ಟೈಗೋರ್‌ ಬಂತು ದಾರಿಬಿಡಿ…


Team Udayavani, Jun 3, 2019, 6:00 AM IST

z-6

ಟಾಟಾ ಟೈಗೋರ್‌ ಇಲೆಕ್ಟ್ರಿಕ್‌ ಕಾರಿನಲ್ಲಿ ಎಂಜಿನ್‌ ಬದಲಿಗೆ ಎಲೆಕ್ಟ್ರಿಕ್‌ ಮೋಟಾರ್‌ ಮತ್ತು ಬ್ಯಾಟರಿಯನ್ನು ಅಳವಡಿಸಲಾಗಿದೆ. ಕಾರಿನಲ್ಲಿ ಎ.ಸಿ. ಸೇರಿದಂತೆ, ಇತರೆ ಎಲ್ಲ ವ್ಯವಸ್ಥೆಗಳೂ ಇವೆ.

ಭಾರತೀಯ ಕಾರು ಮಾರುಕಟ್ಟೆ ನಿಧಾನವಾಗಿ ಎಲೆಕ್ಟ್ರಿಕ್‌ ಕಾರುಗಳ ಮಾರಾಟದತ್ತ ಗಮನ ಹರಿಸುತ್ತದೆ. ಮುಂದಿನ ತಲೆಮಾರಿನ ಹೊತ್ತಿಗೆ ಇಡೀ ವಿಶ್ವದಲ್ಲಿ ಎಲೆಕ್ಟ್ರಿಕ್‌ ಕಾರುಗಳೇ ಇರಲಿದ್ದು, ಅದಕ್ಕೆ ಪೂರಕವೆಂಬಂತೆ ಭಾರತದಲ್ಲೂ ಎಲೆಕ್ಟ್ರಿಕ್‌ ಕಾರುಗಳು ಒಂದೊಂದಾಗಿ ಬಿಡುಗಡೆಯಾಗುತ್ತಿವೆ. ಭಾರತದಲ್ಲಿ ಮೊದಲ ಬಾರಿಗೆ 2011ರಲ್ಲಿ ರೇವಾ ಎಲೆಕ್ಟ್ರಿಕ್‌ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಬಳಿಕ ಈ ಕಂಪನಿಯನ್ನು ಖರೀದಿಸಿದ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ದೊಡ್ಡ ಮಟ್ಟದಲ್ಲಿ ತಯಾರಿಕೆಗೆ ಮುಂದಾಗಿತ್ತು. ಬಳಿಕ ಕಳೆದ ವರ್ಷ ಇ-ವೆರಿಟೋ ಎಲೆಕ್ಟ್ರಿಕ್‌ ಸೆಡಾನ್‌ ಕಾರನ್ನು ಅದು ಬಿಡುಗಡೆ ಮಾಡಿದೆ. ಇದೇ ನೆಲೆಯಿಂದ ಟಾಟಾ ಕೂಡ ಉತ್ತೇಜನಗೊಂಡಿದ್ದು, ಟೈಗೋರ್‌ ಇಲೆಕ್ಟ್ರಿಕ್‌ ಸೆಡಾನ್‌ ಕಾರನ್ನು ಮೊನ್ನೆಯಷ್ಟೇ ಬಿಡುಗಡೆ ಮಾಡಿದೆ.

ವಿಶೇಷವೇನು?
ಕೇಂದ್ರ ಸರಕಾರಿ ಸ್ವಾಮ್ಯದ ಸಂಸ್ಥೆಯೊಂದಕ್ಕೆ ಪೂರೈಸುವ ಸಲುವಾಗಿ ಟಾಟಾ ಟೈಗೋರ್‌ ಎಲೆಕ್ಟ್ರಿಕ್‌ ಕಾರ್‌ ನಉತ್ಪಾದನೆಗೆ ಮುಂದಾಗಿತ್ತು. ಒಟ್ಟು 10 ಸಾವಿರ ಕಾರುಗಳನ್ನು ಪೂರೈಸಲು ಅದು ಬಿಡ್ಡಿಂಗ್‌ ಗೆದ್ದುಕೊಂಡಿತ್ತು. ಅದರಂತೆ ಈಗಿನ ಟೈಗೋರ್‌ ಕಾರಿನ ವಿನ್ಯಾಸವನ್ನೇ ಇಟ್ಟುಕೊಂಡು ಕಾರನ್ನು ನಿರ್ಮಾಣ ಮಾಡಿತ್ತು. ಇಲೆಕ್ಟ್ರಿಕ್‌ ಕಾರಿನಲ್ಲಿ ಯಾವುದೇ ವಿನ್ಯಾಸ ಬದಲಾಗಿಲ್ಲ. ಇದರಲ್ಲಿ ಎಂಜಿನ್‌ ಬದಲಿಗೆ ಎಲೆಕ್ಟ್ರಿಕ್‌ ಮೋಟಾರ್‌ ಮತ್ತು ಬ್ಯಾಟರಿಯನ್ನು ಅಳವಡಿಸಲಾಗಿದೆ. 3 ಫೇಸ್‌ನ ಎ.ಸಿ ಇಂಡಕ್ಷನ್‌ ಮೋಟಾರ್‌ ಮತ್ತು ಫಾಸ್ಟ್‌ ಚಾರ್ಜಿಂಗ್‌ ಕಿಟ್‌ ಅಳವಡಿಸಲಾಗಿದೆ.

ಡ್ರೈವ್‌ಗೆ ಹೇಗಿದೆ?
ಟಾಟಾ ಟೈಗೋರ್‌ ಇಲೆಕ್ಟ್ರಿಕ್‌ ಚಾಲನೆಯಲ್ಲೇನೂ ವ್ಯತ್ಯಾಸವಿಲ್ಲ. ಇದರ ಪ್ಲಸ್‌ ಪಾಯಿಂಟ್‌ ಎಂದರೆ, ಯಾವುದೇ ವೈಬ್ರೇಷನ್‌ ಇಲ್ಲ. ಇಂಜಿನ್‌ ಶಬ್ದವೂ ಇಲ್ಲ. ಚಾಲನೆಗೆ ಸುಖಕರವಾಗಿದೆ. ಎ.ಸಿ ಸೇರಿದಂತೆ ಎಲ್ಲ ವ್ಯವಸ್ಥೆಗಳೂ ಇವೆ. ಫ‌ುಲ್‌ ಚಾರ್ಜ್‌ ಮಾಡಿದರೆ ಸುಮಾರು 148 ಕಿ.ಮೀ. ಸಂಚರಿಸುತ್ತದೆ. ಒಂದು ನಿರ್ದಿಷ್ಟ ರೇಂಜ್‌ಗೆ ಬಂದ ಮೇಲೆ ಚಾರ್ಜ್‌ ಮುಗಿಯುತ್ತಿರುವ ಬಗ್ಗೆ ಎಚ್ಚರಿಸುತ್ತದೆ. 30ಕಿ.ವ್ಯಾಟ್‌ನ ಮೋಟ್‌ ಇದಕ್ಕಿದ್ದು ಸುಮಾರು 40.7ಎಚ್‌ಪಿ ಶಕ್ತಿಯಷ್ಟಾಗುತ್ತದೆ. ಕಾರಿನ ಗಾತ್ರ, ಭಾರಕ್ಕೆ ಹೋಲಿಸಿದರೆ ಇದು ಅದರ ಶಕ್ತಿ ಕಡಿಮೆಯಾಯಿತು ಎಂದೆನಿಸದೇ ಇರದು. 0-80 ವೇಗಕ್ಕೆ 18.84 ಸೆಕೆಂಡ್‌ ತೆಗೆದುಕೊಳ್ಳುತ್ತದೆ. 60-70 ಕಿ.ಮೀ. ವೇಗದ ಡ್ರೈವ್‌ಗೆ ಸುಖಕರವಾಗಿದೆ.

ಚಾರ್ಜಿಂಗ್‌
ಸುಮಾರು 36 ನಿಮಿಷದಲ್ಲಿ ಶೇ.30ರಷ್ಟು ಚಾರ್ಜ್‌ ಆಗುತ್ತದೆ. ಇದರಿಂದ ಸುಮಾರು 35 ಕಿ.ಮೀ. ಸಂಚರಿಸಬಹುದು. 16.2 ಕಿ.ವ್ಯಾಟ್‌ನ ಬ್ಯಾಟರಿ ಇದರಲ್ಲಿದೆ. ಶೇ.80ರಷ್ಟು ಚಾರ್ಜ್‌ ಆಗಲು 90 ನಿಮಿಷ ತಗಲುತ್ತದೆ. ಸಾಮಾನ್ಯ 15ಎ 220ವೋಲ್ಟ್ನ ಸಾಕೆಟ್‌ನಲ್ಲಿ ಚಾರ್ಜ್‌ ಆಗಲು 6 ಗಂಟೆ ತಗುಲಬಹುದು. ಫಾಸ್ಟ್‌ ಚಾರ್ಜಿಂಗ್‌ಗೆ ಕಂಪನಿ ಕೊಡುವ 15 ಕಿ.ವ್ಯಾ. ಡಿಸಿ ಸಾಕೆಟ್‌ ಅನ್ನು ಮನೆ/ಕಾರು ನಿಲುಗಡೆ ಜಾಗದಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ.

ಬೆಲೆ ಎಷ್ಟು?
ಟೈಗೋರ್‌ ಇವಿ ಬೆಲೆ ಸುಮಾರು 11.5 ಲಕ್ಷ ರೂ. ಇದಕ್ಕೆ ಫೇಮ್‌ 2 ಸಬ್ಸಿಡಿ ಇದ್ದು ವಾಣಿಜ್ಯ ಬಳಕೆದಾರರಿಗೆ ಅನ್ವಯವಾಗುತ್ತದೆ. ಖಾಸಗಿ ಬಳಕೆ ಖರೀದಿಗೆ ಸಬ್ಸಿಡಿ ಪರಿಣಾಮ ಹೆಚ್ಚಿರದು. ಗಟ್ಟಿಮುಟ್ಟಾಗಿರುವ ಈ ಕಾರು, ಒಂದು ಲೆಕ್ಕದಲ್ಲಿ ನೋಡಿದರೆ, ಚಾರ್ಜಿಂಗ್‌-ಬ್ಯಾಟರಿ ಸಾಮರ್ಥ್ಯ ಸಾಲದು. ಆದರೆ ಸೀಮಿತ ಬಳಕೆ, ನಗರ ಪ್ರಯಾಣ ಇತ್ಯಾದಿ ಕಾರಣಗಳನ್ನು ಪರಿಗಣಿಸಿದರೆ ಕಾರು ಖರೀದಿ ಮಾಡಬಹುದು.

ತಾಂತ್ರಿಕತೆ
1126 ಕೆ.ಜಿ ಕಾರಿನ ಒಟ್ಟು ಭಾರ
72ವೋ 3 ಫಾಸ್‌ ಎಸಿ ಇಂಡಕ್ಷನ್‌ ಮೋಟಾರು
105ಎನ್‌ ಎಂ ಟಾರ್ಕ್‌
16.2 ಕಿ.ವಾ. ಬ್ಯಾಟರಿ ಸಾಮರ್ಥ್ಯ
142 ಕಿ.ಮೀ. ಸಿಂಗಲ್‌ ಚಾರ್ಜ್‌ಗೆ ಮೈಲೇಜ್‌

ಈಶ

ಟಾಪ್ ನ್ಯೂಸ್

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.