Udayavni Special

ಹೆಸರು ಬದಲಾಯಿಸೋದು ಹೇಗೆ?

ಲಾ ಪಾಯಿಂಟ್

Team Udayavani, Aug 12, 2019, 5:00 AM IST

filler-law-point2-will-cancel

ಉತ್ತರ ಕರ್ನಾಟಕದವರಲ್ಲಿ ತಮ್ಮ ಮನೆತನದ ಹೆಸರಿನ ಬಗ್ಗೆ ತುಂಬಾ ಅಭಿಮಾನ. ಹೊರಗಿನ ಕೆಲವರಿಗೆ ಅದು ಚೋದ್ಯವೆನಿಸಿದರೂ, ಅವರು ಅದಕ್ಕೆ ಸೊಪ್ಪು ಹಾಕುವುದಿಲ್ಲ. ‘ತೆಂಗಿನಕಾಯಿ’, ‘ಮೆಣಸಿನಕಾಯಿ’, ‘ಉಳ್ಳಾಗಡ್ಡಿ’ ಇಂಥ ಹೆಸರುಗಳು ಕೆಲವರಿಗೆ ಕಚಗುಳಿ ಇಡುತ್ತವೆ. ಅಪ್ರಬುದ್ಧರಿಗೆ ಹೆದರಿ ಅವರು ಮನೆತನದ ಹೆಸರನ್ನು ತಮ್ಮ ಹೆಸರಿನಿಂದ ತೊಡೆಯಲು ಯೋಚಿಸುವುದೂ ಇಲ್ಲ. ಮಂಗಳೂರಿನ ‘ಭಟ್’ ಒಬ್ಬರು ಉತ್ತರ ಕರ್ನಾಟಕದವರೊಬ್ಬರನ್ನು ‘ಎಂಥದು ಮಾರಾಯ್ರೇ, ನಿಮ್ಮ ಹೆಸರುಗಳೆಲ್ಲಾ ತರಕಾರಿಮಯ’ ಎಂದು ಕೇಳಿದರಂತೆ. ಅದಕ್ಕೆ ಅವರು ‘ಹೌದ್ರೀಪಾ, ಆದರೆ ಆ ತರಕಾರಿ ಹೆಚ್ಚಿ ಅಡುಗೆ ಮಾಡೋ ಮಂದೀನ ನಮ್ಮ ಕಡೀ ಭಟ್ಟರು ಅಂತ ಕರೀತಾರಪಾ’ ಎಂದರಂತೆ!

ಎಲ್ಲರಿಗೂ ಇಂಥ ನಿರ್ಲಿಪ್ತತೆ ಇರುವುದಿಲ್ಲ. ಇಂಥ ನಿರ್ಲಿಪ್ತತೆ ಇರುವುದಿಲ್ಲ. ಅಂಥ ಮಂದಿ ತಮ್ಮದೇ ಆದ ಕಾರಣಕ್ಕಾಗಿ ಅಪ್ಪ, ಅಮ್ಮ ಇಟ್ಟ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ಹನುಮಂತಯ್ಯ ಎಂಬ ಹಳೆಯ ಹೆಸರು ಅನಿಲ್ಕುಮಾರ್‌ ಎಂಬ ನವೀನತೆಯನ್ನು ಪಡೆಯುತ್ತದೆ.

ಕೆಲವು ಪಂಗಡಗಳಲ್ಲಿ ಮನೆಗೆ ಬಂದ ಸೊಸೆಯ ಹೆಸರನ್ನು ಬದಲಾಯಿಸುತ್ತಾರೆ. ‘ಕೌಮುದಿ’, ‘ಇಂದು’ ಆಗುತ್ತಾಳೆ. ‘ಕಮಲ’, ‘ಜಲಜ’ ಆಗುತ್ತಾಳೆ. ‘ಹರಿಣಾಕ್ಷಿ’, ‘ಮೀನಾಕ್ಷಿ’ ಆಗುತ್ತಾಳೆ. ಕೆಲವೊಮ್ಮೆ ಮೊದಲನೆಯ ಹೆಸರು ಬದಲಾಯಿಸದಿದ್ದರೂ ಗಂಡನ ಮನೆತನದ ಹೆಸರನ್ನು ಕೊನೆಯಲ್ಲಿ ಸೇರಿಸಿಕೊಳ್ಳುತ್ತಾರೆ. ಪ್ರಭಾ ರಾವ್‌, ಪ್ರಭಾ ಮೆಹತಾ ಆಗಬಹುದು. ಸಂಖ್ಯಾಶಾಸ್ತ್ರದಲ್ಲಿ ನಂಬಿಕೆ ಇರುವ ಕೆಲವರು ತಮ್ಮ ಹೆಸರಿನ ಕಾಗುಣಿತವನ್ನೋ ಇಲ್ಲವೇ ಇಡೀ ಹೆಸರನ್ನೋ ಬದಲಾಯಿಸಿಕೊಳ್ಳಬಹುದು.

ಮತ ಪರಿವರ್ತನೆ ಹೊಂದಿದ ‘ರಾಮ’, ‘ರಹೀಮ’ನಾಗಿ, ‘ಜೇನ್‌’ ‘ಜಾನಕಿ’ ಆಗಿ ಬದಲಾಗುತ್ತಾರೆ. ಹೀಗೆ ಹತ್ತು ಹಲವಾರು ಕಾರಣಗಳಿಂದಾಗಿ ಬಹುಮಂದಿ ಹೆಸರು ಬದಲಾಯಿಸಿಕೊಳ್ಳುತ್ತಾರೆ. ಕಾರಣಗಳ ಪಟ್ಟಿ ಮಾಡಿದಷ್ಟೂ ಉದ್ದವಾಗುತ್ತದೆ. ಕಾರಣಗಳೇನೇ ಇರಲಿ, ಅವು ಗೌಣ. ಏಕೆಂದರೆ ನಮ್ಮ ದೇಶದಲ್ಲಿ ಹೆಸರು ಬದಲಾಯಿಸಿಕೊಳ್ಳಬೇಕೆಂದರೆ ಕಾನೂನಿನ ಯಾವುದೇ ನಿರ್ಬಂಧವೂ ಇಲ್ಲ, ಯಾರು ಬೇಕಾದರೂ, ಯಾವಾಗ ಬೇಕಾದರೂ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಬಹುದು.

ಒಬ್ಬ ವ್ಯಕ್ತಿ ತನ್ನ ಹೆಸರನ್ನು ಬದಲಾಯಿಸಿಕೊಂಡರೆ ಅದರ ಪರಿಣಾಮ ಅವನೊಬ್ಬನ ಮೇಲೆ ಮಾತ್ರ ಆಗುವುದಿಲ್ಲ! ಅವನೊಂದಿಗೆ ಯಾವುದೇ ತೆರನಾದ ಸಂಬಂಧ ಹೊಂದಿರುವ, ಅಂದರೆ ಸಾಮಾಜಿಕ, ವ್ಯಾವಹಾರಿಕ, ಆರ್ಥಿಕ, ಇತ್ಯಾದಿ ಸಂಬಂಧಗಳನ್ನು ಇಟ್ಟುಕೊಂಡಿರುವ ಎಲ್ಲರಿಗೂ ಆಗುತ್ತದೆ. ಹೆಸರನ್ನು ಬದಲಾಯಿಸಿಕೊಳ್ಳಬೇಕೆಂದಿರುವವರು ಇದನ್ನು ಚೆನ್ನಾಗಿ ಗಮನದಲ್ಲಿಟ್ಟುಕೊಳ್ಳಬೇಕು. ಈ ಕುರಿತು ಏನೇನು ತಿದ್ದುಪಡಿ ಮಾಡಬೇಕಾಗುತ್ತದೆ ಎನ್ನುವ ವಿವರ ಮುಂದಿನ ವಾರ…
-ಎಸ್‌.ಆರ್‌. ಗೌತಮ್‌(ಕೃಪೆ: ನವ ಕರ್ನಾಟಕ ಪ್ರಕಾಶನ)

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

IPL

IPL 2020 : ಪಂಜಾಬ್ VS ಕೋಲ್ಕತಾ; ರಾಹುಲ್ ಪಡೆಗೆ 150 ರನ್ ಗೆಲುವಿನ ಗುರಿ

PTI23-04-2020_000083B

ದಾವಣಗೆರೆ: 124 ಜನರಲ್ಲಿ ಕೋವಿಡ್ ದೃಢ, ಸೋಂಕಿನಿಂದ ಒಬ್ಬರು ಸಾವು

ಪಿಲಿಕುಳ : ಹಳೇ ತಲೆಮಾರಿನ 21 ವರ್ಷದ ಹುಲಿ “ವಿಕ್ರಮ್” ಇನ್ನಿಲ್ಲ

ಪಿಲಿಕುಳ : ಹಳೇ ತಲೆಮಾರಿನ 21 ವರ್ಷದ ಹುಲಿ “ವಿಕ್ರಮ್” ಇನ್ನಿಲ್ಲ

ಉಪ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ರೀತಿ ವೋಟ್‌ ಫಿಕ್ಸಿಂಗ್‌ : ಶರವಣ ಆರೋಪ

ಉಪ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ರೀತಿ ವೋಟ್‌ ಫಿಕ್ಸಿಂಗ್‌ : ಶರವಣ ಆರೋಪ

ಮಲ್ಯ ಸಾಲದಲ್ಲಿ 3,600 ಕೋಟಿ ವಸೂಲಿ, 11 ಸಾವಿರ ಕೋಟಿ ರೂ. ಬಾಕಿ: ಸುಪ್ರೀಂಗೆ ಅರಿಕೆ

ಮಲ್ಯ ಸಾಲದಲ್ಲಿ 3,600 ಕೋಟಿ ವಸೂಲಿ, 11 ಸಾವಿರ ಕೋಟಿ ರೂ. ಬಾಕಿ: ಸುಪ್ರೀಂಗೆ ಅರಿಕೆ

ಮಕ್ಕಳ ಕೈಗೆ ಮೊಬೈಲ್‌: ಚಟವಾಗದಿರಲು ಏನು ಮಾಡಬೇಕು?

ಮಕ್ಕಳ ಕೈಗೆ ಮೊಬೈಲ್‌: ಚಟವಾಗದಿರಲು ಏನು ಮಾಡಬೇಕು?

ಸಾವರ್ಕರ್‌ಗೆ ಏಕೆ ಇದುವರೆಗೆ ಭಾರತ ರತ್ನ ನೀಡಿಲ್ಲ? ಬಿಜೆಪಿಗೆ ಶಿವಸೇನೆ ಪ್ರಶ್ನೆ

ಸಾವರ್ಕರ್‌ಗೆ ಏಕೆ ಇದುವರೆಗೆ ಭಾರತ ರತ್ನ ನೀಡಿಲ್ಲ? ಬಿಜೆಪಿಗೆ ಶಿವಸೇನೆ ಪ್ರಶ್ನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

isiri-tdy-3

ಬಾಳು ಜೇನು! ಖರ್ಚು ಕಡಿಮೆ, ಲಾಭ ಜಾಸ್ತಿ…

isiri-tdy-2

ಭೂಮಿಗೆ ಸಿಗುತ್ತದೆ ಬಂಗಾರದ ಬೆಲೆ…

isiri-tdy-1

ಲೈಫ್ ಈಸ್‌ ಬುಟ್ಟಿ ಫ‌ುಲ್‌

isiri-tdy-5

ಕೀ ಬೋರ್ಡ್‌ ಮೇಲೆ ಸಿಟ್ಟಾಗಿ ಕುಟ್ಟಬೇಡಿ ಮಾರಾಯ್ರೇ.

ಆನ್‌ಲೈನ್ ‌ಕ್ಲಾಸಿಗೆ ಲ್ಯಾಪಿ

ಆನ್‌ಲೈನ್ ‌ಕ್ಲಾಸಿಗೆ ಲ್ಯಾಪಿ

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

Madikeri-dasara

ಮಡಿಕೇರಿ: ಸರಳ ದಸರಾಕ್ಕೆ ತೆರೆ

IPL

IPL 2020 : ಪಂಜಾಬ್ VS ಕೋಲ್ಕತಾ; ರಾಹುಲ್ ಪಡೆಗೆ 150 ರನ್ ಗೆಲುವಿನ ಗುರಿ

PTI23-04-2020_000083B

ದಾವಣಗೆರೆ: 124 ಜನರಲ್ಲಿ ಕೋವಿಡ್ ದೃಢ, ಸೋಂಕಿನಿಂದ ಒಬ್ಬರು ಸಾವು

ಪಿಲಿಕುಳ : ಹಳೇ ತಲೆಮಾರಿನ 21 ವರ್ಷದ ಹುಲಿ “ವಿಕ್ರಮ್” ಇನ್ನಿಲ್ಲ

ಪಿಲಿಕುಳ : ಹಳೇ ತಲೆಮಾರಿನ 21 ವರ್ಷದ ಹುಲಿ “ವಿಕ್ರಮ್” ಇನ್ನಿಲ್ಲ

ಉಪ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ರೀತಿ ವೋಟ್‌ ಫಿಕ್ಸಿಂಗ್‌ : ಶರವಣ ಆರೋಪ

ಉಪ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ರೀತಿ ವೋಟ್‌ ಫಿಕ್ಸಿಂಗ್‌ : ಶರವಣ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.