Udayavni Special

ದುಬೈ ಡ್ರೀಮ್‌

ನಿಜವೋ ಭ್ರಮೆಯೋ?

Team Udayavani, Nov 4, 2019, 4:13 AM IST

dubai-dreanm

ನಮ್ಮಲ್ಲಿ ಉನ್ನತ ವ್ಯಾಸಂಗಕ್ಕೆಂದೋ, ದೊಡ್ಡ ಸಂಬಳದ ನೌಕರಿಗೆಂದೋ ಅಮೆರಿಕ, ಲಂಡನ್‌, ಆಸ್ಟ್ರೇಲಿಯಾ, ನ್ಯೂಝಿಲೆಂಡ್‌, ಜರ್ಮನಿ ಮುಂತಾದ ದೇಶಗಳಿಗೆ ತೆರಳುವುದುಂಟು. ಹೆಚ್ಚು ಓದಿದವರು, ಪ್ರಭಾವಶಾಲಿ ಸಂಪರ್ಕವನ್ನು ಹೊಂದಿರುವವರು ಅಲ್ಲಿಗೆ ಹೋಗುವುದು ಸಾಧ್ಯ. ಆದರೆ ಅದೇನೂ ಇಲ್ಲದೆಯೂ, ಮಧ್ಯಮ ವರ್ಗದವರು, ಹೆಚ್ಚು ಓದಿಲ್ಲದವರಿಗೂ- ವಿದೇಶ ಪ್ರಯಾಣ ಮಾಡಬಹುದು, ಸಂಪಾದನೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬಹುದು ಎಂಬ ಕನಸನ್ನು ತೋರಿಸಿದ್ದು ದುಬೈ!

ಭಾರತದ ಹೊರಗೆ ಅತ್ಯಧಿಕ ಸಂಖ್ಯೆಯಲ್ಲಿ ಭಾರತೀಯರು ನೆಲೆಸಿರುವ ದೇಶ ಯು.ಎ.ಇ (ಅರಬ್‌ ಸಂಯುಕ್ತ ಸಂಸ್ಥಾನ). ಒಟ್ಟು 35 ಲಕ್ಷಕ್ಕೂ ಅಧಿಕ ಮಂದಿ ಅಲ್ಲಿ ಜೀವನ ಕಂಡುಕೊಂಡಿದ್ದಾರೆ. ಅದರಲ್ಲೂ ದುಬೈ ನಗರಿಯಲ್ಲಿ ಮೂಲ ನಿವಾಸಿಗಳ ಸಂಖ್ಯೆ ಕೇವಲ 15% ಅಷ್ಟೇ. ಉಳಿದವರಲ್ಲಿ ಶೇ. 40%ಗೂ ಹೆಚ್ಚು ಮಂದಿ ಭಾರತೀಯರಿದ್ದಾರೆ. ಹೀಗಾಗಿ, ದುಬೈ ತುಂಬಾ ಭಾರತೀಯರೇ ತುಂಬಿಕೊಂಡಿದ್ದಾರೆ ಎಂದು ದೂರುವ ಮೂಲ ನಿವಾಸಿಗಳ ಮಾತಲ್ಲಿ ಸತ್ಯಾಂಶವೂ ಇದೆ. ನಮ್ಮವರಲ್ಲಿ ಕೇರಳಿಗರದೇ ಸಿಂಹಪಾಲು! ಕರ್ನಾಟಕದ ಕರಾವಳಿ ಪ್ರಾಂತ್ಯ ಹಾಗೂ ಕೇರಳದ ಮನೆ ಮನೆಯಲ್ಲೂ ದುಬೈಗೆ ಹೋದವರು ಒಬ್ಬರಾದರೂ ಸಿಗುತ್ತಾರೆ ಎನ್ನುತ್ತಿದ್ದ ಕಾಲವೊಂದಿತ್ತು. ಹೈಸ್ಕೂಲೋ, ಪಿಯುಸಿಯೋ ಓದಿ ಪಾಸಾಗಿರಲಿ, ಇಲ್ಲದಿರಲಿ ದುಬೈಗೆ ಹೋಗಿಬಿಟ್ಟರೆ ಲೈಫ್ ಸೆಟಲ್‌ ಆದಂತೆ ಎನ್ನುತ್ತಿದ್ದ ಕಾಲವದು.

ಕೆಲಸದ ಸಮಾಚಾರ: ಭಾರತಿಯರನ್ನು ಸೆಳೆದಿದ್ದರಲ್ಲಿ ತೈಲ ಕಂಪನಿಗಳು ಮತ್ತು ಕಟ್ಟಡ ನಿರ್ಮಾಣ ಸಂಸ್ಥೆಗಳದ್ದೇ ಸಿಂಹಪಾಲು. ಇಲ್ಲಿಯ ಸಂಬಳ ಮತ್ತು ಭತ್ಯೆಗಳು ಜನರನ್ನು ಹೆಚ್ಚು ಆಕರ್ಷಿಸಿತ್ತು. ಇಂಜಿನಿಯರ್‌ಗಳಿಗೆ ಕೈ ತುಂಬ ಸಂಬಳ, ಮಕ್ಕಳ ವಿದ್ಯಾಭ್ಯಾಸದ ಖರ್ಚು, ಮನೆ, ಕಾರು ಹೀಗೆ ಹಲವಾರು ಅನುಕೂಲಗಳನ್ನು ಮಾಡಿಕೊಡುತ್ತಿದ್ದರು. ಆದರೆ ಸುಮಾರು ವರ್ಷಗಳಿಂದ ಇಂತಹ ಸೌಲಭ್ಯಗಳು ಕಾಣದಾಗಿದೆ. ಸರ್ಕಾರಿ ಉದ್ಯೋಗಗಳಂತೂ ಗಗನಕುಸುಮ.

ಭಾರತದಿಂದ ಗಲ್ಫ್ ರಾಜ್ಯಗಳಿಗೆ ಬರುವವರಲ್ಲಿ ಡಾಕ್ಟರ್‌, ಇಂಜಿನಿಯರ್‌, ಟೆಕ್ನೀಷಿಯನ್ಸ್, ಹಾಗೂ ಹಲವು ಕೆಳದರ್ಜೆಯ ಕೆಲಸಗಳನ್ನರಸಿ ಬರುತ್ತಾರೆ. ಇಲ್ಲಿ ಡಾಕ್ಟರ್‌, ಇಂಜಿನಿಯರ್‌ ನೌಕರಿಯಲ್ಲಿ ಇರುವವರೇ ಆಗಲಿ, ಕಾರ್ಮಿಕ ಹುದ್ದೆಗಳಲ್ಲಿ ಇರುವವರೇ ಆಗಲಿ ಜಾಣ್ಮೆಯಿಂದ ಜೀವನಶೈಲಿ ನಿಭಾಯಿಸಿದರೆ ಮಾತ್ರ ಭವಿಷ್ಯ ನಿಧಿ ಸಂಗ್ರಹಿಸಿಡಲು ಸಾಧ್ಯ. ಏಕೆಂದರೆ, ಮಾಯಾನಗರಿ ದುಬೈನಲ್ಲಿ ಹಣ ನುಂಗಲು ಹಲವು ದಾರಿಗಳು ಕಾದು ಕುಳಿತಿವೆ. ಶುರುವಿನಲ್ಲಿ ಮೂವತ್ತೇ ಸಾವಿರ ರೂಪಾಯಿಯ ನೌಕರಿಯಲ್ಲಿದ್ದರೂ ಒಂದೆರಡು ವರ್ಷಗಳ ನಂತರ ಸಂಬಳ ದುಪ್ಪಟ್ಟಾಗುತ್ತದೆ.

ಏಕೆಂದರೆ, ದುಬೈ ಶ್ರಮ ಮತ್ತು ಕೌಶಲ್ಯಕ್ಕೆ ಹೆಚ್ಚಿನ ಬೆಲೆ ನೀಡುತ್ತದೆ. ಹೀಗಾಗಿಯೇ ಇಲ್ಲಿಗೆ ಬರುವವರು ತಾರುಣ್ಯದಲ್ಲಿರುವವರು. ಅವರಿಗಿಲ್ಲಿ, ದುಡ್ಡು ಸುಮ್ಮನೆಯೇ ಸಿಕ್ಕಿಬಿಡುವುದಿಲ್ಲ. ಅದಕ್ಕಾಗಿ ಹಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಆರಾಮದಾಯಕ ಜೀವನಶೈಲಿಯನ್ನು ತ್ಯಜಿಸುವುದು, ಕುಟುಂಬದಿಂದ ದೂರವಿರುವುದು, ಅಲ್ಲಿನ ಕಟ್ಟುನಿಟ್ಟಿನ ಕಾನೂನಿಗೆ ತಲೆಬಾಗುವುದು ಮುಂತಾದವು. ಮಾನವ ಹಕ್ಕು ಕಾರ್ಯಕರ್ತರು ಹಿಂದಿನಿಂದಲೂ ದುಬೈ ಕಾರ್ಮಿಕ ನೀತಿಯನ್ನು ಖಂಡಿಸುತ್ತಲೇ ಬಂದಿದ್ದಾರೆ.

ಖರ್ಚು- ವೆಚ್ಚ!: ದುಬೈನಲ್ಲಿ ಆದಾಯ ತೆರಿಗೆ ಇಲ್ಲ! ಅಲ್ಲಿ ಪ್ರತಿಯೊಬ್ಬರು ಏನು ಸಂಪಾದಿಸುತ್ತಾರೋ ಅಷ್ಟೂ ಮೊತ್ತ ಅವರಿಗೆ ಸಿಗುತ್ತದೆ. ಆದರೆ ಬಿಲ್‌ನಲ್ಲಿ ಸರ್ವೀಸಸ್‌ಗೆಂದು 10% ವ್ಯಾಟ್‌ಅನ್ನು ವಿಧಿಸುತ್ತಾರೆ. ಇಂಜಿನಿಯರ್‌ ಒಬ್ಬ ಭಾರತದಲ್ಲಿ ಗಳಿಸುವುದಕ್ಕಿಂತ ಒಂದು ಅಥವಾ ಎರಡು ಪಟ್ಟು ಹೆಚ್ಚು ಸಂಬಳ ಪಡೆಯುತ್ತಾನೆ. ಅವನು ತೆಗೆದುಕೊಳ್ಳುವ ಸಂಬಳದಲ್ಲಿ ಅರ್ಧದಷ್ಟು ಮನೆ ಬಾಡಿಗೆಗೆ ಹೋಗಿರುತ್ತದೆ, ಇನ್ನು ಮಕ್ಕಳು ಇದ್ದರೆ ಅವರುಗಳಿಗೆ ಶಾಲಾ ಖರ್ಚು, ದಿನಸಿ ಖರ್ಚು ಎಂದು ದುಡಿದ ಹಣ ಹೆಚ್ಚು ಕಡಿಮೆ ಇಲ್ಲಿಯೇ ಮುಗಿದು ಹೋಗಿರುತ್ತದೆ.

ಇನ್ನು ಡಾಕ್ಟರ್‌ಗಳಿಗೂ ವ್ಯವಸ್ಥಿತ ಸಂಬಳವಿದೆ. ದುಡಿದದ್ದನ್ನು ಉಳಿಸಬೇಕೆಂದರೆ ಹಲವಾರು ಯೋಜನೆಗಳನ್ನು ಜಾರಿಗೆ ತರಬೇಕಾಗುತ್ತದೆ. ಐಷಾರಾಮಿ ಜೀವನಕ್ಕೆ ಕಡಿವಾಣ ಖಂಡಿತಾ ಬೇಕಾಗುತ್ತೆ. ದುಬೈನಲ್ಲಿ ನೆಲೆಸಿದ ಭಾರತೀಯರಿಗೆ ಹೆಚ್ಚಿನ ಖರ್ಚು ಎಂದರೆ ಊರಿಗೆ ಹಿಂತಿರುಗಲು ತಗುಲುವ ವಿಮಾನ ಪ್ರಯಾಣದ ಖರ್ಚು. ಕೆಲವರಂತೂ 5- 6 ವರ್ಷವಾದರೂ ಊರಿನತ್ತ ಮುಖ ಮಾಡುವುದಿಲ್ಲ, ಕಾರಣ, ಮನೆ- ಸಂಸಾರದ ಜವಾಬ್ದಾರಿಗಳು. ಪ್ರತಿ ತಿಂಗಳು ಮನೆಗೆ ಸುಮಾರು 10 ಸಾವಿರ ಕಳುಹಿಸುತ್ತಿದ್ದರೆ ಕೂಡಿಡಲು 5 ಸಾವಿರ ಮಾಡುತ್ತಾನೆ.

2 ವರ್ಷಕ್ಕೆ ಮನೆಗೆ ಹೋಗುತ್ತಾನೆ ಎಂದರೆ ಅಕ್ಕ, ತಮ್ಮ, ಅಪ್ಪ, ಅಮ್ಮ, ಹೆಂಡತಿ, ಸಂಬಂಧಿಕರು ಎಂದು ಎಲ್ಲರಿಗೂ ಉಡುಗೊರೆಯನ್ನು ಕೊಂಡುಕೊಳ್ಳಬೇಕಾಗುತ್ತದೆ. ಉಡುಗೊರೆ ಎಂದರೆ ಹತ್ತಿರದವರಗೆ ಚಿನ್ನ, ಮಿಕ್ಕವರಿಗೆ ಬಟ್ಟೆ-ಬರೆ, ಎಲೆಕ್ಟ್ರಾನಿಕ್ಸ್ ಸಾಮಗ್ರಿ ಹೀಗೆ ಹತ್ತು ಹಲವು. ವಿಮಾನಕ್ಕೆ, 25 ರಿಂದ 30 ಸಾವಿರ ಖರ್ಚು ತಗುಲುತ್ತದೆ. ಹೀಗಾಗಿ ಅದಕ್ಕಾಗಿ ವರ್ಷಗಳಿಂದ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಆಲ್ಕೊಹಾಲ್‌ ಸೇವನೆ ಅಲ್ಲಿ ನಿಷಿದ್ಧವಾಗಿರುವುದರಿಂದ, ಕೇವಲ ಆಯ್ದ ಸ್ಥಳಗಳಲ್ಲಿ ಮಾತ್ರವೇ ಸಿಗುತ್ತದೆ. ಹೀಗಾಗಿ ಕುಡಿತದ ಚಟಕ್ಕೆ ದಾಸರಾಗುವ ಅಪಾಯವೇ ಇಲ್ಲ.

ಗಲ್ಫ್ ದೇಶಗಳ ಸಾಮಾಜಿಕ ವ್ಯವಸ್ಥೆ
1. ಕೆಳ ವರ್ಗ: ಈ ವರ್ಗದ ಕಾರ್ಮಿಕರು ಮೂವತ್ತರಿಂದ ನಲವತ್ತು ಸಾವಿರದವರೆಗೆ ಸಂಬಳ ಪಡೆಯುತ್ತಾರೆ. ಗಲ್ಫ್ನಲ್ಲಿ ಅದುವೇ ತಳಮಟ್ಟ! ಈ ವರ್ಗದವರ ಸಂಬಳದದಲ್ಲಿ ಹೆಚ್ಚಿನ ಮೊತ್ತ ವಸತಿ, ಸಾರಿಗೆ, ಆಹಾರ, ಫೋನ್‌ ಬಿಲ್‌ನಲ್ಲೇ ತೀರುತ್ತದೆ. ಈ ವರ್ಗದವರಲ್ಲಿ ಭಾರತೀಯರು, ಫಿಲಿಪೈನ್ಸ್‌, ಪಾಕಿಸ್ತಾನಿಯರು, ಬಾಂಗ್ಲಾದೇಶೀಯರು, ಶ್ರೀಲಂಕನ್ನರು, ಈಜಿಪ್ಟಿಯನ್ನರು ಸೇರಿದ್ದಾರೆ.

2. ಮಧ್ಯಮ ವರ್ಗ: ಒಂದು ಲಕ್ಷದಿಂದ ಐದು ಲಕ್ಷದ ರೂ. ಗಳ ತನಕ ದುಡಿಯುವವರು ಈ ವರ್ಗದವರು. ನಮ್ಮಲ್ಲಿ ಅವರೇ ಶ್ರೀಮಂತ ವರ್ಗವೆಂದು ಕರೆಯಿಸಿಕೊಂಡರೆ ಗಲ್ಫ್ ರಾಷ್ಟ್ರಗಳಲ್ಲಿ ಅದು ಮಧ್ಯಮ ವರ್ಗ. ಈ ವರ್ಗದವರಲ್ಲಿ ಹೆಚ್ಚಾಗಿ ಕಂಡುಬರುವವರು ಭಾರತೀಯರು, ಅರಬ್ಬರು, ಯುರೋಪಿಯನ್ನರು ಮತ್ತು ಅಮೆರಿಕನ್ನರು. ಈ ವರ್ಗದವರಿಗೆ ಅಲ್ಲಿನ ಸಮಾಜ ವ್ಯವಸ್ಥೆಯಲ್ಲಿ ಹಲವು ಸವಲತ್ತುಗಳಿವೆ.

3. ಉನ್ನತ ವರ್ಗ: ಆರೂವರೆ ಲಕ್ಷದಿಂದ 50 ಲಕ್ಷ ರೂ. ಗಳ ತನಕ ದುಡಿಯುವ ವರ್ಗ ಇದಾಗಿರುವುದರಿಂದ ಇಲ್ಲಿ ಸ್ಥಾನ ಪಡೆದವರು ಶ್ರೀಮಂತರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇವರಲ್ಲಿ ಹೆಚ್ಚಿನವರು ಉದ್ಯಮಪತಿಗಳಿದ್ದಾರೆ. ಮಾಧ್ಯಮಗಳಲ್ಲಿ ಅತ್ಯಾಕರ್ಷಕವಾಗಿ ತೋರಿಸುವ ದುಬೈನ ಐಷಾರಾಮಿ ಬದುಕನ್ನು ಬದುಕುತ್ತಿರುವವರು ಈ ವರ್ಗಕ್ಕೆ ಸೇರಿದವರು.

ದುಬೈ ಎನ್ನುವುದು ಕಾಸಿಗೆ ತಕ್ಕ ಕಜ್ಜಾಯವನ್ನು ನೀಡುವ ನಗರಿ. ಕಡಿಮೆ ಬೆಲೆಯ ಕಬೂಸ್‌ (ನಾಲ್ಕು ಕಬೂಸ್‌ಗೆ 30 ರುಪಾಯಿ) ಮತ್ತು ಒಂದು ಪಾಕೆಟ್‌ ಮೊಸರಿಗೆ 25 ರೂ ಕೊಟ್ಟು ದಿನದ ಊಟ ಮುಗಿಸಿ, ಮಿಗಿಸಿದ ಹಣದಲ್ಲಿ ಮಂಗಳೂರಿನಲ್ಲಿ ಮನೆ ಕಟ್ಟಿದವರೂ ಇದ್ದಾರೆ. ದುಬೈನ ಐಷಾರಾಮಕ್ಕೆ ಮರುಳಾಗಿ ಹಣ ಕಳೆದುಕೊಂಡವರೂ ಇದ್ದಾರೆ. ಬಂದ ಶುರುವಿನ 3- 4 ವರ್ಷವಂತೂ ಯಾವ ವ್ಯಕ್ತಿ ಯಾವುದೇ ದರ್ಜೆಯ ಕೆಲಸವಾಗಿರಲಿ, ಹಣ ಕೂಡಿಡುವುದು ಕಷ್ಟ ಸಾಧ್ಯ. ಇಲ್ಲಿನ ಜೀವನಕ್ಕೆ ಹೊಂದಿಕೊಂಡು, ಖರ್ಚು ವೆಚ್ಚ ತೀರಿಸಿಕೊಂಡು ಉಳಿತಾಯದತ್ತ ಮುಖ ಮಾಡಬೇಕೆಂದರೆ ಕನಿಷ್ಠ 3 ವರ್ಷಗಳೇ ಬೇಕಾಗುತ್ತದೆ. ಇವೆಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತೇನೆ ಎನ್ನುವವರಿಗೆ ದುಬೈ ಎನ್ನುವುದು ಕನಸಲ್ಲ, ಬದುಕಿನ ಆಶಾಕಿರಣ.

“ಬೆಡ್‌ ಸ್ಪೇಸ್‌’ ಎಂಬ ಉಳಿತಾಯದ ವಸತಿ: ಕೆಲವೊಂದು ಕಂಪನಿಗಳಲ್ಲಿ ಉಳಿಯಲು ಉಚಿತ ವಸತಿ, ಊಟವನ್ನು ಕೊಡುತ್ತಾರೆ, ಆದರೆ ಸಂಬಳ ಮಾತ್ರ ತೀರಾ ಕಡಿಮೆಯಿರುತ್ತದೆ. ತಿಂಗಳಿಗೆ 30,000 ರೂ. ದುಡಿಯುವ ವ್ಯಕ್ತಿ, ಊಟ ಮತ್ತು ವಸತಿ ಖರ್ಚು ಹೊರತುಪಡಿಸಿ, ಸುಮಾರು 20,000ವನ್ನಾದರೂ ಉಳಿಸಬಹುದು. ಸಾಮಾನ್ಯವಾಗಿ ಊಟ- ವಸತಿ ಮಾತ್ರದಿಂದಲೇ ಹೆಚ್ಚಿನ ಪ್ರಮಾಣ ದುಡ್ಡನ್ನು ಉಳಿಸಬಹುದಾದ್ದರಿಂದ ಹೆಚ್ಚಿನವರು ಕಂಪನಿಯನ್ನು ಅದಕ್ಕಾಗಿ ಅವಲಂಬಿಸುವುದಿಲ್ಲ. ಮೂರು ನಾಲ್ಕು ಜನರು ಕೂಡಿ ಒಂದು ಮನೆಯನ್ನು ಬಾಡಿಗೆಗೆ ಪಡೆಯುತ್ತಾರೆ.

ಅಲ್ಲಿ ಅವರು ಸ್ವಂತ ಅಡುಗೆಯನ್ನಾದರೂ ಮಾಡಿಕೊಳ್ಳಬಹುದು ಇಲ್ಲವೇ ಹೊರಗೆ ಕಡಿಮೆ ಬೆಲೆಯ ರೆಸ್ಟೋರೆಂಟಿನಲ್ಲಿ ಊಟ ಮಾಡಬಹುದು. ಪಿ.ಜಿ ಥರದ ಈ ವ್ಯವಸ್ಥೆಯನ್ನು “ಬೆಡ್‌ ಸ್ಪೇಸ್‌’ ಎಂದು ಕರೆಯುತ್ತಾರೆ. ಮನೆ ಬಾಡಿಗೆ ಸುಮಾರು 25 ಸಾವಿರವಿರುತ್ತದೆ (ಒಂದೊಂದು ಏರಿಯಾಗಳಲ್ಲಿ ಒಂದೊಂದು ಬೆಲೆ) ಎಂದರೆ ಅದನ್ನು ನಾಲ್ಕು ಜನರೂ ಸಮನಾಗಿ ಹಂಚಿಕೊಳ್ಳುತ್ತಾರೆ. ಇದರಲ್ಲಿ ಒಬ್ಬ ವ್ಯಕ್ತಿಗೆ 6000 ದಿಂದ 7000 ರೂ. ಬಾಡಿಗೆಗೆ ಹೋಗುತ್ತದೆ. ಇನ್ನು ಊಟಕ್ಕೆ ಹೋಟಲ್‌ ನಂಬಿ ಕುಳಿತರೆ ತಿಂಗಳಿಗೆ 5000, ಇಲ್ಲವೇ ಸ್ನೇಹಿತರೆಲ್ಲರೂ ಕೂಡಿ ಮನೆ ಸಾಮಗ್ರಿಗಳನ್ನೆಲ್ಲ ತಂದು ಅಡುಗೆ ಮಾಡಿಕೊಂಡರೆ ಅಲ್ಪಸ್ವಲ್ಪ ಉಳಿಸಬಹುದು.

ಗಲ್ಫ್ ದೇಶಗಳಲ್ಲಿ ನೆಲೆ ನಿಲ್ಲುವ ಮುನ್ನದ ಖರ್ಚು: ವಿಸಿಟ್‌ ವೀಸಾದಿಂದ ವರ್ಕ್‌ ವೀಸಾಗೆ ಬದಲಾಯಿಸಿಕೊಳ್ಳಲು ಶುಲ್ಕ, ವೈದ್ಯಕೀಯ ಪರೀಕ್ಷಾ ವೆಚ್ಚ, ಗುರುತಿನ ಚೀಟಿ (ಸಿವಿಲ್‌ ಐಡಿ) ಶುಲ್ಕ, ಇನ್ಷೊರೆನ್ಸ್‌ ಮೊತ್ತ- ಇವಿಷ್ಟನ್ನು ಅಭ್ಯರ್ಥಿ ಭರಿಸಬೇಕು. ಕೆಲವೊಮ್ಮೆ ಈ ಖರ್ಚನ್ನು ಉದ್ಯೋಗದಾತ ಸಂಸ್ಥೆಯೇ ಭರಿಸುವುದುಂಟು. ಗಲ್ಫ್ ರಾಷ್ಟ್ರಗಳಿಗೆ ತೆರಳುವ ಮುನ್ನ ಭಾರತದಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಬೇಕು. ತಪಾಸಣಾ ಕೇಂದ್ರ ಕೆಲವೆಡೆ ಮಾತ್ರ ಇವೆ. ವೈದ್ಯಕೀಯ ಪರೀಕ್ಷೆ ವೆಚ್ಚ ಭರಿಸಬೇಕಾಗುತ್ತದೆ.

ಭಾರತದ ಕುವೈತ್‌ embassy ನಲ್ಲಿ ವೀಸಾ ನೋಂದಾಯಿಸಿ ಕುವೈತಿಗೆ ಬರಬೇಕು. ಈ ಎಲ್ಲಾ ವೆಚ್ಚ ಸುಮಾರು 25,000ರೂ. ಆಗಬಹುದು. ಅಲ್ಲಿಗೆ ಬಂದ ಮೇಲೆ ಒಂದು ವರ್ಷಕ್ಕೆ ರೆಸಿಡೆನ್ಸಿ ಪರ್ಮಿಟ್‌ ಮಾಡಿಸಬೇಕು. ಇದಕ್ಕೆ ಸುಮಾರು 25,000 ರೂ. ಆಗಬಹುದು. ಈ ಮೊತ್ತವನ್ನು ಕಂಪನಿ ಭರಿಸುತ್ತದೆ. ಆಗ, ಕನಿಷ್ಠ ಒಂದು ವರ್ಷ ನಾವು ಆ ಕಂಪನಿಯಲ್ಲಿ ಕೆಲಸ ಮಾಡಬೇಕು. ಒಂದು ವೇಳೆ ಒಂದು ವರ್ಷದ ಒಳಗೆ ಕೆಲಸ ಬಿಟ್ಟರೆ ಆ ವೆಚ್ಚ ನಾವು ಭರಿಸಬೇಕಾಗುತ್ತದೆ. ಕಾರ್ಮಿಕ ನೀತಿ ಅಲ್ಲಿ ಕಟ್ಟುನಿಟ್ಟಾಗಿರುವುದರ ದ್ಯೋತಕವಿದು.

* ಸುಗುಣಾ ಮಹೇಶ್‌, ಕುವೈತ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಯಚೂರಿನಲ್ಲಿ ಕೋವಿಡ್ ಸೋಂಕಿಗೆ ಮತ್ತೊಂದು ಬಲಿ: ಏಳಕ್ಕೇರಿದ ಸಾವಿನ ಸಂಖ್ಯೆ

ರಾಯಚೂರಿನಲ್ಲಿ ಕೋವಿಡ್ ಸೋಂಕಿಗೆ ಮತ್ತೊಂದು ಬಲಿ: ಏಳಕ್ಕೇರಿದ ಸಾವಿನ ಸಂಖ್ಯೆ

ಕೋವಿಡ್ ಸೋಂಕಿತನ ಶವ ಸಂಸ್ಕಾರಕ್ಕೆ ಗ್ರಾಮಸ್ಥರ ವಿರೋಧ: ಅಧೀಕಾರಿಗಳಿಗೆ ರಾತ್ರಿಯಿಡಿ ಜಾಗರಣೆ

ಕೋವಿಡ್ ಸೋಂಕಿತನ ಶವ ಸಂಸ್ಕಾರಕ್ಕೆ ಗ್ರಾಮಸ್ಥರ ವಿರೋಧ: ಅಧಿಕಾರಿಗಳಿಗೆ ರಾತ್ರಿಯಿಡಿ ಜಾಗರಣೆ

ಕಾರ್ಗಿಲ್‌ ಶೇರ್‌ ಶಾ “ವಿಕ್ರಮ್‌ ಬಾತ್ರಾ”

ಕಾರ್ಗಿಲ್‌ ಶೇರ್‌ ಶಾ “ವಿಕ್ರಮ್‌ ಬಾತ್ರಾ”

ಎಸ್ಎಸ್ಎಲ್ ಸಿ ಪರೀಕ್ಷೆ ಯಶಸ್ವಿ ಹಿನ್ನಲೆ ಪೊಳಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಸುರೇಶ್ ಕುಮಾರ್

ಎಸ್ಎಸ್ಎಲ್ ಸಿ ಪರೀಕ್ಷೆ ಯಶಸ್ವಿ ಹಿನ್ನಲೆ ಪೊಳಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಸುರೇಶ್ ಕುಮಾರ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿಗೆ 31ನೇ ಬಲಿ: 35 ವರ್ಷದ ಯುವಕ ಇಂದು ಸಾವು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿಗೆ 31ನೇ ಬಲಿ: 35 ವರ್ಷದ ಯುವಕ ಇಂದು ಸಾವು

ಇತಿಹಾಸ ನಿರ್ಮಾಣದ ಹಿಂದಿದೆ ಅವಿರತ ಪರಿಶ್ರಮ

ಇತಿಹಾಸ ನಿರ್ಮಾಣದ ಹಿಂದಿದೆ ಅವಿರತ ಪರಿಶ್ರಮ

ಯಾದಗಿರಿ ಜಿಲ್ಲಾಡಳಿತ ಭವನಕ್ಕೂ ಕಾಲಿಟ್ಟಿತೆ ಕೋವಿಡ್-19 ಸೋಂಕು?

ಯಾದಗಿರಿ ಜಿಲ್ಲಾಡಳಿತ ಭವನಕ್ಕೂ ಕಾಲಿಟ್ಟಿತೆ ಕೋವಿಡ್-19 ಸೋಂಕು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hare-khan

ಶೇರ್‌ಖಾನ್‌

any-money

ಮನಿ Money ಕಥೆ

check-mate

ಚೆಕ್‌ ಮೇಟ್‌

gaeage

ಜನತಾ ಗ್ಯಾರೇಜ್: ಹೆಲ್ಮೆಟ್‌

unil-mittal

ಅನಾಮಿಕ ಶ್ರೀಮಂತರು: ಸುನಿಲ್‌ ಮಿತ್ತಲ್‌

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavaniಹೊಸ ಸೇರ್ಪಡೆ

10July-10

ಕಳಸ: 190 ಕ್ಕೂ ಹೆಚ್ಚು ಮಂದಿಗೆ ಹೋಂ ಕ್ವಾರಂಟೈನ್

ರಾಯಚೂರಿನಲ್ಲಿ ಕೋವಿಡ್ ಸೋಂಕಿಗೆ ಮತ್ತೊಂದು ಬಲಿ: ಏಳಕ್ಕೇರಿದ ಸಾವಿನ ಸಂಖ್ಯೆ

ರಾಯಚೂರಿನಲ್ಲಿ ಕೋವಿಡ್ ಸೋಂಕಿಗೆ ಮತ್ತೊಂದು ಬಲಿ: ಏಳಕ್ಕೇರಿದ ಸಾವಿನ ಸಂಖ್ಯೆ

huballi-tdy-5

ಅತಿವೃಷ್ಟಿ ನಿರ್ವಹಣೆ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

10July-09

ಮತ್ತೆ 41 ಜನರಿಗೆ ಕೋವಿಡ್‌-19 ದೃಢ

ಆಸೆ ಪಟ್ಟಿಗಳ ಜತೆಗಿನ ಬದುಕು

ಆಸೆ ಪಟ್ಟಿಗಳ ಜತೆಗಿನ ಬದುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.