Udayavni Special

ಭೂಮಿಗೆ ಸಿಗುತ್ತದೆ ಬಂಗಾರದ ಬೆಲೆ…


Team Udayavani, Oct 19, 2020, 8:18 PM IST

isiri-tdy-2

‌ಕಷ್ಟಕಾಲಕ್ಕೆ ಅಂತ ಸ್ವಲ್ಪ ಹಣ ಸಂಪಾದನೆ ಮಾಡಿದ್ದೇನೆ. ಅದನ್ನು ಬ್ಯಾಂಕ್‌ನಲ್ಲಿ ಇಟ್ಟಿದ್ದೇನೆ. ಒಂದು ದೊಡ್ಡ ಮೊತ್ತದ ಇಡುಗಂಟನ್ನು ಫಿಕ್ಸೆಡ್‌ ಡೆಪಾಸಿಟ್‌ ಆಗಿ ಇಟ್ಟಿರುವ ವಿಷಯವಾಗಿ ಮೊನ್ನೆ ಮೊನ್ನೆಯತನಕ ಖುಷಿ ಮತ್ತು ಹೆಮ್ಮೆ ಇತ್ತು.ಕಾರಣ, ಒಂದುಕಡೆಯಲ್ಲಿ ಫಿಕ್ಸೆಡ್‌ ಮಾಡಿದ ಹಣ ಭದ್ರವಾಗಿದೆ ಎಂಬ ಭಾವ, ಅದರ ಜೊತೆಗೆ, ಪ್ರತಿ ವರ್ಷವೂ ಆ ಹಣಕ್ಕೆ ಸಿಗುತ್ತಿದ್ದ ಆಕರ್ಷಕ ಬಡ್ಡಿ.

ಆದರೆ, ಈ ವರ್ಷದ ಆರಂಭದಲ್ಲಿಯೇ ಬ್ಯಾಂಕ್‌ ನ ಮ್ಯಾನೇಜರ್‌ ನೇರವಾಗಿ ಹೇಳಿಬಿಟ್ಟರು:” ನೋಡಿಇವರೇ, ನೀವು ನಮ್ಮ ಹಳೆಯ ಗ್ರಾಹಕರು. ಹಾಗಾಗಿ ಹೇಳ್ತಾ ಇದ್ದೇನೆ. ಇನ್ನು ಮುಂದೆ ಫಿಕ್ಸೆಡ್‌ ಆಗಿಇಡುವ ಹಣಕ್ಕೆ ಹೆಚ್ಚಿನ ಬಡ್ಡಿ ಸಿಗುವುದಿಲ್ಲ. ಬ್ಯಾಂಕ್‌ನ ಬಡ್ಡಿ ನಂಬಿಕೊಂಡು ಜೀವನ ಮಾಡಬಹುದು ಅನ್ನುವಯೋಚನೆಯನ್ನು ಮನಸ್ಸಿಂದ ತೆಗೆದುಹಾಕಿಬಿಡಿ. ಫಿಕ್ಸೆಡ್‌ ಡಿಪಾಸಿಟ್‌ನ ಹಣವನ್ನು ಭೂಮಿಯ ಮೇಲೆ ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಿ…” ಬ್ಯಾಂಕ್‌ ಮ್ಯಾನೇಜರ್‌ ಹೀಗೆ ಹೇಳಿದ ಮೇಲೆ ಏನು ಮಾಡುವುದು? – ಹೀಗೊಂದು ಪ್ರಶ್ನೆಕೇಳಿ ಆ ಹಿರಿಯರುತಲೆಮೇಲೆಕೈ ಹೊತ್ತು ಕೂತು ಬಿಟ್ಟರು. ಇದು ಯಾರೋ ಒಬ್ಬರ ಸಮಸ್ಯೆ ಅಲ್ಲ. ಬ್ಯಾಂಕ್‌ನಲ್ಲಿಫಿಕ್ಸೆಡ್‌ ಡಿಪಾಸಿಟ್‌ ಎಂದು ಹಣ ಇಟ್ಟಿರುವ ಬಹುಮಂದಿಯ ಪ್ರಶ್ನೆ.

ಈಗಿನ ಪರಿಸ್ಥಿತಿ ನೋಡಿದರೆ, ಬ್ಯಾಂಕ್‌ ನ ಬಡ್ಡಿ ದರದಲ್ಲಿ ಏರಿಕೆ ಆಗುವುದು ಸಾಧ್ಯವೇ ಇಲ್ಲ. ಏನಿದ್ದರೂ ಮುಂದೆ ಈಗಿರುವ ಬಡ್ಡಿಯ ಪ್ರಮಾಣ ಕೂಡ ಕಡಿಮೆ ಆಗುತ್ತಲೇ ಹೋಗಬಹುದು, ಅಷ್ಟೇ. ಇಂಥ ಸಂದರ್ಭದಲ್ಲಿ ನಾವುಕಷ್ಟ ಪಟ್ಟುಕೂ ಡಿಟ್ಟ ಹಣಕ್ಕೆ ತಕ್ಕ ಬೆಲೆ ಸಿಗಬೇಕು, ಆ ಹಣದಮೌಲ್ಯ ದಿನಗಳೆದಂತೆ ಹೆಚ್ಚಬೇಕು ಅನ್ನುವವರು ಸೈಟ್‌ ಖರೀದಿಸುವುದು ಒಳ್ಳೆಯದು. ಏಕೆಂದರೆ, ಬೆಂಗಳೂರೂ ಸೇರಿದಂತೆ ರಾಜ್ಯದ ಎಲ್ಲಾ ನಗರದಲ್ಲಿಯೂ ಭೂಮಿಗೆ ಚಿನ್ನದಂಥಾ ಬೆಲೆಯಿದೆ.ಈಗ ಬರಡು ಭೂಮಿಯಂತೆಕಾಣಿಸಿದ್ದು ಇನ್ನು 3 ವರ್ಷಗಳಲ್ಲಿ ನಂಬಲುಕಷ್ಟ ಅನ್ನುವಂತೆ ಅಭಿವೃದ್ಧಿ ಹೊಂದಿದ ಹಲವು ಉದಾಹರಣೆಗಳಿವೆ. ಹಾಗಾಗಿ, ಎಷ್ಟು ಬರುತ್ತದೋ ಅಷ್ಟು ಬಡ್ಡಿ ಸಾಕು ಎಂದು ಬ್ಯಾಂಕ್‌ನಲ್ಲಿ ಹಣ ಇಡುವ ಬದಲು, ಫಿಕ್ಸೆಡ್‌ ಆಗಿರುವ ಒಟ್ಟು ಮೊತ್ತದಲ್ಲಿ ಅರ್ಧದಷ್ಟನ್ನು ತೆಗೆದು, ಅದರಲ್ಲಿ ಒಂದು ಚಿಕ್ಕ ಸೈಟ್‌ ಖರೀದಿಸುವುದು ಜಾಣತನ. ( ಸೈಟ್‌ ಖರೀದಿಗೆಂದು ಸಾಲ ಮಾಡುವ ಮೂರ್ಖತನ ಬೇಡ) ಹೀಗೆ ಮಾಡುವುದರಿಂದ, ಹೊಸದೊಂದು ಆಸ್ತಿ ಖರೀದಿಸಿದ ತೃಪ್ತಿಯೂ ಸಿಗುತ್ತದೆ.

ಕಷ್ಟಕಾಲಕ್ಕೆ ಬ್ಯಾಂಕ್‌ನಲ್ಲಿ ಸ್ವಲ್ಪ ಹಣ ಉಳಿಸಿದ ಸಮಾಧಾನವೂ ಜೊತೆಯಾಗುತ್ತದೆ. ಆದರೆ, ಒಂದು ವಿಷಯ ನೆನಪಲ್ಲಿ ಇರಲಿ: ಸೈಟ್‌ ಖರೀದಿಸುವಾಗ, ಸಂಬಂಧಪಟ್ಟ ದಾಖಲೆಗಳು ಒರಿಜಿನಲ್‌ ಇದ್ದವಾ ಎಂದು ಒಂದಲ್ಲ; ಹತ್ತು ಬಾರಿ ಗ್ಯಾರಂಟಿ ಮಾಡಿಕೊಳ್ಳಬೇಕು. ಎಲ್ಲಾ ದಾಖಲೆಗಳ ಮೂಲ ಪ್ರತಿಗಳನ್ನೂ ತಪ್ಪದೇ ಪಡೆಯಬೇಕು. ಭೂಮಿಗೆ ಯಾವತ್ತೇ ಆದರೂ ಬಂಗಾರದ ಬೆಲೆ ಸಿಕ್ಕೇ ಸಿಗುವುದರಿಂದ, ಅದರ ಮೇಲೆ ಹೂಡಿದ ಹಣಕ್ಕೆ ಎಂದೂ ಮೋಸವಾಗುವುದಿಲ್ಲ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ

ನಿದ್ದೆ ಮಾತ್ರೆ ಸೇವಿಸಿ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ

ರಾಜ್ಯ ಸರಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಕನ್ನಡ ಕಡ್ಡಾಯ! ಸರಕಾರದಿಂದ ದಿಢೀರ್ ಸುತ್ತೋಲೆ

ರಾಜ್ಯ ಸರಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಕನ್ನಡ ಕಡ್ಡಾಯ! ಸುತ್ತೋಲೆ ಹೊರಡಿಸಿದ ಸರಕಾರ

ರಾಜ್ಯದ ಅಭಿವೃದ್ಧಿ ಯೋಜನೆ ಕುರಿತು ಎರಡು ತಿಂಗಳಿಗೊಮ್ಮೆ ಸಂಸದರೊಂದಿಗೆ ಸಭೆ: ಸಿಎಂ

ರಾಜ್ಯದ ಅಭಿವೃದ್ಧಿ ಯೋಜನೆ ಕುರಿತು ಎರಡು ತಿಂಗಳಿಗೊಮ್ಮೆ ಸಂಸದರೊಂದಿಗೆ ಸಭೆ: ಸಿಎಂ

ಕಲ್ಲಿದ್ದಲು ಹೊಗೆಯಿಂದ ಉಸಿರುಕಟ್ಟಿ ಯುವತಿ ಸಾವು, ಮೂವರು ಅಸ್ವಸ್ಥ

ಕಲ್ಲಿದ್ದಲು ಹೊಗೆಯಿಂದ ಉಸಿರುಗಟ್ಟಿ ಯುವತಿ ಸಾವು, ಮೂವರು ಅಸ್ವಸ್ಥ

ಆಟವಾಡುತ್ತಿದ್ದ 5 ಮಕ್ಕಳು ನಾಪತ್ತೆ: ಘಟನೆ ನಡೆದ ಒಂದೇ ಗಂಟೆಯಲ್ಲಿ ಪತ್ತೆಹಚ್ಚಿದ ಪೊಲೀಸರು

ಆಟವಾಡುತ್ತಿದ್ದ 5 ಮಕ್ಕಳು ನಾಪತ್ತೆ: ಘಟನೆ ನಡೆದ ಒಂದೇ ಗಂಟೆಯಲ್ಲಿ ಪತ್ತೆಹಚ್ಚಿದ ಪೊಲೀಸರು

ಹುಬ್ಬಳ್ಳಿ : ನಮ್ಮನ್ನು ಬೇರೆ ಠಾಣೆಗೆ ವರ್ಗಾವಣೆ ಮಾಡಿ ಎಂದು ಮನವಿ ಮಾಡಿದ ಸಿಬ್ಬಂದಿಗಳು

ಹುಬ್ಬಳ್ಳಿ :ದಯವಿಟ್ಟು ನಮ್ಮನ್ನು ಬೇರೆ ಠಾಣೆಗೆ ವರ್ಗಾವಣೆ ಮಾಡಿ! ಪೊಲೀಸ್ ಸಿಬ್ಬಂದಿಗಳ ಮನವಿ

ಗೋವಾದಲ್ಲಿ ಲಕ್ಷ್ಮೀ ಹೆಬ್ಟಾಳಕರ್ ಪುತ್ರನ ಅದ್ಧೂರಿ ಮದುವೆ

ಗೋವಾದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಟಾಳಕರ್ ಪುತ್ರನ ಅದ್ಧೂರಿ ಮದುವೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬರುತ್ತಿದೆ ರನೌಲ್ಟ್ ಕಿಗರ್‌

ಬರುತ್ತಿದೆ ರನೌಲ್ಟ್ ಕಿಗರ್‌

ಲಾಕ್‌ಡೌನ್‌ ತಂದ ಲಕ್‌

ಲಾಕ್‌ಡೌನ್‌ ತಂದ ಲಕ್‌

ಶರಾವತಿ ಹೊಳೆಸಾಲಿನಲ್ಲಿ ಹೊನ್ನೆ ಕಾಂತಿಘಮ!

ಶರಾವತಿ ಹೊಳೆಸಾಲಿನಲ್ಲಿ ಹೊನ್ನೆ ಕಾಂತಿಘಮ!

ಬೆಳವಲ ಹಣ್ಣಿನಿಂದ ಹೊಸಬೆಳಕು

ಬೆಳವಲ ಹಣ್ಣಿನಿಂದ ಹೊಸಬೆಳಕು

ಬುಟ್ಟಿಯಿಂದ ಬಾಳು ಗಟ್ಟಿ

ಬುಟ್ಟಿಯಿಂದ ಬಾಳು ಗಟ್ಟಿ

MUST WATCH

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

udayavani youtube

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

udayavani youtube

ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

ಹೊಸ ಸೇರ್ಪಡೆ

ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ

ನಿದ್ದೆ ಮಾತ್ರೆ ಸೇವಿಸಿ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ

ತನಿಖೆ ಚುರುಕು: ಡಾಕ್ಟರ್‌ ಮೋಟು ಮತ್ತಷ್ಟು ದಿನ ಜೈಲಿನಲ್ಲಿ!

ತನಿಖೆ ಚುರುಕು: ಡಾಕ್ಟರ್‌ ಮೋಟು ಮತ್ತಷ್ಟು ದಿನ ಜೈಲಿನಲ್ಲಿ!

ರಾಜ್ಯ ಸರಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಕನ್ನಡ ಕಡ್ಡಾಯ! ಸರಕಾರದಿಂದ ದಿಢೀರ್ ಸುತ್ತೋಲೆ

ರಾಜ್ಯ ಸರಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಕನ್ನಡ ಕಡ್ಡಾಯ! ಸುತ್ತೋಲೆ ಹೊರಡಿಸಿದ ಸರಕಾರ

ರಾಜ್ಯದ ಅಭಿವೃದ್ಧಿ ಯೋಜನೆ ಕುರಿತು ಎರಡು ತಿಂಗಳಿಗೊಮ್ಮೆ ಸಂಸದರೊಂದಿಗೆ ಸಭೆ: ಸಿಎಂ

ರಾಜ್ಯದ ಅಭಿವೃದ್ಧಿ ಯೋಜನೆ ಕುರಿತು ಎರಡು ತಿಂಗಳಿಗೊಮ್ಮೆ ಸಂಸದರೊಂದಿಗೆ ಸಭೆ: ಸಿಎಂ

ಕಲ್ಲಿದ್ದಲು ಹೊಗೆಯಿಂದ ಉಸಿರುಕಟ್ಟಿ ಯುವತಿ ಸಾವು, ಮೂವರು ಅಸ್ವಸ್ಥ

ಕಲ್ಲಿದ್ದಲು ಹೊಗೆಯಿಂದ ಉಸಿರುಗಟ್ಟಿ ಯುವತಿ ಸಾವು, ಮೂವರು ಅಸ್ವಸ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.