ಮ್ಯಾಂಗೋ ಬೆಳೆಯೋದು ಹ್ಯಾಂಗೋ? ಇವರೇ ಹೇಳ್ಕೊಡ್ತಾರೆ ಸ್ವಾಮಿ


Team Udayavani, Jan 16, 2017, 3:45 AM IST

mango.jpg

“ಹಿತಮಿತ ನೀರು, ಪೋಷಕಾಂಶ ಮತ್ತು ಕೀಟ ನಿರ್ವಹಣೆಗೆ ಜೈವಿಕ ವಿಧಾನ ಅಳವಡಿಸಿಕೊಂಡರೆ ಅತ್ಯುತ್ತಮವಾಗಿ ಮಾವು ಬೆಳೆಯಬಹುದು. ಈ ಮೂರು ತತ್ವಗಳನ್ನು ಅಳವಡಿಸಿಕೊಂಡು ಸಾವಯವ ಪದ್ಧತಿಯಲ್ಲಿ ಮಾವು ಬೆಳೆಯುತ್ತಿದ್ದೇನೆ. ಫ‌ಸಲು ಬರುತ್ತಿದ್ದಂತೆಯೇ ಬೇಡಿಕೆ ಹೆಚ್ಚುತ್ತದೆ’ ಹೀಗೆ ಆತ್ಮವಿಶ್ವಾಸದಿಂದ ಹೇಳ್ಳೋದು ಗಂಗಾಧರಯ್ಯ ಸ್ವಾಮಿ. ಇವರು ತುಮಕೂರು ಜಿಲ್ಲೆ, ಕುಣಿಗಲ್‌ ತಾಲೂಕಿನ ಗಿಡದಪಾಳ್ಯ ಗ್ರಾಮದ ತೋಟಗಾರಿಕೆ ಬೆಳೆಗಾರ.

 ಹದಿನೈದು ಎಕರೆ ಜಮೀನಿನಲ್ಲಿ ಮಾವು ತೋಟ ಇದೆ. ರಸಪೂರಿ, ಬಾದಾಮಿ, ಮಲ್ಲಿಕಾ, ದಶೇರಿ ಇತ್ಯಾದಿ ತಳಿ ಮರಗಳಿವೆ. ಗಂಗಾಧರಯ್ಯ ಸ್ವಾಮಿ ಅವರ ತಂದೆ ಸಸಿಯಿಂದ ಸಸಿಗೆ 30 ಅಡಿ ಅಂತರ ಕೊಟ್ಟು  ನೆಟ್ಟು ಬೆಳೆಸಿದ ಮರಗಳೂ ಇವೆ. “ಈಗ ಇಪ್ಪತ್ತು ಅಡಿ ದಾಯ ಕೊಟ್ಟರೂ ಸಾಕು. ಮುವತ್ತು ಅಡಿ ಅಂತರ ಕೊಟ್ಟರೆ ಸಾಕಷ್ಟು ಜಾಗ ಖಾಲಿ ಉಳಿಯುತ್ತದೆ.  ವ್ಯರ್ಥ ಆಗುತ್ತದೆ. ಆದ್ದರಿಂದ ಗಿಡದಿಂದ ಗಿಡಕ್ಕೆ 20 ಅಡಿ ಅಂತರ ಕೊಟ್ಟರೆ ಹೆಚ್ಚು ಗಿಡಗಳನ್ನು ಕೂರಿಸಬಹುದು. ಇಳುವರಿಯೂ ಹೆಚ್ಚು ಬರುತ್ತದೆ. ಲಾಭವೂ ಹೆಚ್ಚಾಗುತ್ತದೆ. ಈ ಮರಗಳು  50 ವರ್ಷದ ತನಕ  ಚೆನ್ನಾಗಿ ಇಳುವರಿ ಕೊಡುತ್ತವೆ’ ಎಂದು ಹೇಳುತ್ತಾರೆ.

ಇವರ ಜಮೀನಿನ ಬೇರೆ ಭಾಗದಲ್ಲಿ  ಗಿಡದಿಂದ ಗಿಡಕ್ಕೆ 20 ಅಡಿ ಅಂತರ ನೀಡಿ ಮಾವಿನ ಮರಗಳನ್ನು ಬೆಳೆಸಿದ್ದಾರೆ. ಸಮಯಕ್ಕೆ ಸರಿಯಾಗಿ ಫ‌ೂ›ನಿಂಗ್‌ ಮಾಡಿದ್ದಾರೆ. ಇದರಿಂದ ಫ‌ಸಲು ಹೆಚ್ಚಿದೆ. ಹೆಚ್ಚು ಎತ್ತರಕ್ಕೆ ಬೆಳೆಯದ ಕಾರಣ ಕೃಷಿಕಾರ್ಮಿಕರ ಸಹಾಯ ಇಲ್ಲದೆ  ನಿರ್ವಹಣೆ ಮಾಡಬಹುದು. ಈಗಾಗಲೇ ತೋಟಕ್ಕೆ ಹದಿನಾರು ವರ್ಷ ಆಗಿದೆ.  ಇಳುವರಿ ಚೆನ್ನಾಗಿದೆ.  ಮೂರು ಎಕರೆಯಲ್ಲಿ ಸಪೋಟಾ ಗಿಡಗಳಿವೆ. ಇದು ಹದಿನಾಲ್ಕು ವರ್ಷದ ಸಾವಯವ ತೋಟ.

ಇಳುವರಿ ಚೆನ್ನಾಗಿದ್ದರೂ ಲಾಭಾಂಶದ ಪ್ರಮಾಣ ಅತಿ ಕಡಿಮೆ. ಮಾವು, ಸಪೋಟಾ ತೋಟಗಳಲ್ಲಿ ಅಂತರ ಬೆಳೆಯಾಗಿ ರಾಗಿ, ಹುರುಳಿ ಬೆಳೆಯುತ್ತಾರೆ. ಇವುಗಳನ್ನು ಮನೆಬಳಕೆಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಇಟ್ಟುಕೊಂಡು ಉಳಿದ ಫ‌ಸಲನ್ನು ಮಾರಾಟ ಮಾಡುತ್ತಾರೆ. ಮೊದಲು ಭತ್ತ ಸಹ ಬೆಳೆಯುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಕೆರೆಯಲ್ಲಿ ನೀರೇ ಇಲ್ಲದಿರುವುದರಿಂದ ಭತ್ತ ಬೆಳೆಯುವುದು ಬಂದ್‌ ಆಗಿದೆ.

ಹನಿ ನೀರಾವರಿ
ಕೊರೆಸಿದ್ದ ನಾಲ್ಕೈದು ಕೊಳವೆ ಬಾವಿಗಳಲ್ಲಿ ಒಂದರಲ್ಲಿ ಮಾತ್ರ ಜೀವವಿದೆ. ಇದರಲ್ಲಿಯೂ ನೀರಿನ ಪ್ರಮಾಣ ಹೆಚ್ಚೇನೂ ಇಲ್ಲ. ಹನಿ ನೀರಾವರಿ ಅಳವಡಿಸಿ ತೋಟಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ನೀರು ಹೆಚ್ಚಿದೆ ಎಂದು ಜಾಸ್ತಿ ಪೂರೈಸಿದರೂ ಬೆಳೆಗಾರರಿಗೆ ನಷ್ಟ. ಗಿಡ-ಮರಗಳ ಬೇರು ಕೊಳೆತು ಹೋಗುತ್ತದೆ. ಇಳುವರಿಯೂ ಕುಸಿಯುತ್ತದೆ ಎಂಬುದನ್ನು ಕಂಡು ಕೊಂಡಿದ್ದಾರೆ. 

ಉಪ ಕಸುಬು
ಹಸು-ಕುರಿ-ಆಡು-ಕೋಳಿ ಸಾಕಣೆಯ ಉಪ ಕಸುಬು ಚೆನ್ನಾಗಿ ಕೈ ಡಿದಿವೆ. ಜಮೀನು/ ತೋಟದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹುಲ್ಲು ಬೆಳೆಯುತ್ತದೆ. ಅಲ್ಲಿಯೇ ಮೇಯಲು ಬಿಡುತ್ತಿದ್ದಾರೆ. ಗ್ರಾಮಸ್ಥರು ಜಾನುವಾರುಗಳಿಗೆಂದೆ ಬಹು ಮುತುವರ್ಜಿಯಿಂದ ನಿರ್ವಹಣೆ ಮಾಡುತ್ತಿರುವ ಊರ ಕಟ್ಟೆಯಲ್ಲಿ ನೀರು ಕುಡಿಯುತ್ತವೆ.  ‘ದಿನದಲ್ಲಿ ಆರೇಳು ಗಂಟೆ ಹೊರಗೆ ಬಿಟ್ಟರೂ ಸಾಕು. ಚೆನ್ನಾಗಿ ಮೇಯ್ದು, ನೀರು ಕುಡಿದು ಬರುತ್ತವೆ. ಸದ್ಯ ನೂರು ಕುರಿ, ಹತ್ತು ಟಗರು, ಒಂದಷ್ಟು ಆಡು ಇವೆ. ಬಂಡೂರು ಮತ್ತು ಸ್ಥಳೀಯ ತಳಿ ಕುರಿಗಳು. ಇದೊಂದು ರೀತಿ ಎಟಿಎಂ ಇದ್ದಂತೆ. ಬೇಕೆಂದಾಗ ಮಾರಿದರೆ ಸ್ಥಳದಲ್ಲಿಯೇ ಹಣ ಸಿಗುತ್ತದೆ. ಪ್ರತಿ ತಿಂಗಳು ಕುರಿ ಮಾರಾಟದಿಂದ ಕನಿಷ್ಟ 20 ಸಾರ ರೂಪಾಯಿ ದೊರೆಯುತ್ತಿದೆ.

ಇದರಿಂದ ಮನೆ ಖರ್ಚು-ವೆಚ್ಚ ನಿಭಾುಸಲು ಸಾಧ್ಯವಾಗಿದೆ’ ಎನ್ನುತ್ತಾರೆ.  ಇವರು ಮಾಡುತ್ತಿರುವ ಕೋಳಿ ಸಾಕಣೆ ಕೂಡ ಲಾಭದಾಯಕವಾಗಿದೆ. ಇವುಗಳ ಮಾರಾಟದಿಂದ ವಾರ್ಷಿಕ 50 ಸಾರ ರೂ.ಗೂ ಹೆಚ್ಚು ಹಣ ದೊರೆಯುತ್ತಿದೆ. ಕೋಳಿ ಸಾಕಣೆಗೆ ಪ್ರತ್ಯೇಕ ಖರ್ಚು ಮಾಡುತ್ತಿಲ್ಲ. ತೋಟದಲ್ಲಿ ಅಡ್ಡಾಡ್ಡಿ ಹುಳ-ಹುಪ್ಪಟ್ಟೆ, ಕಾಳು-ಕಡ್ಡಿ ಮೇಯುತ್ತವೆ. ಮನೆಯಲ್ಲಿ ಉಳಿದ ಆಹಾರ, ಒಂದಿಷ್ಟು ಧಾನ್ಯ ಹಾಕುತ್ತಾರೆ. ಅವುಗಳನ್ನೇ ತಿಂದು ಚೆನ್ನಾಗಿ ಬೆಳೆಯುತ್ತವೆ. 

ಕುರಿ-ಕೋಳಿ ಸಾಕಣೆಯಿಂದ ವಾರ್ಷಿಕ ಏನಿಲ್ಲ ಎಂದರೂ 28 ರಿಂದ 30 ಲೋಡು ಗೊಬ್ಬರ ದೊರೆಯುತ್ತದೆ. ಈ ಗೊಬ್ಬರಕ್ಕೆ ಭಾರಿ ಬೇಡಿಕೆ ಇರುವುದರಿಂದ ಅಗತ್ಯ ಇರುವವರು ಸ್ಥಳಕ್ಕೆ ಬಂದು ಖರೀದಿಸಿ ತೆಗೆದುಕೊಂಡು ಹೋಗುತ್ತಾರೆ. ಸಧ್ಯ ಕುರಿ ಗೊಬ್ಬರಕ್ಕೆ ಭಾರಿ ಬೆಲೆ ಇದೆ. ವರ್ಷಕ್ಕೆ ಕನಿಷ್ಟ 28 ಟ್ರಾಕ್ಟರ್‌ ಮಾರಾಟ ಗೊಬ್ಬರ ಮಾರಾಟ ಮಾಡುತ್ತಾರೆ. ಹಸುಗಳನ್ನು ಸಾಕಣೆ ಮಾಡಿದ್ದಾರೆ. ಪ್ರತಿವರ್ಷ ಐದಾರು ಹಸುಗಳನ್ನು ಮಾರಾಟ ಮಾಡುತ್ತಾರೆ.  

ಸಾವಯವ ಮಾವಿಗೆ ಬೇಡಿಕೆ:
ಹಣ್ಣಿನ ನೊಣಗಳಿಂದ ಮಾವು ರಕ್ಷಿಸುವುದು ಬಹಳ ಕಷ್ಟ. ರಾಸಾಯನಿಕ ಕೀಟನಾಶಕ ಸಿಂಪಡಿಸಿದರೂ ಪ್ರಯೋಜನ ಇಲ್ಲ. ಒಮ್ಮೆ ನೊಣ ಹೊಡೆದರೆ ಹಣ್ಣು ಒಳಗೆ ಕೊಳೆಯಲು ಆರಂಭ ಆಗುತ್ತದೆ. ಮೇಲ್ನೋಟಕ್ಕೆ ಇದು ಗೊತ್ತೇ ಆಗುವುದಿಲ್ಲ.  ಇದೇ ರೀತಿ ಸಾವಿರಾರು ಸಂಖ್ಯೆಯಲ್ಲಿ ಹಣ್ಣುಗಳು ಹಾಳಾಗುತ್ತವೆ. ‘ಜೈವಿಕ ವಿಧಾನದಿಂದ ಹಣ್ಣಿನ ನೊಣಗಳನ್ನು ನಿಯಂತ್ರಿಸುವ ಬಗ್ಗೆ ಚಾರಿಸಿದಾಗ ಬ್ಯಾರಿಕ್ಸ್‌ ಫೆರಮೋನ್‌ ಟ್ರ್ಯಾಪ್‌-ಲ್ಯೂರ್‌ ಮತ್ತು ಸ್ಟಿಕ್ಕಿ ಟ್ರಾಪ್‌ಗ್ಳ ಬಗ್ಗೆ ತಿಳಿಯಿತು. ಒಂದು ಎಕರೆ ತೋಟಕ್ಕೆ ಎಂಟರಿಂದ ಹತ್ತು ಫೆರಮೋನ್‌ ಟ್ರ್ಯಾಪ್‌ ಹಾಕಿದರೂ ಸಾಕು. ಇವುಗಳನ್ನು ನೇತು ಹಾಕಿದ ಕೆಲವೇ ನಿಮಿಷಗಳಲ್ಲಿ ಹಣ್ಣಿನ ನೊಣಗಳು ಆಕರ್ಷಿತವಾಗಿ ಬಂದು ಬೀಳುತ್ತವೆ. ನಮ್ಮ ಕಣ್ಣಿಗೂ ಕಾಣದ ಸಣ್ಣಸಣ್ಣ ಕೀಟಗಳು ಸ್ಟಿಕ್ಕಿ ಟ್ರ್ಯಾಪ್‌ಗೆ ಬಂದು ಅಂಟಿಕೊಳ್ಳುತ್ತವೆ. ಇವೆರಡು ಕೀಟ ನಿಯಂತ್ರಕಗಳಿಂದ ಪ್ರತಿವರ್ಷ ಅಪಾರ ಹಣ, ಸಮಯ, ಶ್ರಮ ಉಳಿತಾಯ ಆಗಿದೆ’ ಎಂದು ವಿವರಿಸುತ್ತಾರೆ ಗಂಗಾಧರಯ್ಯ.  

ಗಂಗಾಧರಯ್ಯ ಸ್ವಾಮಿ ಅವರ ಇಷ್ಟೆಲ್ಲ ಶ್ರಮ ಫ‌ಲ ನೀಡಿದೆ. ಇವರು ಬೆಳೆಯುತ್ತಿರುವ ಮಾವಿಗೆ ವಿಶೇಷವಾಗಿ ಬೆಂಗಳೂರಿನ ಸಾವಯವ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. “ಮೊದಲು ಸ್ಥಳಕ್ಕೆ ಬಂದ ವ್ಯಾಪಾರಿಗಳಿಗೆ ಮಾರಿ ಬಿಡುತ್ತಿದ್ದೆವು. ದೊರೆಯುತ್ತಿದ್ದ ಲಾಭಾಂಶ ತುಂಬ ಕಡಿಮೆ ಇರುತ್ತಿತ್ತು. ಒಮ್ಮೆ ನಮ್ಮ ತೋಟಕ್ಕೆ ಭೇಟಿ ನೀಡಿದ ಪರಿಚಿತರೊಬ್ಬರು ನೀವೇ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಎಂದರು. ಆನಂತರ ಅದೇ ರೀತಿ ಮಾರಾಟ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ಕೆಲವೊಂದು ಅಪಾರ್ಟ್‌ಮೆಂಟ್‌ಗಳವರು ಮುಂಚಿತವಾಗಿ ಮಾಗೆ ಬುಕ್‌ ಮಾಡುತ್ತಾರೆ. ಬುಟ್ಟಿಗಳಲ್ಲಿ ಹಣ್ಣುಗಳನ್ನು ಪ್ಯಾಕ್‌ ಮಾಡಿ ತೆಗೆದುಕೊಂಡು ಹೋಗಿ ಕೊಡುತ್ತೇವೆ. ತಕ್ಷಣವೇ ಹಣ ದೊರೆಯುತ್ತದೆ ಎಂದು ಖುಷಿ ವ್ಯಕ್ತಪಡಿಸುತ್ತಾರೆ.

ಹೆಚ್ಚಿನ ಮಾತಿಗೆ ಸಂಪರ್ಕಿಸಿ:  87220 65215

– ಕುಮಾರ ರೈತ

ಟಾಪ್ ನ್ಯೂಸ್

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.