Udayavni Special

ನೆರೆಮನೆ; ಕುಸಿಯದಂಥ ಮನೆ ಕಟ್ಟುವುದು ಹೇಗೆ?


Team Udayavani, Aug 19, 2019, 5:00 AM IST

lead-main

ಇಟ್ಟಿಗೆ ಗೋಡೆಗಳು ಸಾಮಾನ್ಯವಾಗಿ ಮೇಲಿನಿಂದ ಬರುವ ಭಾರವನ್ನು ಮಾತ್ರ ಹೊರುವ ಸಾಮರ್ಥ್ಯ ಹೊಂದಿರುತ್ತವೆ. ಆದರೆ ಪ್ರವಾಹದಲ್ಲಿ ನೀರು ಅಲೆಗಳ ರೂಪದಲ್ಲಿ ಅಪ್ಪಳಿಸುತ್ತಿದ್ದರೆ, ಅಡ್ಡಡ್ಡ ಬೀಳುವ ಈ ಪ್ರಹಾರವನ್ನು ಎದುರಿಸಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಆರ್‌.ಸಿ.ಸಿ ಹಾಗೂ ಉಕ್ಕಿನ ಕಟ್ಟಡಗಳು ಬಂದಿವೆ. ಇವು ಸಾಕಷ್ಟು ಗಟ್ಟಿಮುಟ್ಟಾಗಿರುವುದರ ಜೊತೆಗೆ ಹೆಚ್ಚು ದಪ್ಪವೂ ಇರುವುದಿಲ್ಲ. ವಿಶೇಷ ಕಾಳಜಿ, ಸೂಕ್ತ ವಿನ್ಯಾಸದೊಂದಿಗೆ ಮನೆ ಕಟ್ಟಿದರೆ ಅವು ಸುಲಭದಲ್ಲಿ ಕುಸಿಯುವುದೂ ಇಲ್ಲ.

ಮನೆ ಎಂದರೆ, ಎಲ್ಲರಿಗೂ ಅದು ಒಂದು ಭದ್ರವಾದ ಸ್ಥಳ ಎಂಬ ಭಾವವಿರುತ್ತದೆ. ಹೊರಗಡೆ ಏನೇ ಕಿರಿಕಿರಿ, ಅಭದ್ರತೆ ಅನುಭವಿಸಿದರೂ ಒಮ್ಮೆ ಮನೆಗೆ ಸೇರಿದರೆ ನಿರುಮ್ಮಳವಾಗುತ್ತೇವೆ. ಆದರೆ ಅಂಥ ಮನೆಯೇ ಕುಸಿದರೆ? ಶಿಲಾಯುಗದಿಂದಲೂ ಮಾನವರು ಗಟ್ಟಿಮುಟ್ಟಾದ ಮನೆಗಳನ್ನು ಕಟ್ಟಲು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ, ಕಲ್ಲಿನಲ್ಲಿ ಕಟ್ಟಿದರೂ ಕಿಟಕಿ ಬಾಗಿಲುಗಳು, ಅವುಗಳ ಮೇಲೊಂದು ಲಿಂಟಲ್‌ ಇತ್ಯಾದಿ ಬಂದಮೇಲೆ ಅದು ಬರೀ ಕಲ್ಲಿನ ಮನೆಯೇ ಆಗಿರುವುದಿಲ್ಲ! ಸಾಕಷ್ಟು ತೆರೆದಂತೆ ಇರಬೇಕಾದರೆ ದೊಡ್ಡದೊಡ್ಡ ಕಿಟಕಿಗಳು ಬೇಕಾಗುತ್ತವೆ. ವಿಶಾಲವಾಗಿ ಇರಬೇಕೆಂದರೆ, ಬೀಮು- ತೊಲೆಗಳು, ಕಾಲಂ- ಕಂಬಗಳು ಬರಬೇಕಾಗುತ್ತದೆ. ಇವೆಲ್ಲವನ್ನೂ ತೀರಾ ದೊಡ್ಡದಾಗಿ ಮಾಡಲೂ ಆಗುವುದಿಲ್ಲ. ಹಾಗಾಗಿ ಮನೆ ಎನ್ನುವುದು ಸಾಕಷ್ಟು ಗಟ್ಟಿಯಾಗಿ ಇರುವುದರೊಂದಿಗೆ ಗಾಳಿ ಬೆಳಕಿಗೂ ತೊಂದರೆಯಾಗದ ರೀತಿಯಲ್ಲಿ ಇರಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಆರ್‌.ಸಿ.ಸಿ ಹಾಗೂ ಉಕ್ಕಿನ ಕಟ್ಟಡಗಳು ಬಂದಿವೆ. ಇವು ಸಾಕಷ್ಟು ಗಟ್ಟಿಮುಟ್ಟಾಗಿರುವುದರ ಜೊತೆಗೆ, ಹೆಚ್ಚು ದಪ್ಪವೂ ಇರುವುದಿಲ್ಲ. ವಿಶೇಷ ಕಾಳಜಿ, ಸೂಕ್ತ ವಿನ್ಯಾಸದೊಂದಿಗೆ ಮನೆ ಕಟ್ಟಿದರೆ ಅವು ಸುಲಭದಲ್ಲಿ ಕುಸಿಯುವುದೂ ಇಲ್ಲ. ಆದರೆ ಮಾಮೂಲಿ ಮನೆಗಳನ್ನು, ಅದರಲ್ಲೂ ಬರೀ ಭಾರ ಹೊರುವ ಗೋಡೆಗಳನ್ನು ಹೊಂದಿರುವ ಕಟ್ಟಡಗಳನ್ನು ಆಗಾಗ ಪರಿಶೀಲಿಸುವುದು ಒಳ್ಳೆಯದು. ಜೊತೆಗೆ, ಪ್ರವಾಹದಲ್ಲಿ ಮುಳುಗಡೆಯಾಗಿದ್ದರೆ, ಅತಿ ಹೆಚ್ಚು ಮಳೆ ಸುರಿದ ಸಂದರ್ಭಗಳಲ್ಲೂ ಮರುಪರಿಶೀಲನೆ ಮಾಡಬೇಕಾಗುತ್ತದೆ.

ನೀರು ನಿರೋಧಕ ಗೋಡೆ
ಜೀವದಾಯಿಯಾದ ನೀರು ಅನೇಕ ಕಾರ್ಯಗಳನ್ನು ನಿಯಮಿತವಾಗಿ ಮಾಡುವುದರಿಂದಲೇ ಅದರ ಬಳಕೆ ಅನಿವಾರ್ಯ ಆಗಿರುವುದು. ಗೋಡೆಗೆ ಕ್ಯೂರಿಂಗ್‌ ಮಾಡಲು ನೀರು ಬೇಕೇ ಬೇಕು. ಆದರೆ, ಇದೇ ನೀರು ಕೆಲವೊಮ್ಮೆ ನಾವು ಅಂದುಕೊಂಡದಕ್ಕಿಂತ ಹೆಚ್ಚು ಹೊಕ್ಕರೆ ಕಟ್ಟಡಗಳಿಗೆ ಹಾನಿಯಾಗುತ್ತದೆ. ಒಣಗಿದ ಇಟ್ಟಿಗೆ ಗೋಡೆ ಪ್ರತಿ ಚದುರ ಸೆಂಟಿಮೀಟರ್‌ಗೆ ಸುಮಾರು ಐದು ಕೇಜಿಯಷ್ಟು ಭಾರ ಹೊರುವ ಸಾಮರ್ಥ್ಯ ಹೊಂದಿರುತ್ತದೆ. ನೆನಪಿರಲಿ: ಅದು ನೀರು ಕುಡಿದಾಗ, ಪ್ರವಾಹದಲ್ಲಿ ಮುಳುಗಿದಾಗ ಅರ್ಧದಷ್ಟು ಮಾತ್ರ ಭಾರ ಹೊರಬಲ್ಲದು! ಇಟ್ಟಿಗೆ ಗೋಡೆಗಳಲ್ಲಿ ಅರೆಕಾವು ಇಟ್ಟಿಗೆಗಳು ಒಂದಷ್ಟು ಸೇರಿಬಿಡುತ್ತವೆ. ಒಣಗಿದಾಗ ಈ ಅರೆಕಾವುಗಳು ಹೆಚ್ಚು ತೊಂದರೆ ಮಾಡದಿದ್ದರೂ, ನೀರು ಕುಡಿದಾಗ, ಹಿಗ್ಗಿ, ಪ್ಲಾಸ್ಟರ್‌ ಅನ್ನು ಹೊರತಳ್ಳಬಲ್ಲದು. ಇದರಿಂದಾಗಿ ಉಂಟಾದ ಬಿರುಕುಗಳು, ಮತ್ತೂಂದಷ್ಟು ನೀರನ್ನು ಒಳ ಬರುವಂತೆ ಮಾಡಿ, ಗೋಡೆಗೆ ಮತ್ತಷ್ಟು ಹಾನಿ ಮಾಡಬಲ್ಲದು. ನಾವು ಗೋಡೆಗಳಿಗೆ ಯಾವುದೇ ಬಣ್ಣವನ್ನು ಹಚ್ಚಿದರೂ, ಅದು ಸುಣ್ಣವೇ ಆಗಿದ್ದರೂ ಅದು ಗೋಡೆಗೆ ಒಂದಷ್ಟು ನೀರು ನಿರೋಧಕ ಗುಣವನ್ನು ನೀಡುತ್ತದೆ. ಆದರೆ ಆ ಗೋಡೆ ನೀರಿನಲ್ಲಿ ಮುಳುಗಿದರೆ ಬಣ್ಣವೇ ಕಿತ್ತುಬಂದು, ಹಾನಿಹೆಚ್ಚುತ್ತದೆ. ಇಟ್ಟಿಗೆ ಗೋಡೆಗಳು ಸಾಮಾನ್ಯವಾಗಿ ಮೇಲಿನಿಂದ ಬರುವ ಭಾರವನ್ನು ಮಾತ್ರ ಹೊರುವ ಸಾಮರ್ಥ್ಯ ಹೊಂದಿರುತ್ತವೆ. ಆದರೆ ಪ್ರವಾಹದಲ್ಲಿ ನೀರು ಅಲೆಗಳ ರೂಪದಲ್ಲಿ ಅಪ್ಪಳಿಸುತ್ತಿದ್ದರೆ, ಅಡ್ಡಡ್ಡ ಬೀಳುವ ಈ ಪ್ರಹಾರವನ್ನು ಎದುರಿಸಲು ಸಾಧ್ಯ ಆಗುವುದಿಲ್ಲ!

ಪಾಯದ ಮಣ್ಣು ಕರಗದಿರಲಿ
ಒಣಗಿದ ಮಣ್ಣು ಇಟ್ಟಿಗೆಯಂತೆಯೇ ಭಾರ ಹೊರಬಲ್ಲದು, ಆದರೆ ಅದು ಒಮ್ಮೆ ಒದ್ದೆಯಾದರೆ, ಅದರ ಜಂಘಾಬಲವೇ ಕುಸಿದುಹೋಗುತ್ತದೆ! ಈ ಕಾರಣದಿಂದಾಗಿಯೇ, ಇಟ್ಟಿಗೆಗಳನ್ನು ಮಣ್ಣಿನಿಂದಲೇ ಮಾಡಿದರೂ ಚೆನ್ನಾಗಿ ಸುಡುವುದು. ನಾವು ಪಾಯದ ವಿನ್ಯಾಸ ಮಾಡುವಾಗ, ಕೆಳಗಿನ ಮಣ್ಣು, ನೀರು ಕುಡಿಯುವ ಸಾಧ್ಯತೆ ಇದೆಯೇ? ಎಂದು ಪರಿಶೀಲಿಸಿಯೇ ಮುಂದುವರಿಯುವುದು ಉತ್ತಮ. ಮನೆಯ ಪಕ್ಕ ಮಳೆ ನೀರು ಹರಿಯುವ ದೊಡ್ಡ ಮೋರಿ ಇದ್ದರೆ, ಇಲ್ಲವೆ ಪ್ರವಾಹದ ಸಂದರ್ಭದಲ್ಲಿ ನೀರು ಭೂಮಿ ಮಟ್ಟಕ್ಕಿಂತ ಹೆಚ್ಚಾಗಿ ಹರಿಯುವಂತಿದ್ದರೆ, ಆಗ ಸ್ವಾಭಾವಿಕವಾಗಿಯೇ ಮಣ್ಣು ನೀರು ಕುಡಿದು ದುರ್ಬಲ ಆಗುತ್ತದೆ. ಕೆಲ ಮಾದರಿಯ ಮಣ್ಣು ನೀರಿನಲ್ಲಿ ನೆನೆದಾಗ ಜೇಡಿಮಣ್ಣಿನಂತೆ ಕೆಸರಿನಂತೆ ಆಗಿಬಿಡುತ್ತವೆ! ಮರಳು ಹಾಗೂ ನುರುಜು ಕಲ್ಲು ಮಿಶ್ರಿತ ಮಣ್ಣುಗಳು ಹೆಚ್ಚು ಸದೃಢತೆಯನ್ನು ಹೊಂದಿರುತ್ತವೆ. ನಿಮ್ಮ ಮನೆಯ ಪಾಯ ಮೃದು ಕಲ್ಲು, ಲ್ಯಾಟರೈಟ್‌- ಜೆಂಬಿಟ್ಟಿಗೆ ಮಾದರಿಯದು ಆಗಿದ್ದರೆ, ಅವು ನೀರಿನಲ್ಲಿ ಸುಲಭದಲ್ಲಿ ಕರಗುವುದಿಲ್ಲ. ಇನ್ನು ಗಟ್ಟಿಕಲ್ಲಿನ ಮೇಲೆ ಕಟ್ಟಿದ ಮನೆಗಳಿಗೂ ಪ್ರವಾಹದಿಂದ ಏನೂ ತೊಂದರೆ ಆಗುವುದಿಲ್ಲ.

ಬಿರುಕುಗಳ ಪರಿಶೀಲನೆ
ಮನೆಯ ಸದೃಢತೆಯ ಬಗ್ಗೆ ಸಂಶಯವಿದ್ದರೆ, ಮಳೆ ಇಲ್ಲವೆ ಪ್ರವಾಹದ ನಂತರ ಬಿರುಕುಗಳು ಬಿಟ್ಟಿವೆಯೇ? ಎಂದು ಪರಿಶೀಲಿಸಿ. ಈ ಹಿಂದೆ ಇರದ ಬಿರುಕು ಇಲ್ಲವೇ ಮೊದಲು ಸಣ್ಣಗಿದ್ದದ್ದು ಈಗ ದೊಡ್ಡದಾಗಿದ್ದರೆ, ನುರಿತ ಆರ್ಕಿಟೆಕ್ಟ್ ಇಂಜಿನಿಯರ್‌ಗಳ ಸಹಾಯದಿಂದ ಗೋಡೆಯ ಪರಿಶೀಲನೆ ಮಾಡಿಸಿ. ಗೋಡೆಯ ಬಿರುಕು ಪಾಯಕ್ಕೂ ವಿಸ್ತರಿಸಿದ್ದರೆ, ಅದರಲ್ಲೂ ಪಾಯದ ಕೆಲ ಕಲ್ಲುಗಳು ಅಲುಗಿದಂತೆ ಇದ್ದರೆ, ನೀರಿನಿಂದಾದ ಹಾನಿ ಖಚಿತವಾದಂತೆ ಆಗುತ್ತದೆ. ಪಾಯವನ್ನು ಗಟ್ಟಿಯಾಗಿ ಹಿಡಿದಿಡುವುದು ಅದರ ಸುತ್ತಲೂ ಇರುವ ಮಣ್ಣು. ಈ ಮಣ್ಣು ಕೊಚ್ಚಿಹೋದರೂ ಪಾಯ ದುರ್ಬಲ ಆಗುತ್ತದೆ. ಆದುದರಿಂದ ಗೋಡೆಗಳಿಗೆ ಹಾಗೂ ಪಾಯಕ್ಕೆ ಹೆಚ್ಚು ಹಾನಿಯಾಗದೆ, ಮಣ್ಣು ಮಾತ್ರ ಕೊಚ್ಚಿಹೋಗಿದ್ದರೆ, ಕೂಡಲೆ ಮಣ್ಣನ್ನು ಪದರಪದರವಾಗಿ ಭರ್ತಿ ಮಾಡಿ, ಧಿಮ್ಮಸ್ಸು ಹೊಡೆದು, ಗಟ್ಟಿಗೊಳಿಸಿ, ನಂತರ ಫ್ಲಾಗಿಂಗ್‌ ಕಾಂಕ್ರೀಟ್‌ ಹಾಕುವುದು ಉತ್ತಮ.

ಮನೆ ಸದೃಢವಾಗಿರಲು ಎರಡು ಅಂಶಗಳು ಮುಖ್ಯ, ಮೊದಲನೆಯದಾಗಿ ಭೂಮಿ ಹಾಗೂ ಪಾಯ ಗಟ್ಟಿಮುಟ್ಟಾಗಿರಬೇಕು. ಎರಡನೆಯದಾಗಿ ಭಾರ ಹೊರುವ ಗೋಡೆಗಳು ನೀರಿನಲ್ಲಿ ನೆನೆದರೂ ಹಾನಿಗೊಳಗಾಗಿಲ್ಲ ಎಂಬುದು ಖಾತರಿ. ಆದರೆ, ನಮ್ಮ ಮನೆ ಒಂದು ಮಟ್ಟಕ್ಕೆ ಆಘಾತವನ್ನು ತಡೆದುಕೊಂಡಿದೆ ಎಂದು ನಿರ್ಧರಿಸಬಹುದು.

ಫ್ಲಾಗಿಂಗ್‌ ಕಾಂಕ್ರೀಟ್‌ ರಕ್ಷೆ
ಪ್ರವಾಹ ಹಾಗೂ ಅತಿ ಹೆಚ್ಚು ಮಳೆ ಎದುರಿಸುವ ಪ್ರದೇಶಗಳಲ್ಲಿ ಮಣ್ಣನ್ನು ಪರಿಶೀಲಿಸಿ ಕಡೇಪಕ್ಷ ಐದು ಅಡಿ ಆಳದ ಪಾಯವನ್ನಾದರೂ ಹಾಕಬೇಕು. ಅದರಲ್ಲೂ ಜೇಡಿ ಮಣ್ಣು – ಕರಿ ಮಣ್ಣು ಇರುವ ಪ್ರದೇಶಗಳಲ್ಲಿ ಪಾಯದ ಕೆಳಗೆ ಮರಳು ಹಾಗೂ ಕಲ್ಲು ತುಂಡುಗಳನ್ನು- ದಪ್ಪ ಜೆಲ್ಲಿ ಮಾದರಿಯವನ್ನು ಒಂದೆರಡು ಅಡಿಗಳಷ್ಟಾದರೂ ತುಂಬಿ ನಂತರ ಮುಂದುವರೆಯುವುದು ಉತ್ತಮ. ನೀರಿನ ಮಟ್ಟ ಮೇಲೆಯೇ ಇದ್ದರೆ, ತೀರಾ ಆಳವಾದ ಪಾಯ ಹಾಕಲು ಆಗದಿದ್ದರೆ, ಪಾಯದ ಕೆಳಗೆ ದಪ್ಪ ಜೆಲ್ಲಿಯ ಬೆಡ್‌ ಕಾಂಕ್ರೀಟ್‌ ಬದಲು ಆರು ಅಂಗುಲ ದಪ್ಪದ ಆರ್‌ಸಿಸಿ ಹಾಕಿ ಅದರ ಮೇಲೆ ಕಲ್ಲು ಇಲ್ಲವೇ ಇಟ್ಟಿಗೆಯ ಪಾಯ ಹಾಕುವುದು ಉತ್ತಮ. ಸಾಮಾನ್ಯವಾಗಿ ಆರ್‌ ಸಿ ಸಿ ಫ‌ುಟಿಂಗ್‌ ಕಾಲಂ ಹಾಕಿರುವ ಮನೆಗಳು ಭಾರ ಹೊರುವ ಇಟ್ಟಿಗೆ ಗೋಡೆಗಳ ಮನೆಗಳಿಗಿಂತ ಹೆಚ್ಚು ಗಟ್ಟಿಮುಟ್ಟಾಗಿರುತ್ತವೆ. ಆದರೂ ಕೂಡ ಹೆಚ್ಚುವರಿ ಬಲವರ್ಧನೆಗೆ ಹಾಗೂ ನೀರು ನಿರೋಧಕ ಗುಣ ಹೆಚ್ಚಿಸಲು, ಮನೆಯ ಸುತ್ತ ಕಡೇಪಕ್ಷ ಎರಡು ಅಡಿ “ಫ್ಲಾಗಿಂಗ್‌ ಕಾಂಕ್ರೀಟ್‌’ ಹಾಕಿರಿ. ಇದರಿಂದಾಗಿ ಮನೆಯ ಸುತ್ತಲೂ ಒಂದು ಮಟ್ಟದವರೆಗೂ ನೀರು ಪಾಯದ ಹತ್ತಿರ ಇಂಗುವುದು ತಪ್ಪುತ್ತದೆ. ಈ ಕಾಂಕ್ರೀಟ್‌ ಪದರವನ್ನು, ಮನೆಯ ಸುತ್ತಲಿನ ಭೂಮಿ ಮಟ್ಟದಿಂದ ಒಂದೆರಡು ಇಂಚು ಎತ್ತರದಲ್ಲಿ, ಇಳಿಜಾರಾಗಿ ಹಾಕಲಾಗುತ್ತದೆ. ಇದರಿಂದಾಗಿ, ಗೋಡೆಯ ಮೇಲೆ ಸುರಿಯುವ ಮಳೆಯ ನೀರೂ ಕೂಡ ಪಾಯಕ್ಕೆ ನೇರವಾಗಿ ಹರಿಯದೆ, ಎರಡು ಅಡಿ ದೂರದಲ್ಲಿ ಇಳಿಯುವಂತೆ ಆಗುತ್ತದೆ.

ಹೆಚ್ಚಿನ ಮಾಹಿತಿಗೆ ಫೋನ್‌- 9844132826

– ಆರ್ಕಿಟೆಕ್ಟ್ ಕೆ. ಜಯರಾಮ್‌

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಲಾಡ್ಜ್ ನಲ್ಲಿ ಯುವಕ, ಯುವತಿ ಆತ್ಮಹತ್ಯೆ; ಪ್ರೇಮ ಪ್ರಕರಣ ಶಂಕೆ

ಲಾಡ್ಜ್ ನಲ್ಲಿ ಯುವಕ, ಯುವತಿ ಆತ್ಮಹತ್ಯೆ; ಪ್ರೇಮ ಪ್ರಕರಣ ಶಂಕೆ

.0.

ಹಬ್ಬದ ಸಮಯದಲ್ಲಿ ಕಡ್ಡಾಯವಾಗಿ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಿ : ಸಚಿವ ಡಾ.ಕೆ.ಸುಧಾಕರ್

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

ರಾಜ್ಯದಲ್ಲಿ ಸೋಮವಾರ 5018 ಸೋಂಕು ದೃಢ; 8005 ಬಿಡುಗಡೆಯಾದವರ ಸಂಖ್ಯೆ ; 64 ಸಾವು

ರಾಜ್ಯದಲ್ಲಿ ಸೋಮವಾರ 5018 ಸೋಂಕು ದೃಢ; 8005 ಬಿಡುಗಡೆಯಾದವರ ಸಂಖ್ಯೆ ; 64 ಸಾವು

101

ಚೆನ್ನೈ-ರಾಜಸ್ಥಾನ್ ಮುಖಾಮುಖಿ : ಟಾಸ್ ಗೆದ್ದ ಧೋನಿ ಪಡೆ ಬ್ಯಾಟಿಂಗ್ ಆಯ್ಕೆ

ಸಾಮಾಜಿಕ ಜಾಲತಾಣದ ಎಫೆಕ್ಟ್: ಮುತ್ತಯ್ಯ ಮುರಳೀಧರನ್ ಬಯೋಪಿಕ್ ಗೆ ಸೇತುಪತಿ ಗುಡ್ ಬೈ

ಸಾಮಾಜಿಕ ಜಾಲತಾಣದ ಎಫೆಕ್ಟ್: ಮುತ್ತಯ್ಯ ಮುರಳೀಧರನ್ ಬಯೋಪಿಕ್ ಗೆ ಸೇತುಪತಿ ಗುಡ್ ಬೈ

ಏನಿದು ನಿತೀಶ್ ಲೆಕ್ಕಾಚಾರ:ಬಿಹಾರ ಚುನಾವಣಾ ಕಣದಲ್ಲಿ ಈ ಬಾರಿ ಯುವ ಮಹಿಳಾ ಅಭ್ಯರ್ಥಿಗಳ ಸದ್ದು

ಏನಿದು ನಿತೀಶ್ ಲೆಕ್ಕಾಚಾರ:ಬಿಹಾರ ಚುನಾವಣಾ ಕಣದಲ್ಲಿ ಈ ಬಾರಿ ಯುವ ಮಹಿಳಾ ಅಭ್ಯರ್ಥಿಗಳ ಸದ್ದು…





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

isiri-tdy-3

ಬಾಳು ಜೇನು! ಖರ್ಚು ಕಡಿಮೆ, ಲಾಭ ಜಾಸ್ತಿ…

isiri-tdy-2

ಭೂಮಿಗೆ ಸಿಗುತ್ತದೆ ಬಂಗಾರದ ಬೆಲೆ…

isiri-tdy-1

ಲೈಫ್ ಈಸ್‌ ಬುಟ್ಟಿ ಫ‌ುಲ್‌

isiri-tdy-5

ಕೀ ಬೋರ್ಡ್‌ ಮೇಲೆ ಸಿಟ್ಟಾಗಿ ಕುಟ್ಟಬೇಡಿ ಮಾರಾಯ್ರೇ.

ಆನ್‌ಲೈನ್ ‌ಕ್ಲಾಸಿಗೆ ಲ್ಯಾಪಿ

ಆನ್‌ಲೈನ್ ‌ಕ್ಲಾಸಿಗೆ ಲ್ಯಾಪಿ

MUST WATCH

udayavani youtube

Mudipu‌ illegal quarrying allegations ವಿಚಾರ; ನನಗೆ ಯಾವುದೇ ಸಂಬಂದ ಇಲ್ಲ:Rajesh Naik

udayavani youtube

ಹಡಿಲು ಗದ್ದೆಯಲ್ಲಿ ಭತ್ತ ಬೆಳೆದು ಯಶಸ್ವಿಯಾದ ಕೃಷಿ !

udayavani youtube

ಕೃಷಿಯಲ್ಲಿ ಲಾಭಗಳಿಸಬೇಕಾದರೆ ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸಿ | Udayavani

udayavani youtube

ಹಸುವಿನ ಸಗಣಿ ಬಳಸಿ ಧೂಪ ತಯಾರಿಸುವುದು ಹೇಗೆ?

udayavani youtube

45 years journey of Pot maker from Karkala | Annumuli Pot maker | Udayavani



ಹೊಸ ಸೇರ್ಪಡೆ

ಲಾಡ್ಜ್ ನಲ್ಲಿ ಯುವಕ, ಯುವತಿ ಆತ್ಮಹತ್ಯೆ; ಪ್ರೇಮ ಪ್ರಕರಣ ಶಂಕೆ

ಲಾಡ್ಜ್ ನಲ್ಲಿ ಯುವಕ, ಯುವತಿ ಆತ್ಮಹತ್ಯೆ; ಪ್ರೇಮ ಪ್ರಕರಣ ಶಂಕೆ

.0.

ಹಬ್ಬದ ಸಮಯದಲ್ಲಿ ಕಡ್ಡಾಯವಾಗಿ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಿ : ಸಚಿವ ಡಾ.ಕೆ.ಸುಧಾಕರ್

MallaKhamba

ಭಾರತದ ಹೆಮ್ಮೆಯ ಕ್ರೀಡೆ ಮಲ್ಲಕಂಬ; ಮರಾಠ ದೊರೆ ಎರಡನೇ ಪೇಶ್ವೆ ಬಾಜಿರಾವ್ ಕಾಲದ ಇತಿಹಾಸ

news-tdy-01

ಭೀಮಾ ನದಿ ಪ್ರವಾಹ ಸಂತ್ರಸ್ತರಿಗೆ ಆಹಾರ ಧಾನ್ಯ ಕಿಟ್ ವಿತರಣೆ

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.