ಗ್ರಾಚುಯಿಟಿ ಬಗ್ಗೆ ನಿಮಗೆಷ್ಟು ಗೊತ್ತು?


Team Udayavani, Feb 22, 2021, 6:02 PM IST

ಗ್ರಾಚುಯಿಟಿ ಬಗ್ಗೆ ನಿಮಗೆಷ್ಟು ಗೊತ್ತು?

ನಿವೃತ್ತಿಯ ಸಮಯದಲ್ಲಿ ಉದ್ಯೋಗಿಗಳಿಗೆ ರಜಾ ನಗದೀಕರಣ, ಪ್ರೊವಿಡೆಂಟ್‌ ಫ‌ಂಡ್‌, ಪಿಂಚಣಿ ಮುಂತಾದ ನಿವೃತ್ತಿ ಸೌಲಭ್ಯಗಳನ್ನು ನೀಡಲಾಗುತ್ತದೆ. ಇವು ಇಲಾಖೆ ಯಿಂದ ಇಲಾಖೆಗೆ, ಕಂಪನಿಯಿಂದ ಕಂಪನಿ ಗಳಿಗೆ ವ್ಯತ್ಯಾಸ ಇರಬಹುದು. ದೊರ ಕುವ ಮೊತ್ತದಲ್ಲಿಯೂ ಹೆಚ್ಚು ಕಡಿಮೆ ಇರಬಹುದು. ಉಳಿದೆಲ್ಲಾ ಸೌಲಭ್ಯ ಗಳಿಗೆ ಹೋಲಿಸಿದರೆ, ಗ್ರಾಚುಯಿಟಿಮೊತ್ತ ಸ್ವಲ್ಪ ಹೆಚ್ಚು ಇರುತ್ತದೆ. ಗ್ರಾಚುಯಿಟಿ ಅನ್ನುವುದು,

ಉದ್ಯೋಗದಾತನು ತನ್ನ ಉದ್ಯೋಗಿಗೆ,ಅವನು ನಿವೃತ್ತನಾ ದಾಗ, ರಾಜೀನಾಮೆ ನೀಡಿದಾಗ ಅಥವಾ ಯಾವುದೇಕಾರಣಕ್ಕೆ ಕೆಲಸ ಬಿಟ್ಟಾಗ ನಿವೃತ್ತಿ ಸೌಲಭ್ಯ ಎಂದು ನೀಡುವ ಮೊತ್ತ. ಇದು ಕೆಲವು ಷರತ್ತುಗಳಿಗೆ, ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. ಉದ್ಯೋಗಿಯು ಕನಿಷ್ಠ ಐದು ವರ್ಷಗಳ ಸೇವೆ ಸಲ್ಲಿಸಿರಬೇಕು. ಅಕಸ್ಮಾತ್‌ ಐದು ವರ್ಷ ಸೇವೆ ಸಲ್ಲಿಸುವ ಮೊದಲೇ ನಿಧನರಾದರೆ, ಸೇವೆಯ ಅವಧಿಯ ಅನುಪಾತದಲ್ಲಿ ಈ ಮೊತ್ತವನ್ನು ನೀಡಲಾಗುವುದು.

ಹೀಗಿರುತ್ತೆ ಲೆಕ್ಕಾಚಾರ :

ಹೀಗೆ ಪರಿಹಾರದ ರೂಪದಲ್ಲಿ ಸಿಗುವ ಗ್ರಾಚುಯಿಟಿ ಹಣದ ಮೊತ್ತ ಒಬ್ಬ ಉದ್ಯೋಗಿಯ ಸೇವೆಯ ಕೊನೆ ತಿಂಗಳ ಸಂಬಳ ಮತ್ತು ಆತನ ಒಟ್ಟೂ ಸೇವೆಯ ಅವಧಿಯ ಮೇಲೆ ಅವಲಂಭಿತವಾಗಿರುತ್ತದೆ. ಸೇವೆಯ ಅವಧಿ ಆರು ತಿಂಗಳಿಗಿಂತ ಹೆಚ್ಚು ಇದ್ದರೆ ಅದನ್ನು ಪೂರ್ಣ ವರ್ಷವಾಗಿ ಪರಿಗಣಿಸಲಾಗುವುದು. ಪೂರ್ಣ ಗೊಳಿಸಿದ ಪ್ರತಿಯೊಂದು ವರ್ಷಕ್ಕೆ 15 ದಿನಗಳ ಸಂಬಳವನ್ನು ನೀಡಲಾಗುವುದು. ಅಕಸ್ಮಾತ್‌ ಉದ್ಯೋಗಿಯು 25 ವರ್ಷ 7 ತಿಂಗಳು ಸೇವೆ ಸಲ್ಲಿಸಿದ್ದರೆ, ಆ ಸೇವಾ ಅವಧಿಯನ್ನು 26 ವರ್ಷ ಎಂದು ಪರಿಗಣಿಸಲಾಗುವುದು.

ಸಂಸ್ಥೆ ನೀಡುವ ಗಿಫ್ಟ್! :

ಗ್ರಾಚುಯಿಟಿ ಲೆಕ್ಕ ಹಾಕುವಾಗ ಮೊತ್ತ ಎಷ್ಟೇ ಅದರೂ, ಗ್ರಾಚುಯಿಟಿಯ ಗರಿಷ್ಠ ಮೊತ್ತ 20 ಲಕ್ಷವನ್ನು ಮೀರಬಾರದು. ಗ್ರಾಚುಯಿಟಿಯನ್ನು ತನ್ನ ಉದ್ಯೋಗಿಗೆ ಸಂಸ್ಥೆಯು ನೀಡುವಗಿಫ್ಟ್ ಎಂದು ಪರಿಗಣಿಸಲಾಗುತ್ತಿದ್ದು,ಇದನ್ನು ಉದ್ಯೋಗಿಯ ಯಾವುದೇ ಬಾಕಿಗೆ ಅಟ್ಯಾಚ್‌ ಮಾಡಲಾಗದು. ಆದರೆ, ಉದ್ಯೋಗಿಯು ತನ್ನಕೃತ್ಯದಿಂದ ಅಥವಾ ಕರ್ತವ್ಯ ಎಸಗದೇಸಂಸ್ಥೆಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡಿದ್ದರೆ, ಆ ಹಾನಿಯ ಮೊತ್ತವನ್ನುಗ್ರಾಚುಯಿಟಿಯುಲ್ಲಿ ಕಡಿತಮಾಡ ಬಹುದು. ಹಾಗೆಯೇ ಉದ್ಯೋಗಿಯು ಯಾವುದಾದರೂ ನೀಚತನದ ಕೃತ್ಯದಲ್ಲಿ ಭಾಗಿಯಾಗಿದ್ದರೆ, ಅಂಥ ಸಂದರ್ಭದಲ್ಲಿ ಗ್ರಾಚುಯಿಟಿಯನ್ನು ತಡೆಹಿಡಿಯಬಹುದು.

ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಒಂದು ತೀರ್ಪಿನಲ್ಲಿ ಉದ್ಯೋಗಿಯಿಂದ ಬರಬೇಕಾದ ಬಾಕಿ ಮೊತ್ತಕ್ಕಾಗಿ ಆತನ ಗ್ರಾಚುಯಿಟಿ ಯನ್ನು ತಡೆಹಿಡಿಯ ಬಹುದೆಂದು ಹೇಳಿದೆ. ಉದ್ಯೋಗಿ ಯೊಬ್ಬ ಅವಧಿಗಿಂತ ಹೆಚ್ಚುಕಾಲ ಸಂಸ್ಥೆಯ ಕ್ವಾಟ್ರಸ್‌ನಲ್ಲಿಉಳಿದಿದ್ದು, ಈ ಅವಧಿಗೆ ಸುಸ್ತಿ ಬಾಡಿಗೆನೀಡಲು ತಕರಾರು ತೆಗೆದಿದ್ದ. ಸಂಸ್ಥೆಯು ಆ ಮೊತ್ತವನ್ನು ಆತನಗ್ರಾಚುಯಿಟಿ ಯಿಂದ ವಸೂಲು ಮಾಡಿತ್ತು. ಈ ಕ್ರಮವನ್ನು ಪ್ರಶ್ನಿಸಿಉದ್ಯೋಗಿ ನ್ಯಾಯಾಲಯದ ಮೊರೆ ಹೋಗಿದ್ದ. ನ್ಯಾಯಾಲಯವು, ಗ್ರಾಚುಯಿಟಿ ಸೇರಿ ಯಾವುದೇಬಾಕಿಯನ್ನು ಉದ್ಯೋಗಿಗೆ ನೀಡುವಾಗ ಅವನಿಂದ ಬರಬೆಕಾದ ಬಾಕಿಗೆ ವಜಾ ಮಾಡಿಕೊಳ್ಳಬಹುದು ಎಂದು ತೀರ್ಪು ನೀಡಿದೆ.

 

-ರಮಾನಂದ ಶರ್ಮಾ

 

ಟಾಪ್ ನ್ಯೂಸ್

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

16-adu-jeevitham

Movie Review: ಆಡು ಜೀವಿದಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.