
ಆ್ಯಪ್ ಮಿತ್ರ: ಫೋಟೊ ಮ್ಯಾಪ್ (PHOTO MAP)
Team Udayavani, May 11, 2020, 11:34 AM IST

ಸಾಂದರ್ಭಿಕ ಚಿತ್ರ
ಮ್ಯಾಪ್ (ನಕ್ಷೆ) ಎಲ್ಲರಿಗೂ ಗೊತ್ತೇ ಇದೆ. ವಲ್ಡ್ ಮ್ಯಾಪ್ನಲ್ಲಿ ಎಲ್ಲಾ ಖಂಡಗಳು, ದೇಶಗಳನ್ನು ನೋಡುತ್ತೇವೆ. ಪ್ರಪಂಚದ ನಕ್ಷೆಯನ್ನೇ ಫೋಟೊ ಗ್ಯಾಲರಿಯನ್ನಾಗಿಸಿದರೆ? ನಮ್ಮ ಸ್ಮಾರ್ಟ್ಫೋನ್ಗಳಲ್ಲಿ ಇರುವ ಸಾವಿರಾರು ಫೋಟೊಗಳನ್ನು, ವಿಭಾಗಿಸಿ ಇಡುವುದೇ ದೊಡ್ಡ ಸವಾಲು. ಅದರಲ್ಲೂ, ಪ್ರವಾಸ ಹೋಗುವ ಗೀಳಿದ್ದರಂತೂ ಮುಗಿದೇ ಹೋಯಿತು. ಪ್ರತಿ ಪ್ರವಾಸದಿಂದ ವಾಪಸ್ಸಾದಾಗಲೂ, ನೂರಾರು ಫೋಟೊಗಳನ್ನು ಹೊತ್ತು ತರುತ್ತೇವೆ. ಯಾವ ಫೋಟೊವನ್ನು ಯಾವ ಸ್ಥಳದಲ್ಲಿ ತೆಗೆದದ್ದು ಎಂದು ತಿಳಿದರೆ, ಆಯಾ ಫೋಟೊ ಗುತ್ಛವನ್ನು ಹೊರತೆಗೆದು, ನಮಗೆ ಬೇಕಾದ ನಿರ್ದಿಷ್ಟ ಫೋಟೊವನ್ನು ಆಕ್ಸೆಸ್ ಮಾಡುವುದು ಸುಲಭ. ಇದಕ್ಕೆ ಸಹಾಯ ಮಾಡುವುದೇ- ಫೋಟೊ ಮ್ಯಾಪ್ ಆ್ಯಪ್.
ಅದರಲ್ಲೂ, ವಿದೇಶ ಪ್ರವಾಸಗಳನ್ನು ಕೈಗೊಳ್ಳುವವರಿಗೆ, ಈ ಆ್ಯಪ್ ತುಂಬಾ ಸಹಕಾರಿ. ಗೂಗಲ್ ಮ್ಯಾಪ್ ನ್ನು ಝೂಮ್ ಮಾಡುವಂತೆಯೇ, ಬಳಕೆದಾರರು ತಾವು ಇಚ್ಚಿಸಿದ ಸ್ಥಳವನ್ನು ಝೂಮ್ ಇನ್, ಝೂಮ್ ಔಟ್ ಮಾಡುವ ಮೂಲಕ, ಆಯಾ ಜಾಗದಲ್ಲಿ ತೆಗೆದ ಫೋಟೋಗಳತ್ತ ಕೇಂದ್ರೀಕರಿಸಬಹುದು. ಚಿತ್ರದಲ್ಲಿ ತೋರಿಸಿರುವಂತೆ ಪ್ರತಿಯೊಂದು ಫೋಟೊ ಗುತ್ಛದ ಮೇಲೆ ಒಂದು ಥಂಬ್ ನೇಲ್ ಫೋಟೊ ಮೂಡುವುದು. ಆಯಾ ಥಂಬ್ ನೇಲನ್ನು ಕ್ಲಿಕ್ಕಿಸಿದಾಗ ಅದರಲ್ಲಿನ ಫೋಟೊಗಳು ತೆರೆದುಕೊಳ್ಳುವವು. ಪ್ರತಿ ಗುತ್ಛದ ಮೇಲೆ ಅದರಲ್ಲಿರುವ ಫೋಟೊಗಳ
ಸಂಖ್ಯೆಯನ್ನು ನಮೂದಿಸಿರಲಾಗುತ್ತದೆ.
ಹೆಚ್ಚಿನ ಮಾಹಿತಿಗೆ: tinyurl.com/y7my6coo
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
