ಸುವರ್ಣ ಬಾಳೆ

Team Udayavani, Dec 18, 2017, 12:43 PM IST

18-10.jpg

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮುಂಬಾಳು ಗ್ರಾಮದಲ್ಲಿ ಯುವ ರೈತ ಹಸನ್‌ ಸಾಬ್‌ ಬಾಳೆ ಜೊತೆ ಸುವರ್ಣ ಗಡ್ಡೆ ಕೃಷಿ ಕೈಗೊಂಡು ಬಂಪರ್‌ ಫ‌ಸಲು ಪಡೆದಿದ್ದಾರೆ.

ಶಿವಮೊಗ್ಗ-ಜೋಗ ಮಾರ್ಗದ ರಾಷ್ಟ್ರೀಯ ಹೆದ್ದಾರಿ 206 ಕ್ಕೆ ತಾಗಿಕೊಂಡಂತೆ ಮುಂಬಾಳು ಗ್ರಾಮದಲ್ಲಿ ಒಂದೂವರೆ ಎಕರೆ ವಿಸ್ತೀರ್ಣದ ಇವರ ಹೊಲವಿದೆ. ಮೇ ಕೊನೆಯ ವಾರ ಪುಟ್‌ ಬಾಳೆ ಜಾತಿಯ 800 ಬಾಳೆ ಗಿಡ ನೆಟ್ಟರು. ಗಿಡಕ್ಕೆ ರೂ.8 ರಂತೆ ಖರೀದಿಸಿದ್ದರು. ಗಿಡದಿಂದ ಗಿಡಕ್ಕೆ 6 ಅಡಿ ಅಂತರ  ಬರುವಂತೆ ಬಾಳೆ ಸಸಿ ನಾಟಿ ಮಾಡಿದ್ದಾರೆ. ಬಾಳೆಗಿಡಗಳ ನಡುವೆ ಗಿಡದಿಂದ ಗಿಡಕ್ಕೆ 4 ಅಡಿ ಅಂತರದಲ್ಲಿ ಸುವರ್ಣ ಗಡ್ಡೆ ಸಸಿಗಳ ಬೆಳೆಸಿದ್ದಾರೆ. ಇವರು 10 ಕ್ವಿಂಟಾಲ್‌ ಸುವರ್ಣಗಡ್ಡೆ ಬೀಜ ಖರೀದಿಸಿದ್ದರು. ಇದರಿಂದ ಸರಾಸರಿ ಅರ್ಧ ಕಿ.ಗ್ರಾಂ.ತೂಕದಷ್ಟು ಬೀಜ ಬರುವಂತೆ ಕತ್ತರಿಸಿ, ನಾಟಿ ಮಾಡಿ 450 ಸುವರ್ಣ ಗಡ್ಡೆ ಬೆಳೆಸಿದ್ದಾರೆ. ಹೀಗೆ ನೆಡುವಾಗ ಅರ್ಧ ಅಡಿ ಆಳ ಮತ್ತು ಸುತ್ತಳತೆ ಬರುವಂತೆ ಗುಂಡಿ ನಿರ್ಮಿಸಿ ಸಗಣಿ ಗೊಬ್ಬರ ಮತ್ತು ಬೂದಿ ಹಾಕಿ ಬೀಜ ನಾಟಿ ಮಾಡಿದರು. ಬೀಜ ಮೊಳೆತು ಎಲೆಗಳು ಕಾಣಿಸುತ್ತಿದ್ದಂತೆ, ಸಗಣಿ ಗೊಬ್ಬರ ಹಾಕಿ ಮಣ್ಣು ಏರಿಸಿದರು. ಸುವರ್ಣಗಡ್ಡೆ ಸಸಿಗಳಿಗೆ  ಪ್ರತಿ 25 ದಿನಕ್ಕೆ ಒಮ್ಮೆಯಂತೆ 20:20 ಒಮ್ಮೆ ಹಾಗೂ 19:19 ಕಾಂಪ್ಲೆಕ್ಸ್‌ ಗೊಬ್ಬರ ನೀಡಿದ್ದರು. ಇವು ಬಾಳೆ ಗಿಡಗಳ ನಡುವೆ ಹುಲುಸಾಗಿ ಬೆಳೆದಿವೆ.

ಲಾಭ ಹೇಗೆ ?
 ಕ್ವಿಂಟಾಲ್‌ ಒಂದಕ್ಕೆ ರೂ.2300 ರಂತೆ 10 ಕ್ವಿಂಟಾಲ್‌ ಸುವರ್ಣಗಡ್ಡೆಯ ಬೀಜದ ಗಡ್ಡೆ ಖರೀದಿಸಿದ್ದರು. 450 ಗಿಡ ಬೆಳೆದಿದೆ. ಪ್ರತಿ ಗಿಡದ ಬುಡದಲ್ಲಿ ಸರಾಸರಿ 10 ಕಿ.ಗ್ರಾಂ. ತೂಕದಷ್ಟು ಗಾತ್ರದ  ಸುವರ್ಣಗಡ್ಡೆ ಫ‌ಸಲು ಬಿಟ್ಟಿದೆ. 450 ಗಿಡದಿಂದ ಸುಮಾರು 45 ಕ್ವಿಂಟಾಲ್‌ ಸುವರ್ಣಗಡ್ಡೆ ಫ‌ಸಲು ದೊರೆಯುತ್ತದೆ.  ಕ್ವಿಂಟಾಲ್‌ ಒಂದಕ್ಕೆ ಮಾರುಕಟ್ಟೆಯಲ್ಲಿ ಸರಾಸರಿ 1,600ರೂ. ಬೆಲೆ ಇದೆ. 45 ಕ್ವಿಂಟಾಲ್‌ ಫ‌ಸಲು ಮಾರಾಟದಿಂದ ಇವರಿಗೆ ರೂ.65 ಸಾವಿರ ಆದಾಯ ದೊರೆಯುತ್ತಿದೆ. ಬೀಜದ ಗಡ್ಡೆ ಖರೀದಿ, ಗಿಡ ನೆಡುವಿಕೆ, ಗೊಬ್ಬರ, ಕಳೆ ಸ್ವತ್ಛತೆ  ಇತ್ಯಾದಿ ಎಲ್ಲಾ ಲೆಕ್ಕ ಹಾಕಿದರೆ ರೂ.35 ಸಾವಿರ ಖರ್ಚಾಗಿದೆ. ಆದಾಯದಲ್ಲಿ ಖರ್ಚು ಕಳೆದರೆ 30 ಸಾವಿರ ಲಾಭ ದೊರೆಯುತ್ತದೆ. ಬಾಳೆ ಸಸಿ ನೆಟ್ಟು ಒಂದು ವರ್ಷದ ನಂತರ ಫ‌ಸಲು ಕೈಗೆ ಸಿಗುತ್ತದೆ. ಆಮೇಲೆ ಆದಾಯ.  ಅದು ಕೈಗೆ ಬರುವ ಮೊದಲೇ (ಆರುತಿಂಗಳ ಅವಧಿಯಲ್ಲಿ) ಉಪ ಬೆಳೆಯಿಂದ ಆದಾಯ ಗಳಿಸುವ ಇವರ ತಂತ್ರ ಇತರರಿಗೆ ಮಾದರಿ.

ಮಾಹಿತಿಗೆ-9901709065

 ಮಾತಿಗಾಗಿ ಇವರ ಮೊಬೈಲ್‌ ಸಂಖ್ಯೆ 9901709065 ನ್ನು ಸಂಪರ್ಕಿಸಬಹುದು.

    ಎನ್‌.ಡಿ.ಹೆಗಡೆ ಆನಂದಪುರಂ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.