ಫೋರ್ಡ್‌ ಫಿಗೋ: ನೋಡಿದರೆ ಫಿದಾ!

Team Udayavani, Apr 1, 2019, 6:00 AM IST

Ford

ಫೋರ್ಡ್‌ ಫಿಗೋ ಗರಿಷ್ಠ ಸುರಕ್ಷತೆ ಹೊಂದಿರುವ ಕಾರುಗಳಲ್ಲಿ ಒಂದು. ಒಟ್ಟು 6 ಏರ್‌ಬ್ಯಾಗ್‌ಗಳನ್ನು ಇದು ಹೊಂದಿದೆ. ಪ್ರಯಾಣಿಕರು ಕೂರುವಲ್ಲಿ ಮತ್ತು ಬದಿಗೆ ಕೂಡ ಏರ್‌ಬ್ಯಾಗ್‌ ಇರುವ ಕಾರು ಇದು. ಇದರೊಂದಿಗೆ ಎಬಿಎಸ್‌, ಇಬಿಡಿ ಕೂಡ ಲಭ್ಯವಿದೆ.

ದೇಶದಲ್ಲಿ ಉತ್ತಮ ಮಾರುಕಟ್ಟೆ ಪ್ರತಿಕ್ರಿಯೆಯನ್ನು ಹೊಂದಿರುವ ಕಾರುಗಳಲ್ಲಿ ಫೋರ್ಡ್‌ ಫಿಗೋ ಕೂಡಾ ಒಂದು. ಕೆಲವೇ ದಿನಗಳ ಹಿಂದೆ ಇದು ಬಿಡುಗಡೆಯಾಗಿದ್ದು, ಸದ್ದು ಮಾಡಿದೆ. ಹೊಸ ಫೀಚರ್‌ಗಳನ್ನು ಅಲ್ಪಸ್ವಲ್ಪ ಬಾಡಿ ಬದಲಾವಣೆಗಳನ್ನು ಹೊಂದಿದ್ದು, ಈಗಾಗಲೇ ಕಾರು ಪ್ರೇಮಿಗಳು ಉತ್ಸಾಹ ತೋರಿದ್ದಾರೆ. ಫೋರ್ಡ್‌ ಫಿಗೋದಲ್ಲಿ ಅಂಥದ್ದೇನಿದೆ ವಿಶೇಷ ಎಂಬುದನ್ನು ನೋಡೋಣ ಬನ್ನಿ..

ಏನು ಬದಲಾಗಿದೆ?
2018ರ ಫೋರ್ಡ್‌ ಫಿಗೋಕ್ಕಿಂತ 2019ರ ಫೇಸ್‌ಲಿಫ್ಟ್ ಮಾಡೆಲ್‌ ಒಂದಷ್ಟು ಬದಲಾವಣೆಗಳನ್ನು ಕಂಡಿದೆ. ಇದರಲ್ಲಿ ಮುಂಭಾಗದ ವಿನ್ಯಾಸ ತುಸು ಬದಲಾಗಿದೆ. ಅಂದರೆ ಹೆಡ್‌ಲೈಟ್‌ ಸ್ಟೈಲ್‌ ಬದಲಾಗಿದೆ. ಬಂಪರ್‌ ವಿನ್ಯಾಸ ಆಸ್ಪೈರ್‌ನಂತೆಯೇ ಇದೆ. ಟೈಟಾನಿಯಂ ಬ್ಲೂ ಮಾಡೆಲ್‌ನಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ ತುಸು ನೀಲಿ ಬಣ್ಣ ಆಕರ್ಷಕವಾಗಿದೆ. ಒವಿಆರ್‌ಎಮ್‌ಗಳು ಕಪ್ಪು ಬಣ್ಣದ್ದಾಗಿವೆ. ನಾಲ್ಕೂ ವಿಂಡೋಗಳಿಗೆ ಸ್ಟಿಕ್ಕರ್‌ ಹಾಕಲಾಗಿದೆ. ಜತೆಗೆ ಟಾಪ್‌ಎಂಡ್‌ ಮಾಡೆಲ್‌ ಆದ ಟೈಟಾನಿಯಂ ಬ್ಲೂನಲ್ಲಿ ದೊಡ್ಡ 195/77 ಆರ್‌ 15 ಟಯರ್‌ ಇದ್ದರೆ, ಅದಕ್ಕಿಂತ ಕೆಳಗಿನ ಮಾಡೆಲ್‌ಗ‌ಳಲ್ಲಿ 14 ಇಂಚಿನ 175/65 ಟಯರ್‌ಗಳನ್ನು ಅಳವಡಿಸಲಾಗಿದೆ. ಇದು ಹಿಂದಿನ ಫೋರ್ಡ್‌ ಫಿಗೋಗಳಿಗಿಂತ ದೊಡ್ಡ ಟಯರ್‌ ಆಗಿದ್ದು ಹೆಚ್ಚಿನ ಗ್ರಿಪ್‌, ವೇಗಕ್ಕೆ ಸಹಕಾರಿಯಾಗಿದೆ. ಇದಕ್ಕೆ ಹೊರತಾಗಿ ಮುಂಭಾಗದಲ್ಲಿ ಪ್ರಕಾಶಮಾನವಾದ ಎಲ್‌ಇಡಿಗಳನ್ನು ಅಳವಡಿಸಲಾಗಿದೆ. ನ್ಪೋರ್ಟಿ ಲುಕ್‌ಗೆ ಹೆಚ್ಚು ಆದ್ಯತೆ ನೀಡಲಾಗಿದೆ.

ಒಳಾಂಗಣ
ಒಳಾಂಗಣದಲ್ಲಿ ಟಚ್‌ಸ್ಕ್ರೀನ್‌ ಇರುವ ಇನ್ಫೋಎಂಟರ್‌ಟೈನ್‌ಮೆಂಟ್‌ ಸಿಸ್ಟಂ ಇದ್ದು 7 ಇಂಚಿನ ಟಚ್‌ಸ್ಕ್ರೀನ್‌ ಹೊಂದಿದೆ. ಹಿಂದಿನ ಮಾಡೆಲ್‌ ಕಾರುಗಳಿಗಿಂತ ಇದರ ಸಾಫ್ಟ್ವೇರ್‌ ಸುಧಾರಣೆಯಾಗಿದ್ದು ಅತಿ ವೇಗವಾಗಿ ಕಾರ್ಯನಿರ್ವಹಣೆ ಮಾಡುವಂತೆ ಮಾಡಲಾಗಿದೆ. ಸೀಟಿನ ಫ್ಯಾಬ್ರಿಕ್‌ಗಳನ್ನು ಉತ್ತಮಪಡಿಸಲಾಗಿದೆ. ಡೋರ್‌ಸೈಡ್‌ ಪ್ಯಾನೆಲ್‌ಗ‌ಳ ಬದಿ ನೀಲಿ ಬಣ್ಣವಿದ್ದು ಆಕರ್ಷಕವಾಗಿದೆ. ಮುಂಭಾಗದಲ್ಲಿ ಎರಡು ನೀರಿನ ಬಾಟಲಿ ಇಡುವಂತೆ ವಿನ್ಯಾಸ ಮಾಡಲಾಗಿದೆ. ಆದರೆ ಹಿಂಭಾಗದಲ್ಲಿ ಈ ಅನುಕೂಲ ಇಲ್ಲ. ಡೋರ್‌ ಹ್ಯಾಂಡಲ್‌ಗೆ ಕ್ರೋಂ ಪ್ಲೇಟ್‌ಗಳನ್ನು ಅಳವಡಿಸಲಾಗಿದೆ.

ಪವರ್‌ಫ‌ುಲ್‌ ಎಂಜಿನ್‌
ಸಣ್ಣ ಹ್ಯಾಚ್‌ಬ್ಯಾಕ್‌ ಕಾರುಗಳಲ್ಲಿ ಫಿಗೋ ಅತ್ಯಂತ ಪವರ್‌ಫ‌ುಲ್‌ ಎಂಜಿನ್‌ ಹೊಂದಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಎರಡರಲ್ಲೂ ಇದರ ಎಂಜಿನ್‌ ಹೆಸರು ಮಾಡಿದೆ. 1.2 ಲೀಟರ್‌ನ 3 ಸಿಲಿಂಡರ್‌ನ ಎಂಜಿನ್‌ 96 ಬಿಎಚ್‌ಪಿ ಶಕ್ತಿ ಉತ್ಪಾದನೆ ಮಾಡಿದರೆ, ಹಾಗೆಯೇ 4 ಸಿಲಿಂಡರ್‌ನ 1.5 ಲೀಟರ್‌ನ ಡೀಸೆಲ್‌ ಎಂಜಿನ್‌ 100 ಎಚ್‌.ಪಿ ಶಕ್ತಿ ಉತ್ಪಾದನೆ ಮಾಡುತ್ತದೆ. ಡೀಸೆಲ್‌ನಲ್ಲಿ 1.2 ಲೀಟರ್‌ನ ಎಂಜಿನ್‌ ಕೂಡ ಲಭ್ಯವಿದೆ. ಇದು 96 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ. ಡೀಸೆಲ್‌, ಪೆಟ್ರೋಲ್‌ ಮಾದರಿಯ ಎಂಜಿನ್‌ಗಳಲ್ಲಿ ಬಿಎಚ್‌ಪಿಗಳನ್ನು ಈ ವರ್ಷದ ಆವೃತ್ತಿಗಳಲ್ಲಿ ಏರಿಸಲಾಗಿದೆ. ಆಟೋಮ್ಯಾಟಿಕ್‌ ಆವೃತ್ತಿಯಲ್ಲಿ 123 ಬಿಎಚ್‌ಪಿಯ ಎಂಜಿನ್‌ ಲಭ್ಯವಿದೆ.

ಸುರಕ್ಷತೆಗೆ ಗರಿಷ್ಠ ಆದ್ಯತೆ
ಫೋರ್ಡ್‌ ಫಿಗೋ ಗರಿಷ್ಠ ಸುರಕ್ಷತೆ ಹೊಂದಿರುವ ಕಾರುಗಳಲ್ಲಿ ಒಂದು. ಒಟ್ಟು 6 ಏರ್‌ಬ್ಯಾಗ್‌ಗಳನ್ನು ಇದು ಹೊಂದಿದೆ. ಪ್ರಯಾಣಿಕರು ಕೂರುವಲ್ಲಿ ಮತ್ತು ಬದಿಗೆ ಕೂಡ ಏರ್‌ಬ್ಯಾಗ್‌ ಇರುವ ಕಾರು ಇದು. ಇದರೊಂದಿಗೆ ಎಬಿಎಸ್‌, ಇಬಿಡಿ ಕೂಡ ಲಭ್ಯವಿದೆ.

ಯಾರಿಗೆ ಬೆಸ್ಟ್‌
ಉತ್ತಮ ಮೈಲೇಜ್‌ ನೀಡುವ ಡೀಸೆಲ್‌ ಕಾರುಗಳಲ್ಲಿ ಫೋರ್ಡ್‌ ಫಿಗೋ ಕೂಡ ಒಂದು. ಪುಟ್ಟ ಫ್ಯಾಮಿಲಿಗೆ ಇದು ಉತ್ತಮ ಕಾರು. ಫೋರ್ಡ್‌ ಉತ್ತಮ ಡ್ರೈವಿಂಗ್‌ ಅನುಭವ ಕೊಡುತ್ತದೆ. 5.15ರಿಂದ 8.09 ಲಕ್ಷ ರೂ.ವರೆಗೆ ಎಕ್ಸ್‌ಷೋ ರೂಂ ಬೆಲೆಯನ್ನು ಹೊಂದಿದೆ.

– ಈಶ

ಟಾಪ್ ನ್ಯೂಸ್

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

Election ಗೆದ್ದ ನಂತರ ಜನರಿಂದ ದೂರವಾಗದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು

Election ಗೆದ್ದ ಬಳಿಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು; ಬಿ.ವೈ.ರಾಘವೇಂದ್ರ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

Election ಗೆದ್ದ ನಂತರ ಜನರಿಂದ ದೂರವಾಗದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು

Election ಗೆದ್ದ ಬಳಿಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು; ಬಿ.ವೈ.ರಾಘವೇಂದ್ರ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

8-shirva

Shirva: ವಾಕಿಂಗ್‌ ವೇಳೆ ಕುಸಿದು ಬಿದ್ದು ಸಾವು

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.