Udayavni Special

ಫ್ಲೋಟಿಂಗ್‌ ಕಾಲಂ- ತೊಲೆ ಮೇಲೆ ಕಂಬ


Team Udayavani, Feb 24, 2020, 5:41 AM IST

BULIDING

ಕಂಬದ ಮೇಲೆ ತೊಲೆಗಳು ಬರುವುದು ಎಲ್ಲೆಡೆ ಕಂಡುಬರುವ ಸಾಮಾನ್ಯ ಸಂಗತಿ. ಆದರೆ, ತೊಲೆಗಳ ಮೇಲೆ ಕಂಬಗಳನ್ನು ಹೊರಿಸಬೇಕು ಎಂದರೆ ಸ್ವಲ್ಪ ಹುಷಾರಾಗಿ ಮುಂದುವರಿಯಬೇಕಾಗುತ್ತದೆ. ಫ್ಲೋಟಿಂಗ್‌ ಕಾಲಂ ಎಂದು ಕರೆಯುವ ಈ ತಂತ್ರಜ್ಞಾನವನ್ನು ನೂರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ!

ಸಾಮಾನ್ಯವಾಗಿ ಕಂಬಗಳು ನೆಲಮಟ್ಟದ ಕೆಳಗಿಂದ ಮೇಲಕ್ಕೆ ಏರುತ್ತವೆ ಹಾಗೂ ಎಲ್ಲ ಭಾರ ಹೊತ್ತು ಭೂಮಿಗೆ ಸಾಗಿಸುತ್ತವೆ. ಆದರೆ ಕೆಲವೊಮ್ಮೆ ನಮಗೆ ನೆಲಮಟ್ಟದಲ್ಲಿ ಬೇಡದ ಕಾಲಂ ಮೇಲು ಮಟ್ಟದಲ್ಲಿ ಬೇಕಾಗಬಹುದು. ಇದು ಭಾರ ಹೊರಲೂ ಇರಬಹುದು, ಇಲ್ಲವೇ ಎಲವೇಷನ್‌ಗಾಗಿಯೂ ಇರಬಹುದು. ಕಂಬಗಳು ನೆಲಮಟ್ಟದಿಂದ ಶುರು ಆಗಿರದಿದ್ದರೆ ಇವುಗಳನ್ನು “ಫ್ಲೋಟಿಂಗ್‌ ಕಾಲಂ’ ಅಥವಾ ಬೀಮ್‌ ಮೇಲಿಂದ ಶುರುವಾಗುವ ಕಾಲಂ ಎಂದು ಹೇಳಲಾಗುತ್ತದೆ. ಕಂಬಗಳು ನೇರವಾಗಿ ಭೂಮಿಯ ಮೇಲಿಂದ ಶುರುವಾದರೆ, ಅವು ಹೊರುವ ಭಾರ ನೇರವಾಗಿ ಭೂಮಿಗೆ ವರ್ಗಾವಣೆ ಆಗುತ್ತದೆ. ಆದರೆ, ಮೊದಲ ಮಹಡಿಯ ಎತ್ತರದಲ್ಲಿ ಇಲ್ಲ ಲಿಂಟಲ್‌ ಮಟ್ಟದಿಂದ ಶುರು ಆದರೆ, ಭಾರವನ್ನು ನೇರವಾಗಿ ಭೂಮಿಗೆ ಹೊರಿಸಲು ಆಗದ ಕಾರಣ, ಸಂಕೀರ್ಣ ರೀತಿಯಲ್ಲಿ ಫ್ಲೋಟಿಂಗ್‌ ಕಾಲಂಗಳನ್ನು ವಿನ್ಯಾಸ ಮಾಡಬೇಕಾಗುತ್ತದೆ. ಕಂಬಗಳ ಮೇಲೆ ತೊಲೆಗಳನ್ನು ಕೂರಿಸುವುದು ಸುಲಭ. ಆದರೆ, ಇದಕ್ಕೆ ವಿರುದ್ಧವಾಗಿ ತೊಲೆಗಳ ಮೇಲೆ ಕಂಬಗಳು ಬರಬೇಕು ಎಂದಾಗ, ಕಂಬಗಳಿಗಿಂತ ತೊಲೆಗಳೇ ಹೆಚ್ಚು ಸದೃಢವಾಗಿರಬೇಕಾಗುತ್ತದೆ.

ಅನಿವಾರ್ಯ ಆದಾಗ
ಕೆಲವೊಮ್ಮೆ ಫ್ಲೋಟಿಂಗ್‌ ಕಾಲಂಗಳು ಅನಿವಾರ್ಯ ಆಗುತ್ತವೆ. ಕೆಳಗಿನ ಮಟ್ಟದಲ್ಲಿ ನಾನಾ ಕಾರಣಗಳಿಂದ ಕಾಲಂಗಳು ನಿವೇಶನದ ಒಳಗೆ ಎರಡು ಮೂರು ಅಡಿಗಳವರೆಗಾದರೂ ಇರಬೇಕಾಗುತ್ತದೆ. ರಸ್ತೆಯನ್ನು ಆಳವಾಗಿ ಅಗೆದಾಗ, ಕಂಬಗಳಿಗೆ ಹಾಕಲಾದ ಫ‌ುಟಿಂಗ್‌- ಪಾದದ ಆಧಾರವಾದ ಮಣ್ಣು ಕುಸಿದು ಹೋಗದಿರಲಿ ಎಂಬುದು ಮುಖ್ಯ ಕಾರಣ ಆಗಿರುತ್ತದೆ. ಇತ್ತೀಚಿನ ದಿನಗಳಲ್ಲಿ, ನೀರಿನ ಇಲ್ಲವೆ ಗ್ಯಾಸ್‌ ಕೊಳವೆಗಳನ್ನು ಅಳವಡಿಸಲು, ಎಂಟು- ಒಂಬತ್ತು ಅಡಿ ಆಳ ಅಗೆಯುವುದೂ ಇದೆ. ನಮ್ಮ ಕಂಬಗಳ ಪಾಯ ಸುಮಾರು ಐದು- ಆರು ಅಡಿ ಆಳ ಮಾತ್ರ ಇರುತ್ತದೆ. ನಮ್ಮ ಮನೆಯ ಪಾಯಕ್ಕಿಂತ ಅದರಲ್ಲೂ ಪಕ್ಕದಲ್ಲೇನೇ ಆಳವಾಗಿ ಅಗೆದರೆ, ನಮ್ಮ ಪಾಯಕ್ಕೆ ಅಪಾಯ ಆಗುವ ಸಾಧ್ಯತೆ ಇರುತ್ತದೆ. ಇಂಥ ಸಂದರ್ಭದಲ್ಲಿ ನಾವು ನಮ್ಮ ಮನೆಯ ಕಾಲಂಗಳನ್ನು ಎರಡು ಮೂರು ಅಡಿಯಷ್ಟು ಒಳಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಆದರೆ, ನಮಗೆ ಮೊದಲ ಮಹಡಿಯಲ್ಲಿ ಈ ರೀತಿಯ ತೊಂದರೆ ಇರುವುದಿಲ್ಲ. ಆದುದರಿಂದ, ಆ ಭಾಗವನ್ನು ಮುಂದಕ್ಕೆ ಹಾಕಿಕೊಳ್ಳಬಹುದು. ಯಾವುದೇ ಭಾಗವನ್ನು ಮುಂದಕ್ಕೆ ಚಾಚಿದಂತೆ ವಿನ್ಯಾಸ ಮಾಡಿದರೆ, ಅದಕ್ಕೆ ಸೂಕ್ತ ಆಧಾರ ಕಲ್ಪಿಸಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಫ್ಲೋಟಿಂಗ್‌ ಕಾಲಂಗಳು ಅನಿವಾರ್ಯ ಆಗುತ್ತವೆ.

ಕಾಲಂ ಲೆಕ್ಕಾಚಾರ
ಸಾಮಾನ್ಯವಾಗಿ ಬೀಮುಗಳು ಅವುಗಳ ಮೇಲೆ ಬರುವ ಗೋಡೆಗಳ ಭಾರವನ್ನು ಹಾಗೂ ಆ ಭಾಗದ ನೆಲದ, ಅಂದರೆ ಫ್ಲೋರ್‌ ಭಾರವನ್ನು ಹೊರುತ್ತವೆ. ಅದರ ಜೊತೆಗೆ ಕಂಬಗಳ ಭಾರವನ್ನೂ ಹೊರಬೇಕಾಗಿದ್ದರೆ, ಎಷ್ಟು ಭಾರ ಹೆಚ್ಚುವರಿಯಾಗಿ ಬರುತ್ತದೆ? ಎಂಬುದನ್ನು ನುರಿತ ಆರ್ಕಿಟೆಕ್ಟ್ ಇಂಜಿನಿಯರ್‌ಗಳ ಸಹಾಯದಿಂದ ವಿನ್ಯಾಸ ಮಾಡಿ, ನಿರ್ಧರಿಸಿ ಮುಂದುವರಿಯುವುದು ಉತ್ತಮ. ಬೀಮುಗಳ ಮೇಲೆ ಕಾಲಂ ಬರುವುದರಿಂದ, ಇಂಥ ಸ್ಥಳಗಳಲ್ಲಿ ಬೀಮುಗಳೇ ದೊಡ್ಡದಾಗಿದ್ದು, ಕಾಲಂಗಳು ಸಣ್ಣ ಗಾತ್ರದವಾಗಿರುತ್ತವೆ. ಕೆಳಗಿನ ಕಾಲಂ ಮೇಲೆ ಬೀಮು ಎರಡು ಅಡಿ ಹೊರಚಾಚಿದ ನಂತರ ಫ್ಲೋಟಿಂಗ್‌ ಕಾಲಂ ಬರುತ್ತಿದ್ದರೆ, ಅದು ನಿರ್ದಿಷ್ಟವಾಗಿ ಒಂದು ಭಾಗದ ಭಾರವನ್ನು ಮಾತ್ರ ಹೊರುವಂತೆ ವಿನ್ಯಾಸ ಮಾಡಬೇಕು. ಫ್ಲೋಟಿಂಗ್‌ ಕಾಲಂಗಳು ಸಾಮಾನ್ಯವಾಗಿ ಬಾಲ್ಕನಿ ಅಥವಾ ಪಾರ್ಟಿಷನ್‌- ವಿಭಜಕ ಗೋಡೆಗಳ ಭಾರವನ್ನು ಮಾತ್ರ ಹೊರುತ್ತವೆ. ಬೀಮಿನ ಮೇಲೆ ಬರುವ ಕಂಬಗಳು ಸಾಮಾನ್ಯವಾಗಿ ಒಂಬತ್ತು ಇಂಚಿಗೆ ಒಂಬತ್ತು ಇಂಚು ಇದ್ದರೆ, ಅವುಗಳ ಭಾರ ಹೊರುವ ತೊಲೆಗಳು ಒಂಬತ್ತು ಇಂಚಿಗೆ ಎರಡು ಅಡಿಗೂ ಹೆಚ್ಚು ದಪ್ಪವಾಗಿರುತ್ತವೆ!

ಬಾಲ್ಕನಿ ಸಿಟ್‌ಔಟ್‌ಗಳಲ್ಲಿ ಬಳಕೆ
ಸಾಮಾನ್ಯವಾಗಿ ಹೊರಚಾಚುಗಳು ಹೆಚ್ಚು ದೊಡ್ಡದಿದ್ದರೆ, ಅವುಗಳು ನೋಡಲು ಅಷ್ಟೊಂದು ಸುಂದರವಾಗಿ ಕಾಣುವುದಿಲ್ಲ, ಜೊತೆಗೆ, ಅವುಗಳಿಗೆ ಸೂಕ್ತ ಆಧಾರ ಕಲ್ಪಿಸುವುದೂ ಕಷ್ಟ. ಇಂಥ ಸಂದರ್ಭಗಳಲ್ಲಿ, ನೋಡಲು ಆಕರ್ಷಕವಾಗಿಯೂ, ಜೊತೆಗೆ ಭಾರ ಹೊರುವಂತೆಯೂ ನಾವು ಫ್ಲೋಟಿಂಗ್‌ ಕಾಲಂಗಳನ್ನು ಅಳವಡಿಸಬಹುದು. ಈ ಕಂಬಗಳು ಗೋಡೆಗಳಿಂದ ಹೊರಚಾಚಿದ ತೊಲೆಗಳ ಮೇಲೆ ಇದ್ದು, ಮೇಲಿನ ಹೊರಚಾಚಿದ ಸೂರಿನ ಭಾರವನ್ನು ಸಮರ್ಥವಾಗಿ ಹೊರಬಲ್ಲವು. ಕೆಳಗಿನ ಮಟ್ಟದಲ್ಲಿ ಕಾಲಂಗಳನ್ನು ಕೊಟ್ಟರೆ, ಓಡಾಡಲು ಅಡ್ಡ ಆಗಬಹುದು. ಇಲ್ಲವೇ, ಗಾಡಿ- ಕಾರ್‌ ಇತ್ಯಾದಿ ವಾಹನಗಳನ್ನು ನಿಲುಗಡೆ ಮಾಡಲೂ ಅಡ್ಡಿ ಆಗಬಹುದು. ಇಂಥ ಸಂದರ್ಭದಲ್ಲಿ, ಕಂಬದ ಮೇಲೆ ಕಂಬ ಬರುವ ಬದಲು, ತೊಲೆ ಮೇಲೆ ಕಂಬಗಳನ್ನು ಅಳವಡಿಸಿ, ಸೂರಿನ ಭಾರ ಹೊರುವಂತೆ ಮಾಡಬಹುದು. ಹೊರಚಾಚುಗಳು, ಹೆಚ್ಚು ಭಾರ ಹೊರುವಂತೆ ಮಾಡಬೇಕು ಎಂದರೆ, ಅವುಗಳ ದಪ್ಪ ಹೆಚ್ಚಾಗಿಬಿಡುತ್ತದೆ ಹಾಗೂ ನೋಡಲು ಅಷ್ಟೊಂದು ಸುಂದರವಾಗಿ ಕಾಣುವುದಿಲ್ಲ. ಅದೇ ಜಾಗದಲ್ಲಿ, ಎರಡು ಸಣ್ಣಗಾತ್ರದ ಫ್ಲೋಟಿಂಗ್‌ ಕಾಲಂಗಳನ್ನು ಅಳವಡಿಸಿದರೆ, ಸೌಂದರ್ಯ ಹೆಚ್ಚುವುದರ ಜೊತೆಗೆ ಉಳಿತಾಯವೂ ಆಗುತ್ತದೆ.

ಹಳೆಯ ಪರಂಪರೆ
ಕರಾವಳಿ ಪ್ರದೇಶದ ಹಳೆಯ ಮನೆಗಳಲ್ಲಿ ಈ ಮಾದರಿಯ ವ್ಯವಸ್ಥೆಯನ್ನು ನೋಡಬಹುದು. ಕೆಳಗೆ ದೊಡ್ಡ ಹಾಲ್‌ ಇದ್ದರೆ, ಮೇಲೆ ಅದೇ ಸ್ಥಳವನ್ನು ಸಣ್ಣ ಕೋಣೆಗಳನ್ನಾಗಿ ವಿಭಜಿಸಲು ಫ್ಲೋಟಿಂಗ್‌ ಕಾಲಂಗಳನ್ನು ಬಳಸುತ್ತಿದ್ದರು. ಹಾಗೆಯೇ, ಮಳೆ ಹೆಚ್ಚಿರುವ ಪ್ರದೇಶಗಳಲ್ಲೂ, ಕಂಬಗಳನ್ನು ರಕ್ಷಿಸಲು, ಮೇಲಿನ ಮಹಡಿಗಳನ್ನು ಅಥವ ಸೂರನ್ನು ಹೊರಚಾಚುತ್ತಿದ್ದರು. ಈ ಹೊರಚಾಚುಗಳಿಗೆ ತೊಲೆಗಳ ಮೇಲೆ ಸಣ್ಣ ಕಂಬಗಳನ್ನು ಆಧಾರವಾಗಿ ಇಟ್ಟು, ಸೂರಿನ ಭಾರವನ್ನು ಇವುಗಳ ಮೂಲಕ ಕಂಬಗಳಿಗೆ ವರ್ಗಾಯಿಸುತ್ತಿದ್ದರು. ನಮ್ಮಲ್ಲಿ ಬೃಹತ್‌ ರಥಗಳಿಗೂ ಇದೇ ರೀತಿಯಲ್ಲಿ ಮೇಲಿನ ಭಾಗ ಹೊರಚಾಚಲು, ಮರದ ಅಲಂಕಾರಿಕ ತೊಲೆಗಳ ಮೇಲೆ ಕಂಬಗಳನ್ನು ಇರಿಸಿ, ದೊಡ್ಡದಾಗಿ ಕಾಣುವಂತೆ ಮಾಡುತ್ತಿದ್ದರು. ಅದರ ಮೂಲ ಉದ್ದೇಶ- ಕೆಳಗೆ ಅಗಲ ಇದ್ದರೆ, ಜನಜಂಗುಳಿಯಲ್ಲಿ ದೂಡಲು ಕಷ್ಟ, ಹೆಚ್ಚು ಸ್ಥಳವನ್ನೂ ಆಕ್ರಮಿಸಿಕೊಳ್ಳುತ್ತದೆ. ಅದೇ ಮೇಲು ಮಟ್ಟದಲ್ಲಿ ಅಗಲ ಇದ್ದರೆ, ನೋಡಲು ಬೃಹದಾಕಾರವಾಗಿ ಕಾಣುವುದರ ಜೊತೆಗೆ, ಅದರದೇ ಆದ ಗಾಂಭೀರ್ಯವನ್ನೂ ಪಡೆಯುತ್ತದೆ.
ಹೆಚ್ಚಿನ ಮಾಹಿತಿಗೆ: 9844132826

– ಆರ್ಕಿಟೆಕ್ಟ್ ಕೆ. ಜಯರಾಮ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ 19 ಪರಿಹಾರ ನಿಧಿಗೆ ಕೆ.ಎಚ್. ಮುನಿಯಪ್ಪ ಪಿಂಚಣಿಯಲ್ಲಿ ಪ್ರತಿ ತಿಂಗಳು ಶೇ.30 ಅರ್ಪಣೆ

ಕೋವಿಡ್ 19 ಪರಿಹಾರ ನಿಧಿಗೆ ಕೆ.ಎಚ್. ಮುನಿಯಪ್ಪ ಪಿಂಚಣಿಯಲ್ಲಿ ಪ್ರತಿ ತಿಂಗಳು ಶೇ.30 ಅರ್ಪಣೆ

ಲಾಕ್‌ಡೌನ್‌ ಎಫೆಕ್ಟ್ ವರ್ಕ್‌ ಫ್ರಮ್‌ ಮೃಗಾಲಯ

ಲಾಕ್‌ಡೌನ್‌ ಎಫೆಕ್ಟ್ ವರ್ಕ್‌ ಫ್ರಮ್‌ ಮೃಗಾಲಯ

ಮಿಸ್‌ ಇಂಗ್ಲೆಂಡ್‌ ಈಗ ವೈದ್ಯೆ

ಮಿಸ್‌ ಇಂಗ್ಲೆಂಡ್‌ ಈಗ ವೈದ್ಯೆ

ಆರೋಗ್ಯ ಸಂಕಟದ ಸಮಯದಲ್ಲಿ ಕೋಮು ದ್ವೇಷ ಹೊತ್ತಿಸುವುದು ಅಕ್ಷಮ್ಯ ಅಪರಾಧ: ಕುಮಾರಸ್ವಾಮಿ

ಆರೋಗ್ಯ ಸಂಕಟದ ಸಮಯದಲ್ಲಿ ಕೋಮು ದ್ವೇಷ ಹೊತ್ತಿಸುವುದು ಅಕ್ಷಮ್ಯ ಅಪರಾಧ: ಕುಮಾರಸ್ವಾಮಿ

ಅಮೆರಿಕ: ಹಿರಿಯರನ್ನು ಮನೆಯೊಳಗೆ ಇರಿಸುವುದೇ ಸವಾಲು

ಅಮೆರಿಕ: ಹಿರಿಯರನ್ನು ಮನೆಯೊಳಗೆ ಇರಿಸುವುದೇ ಸವಾಲು

ಮೋದಿ ನಿಜಕ್ಕೂ ಗ್ರೇಟ್- ಟ್ರಂಪ್ ಬಹುಪರಾಕ್: 29 ಮಿಲಿಯನ್ ಡೋಸ್ ಔಷಧ ಅಮೆರಿಕಕ್ಕೆ ರಫ್ತು

ಮೋದಿ ನಿಜಕ್ಕೂ ಗ್ರೇಟ್- ಟ್ರಂಪ್ ಬಹುಪರಾಕ್: 29 ಮಿಲಿಯನ್ ಡೋಸ್ ಔಷಧ ಅಮೆರಿಕಕ್ಕೆ ರಫ್ತು

ಗರ್ಭಿಣಿಯರನ್ನು ಸಂಕಷ್ಟಕ್ಕೆ ತಳ್ಳಲಿದೆಯೇ ಕೋವಿಡ್-19?

ಗರ್ಭಿಣಿಯರನ್ನು ಸಂಕಷ್ಟಕ್ಕೆ ತಳ್ಳಲಿದೆಯೇ ಕೋವಿಡ್-19?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದುಡ್ಡೇ ಪ್ರಥಮಾ

ದುಡ್ಡೇ ಪ್ರಥಮಾ

isiri-tdy-7

ಸ್ಯಾನಿಟೈಸರ್ ಸೂರ್ಯಕಿರಣಗಳು

ಇಎಂಐ ಕಟ್ಟಿಲ್ವಾ ?

ಇಎಂಐ ಕಟ್ಟಿಲ್ವಾ ?

ಮನೆಯೇ ಚಿತ್ರಾಲಯ

ಮನೆಯೇ ಚಿತ್ರಾಲಯ

isiri-tdy-4

ಬಂತು ನೋಡಿ ವಾಟ್ಸ್ ಆ್ಯಪ್ ಬ್ಯಾಂಕಿಂಗ್‌

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

mysuru-tdy-3

ಪರಿಹಾರ ನಿಧಿಗೆ ಸದಸ್ಯರು ಹಣ ಪಾವತಿ

08-April-20

ಲಾಕ್‌ಡೌನ್‌ ಪಾಲಿಸಲು ಡಿಸಿಎಂ ಸವದಿ ಸಲಹೆ

mysuru-tdy-2

ಅನವಶ್ಯಕ ತಿರುಗಾಡುತ್ತಿದ್ದ 200ಕ್ಕೂ ಹೆಚ್ಚು ವಾಹನ ವಶ

ಕೋವಿಡ್ 19 ಪರಿಹಾರ ನಿಧಿಗೆ ಕೆ.ಎಚ್. ಮುನಿಯಪ್ಪ ಪಿಂಚಣಿಯಲ್ಲಿ ಪ್ರತಿ ತಿಂಗಳು ಶೇ.30 ಅರ್ಪಣೆ

ಕೋವಿಡ್ 19 ಪರಿಹಾರ ನಿಧಿಗೆ ಕೆ.ಎಚ್. ಮುನಿಯಪ್ಪ ಪಿಂಚಣಿಯಲ್ಲಿ ಪ್ರತಿ ತಿಂಗಳು ಶೇ.30 ಅರ್ಪಣೆ

ಲಾಕ್‌ಡೌನ್‌ ಎಫೆಕ್ಟ್ ವರ್ಕ್‌ ಫ್ರಮ್‌ ಮೃಗಾಲಯ

ಲಾಕ್‌ಡೌನ್‌ ಎಫೆಕ್ಟ್ ವರ್ಕ್‌ ಫ್ರಮ್‌ ಮೃಗಾಲಯ