ಹತಾಶಭಾವ ಮರೆತು ನಾಳೆಯನ್ನು ಸಂಭ್ರಮಿಸಿ

Team Udayavani, Jan 20, 2020, 5:55 AM IST

ಸುಮ್ಮನೆ ಒಮ್ಮೆ ಒಂಟಿ ಯೋಚನೆ ಮಾಡುತ್ತಾ ಕೂತು ಬಿಡಿ. ನಿಮ್ಮ ತೋಳಲಾಟ, ಮಾನಸಿಕ ಜಿಜ್ಞಾಸೆ, ಮುಂದೆ ಕಾಣುವ ಆಸೆ, ಹಿಂದೆ ಗತಿಸಿ ಮತ್ತೆ ಕಾಡುವ ನಿರಾಶೆ ಎಲ್ಲವೂ ಒಮ್ಮೆ ಒಟ್ಟಾಗಿ ತಲೆಯನ್ನು ಚಚ್ಚುವಂತೆ ಪೀಡಿಸುತ್ತದೆ. ಇದೇ ಸಮಯದಲ್ಲಿ ಬರುವ ಒಂದು ಯೋಚನೆ ಇದೇ ಅಲ್ಲವೇ? ಅದು ಕ್ಷಣಕ್ಕೆ ಬದಲಾಗಬೇಕು, ಏನಾದರು ಮಾಡಬೇಕು, ಸಾಧಿಸಬೇಕು, ಸಾಗಬೇಕು ಎನ್ನುವುದಾಗಿರುತ್ತದೆ.

ಜೀವನದಲ್ಲಿ ಹೊಸತನ್ನು ಕಂಡು ಸಂಭ್ರಮಿಸುವುದಕ್ಕಿಂತ ಹಳೆಯದನ್ನು ನೆನೆದು ನೊಂದುಕೊಳ್ಳುವುದೇ ಹೆಚ್ಚು. ಪ್ರತಿಯೊಬ್ಬರ ಬದುಕಿನಲ್ಲಿ ನಾಳೆ ಎನ್ನುವ ಆಶಾವಾದ, ನಿನ್ನೆ ಎನ್ನುವ ಹತಾಶ ಭಾವ ಇದ್ದೇ ಇರುತ್ತದೆ. ಆದರೆ ಇಂದು ನಾವು ಮಾತನ್ನು ಪೂರ್ತಿಯಾಗಿ ತಲೆ ಕೆಳಗಾಗಿ ಮಾಡಿ ಬಿಟ್ಟಿದ್ದೇವೆ. ನಾಳೆಯನ್ನು ಆಶಯವಾಗಿ ಕಾಣುವ ಬದಲು, ಏನೋ ಆಗಬಹುದು, ಕೆಟ್ಟ ಘಳಿಗೆ ಬರಬಹುದು ಎನ್ನುವ ಹತಾಶ ಭಾವವನ್ನು ನಂಬಿಕೊಂಡು ಇರುವ ಮನಸ್ಥಿತಿ.

ಸುಮ್ಮನೆ ಒಮ್ಮೆ ಯೋಚನೆ ಮಾಡುತ್ತಾ ಕೂತು ಬಿಡಿ. ನಿಮ್ಮ ತೋಳಲಾಟ, ಮಾನಸಿಕ ಜಿಜ್ಞಾಸೆ, ಮುಂದೆ ಕಾಣುವ ಆಸೆ, ಹಿಂದೆ ಗತಿಸಿ ಮತ್ತೆ ಕಾಡುವ ನಿರಾಶೆ ಎಲ್ಲವೂ ಒಮ್ಮೆ ಒಟ್ಟಾಗಿ ತಲೆಯನ್ನು ಚಚ್ಚುವಂತೆ ಪೀಡಿಸುತ್ತದೆ. ಇದೇ ಸಮಯದಲ್ಲಿ ಬರುವ ಒಂದು ಯೋಚನೆ ಇದೇ ಅಲ್ವಾ ಅದು ಕ್ಷಣಕ್ಕೆ ಬದಲಾಗಬೇಕು, ಏನಾದರೂ ಮಾಡಬೇಕು, ಸಾಧಿಸಬೇಕು, ಸಾಗಬೇಕು ಎನ್ನುವುದಾಗಿರುತ್ತದೆ. ಇನ್ನು ಕೆಲವರಿಗೆ ಒಂಟಿತನದ ಗಾಢ ಯೋಚನೆ, ಎಲ್ಲವೂ ಮೋಸ, ಎಲ್ಲವೂ ಹೋಯಿತು, ಎಲ್ಲರೂ ದೋಷಿ ಎಂದು ಕುಗ್ಗಿಸುತ್ತಾ ಸಾವಿನ ಸವಾರಿಯನ್ನು ಮಾಡಿಸಿ ಬಿಡುತ್ತದೆ. ಒಟ್ಟಿನಲ್ಲಿ ಒಂಟಿತನ ಎನ್ನುವುದು ಬದಕಲು ಒಂದು ಅಸ್ತ್ರ ಸಾಯಲು ಒಂದು ಶಸ್ತ್ರ.!

ಸ್ವಾರ್ಥಿಗಳು ನಾವಾಗದಿರೋಣ
ಬದುಕು ಎಲ್ಲವನ್ನೂ ಕಲಿಸುತ್ತದೆ. ಎಲ್ಲ ಪರಿಸ್ಥಿತಿಯಲ್ಲೂ ನಮ್ಮನ್ನು ಅಲೆಯುವಂತೆ ಮಾಡುತ್ತದೆ. ಒಂದೇ ದಿನ ಸಾವಿರಾರು ಮಂದಿಯ ಹುಟ್ಟು, ನೂರಾರು ಮಂದಿಯ ಸಾವು, ಹೀಗೆ ಪ್ರತಿನಿತ್ಯ ಜಗತ್ತಿನಲ್ಲಿ ಸಾಗುವ ದೃಶ್ಯ ಒಂದು ದಿನ ಅಥವಾ ಕ್ಷಣಕ್ಕೆ ನನ್ನಲ್ಲೂ ಬರಬಹುದು. ನಾನೊಬ್ಬ ತಮ್ಮ, ಅಣ್ಣ, ಗಂಡ. ಅಂಕಲ್‌, ಅಜ್ಜ ಹೀಗೆ ಎಲ್ಲ ಪಾತ್ರಗಳಲ್ಲಿ ಅನಿವಾರ್ಯವಾಗಿ ಒಗ್ಗಿಕೊಳ್ಳಲೇಬೇಕು. ಆಯಾ ಪಾತ್ರಗಳಿಗೆ ಜನ ಮನ್ನಣೆಯನ್ನು ನೀಡಬೇಕು ಎನ್ನುವ ಭ್ರಮೆಯಲ್ಲಿ ನಾವು ಇರಬಾರದು ಅಷ್ಟೇ. ದೇವರಲ್ಲಿ ನಾವು ಎಷ್ಟೇ ಅಂತಸ್ತು, ಆಸ್ತಿಯನ್ನು ಬೇಡಿಕೊಂಡರೂ, ದೇವರು ಖುಷಿ ಹಾಗೂ ದುಃಖ ಗಳ ನಕ್ಷತ್ರಗಳನ್ನು ಇಟ್ಟುಕೊಂಡ ಮಾಯಾವಿ. ಆತನ ಕೈಯಿಂದ ಬರುವ ಆಸೆ, ನಿರಾಶೆ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಭಕ್ತರು ನಾವು ಆಗಬೇಕು ವಿನಾ ಸಂತೋಷದ ಸರಮಾಲೆಯನ್ನು ಧರಿಸಿಬಿಡು ದೈವ ಎಂದು ಕೇಳುವ ಸ್ವಾರ್ಥಿಗಳು ನಾವು ಆಗಬಾರದು.

ಸಂಬಂಧಗಳನ್ನು ಸಲೀಸಾಗಿ ಸಾಗಿಸಬಹುದು, ಯಾವುದೇ ಗಲಾಟೆ ಗದ್ದಲಗಳಿಲ್ಲದೇ. ಸಂತೋಷವೇ ಕುಟುಂಬದ ಮೂಲ ಎಂದುಕೊಂಡು ಹೆಂಡತಿ, ಮಕ್ಕಳನ್ನು ಸಾಕಬಹುದು ಎನ್ನುವ ವ್ಯಕ್ತಿಯೊಬ್ಬ ಅದೊಂದು ಆಫೀಸ್‌ನಲ್ಲಿ ಯಾವುದೋ ಒಂದು ಕಾರಣಕ್ಕೆ ಮಾಡಿದ ಯೋಜನೆಗಳೆಲ್ಲ ನೀರುಪಾಲಾಗಿ, ಲಕ್ಷಾಂತರ ರೂಪಾಯಿ ನಷ್ಟವಾದಾಗ, ಬ್ಯಾಂಕ್‌ನಲ್ಲಿ ಕೊಡಿಟ್ಟ ಹಣ, ತಿಂಗಳಾಂತ್ಯಕ್ಕೆ ಕಟ್ಟುವ ಲಾಭಾಂಶ ಹೆಚ್ಚಿಸುವ ಹಣ ಎಲ್ಲವನ್ನು ಸರಿಯಾಗಿ ನಿಭಾಯಿಸುತ್ತಾ ಇದ್ದರೂ ಒಂದೇ ಒಂದು ತಪ್ಪು ಸಂಸಾರದ ಸಂತೋಷಕ್ಕೆ ಅಡ್ಡಲಾಗಿ ನಿಲ್ಲುತ್ತದೆ. ಇಷ್ಟು ವರ್ಷ ಎಲ್ಲರನ್ನೂ ಆತ್ಮೀಯವಾಗಿ, ನಗುಮುಖದಿಂದ ಮಾತನಾಡಿಸುತ್ತಿದ್ದ ವ್ಯಕ್ತಿ ಯಾವುದು ಬೇಡ ಎನ್ನುವುದರ ಮಟ್ಟಿಗೆ ಬಂದು ಬಿಡುತ್ತಾನೆ, ಕೂಗಿ ಕುಗ್ಗಿ ಬಿಡುತ್ತಾನೆ. ಆದರೆ ಈ ಸಮಯದಲ್ಲಿ ಎಲ್ಲ ಆಲೋಚನೆಗಳನ್ನು ಯಾರ ಬಳಿಯೂ ಹೇಳಿಕೊಳ್ಳದೇ ಒಂಟಿಯಾಗಿ, ಮೌನದ ಮಾತಿನಲ್ಲಿ ಕೂರುವ ನಿರ್ಧಾರವೇ ಜೀವನದ ಹಾಗೂ ಜೀವದ ಎಲ್ಲ ಖುಷಿಯ ಬಣ್ಣಗಳು ಸಾವಿನ ಅಲೋಚನೆಯಲ್ಲಿ ಲೀನವಾಗುತ್ತವೆ.

ಕಣ್ಣೀರಿನ ತೂಕ
ಇಂಥದ್ದು ಪ್ರತಿನಿತ್ಯ ನಮ್ಮಲ್ಲಿ ನಡೆಯುತ್ತಾ ಇರುತ್ತದೆ. ನಮ್ಮ ಸುತ್ತ ಮುತ್ತ. ಆದರೆ ನಮ್ಮ ಕಣ್ಣಿಗೆ ಬೀಳುವುದು ಉತ್ತುಂಗಕ್ಕೇರಿ ಪಾತಾಳಕ್ಕೆ ಬೀಳುವ ಶ್ರೀಮಂತರು ಮಾತ್ರ. ಸಾವು ಎಷ್ಟು ವಿಚಿತ್ರ ನೋಡಿ, ದುಃಖಗಳಿದ್ರೂ ಅವುಗಳಿಗೂ ಕಣ್ಣೀರಿನ ತೂಕವನ್ನು ನೀಡುತ್ತದೆ. ಸೋಲಿನ ಬೇಲಿ, ಗೆಲುವಿನ ಗಡಿಯನ್ನು ದಾಟುವ ಪ್ರಯತ್ನ ನಮ್ಮದಾಗ ಬೇಕು. ಚಪ್ಪಾಳೆ ತಟ್ಟಲು ಬರುವ ಕೈಗಳು, ದೂರ ಸರಿಯಲು ಇರುವ ಕಾಲುಗಳು ಎರಡೂ ನಮ್ಮ ಅಕ್ಕ ಪಕ್ಕವೇ ಇರುತ್ತವೆ, ಸೋಲು, ಗೆಲುವು ಬಂದಾಗ ಅವು ಎದುರಿಗೆ ಬರುತ್ತವೆ ಅಷ್ಟೇ.
ನಾಳೆಯನ್ನು ಭರವಸೆಯಿಂದ ಸ್ವಾಗತಿಸುವ, ನಿರಾಸೆಯಿಂದಲ್ಲ. ನಾಲ್ಕು ದಿನದ ಬದುಕಿನ ಆಟದಲ್ಲಿ ಮುಖವಾಡ ತೊಟ್ಟು ಆಟ-ಪಾಠ ಕಲಿಯುವ ಬದಲು ದೇವರು ಸೃಷ್ಟಿಸಿರುವ ವಿಧಿಬರಹದಲ್ಲಿ ನಾವು ಬೇರೆ ಬೇರೆ ಬಣ್ಣಗಳನ್ನು ತೊಟ್ಟ ನಾಟಕಧಾರಿಗಳು ಮಾತ್ರ ಎನ್ನುವುದನ್ನು ಮರೆಯದಿರುವ.

- ಸುಹಾನ್‌ ಶೇಕ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ