ಮಾತು ಕೇಳುವ ಕಾರು

ಎಂ.ಜಿ. ಹೆಕ್ಟರ್‌ ಭಾರತದ ಮೊದಲ ಇಂಟರ್ನೆಟ್‌ ಕಾರು

Team Udayavani, Apr 8, 2019, 9:41 AM IST

“ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ (ಕೃತಕ ಬುದ್ಧಿಮತ್ತೆ) ಜತೆ ಒಂದು ವರ್ಷ ಕಳೆದುಬಿಟ್ಟರೆ, ನೀವು ದೇವರನ್ನು ನಂಬುವುದನ್ನೇ ಬಿಟ್ಟುಬಿಡುತ್ತೀರಿ’! - ಅಮೆರಿಕದ ಗಣಕ ವಿಜ್ಞಾನಿ ಅಲನ್‌ ಪೆರ್ಲಿಸ್‌, ಹೀಗೆ ಹೇಳುವಾಗ ಅವರ
ಕಣ್ಣೆದುರು ಒಂದಿಷ್ಟು ಕೃತಕ ಬುದ್ಧಿಮತ್ತೆಯ ಮಾದರಿಗಳಿದ್ದವು. ಅಲ್ಲೆಲ್ಲೋ ಜಪಾನಿನಲ್ಲಿ ರೊಬೊಟ್‌, ಬ್ರೇಕಿಂಗ್‌ ನ್ಯೂಸ್‌ ಓದುತ್ತಿತ್ತು; ಅಮೆಜಾನ್‌ನ ಕೂಸು “ಅಲೆಕ್ಸಾ’, ಇಷ್ಟದ ಹಾಡನ್ನು ಪ್ಲೇ ಮಾಡಿ, ರಂಜಿಸುತ್ತಿತ್ತು; ಗೂಗಲ್‌ ಅಸಿಸ್ಟಂಟ್‌, ಆ್ಯಪಲ್‌ನ ಹೋಮ್‌ಪಾಡ್‌ಗಳು ಮನುಷ್ಯನೊಂದಿಗೆ ಹರಟೆ ಹೊಡೆದು, ಒಂದಷ್ಟು ಮನರಂಜನೆ ನೀಡುತ್ತಿದ್ದವಷ್ಟೇ… ಆಗಿನ್ನೂ ಮನುಷ್ಯ ಹೇಳಿದ್ದನ್ನು ಕೇಳುವಂಥ, ಛಕ್ಕನೆ ಪ್ರತಿಕ್ರಿಯಿಸುವಂಥ ಕಾರು ರೋಡಿಗೇ ಇಳಿದಿರಲಿಲ್ಲ. ಇನ್ನೆರಡು ತಿಂಗಳು ಕಾದುಬಿಟ್ಟರೆ, ಆ ಪವಾಡವೂ ನಡೆದುಹೋಗುತ್ತೆ. ಜೂನ್‌ ಹೊತ್ತಿಗೆ ಭಾರತದಲ್ಲಿ ಆರ್ಟಿಶಿಯಲ್‌ ಇಂಟೆಲಿಜೆನ್ಸ್‌ ಆಧಾರಿತ ಕಾರುಗಳು ಗಲ್ಲಿಗಲ್ಲಿಗಳಲ್ಲಿ “ರೊಂಯ್‌’ಗುಟ್ಟಲಿವೆ. ಇಂಗ್ಲೆಂಡಿನ ಎಂ.ಜಿ. ಮೋಟಾರ್ಸ್‌ ಸಂಸ್ಥೆಯು ಭಾರತದಲ್ಲಿ “ಮೊದಲ ಇಂಟರ್ನೆಟ್‌ ಕಾರ್‌’ ಅನ್ನು ಬಿಡುಗಡೆ ಮಾಡುತ್ತಿದೆ. “ಎಂ.ಜಿ. ಹೆಕ್ಟರ್‌’ ಎನ್ನುವ ಇಂಟರ್ನೆಟ್‌ ಪವಾಡಗಳನ್ನು ತುಂಬಿಕೊಂಡ ಎಸ್‌ಯುವಿ ಇದು. ಮನುಷ್ಯ ಹೇಳಿದ್ದನ್ನೆಲ್ಲ ಕೇಳಿಸಿಕೊಂಡು, ಶ್ರದ್ಧೆಯಿಂದ ಪಾಲಿಸುವ ಈ ಕಾರಿನಲ್ಲಿ, ಡ್ರೈವರ್‌ಗಾಗಲೀ, ಕುಳಿತವರಿಗಾಗಲೀ ಹೆಚ್ಚು ಕೆಲಸವೇ ಇರೋದಿಲ್ಲ.

ಹಲೋ ಎಂ.ಜಿ…
ಈ ಧ್ವನಿ ಸಹಾಯಕವೇ ಕಾರಿನ “ಸ್ಟ್ರೆಂತ್‌’. ಅಲೆಕ್ಸಾದ ಪ್ರತಿರೂಪದಂತೆ ಇರುವ, ಕ್ಲೌಡ್ ಹಾಗೂ ಹೆಡ್‌ನ‌ಲ್ಲಿ ಕಾರ್ಯನಿರ್ವಹಿಸುವಂಥ ಪ್ರಬಲವಾಯ್ಸ ಅಪ್ಲಿಕೇಶನ್‌ ಇಲ್ಲಿರಲಿದೆ. ಭಾರತೀಯರ ಉಚ್ಚಾರಣೆಗೆ ಸ್ಪಂದಿಸುವ, “ಹಲೋ ಎಂ.ಜಿ.’ ಧ್ವನಿ ಸಹಾಯಕದ ಮೂಲಕ 100ಕ್ಕೂ ಹೆಚ್ಚು ಕೆಲಸವನ್ನು ಮಾಡಿಸಿಕೊಳ್ಳಬಹುದು. “ಎಸಿ ಕಂಟ್ರೋಲ್‌ ಮಾಡು’ ಅಂದರೆ, ಮಾಡುತ್ತೆ; “ಬ್ಯಾಕ್‌ಸೀಟ್‌ನ ಕಾರಿನ ಗ್ಲಾಸು ಏರಿಸು’ ಅಂದ್ರೆ ಏರಿಸುತ್ತೆ; ಸನ್‌ರೂಫ್ ಇರಲಿಯೆಂದರೆ, ಆಕಾಶದ ಅಂದವನ್ನೆಲ್ಲ ಟಾಪ್‌ ನಲ್ಲಿ ತೋರಿಸುತ್ತೆ; ಬಾಗಿಲುಗಳನ್ನೂ ಕಾರೇ ಹಾಕುತ್ತೆ… ಇಷ್ಟದ ಹಾಡುಗಳನ್ನೂ ಕೇಳಿಸುತ್ತೆ… ಬಿಲ್ಟ್ ಇನ್‌ ಅವಕಾಶವೂ ಇಲ್ಲಿದ್ದು, ಮಿಷನ್‌ ಲರ್ನಿಂಗ್‌ ಅಲ್ಗಾರಿದಮ್‌ ನೆರವಿನಿಂದ ದಿನದಿಂದ ದಿನಕ್ಕೆ ಇದರ ಬುದ್ಧಿಮತ್ತೆಯೂ ಆಟೋಮ್ಯಾಟಿಕ್‌ ಆಗಿ ಉತ್ತಮಗೊಳ್ಳುತ್ತಾ ಹೋಗುತ್ತದೆ. ದಾರಿ ತೋರಿಸುವ ದೇವರು ಕಾರಿನಲ್ಲಿ ಹೋಗುತ್ತಿದ್ದೀರಿ… ಮುಂದೆ ಟ್ರಾಫಿಕ್‌ ಜಾಮ್‌ ಆಗಿರೋ ಮುನ್ಸೂಚನೆಯನ್ನು ನೇವಿಗೇಶನ್‌ನಲ್ಲೇ ತಿಳಿಯಬಹುದು. ರಸ್ತೆ ದುರಸ್ತಿ ನಡೆಯುತ್ತಿದ್ದರೆ, ಸೇತುವೆ ಬಿದ್ದಿದ್ದರೆ, ಅದು ಮುಂಚಿತವಾಗಿಯೇ ಚಾಲಕನಿಗೆ ಗೊತ್ತಾಗುವ ವ್ಯವಸ್ಥೆ ಇಲ್ಲಿರಲಿದೆ.

ಮುಂದೆ ಯಾವ ಹೋಟೆಲ್‌ ಇದೆ? ಯಾವ ಆಸ್ಪತ್ರೆ ಸಿಗುತ್ತೆ? ಪೆಟ್ರೋಲ್‌ ಬಂಕ್‌ಗೆ ಎಷ್ಟು ದೂರ ಇದೆ? ಕಾರು ಹೋಗುತ್ತಿರುವ ಮಾರ್ಗದಲ್ಲಿ ಹವಾಮಾನ ಹೇಗಿದೆ? ಎಲ್ಲಿ ಪಾರ್ಕಿಂಗ್‌ ಮಾಡಬಹುದು?- ಅನ್ನೋ ವಿಚಾರಗಳನ್ನೆಲ್ಲ ನಕ್ಷೆಯ ಮೂಲಕವೇ ತಿಳಿಯಬಹುದು. ಎಂ.ಜಿ. ಹೆಕ್ಟರ್‌ನ “ಐ ಸ್ಮಾರ್ಟ್‌’ ವ್ಯವಸ್ಥೆ ಇದನ್ನೆಲ್ಲ ಪಕ್ಕಾ ತೋರಿಸುತ್ತದೆ. ಮೈಕ್ರೋಸಾಫ್ಟ್ ಮತ್ತು  ರ್‌ಟೆಲ್‌ನಂಥ ಪ್ರತಿಷ್ಠಿತ ಸಂಸ್ಥೆಗಳಿಂದ ಪ್ರಾದೇಶಿಕ ಡಾಟಾ ಸಂಗ್ರಹಿಸಿ, ಈ ವ್ಯವಸ್ಥೆ ರೂಪಿಸಲಾಗಿದೆ. ಪಂಕ್ಚರ್‌ ಮುನ್ಸೂಚನೆ ಯಾವುದೋ ದೊಡ್ಡ ಈವೆಂಟ್‌ಗೆ ಹೋಗಿರುತ್ತೀರಿ. ಡ್ರೈವರ್‌, ಕಾರನ್ನು ಎಲ್ಲಿ ಪಾರ್ಕ್‌ ಮಾಡಿದ್ದಾನೆ ಅನ್ನೋದನ್ನೂ ಮೊಬೈಲ್‌ ಮೂಲಕವೇ ತಿಳಿದುಕೊಳ್ಳಬಹುದು. ಒಂದು ವೇಳೆ ನಿಮ್ಮ ಕಾರ್‌ ಅನ್ನು ಇನ್ನಾರಿಗೋ ಓಡಿಸಲು ಕೊಟ್ಟಿರುತ್ತೀರಿ. ಕಾರ್‌ ಎಲ್ಲಿ ಹೋಗುತ್ತಿದೆ ಅನ್ನೋ ಸಂಗತಿಯೂ ಆ್ಯಪ್‌ನಲ್ಲಿ ಟ್ರ್ಯಾಕ್‌ ಆಗುತ್ತಿರುತ್ತದೆ. ಟೈರಿನ ಒತ್ತಡ ಎಷ್ಟಿದೆ? ಪಂಕ್ಚರ್‌ ಆಗಿದೆಯೇ? ಎಂಬ ಮಾಹಿತಿಯೂ ಸುಲಭವಾಗಿ ಸಿಗುತ್ತದೆ. ಇವೆಲ್ಲವೂ ಸಾಧ್ಯವಾಗುವುದು “ಎಂ.ಜಿ ಐಸ್ಮಾರ್ಟ್‌’ ಆ್ಯಪ್‌ ಮೂಲಕ. ತುರ್ತು ಸಂದರ್ಭದಲ್ಲಿ ಕಾರಿನ ಗಾಳಿ ಚೀಲ (ಏರ್‌ಬ್ಯಾಗ್‌) ತೆರೆದರೆ, ಇದರ ಮಾಹಿತಿ ನೇರವಾಗಿ ಕಸ್ಟಮರ್‌ ಕೇರ್‌ಗೆ ಹೋಗುತ್ತದೆ. ಅಲ್ಲಿಂದ ಅಗತ್ಯ ಸಹಾಯವೂ ಗ್ರಾಹಕರಿಗೆ ಸಿಗುವ ವ್ಯವಸ್ಥೆಯನ್ನು ಎಂ.ಜಿ. ಮೋಟಾರ್ಸ್‌ ಮಾಡಿದೆ. ಮುಂದಿನ ಜನರೇಶನ್‌ ಕಾರು ಇದಾಗಿದ್ದು, ಭಾರತೀಯ ಗ್ರಾಹಕರಿಗೆ ಇವೆಲ್ಲವೂ ಹೊಸ ಚರ್‌ಗಳು. ಭಾರತೀಯರಿಗೆ ಅನುಕೂಲವಾಗುವಂಥ ದರದಲ್ಲಿಯೇ ಎಂ.ಜಿ. ಹೆಕ್ಟರ್‌ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯ ಇರಲಿವೆ.

ದಟ್ಟಾರಣ್ಯದಲೂ ಸಿಗ್ನಲ್ಲು…
5ಜಿ ನೆಟ್‌ವರ್ಕ್‌, ಈ ಕಾರಿನ ಇನ್ನೊಂದು ವೈಶಿಷ್ಟ. ಎಂಥದ್ದೇ ಕಳಪೆ ಸಂಪರ್ಕ
ಸ್ಥಿತಿಯಲ್ಲೂ ದೂರವಾಣಿ, ಇಂಟರ್ನೆಟ್‌ ಕೆಲಸ ಮಾಡಲಿವೆ. ಕಾರು ಯಾವುದೋ ದಟ್ಟಾರಣ್ಯದ ನಡುವೆ ಇದ್ದರೂ, ಕರೆಗಳನ್ನು ಮಾಡುವಂಥ ವ್ಯವಸ್ಥೆ ಇರಲಿದೆ. ಒಂದು ವೇಳೆ, ಕಾರು ಅಪಘಾತ ಆಗುತ್ತದೆ ಎನ್ನುವ ಸಮಯದಲ್ಲಿ, 30 ಅಡಿಗಳ ಮುಂಚಿತವಾಗಿಯೇ ಮುನ್ಸೂಚನೆಯ ಸಿಗ್ನಲ್‌ ಸಿಗುತ್ತದೆ. ಹಾಗೂ ಅಪಘಾತವಾದರೆ, ಕೂಡಲೇ ರಿಜಿಸ್ಟರ್‌ ಆದ ಮೊಬೈಲ್‌ಗೆ ಎಂ.ಜಿ. ಕಸ್ಟಮರ್‌ ಕೇರ್‌ನಿಂದ ಕರೆ ಹೋಗುತ್ತದೆ. ಮೊದಲನೇ ನಂಬರ್‌ನವರು ಕರೆ ಎತ್ತದೇ ಇದ್ದಾಗ, ಎರಡನೇ ಸಂಖ್ಯೆಯವರಿಗೆ ಕರೆ ಹೋಗುತ್ತದೆ. ಕಾರಿನ ಯಾವುದೇ ಸಮಸ್ಯೆಗೆ ಕೂಡಲೇ ಸ್ಪಂದಿಸಲು 24*7 ಕಸ್ಟಮರ್‌ ಕೇರ್‌ ಇರುವುದು ಗ್ರಾಹಕರಿಗೆ ಇನ್ನೊಂದು ಪ್ಲಸ್‌ ಪಾಯಿಂಟ್‌.

ಕೀರ್ತಿ ಕೋಲ್ಗಾರ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ