ಕೋಟಿ ಮರದ ಕಥೆ ಕೇಳಿ

ಸಕ್ಕರೆ ಸಿಹಿಯ ಸಿದ್ದು ಹಲಸು

Team Udayavani, Jun 24, 2019, 5:01 AM IST

ಹಲಸು ಅಂದರೆ ದಪ್ಪ ಕಾಯಿ, ಅಪಾರ ತೊಳೆಗಳು ನೆನಪಿಗೆ ಬರುತ್ತವೆ. ಆದರೆ, ಇಂಥ ಕಾಯಿಯ ಸಾಗಾಣಿಕೆ ಕಷ್ಟ. ಇಲ್ಲೊಂದು ಹಲಸಿದೆ. ಹೆಸರು ಸಿದ್ಧ ಹಲಸು. ನಗರ ಪ್ರದೇಶದವರು ಒಂದೇ ಗುಕ್ಕಿಗೆ ಎತ್ತಿಕೊಂಡು ಹೋಗಬಹುದಾದ ಸೈಜು, ಸಕ್ಕರೆಯ ಸಿಹಿಯ ಅಪರೂಪದ ಹಲಸಿದು. ಇದನ್ನು ಬೆಳೆದ ಸೀಗೇನಹಳ್ಳಿಯ ಸಿದ್ದೇಶರಿಗೆ, ದೇಶ ವಿದೇಶದಿಂದ ಡಿಮ್ಯಾಂಡ್‌ ಬಂದಿದೆ …

ಇದು “ಕೋಟಿ’ ಮರದ ಕತೆ. ಈ ಕತೆ ಶುರುವಾಗುವುದು ತುಮಕೂರಿನ ಗುಬ್ಬಿ ತಾಲ್ಲೂಕಿನ ಚೇಳೂರಿನ ಸೀಗೇನಹಳ್ಳಿಯಿಂದ. ಸುಮಾರು 36 ವರ್ಷಗಳ ಹಿಂದೆ ಈ ಊರಿನ ಸಿದ್ದೇಶ್‌, ಪಕ್ಕದ ಹಳ್ಳಿಗೆ ಹೋಗಿದ್ದಾಗ, ಆಕಸ್ಮಿಕವಾಗಿ ಹಲಸಿನ ಹಣ್ಣು ಸವಿದರು. ಅದರ ರುಚಿಗೆ ಮಾರುಹೋಗಿ ಬೀಜವೊಂದನ್ನು ತಂದು, ತಮ್ಮ ಜಮೀನಿನ ಮೂಲೆಯಲ್ಲಿ ಊರಿದ್ದರು. ನಂತರ ಸಿದ್ದೇಶ್‌ ಅದರತ್ತ ತಿರುಗಿಯೂ ನೋಡಿರಲಿಲ್ಲ. ಇದಾಗಿ ದಶಕದ ನಂತರ ಜಮೀನಿನ ಕಸ-ಕಡ್ಡಿ, ಬೇಲಿ ಕಿತ್ತೂಗೆಯುವಾಗ ಅಲ್ಲಿ ಬೀಜ ಮೊಳಕೆಯೊಡೆದು ಆಳೆತ್ತರದ ಮರ ಬೆಳೆದುನಿಂತಿತ್ತು. ಆಮೇಲೆ ನೀರು ಹಾಕಿ ಪೋಷಿಸಿದ್ದಕ್ಕೆ ಕೆಲವೇ ವರ್ಷಗಳಲ್ಲಿ ಆ ಮರ ಫ‌ಲವನ್ನೂ ಕೊಡಲು ಶುರುಮಾಡಿತು. ಮನೆಗೆ ಬಂದವರಿಗೆ ಸಿದ್ದೇಶ್‌ ಈ ಮರದ ಹಲಸಿನ ತೊಳೆಗಳನ್ನು ನೀಡುತ್ತಿದ್ದರು. ಸವಿದವರೆಲ್ಲರ ಬಾಯಲ್ಲೂ “ಸಕ್ಕರೆ’ಯ ಮಾತು.

ಈ ಹಣ್ಣು ಎರಡು ವರ್ಷದ ಹಿಂದೆ ಹೆಸರಘಟ್ಟದ ಹಲಸಿನ ಮೇಳಕ್ಕೆ ಬಂದಾಗ, ವಿಜ್ಞಾನಿಗಳ ಕಣ್ಣು ಇದರ ಮೇಲೆ ಬಿತ್ತು. ಅವರು ಸಂಶೋಧನೆ ಮಾಡಿದಾಗ ಅಚ್ಚರಿ. ಸಾಮಾನ್ಯ ಹಲಸಿನ ಹಣ್ಣುಗಳಿಗಿಂತ ದುಪ್ಪಟ್ಟು , ಅಂದರೆ, 31 ಬ್ರಿಕ್ಸ್‌ನಷ್ಟು ಕರಗುವ ಪಿಷ್ಟ ಇದರಲ್ಲಿದೆ. ಹಣ್ಣಿನಲ್ಲಿದ್ದ ಈ ವಿಶೇಷ ಗುಣವನ್ನು ಗುರುತಿಸಿದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ನಿರ್ದೇಶಕ ಡಾ.ಎಂ.ಆರ್‌. ದಿನೇಶ್‌ ಮಾರ್ಗದರ್ಶನದಲ್ಲಿ ಹಿರಿಯ ವಿಜ್ಞಾನಿ ಡಾ.ಜಿ. ಕರುಣಾಕರನ್‌ ಮತ್ತಿತರ ತಜ್ಞರು ಸೇರಿಕೊಂಡು, ತಾಯಿ ಮರದಿಂದ ಕಸಿ ಮಾಡಿ ಗಿಡಗಳನ್ನು ಅಭಿವೃದ್ಧಿಪಡಿಸಿಯೇಬಿಟ್ಟರು. ಆ ತಳಿಗೆ ಇಟ್ಟ ಹೆಸರೇ “ಸಿದ್ದು’. ಈಗ ಗಿಡಗಳ ಬೇಡಿಕೆ ಒಂದು ಲಕ್ಷದ ಗಡಿ ದಾಟಿದೆ. ಇದನ್ನು ಎರಡು ವರ್ಷ ಆದರೂ ಪೂರೈಸಲು ಸಾಧ್ಯವಿಲ್ಲ. ಪೂರೈಸಿದ್ದೇ ಆದಲ್ಲಿ ಗಿಡದ ಮಾಲೀಕನಿಗೆ ಒಂದು ಕೋಟಿ ರೂ. ಆದಾಯ ಗ್ಯಾರಂಟಿ! ಇದರ ಜನಪ್ರಿಯತೆ ದುಬೈ, ಲಂಡನ್‌, ಆಸ್ಟ್ರೇಲಿಯ ಸೇರಿದಂತೆ ವಿವಿಧೆಡೆ ಹರಡಿ, ಅಲ್ಲಿನ ಅನಿವಾಸಿ ಭಾರತೀಯರು ಕೂಡ ಕರೆ ಮಾಡಿ, 100-150 ಗಿಡಗಳಿಗೆ ಬೇಡಿಕೆ ಇಡುತ್ತಿದ್ದಾರೆ. 36 ವರ್ಷದ “ಸಿದ್ದು’ವಿನಿಂದ ಕಳೆದ ಒಂದು ವರ್ಷದಲ್ಲಿ ಸುಮಾರು ಒಂಭತ್ತು ಸಾವಿರ ಗಿಡಗಳು ತಯಾರಾಗಿವೆ !

ಒಡಂಬಡಿಕೆ
ಈ ಮಧ್ಯೆ ಐಐಎಚ್‌ಆರ್‌ನ ಅಂಗಸಂಸ್ಥೆ , ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಕೇಂದ್ರದೊಂದಿಗೆ ಸಿದ್ದೇಶ್‌ ಅವರ ಮಗ, ಮರದ ಮಾಲೀಕ ಪರಮೇಶ್‌, ತಳಿ ಅಭಿವೃದ್ಧಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅದರಂತೆ, ಮುಂದಿನ 3 ವರ್ಷ ಸಸಿಗಳ ಮಾರಾಟದಿಂದ ಬಂದ ಹಣದಲ್ಲಿ ಶೇ. 75ರಷ್ಟನ್ನು ಮರದ ಮಾಲೀಕರಿಗೆ, ಶೇ. 25ರಷ್ಟನ್ನು ಸಂಸ್ಥೆಗೆ ನೀಡಲಾಗುತ್ತದೆ. ಒಂದು ಗಿಡಕ್ಕೆ 150ರಿಂದ 200 ರೂ. ಬೆಲೆ ನಿಗದಿಪಡಿಸಲಾಗಿದೆ.

ಏಕೆ ಅಚ್ಚುಮೆಚ್ಚು?
“ಸಿದ್ದು’ ಹಲಸು ಗಾತ್ರದಲ್ಲಿ ಬಹಳ ಚಿಕ್ಕದು. ಒಂದು ಕಾಯಿಂದ 20 ತೊಳೆ ಸಿಗಬಹುದು. ಇದನ್ನು ಕೊಂಡು ಹೋಗಲು ಸುಲಭವಾದ್ದರಿಂದ ನಗರವಾಸಿಗಳಿಗೆ ಈ ಹಣ್ಣು ಅಚ್ಚುಮೆಚ್ಚು. ಅಲ್ಲದೆ, ಟೊಮೆಟೊದಲ್ಲಿ ಕಂಡುಬರುವ lycಟಟಛಿnಛಿ ಮತ್ತು cಚrಟಠಿಛಿnಛಿ ಎಂಬ ಅಂಶಗಳನ್ನು ಇದು ಹೊಂದಿದೆ ಎಂದು ಐಐಎಚ್‌ಆರ್‌ನ (ಸಿಎಚ್‌ಇಎಸ್‌ ಹಿರೇಹಳ್ಳಿ) ಹಿರಿಯ ವಿಜ್ಞಾನಿ ಡಾ.ಜಿ. ಕರುಣಾಕರನ್‌ ಹೇಳುತ್ತಾರೆ.

ಇಡೀ ಜಮೀನಿನ ಆದಾಯ ಮರಕ್ಕೆ ಸಮ!
25 ಎಕರೆ ಜಮೀನಿನಿಂದ ಒಂದು ವರ್ಷದಲ್ಲಿ ಬರುವ ಆದಾಯ ಕೇವಲ ಒಂದು ಮರದಿಂದ ಬರುತ್ತಿದೆ. ಮರದ ಮಾಲೀಕ ಪರಮೇಶ್‌ಗೆ 25 ಎಕರೆ ಜಮೀನಿದೆ. ಅದರಲ್ಲಿ 13 ಎಕರೆ ಮಾವು, 10 ಎಕರೆ ತೆಂಗು, 2 ಎಕರೆ ಅಡಿಕೆ ಹಾಕಿದ್ದಾರೆ. ಮಾವಿನಿಂದ 5 ಲಕ್ಷ ರೂ., ತೆಂಗಿನಿಂದ 3 ಲಕ್ಷ . ಸೇರಿದಂತೆ ವರ್ಷಕ್ಕೆ 10ರಿಂದ 12 ಲಕ್ಷ ರೂ. ಆದಾಯ ಬರುತ್ತಿದೆ. ಹೆಚ್ಚು-ಕಡಿಮೆ ಇಷ್ಟೇ ಆದಾಯವನ್ನು ಕೇವಲ “ಸಿದ್ದು’ ಹಲಸಿನ ಫ‌ಲವೇ ತಂದುಕೊಡುತ್ತಿದೆಯಂತೆ.

“ಈ ಮೊದಲು ಸಂಬಂಧಿಕರು, ಸ್ನೇಹಿತರಿಗೆ ಸಿದ್ದು ಮರದ ಹಣ್ಣುಗಳನ್ನು ನೀಡುತ್ತಿದ್ದೆವು. ಐಐಎಚ್‌ಆರ್‌ ವಿಜ್ಞಾನಿಗಳು ಇದರ ಗಿಡಗಳನ್ನು ಅಭಿವೃದ್ಧಿಪಡಿಸಿದ ನಂತರ ನರ್ಸರಿ ಮಾಡಿ, ಗಿಡಗಳ ಮಾರಾಟ ಆರಂಭಿಸಿದೆ. ಪರಿಣಾಮ ಕಳೆದ ಒಂದು ವರ್ಷದಲ್ಲೇ ನಾಲ್ಕೂವರೆ ಸಾವಿರ ಗಿಡಗಳನ್ನು ಮಾರಾಟ ಮಾಡಿದ್ದೇನೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಪರಮೇಶ್‌.

“ದೇವರಿ’ಗೆ ಫೇವರಿಟ್‌
ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ “ಸಿದ್ದು’ ಹಲಸು ತುಂಬಾ ಪ್ರಿಯವಾಗಿತ್ತು. 2018ರಲ್ಲಿ ಸ್ವಾಮೀಜಿ ಸ್ಟಂಟ್‌ ಹಾಕಿಸಿಕೊಂಡು ಬಂದಿದ್ದರು. ಒಳಗೆ ಯಾರನ್ನೂ ಬಿಡುತ್ತಿರಲಿಲ್ಲ. ಚೇಳೂರಿನಿಂದ ಸಿದ್ದು ಹಲಸಿನ ಹಣ್ಣು ತಂದಿದ್ದಾರೆ ಎಂದಾಗ ಸ್ವಾಮೀಜಿ ಅವರನ್ನು ಕರೆಸಿಕೊಂಡಿದ್ದರು. ಈ ವರ್ಷ ಏಕೆ ತಡವಾಯ್ತು ಎಂದೂ ಕೇಳಿದ್ದರು. ಅಷ್ಟರಮಟ್ಟಿಗೆ ಪ್ರಿಯವಾಗಿತ್ತು ಎಂದು ಪರಮೇಶ್‌ ಮೆಲುಕು ಹಾಕುತ್ತಾರೆ.

ಹಣ್ಣಿನಲ್ಲಿ ಏನೇನಿದೆ?
ಪ್ರತಿ ತೊಳೆ 24.5 ಗ್ರಾಂ ತೂಕ. ಕಾಯಿಯ ತೂಕ ಕನಿಷ್ಠ 2ರಿಂದ ಗರಿಷ್ಠ 5 ಕೆ.ಜಿ ಒಂದು ಮರದಲ್ಲಿ 450ರಿಂದ 500 ಕಾಯಿಗಳು ಬರುತ್ತವೆ.

ಮಾಹಿತಿಗೆ- 9902794969 (ರಾತ್ರಿ 9ರಿಂದ 10 ಮಾತ್ರ)

– ವಿಜಯಕುಮಾರ್‌ ಚಂದರಗಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಇಡೀ ಭಾರತಕ್ಕೇ ಬೆಳಕು ಹಂಚುವ ಶಿವಕಾಶಿ ಪಟ್ಟಣದಲ್ಲಿ 520 ನೋಂದಾಯಿತ ಮುದ್ರಣ ಕೈಗಾರಿಕೆಗಳು, 53 ಬೆಂಕಿ ಕಡ್ಡಿತಯಾರಿಕಾ ಕಾರ್ಖಾನೆಗಳು, 32 ರಾಸಾಯನಿಕ ಕಾರ್ಖಾನೆಗಳಿವೆ....

  • ಉದ್ಯೋಗದಲ್ಲಿರುವ ತಂದೆ ತಾಯಿಯರಿಗೆ ಮಕ್ಕಳ ಪಾಲನೆ ಎನ್ನುವುದು ಅತಿ ದೊಡ್ಡ ಪರೀಕ್ಷೆ. ಮಕ್ಕಳು ಚಿಕ್ಕವಾಗಿದ್ದರೆ ಮನೆಯಲ್ಲಿ ಬಿಡಲೂ ಆಗದ ಕಿರಿಕಿರಿ. ಅನಿವಾರ್ಯವಾಗಿಯಾದರೂ...

  • ಗುರುವಾರದಿಂದ ಬೆಂಗಳೂರು ಕೃಷಿ ವಿವಿ ಆವರಣದಲ್ಲಿ ಕೃಷಿ ಮೇಳ ಶುರುವಾಗುತ್ತಿದೆ. ಈ ಸಲ ಮೇಳಕ್ಕೆ ಬಂದ ರೈತರಿಗೆ ನಿರಾಸೆ ಅನ್ನೋದಿಲ್ಲ. ಏಕೆಂದರೆ, ಕೃಷಿ ವಿಶ್ವವಿದ್ಯಾಲಯ,...

  • ಹಿಂದೆ ರಾಜರು, ಬೇಸಿಗೆ ಕಾಲದ ಅರಮನೆ, ಚಳಿಗಾಲದ ಅರಮನೆ ಹೀಗೆ ಕಾಲಕ್ಕೆ ತಕ್ಕಂತೆ ವಾಸಸ್ಥಳಗಳನ್ನು ಹೊಂದಿರುತ್ತಿದ್ದರು. ಆ ಸೌಕರ್ಯ ನಮಗೆಲ್ಲಿ ಬರಬೇಕು?! ಹೀಗಾಗಿ...

  • ಇಂಟರ್‌ನೆಟ್‌ ಯುಗದಲ್ಲಿ, ಸುರಕ್ಷತೆಯ ಬಗ್ಗೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ನಾವು ಎಲ್ಲೆಲ್ಲಾ ಎಚ್ಚರಿಕೆ ವಹಿಸಬೇಕು ಗೊತ್ತಾ? ವಿಳಾಸ ನೋಡಿ ಹಣಕಾಸು...

ಹೊಸ ಸೇರ್ಪಡೆ