಫೀಲ್ಡ್‌ನ ಇನ್ನೊಂದು ಮಾದರಿ ಥಂಡರ್‌ಬರ್ಡ್‌ ಕೂಡ, ಕಡಿಮೆ ದರಕ್ಕೆ ಡ್ಯುಎಲ್‌ ಚಾನೆಲ್‌ ಎಬಿಎಸ್‌ ಹೊಂದಿರುವ ಬೈಕ್‌ ಆಗಿದೆ.

ಅಪಾಚೆ 200
197 ಸಿಸಿಯ ಈ ಬೈಕ್‌ನಲ್ಲಿ ಟಿವಿಎಸ್‌ ಆರಂಭದಿಂದಲೇ ಡ್ಯುಎಲ್‌ ಚಾನೆಲ್‌ ಎಬಿಎಸ್‌ ಅನ್ನು ನೀಡುತ್ತಿದೆ. 4 ವಾಲ್‌Ìಗಳ ಎಂಜಿನ್‌ ಇದರಲ್ಲಿದ್ದು, 20.2 ಎಚ್‌ಪಿ ಶಕ್ತಿ, 18.1 ಎನ್‌ಎಂ ಟಾರ್ಕ್‌ ಹೊಂದಿದೆ. ಹಿಂಭಾಗ ಎಲ್‌ಇಡಿ, ಮುಂಭಾಗ ಹ್ಯಾಲೋಜನ್‌ ಲ್ಯಾಂಪ್‌ ಅನ್ನು ಇದು ಹೊಂದಿದೆ.

ಅಪಾಚೆ 180
ದೇಶದಲ್ಲಿ ಮೊದಲ ಬಾರಿಗೆ ಡ್ಯುಎಲ್‌ ಚಾನೆಲ್‌ ಎಬಿಎಸ್‌ ಹೊಂದಿದ ಬೈಕ್‌ ತಯಾರಿಸಿದ ಕೀರ್ತಿ ಸಿಕ್ಕಿದ್ದು ಟಿವಿಎಸ್‌ಗೆ. ಅದು ಅಪಾಚೆ 180 ಮೂಲಕ. ಆರಂಭದಿಂದಲೇ ಈ ಬೈಕ್‌ನಲ್ಲಿ ಎಬಿಎಸ್‌ ವ್ಯವಸ್ಥೆ ನೀಡಲಾಗುತ್ತಿತ್ತು. 177ಸಿಸಿಯ 16.6 ಎಚ್‌ಪಿಯ ಶಕ್ತಿ, 15.5 ಎನ್‌ಎಂ ಟಾರ್ಕ್‌ ಅನ್ನು ಇದು ಹೊಂದಿದೆ.

-ಈಶ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಆಂಗ್ಲ ಭಾಷೆಯಲ್ಲಿ "ಹೆಕ್ಟರ್‌' ಎಂಬ ಪದಕ್ಕೆ ಅಬ್ಬರಿಸುವುದು ಎಂಬ ಅರ್ಥವಿದೆ. ಅದೇ ಹೆಸರಿನ ಈ ಎಸ್‌.ಯು.ವಿ ಕಾರು, ಹೆಸರಿಗೆ ತಕ್ಕಂತೆ ಸದ್ದು ಮಾಡುತ್ತಲೇ ಮಾರುಕಟ್ಟೆಗೆ...

  • ಬೆಂಗಳೂರು: ಪರಿಸರ ಕಾಳಜಿಗೆ ಒತ್ತು ನೀಡುತ್ತಿರುವ ಭಾರತದ ಜನತೆಯ ಅಭಿರುಚಿ ಅರಿತಿರುವ ಹ್ಯುಂಡೈ ಸಂಸ್ಥೆ, ಮೊದಲ ಬಾರಿಗೆ ವಿದ್ಯುತ್‌ ಚಾಲಿತ "ಕೋನಾ ಎಲೆಕ್ಟ್ರಿಕ್‌'...

  • ಭಾರತದಲ್ಲಿ ಕಡಿಮೆ ಬೆಲೆಗೆ ಉತ್ತಮ ಸವಲತ್ತುಗಳನ್ನು ನೀಡಿ ಜನಪ್ರಿಯತೆ ಗಳಿಸಿದ ಶಿಯೋಮಿ ಕಂಪೆನಿ, ರೆಡ್‌ಮಿ 7ಎ ಎಂಬ ಹೊಸ ಆರಂಭಿಕ ದರ್ಜೆಯ ಸ್ಮಾರ್ಟ್‌ಫೋನನ್ನು...

  • -ಆಟೋಮ್ಯಾಟಿಕ್‌ ಎ.ಸಿ- ತನ್ನಷ್ಟಕ್ಕೆ ತಾನೇ ಕಾರಿನೊಳಗಿನ ತಾಪಮಾನವನ್ನು ಗ್ರಹಿಸಿ ಸವಾರರಿಗೆ ಹಿತವೆನಿಸುವ ತಾಪಮಾನಕ್ಕೆ ಹೊಂದಿಕೆಯಾಗುತ್ತದೆ. ಬೇಕೆಂದರೆ ಈ...

  • ಕಾರುಗಳಲ್ಲಿ ಅಟೋಮ್ಯಾಟಿಕ್‌ ಮತ್ತು ಮ್ಯಾನುವಲ್‌ ಟ್ರಾನ್ಸ್‌ ಮಿಷನ್‌ (ಗಿಯರ್‌) ವ್ಯವಸ್ಥೆ ಇರುವುದು ಸಾಮಾನ್ಯ. ಮ್ಯಾನುವಲ್‌ ಟ್ರಾನ್ಸ್‌ಮಿಷನ್‌ಗಳನ್ನು ಬಳಸುವ...

ಹೊಸ ಸೇರ್ಪಡೆ