Udayavni Special

ಜಂಟಿ ಖಾತೆಯಿಂದ ಹೆಸರನ್ನು ಕೈಬಿಡುವ ಪರಿ ; ಜಾಯಿಂಟ್‌ ಪೇನ್‌


Team Udayavani, Aug 3, 2020, 3:06 PM IST

ಜಂಟಿ ಖಾತೆಯಿಂದ ಹೆಸರನ್ನು ಕೈಬಿಡುವ ಪರಿ ; ಜಾಯಿಂಟ್‌ ಪೇನ್‌

ಸಾಂದರ್ಭಿಕ ಚಿತ್ರ

ಜಾಯಿಂಟ್‌ ಅಕೌಂಟ್ಸ್, ಸಾಮಾನ್ಯ ಬ್ಯಾಂಕ್‌ ಅಕೌಂಟ್‌ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತದೆ. ಒಂದು ಪ್ರಮುಖ ವ್ಯತ್ಯಾಸವೆಂದರೆ, ಜಾಯಿಂಟ್‌ ಅಕೌಂಟ್‌ ಇಬ್ಬರು ಅಥವಾ ಅದಕ್ಕೂ ಹೆಚ್ಚಿನ ಮಂದಿಯ ಹೆಸರಿನಲ್ಲಿರುತ್ತದೆ. ಜಂಟಿ ಖಾತೆ, ಹಣವನ್ನು ಒಂದೆಡೆ ಸೇರಿಸಲು ಮತ್ತು ಪರಿಣಾಮಕಾರಿಯಾಗಿ ಉಳಿತಾಯ ಮಾಡಲು ನೆರವಾಗುತ್ತದೆ. ಸಮಾನ ಆಸಕ್ತಿಯ ಮಂದಿ, ಕುಟುಂಬಸ್ಥರು, ಜಾಯಿಂಟ್‌ ಅಕೌಂಟ್‌ ಅನ್ನು ಹೊಂದಬಹುದು. ಜಂಟಿ ಖಾತೆಯಲ್ಲಿ ನಡೆಯುವ ಹಣಕಾಸು ವ್ಯವಹಾರಗಳು, ಇತರೆ ಖಾತೆದಾರರಿಗೂ ತಿಳಿಯುವುದರಿಂದ, ಯಾವೆಲ್ಲಾ ರೀತಿಯಲ್ಲಿ ಹಣ ಖರ್ಚಾಗುತ್ತಿದೆ ಎನ್ನುವುದನ್ನು ಟ್ರ್ಯಾಕ್‌ ಮಾಡುವುದು ಸಾಧ್ಯವಾಗುತ್ತದೆ. ಜಂಟಿ ಖಾತೆ ಪ್ರಯೋಜನಕಾರಿಯಾಗಿದ್ದರೂ, ಕೆಲ ಸಂದರ್ಭದಲ್ಲಿ ಕೆಲ ಸದಸ್ಯರ ಹೆಸರನ್ನು ಕೈಬಿಡಬೇಕಾದ ಅನಿವಾರ್ಯತೆ ಎದುರಾಗುವುದುಂಟು. ಪ್ರೈಮರಿ ಖಾತೆದಾರನ ಹೆಸರನ್ನು ತೆಗೆಯಲು ಆಗುವುದಿಲ್ಲ. ಜಂಟಿ ಖಾತೆಯ ಸದಸ್ಯನ ಹೆಸರನ್ನು ಕೈಬಿಡುವ ಪ್ರಕ್ರಿಯೆ ಹೀಗಿದೆ…

ಅರ್ಜಿ ಸಲ್ಲಿಕೆ: ಮೊದಲ ಹಂತದಲ್ಲಿ ಬ್ಯಾಂಕ್‌ ಅಥವಾ ಬ್ಯಾಂಕ್‌ ಜಾಲತಾಣದಿಂದ ಹೆಸರು ಕೈಬಿಡುವ ಅರ್ಜಿಯನ್ನು ಪಡೆದುಕೊಳ್ಳಬೇಕು, ಇಲ್ಲವೇ ಡೌನ್‌ ಲೋಡ್‌ ಮಾಡಿಕೊಳ್ಳಬೇಕು. ಕೈಬಿಡಲಾಗುತ್ತಿರುವ ಹೆಸರಿನ ವ್ಯಕ್ತಿ ಸೇರಿದಂತೆ, ಜಂಟಿ ಖಾತೆಯಲ್ಲಿರುವ ಪ್ರತಿಯೊಬ್ಬ ಸದಸ್ಯನೂ ಅರ್ಜಿಯಲ್ಲಿ ಸಹಿ ಹಾಕಬೇಕು. ಮಾಹಿತಿ: ಹೆಸರನ್ನು ಕೈಬಿಡಲಾಗುತ್ತಿರುವ ವ್ಯಕ್ತಿಯ ಕುರಿತಾದ ಮಾಹಿತಿಯನ್ನು ನಮೂದಿಸಬೇಕು. ಒಂದು ವೇಳೆ ಆ ವ್ಯಕ್ತಿ ಮೈನರ್‌ ಆಗಿದ್ದರೆ, ಪೋಷಕರ (ಗಾರ್ಡಿಯನ್‌) ಹೆಸರನ್ನು ನಮೂದಿಸಬೇಕು.

ಕಾರ್ಯ ನಿರ್ವಹಣಾ ಶೈಲಿ ಬದಲಾವಣೆ: ಈ ಸಂದರ್ಭದಲ್ಲಿ ಜಂಟಿ ಖಾತೆಯ ಸದಸ್ಯರು ಖಾತೆಯ ಕಾರ್ಯ ನಿರ್ವಹಣಾ ಶೈಲಿಯನ್ನು ಬದಲಾಯಿಸಬಹುದು. ಸದಸ್ಯರು ಇಚ್ಛಿಸಿದಲ್ಲಿ ಜಂಟಿ ಖಾತೆಯನ್ನು ಪ್ರತ್ಯೇಕ ವೈಯಕ್ತಿಕ ಖಾತೆಗಳನ್ನಾಗಿ ಬದಲಾ ಯಿಸ ಬಹುದಾಗಿದೆ. ಅಥವಾ ಎಂದಿನಂತೆ ಜಂಟಿ ಖಾತೆಯಾ ಗಿಯೇ ಉಳಿಸಿ ಕೊಂಡು ಮುಂದು ವರಿಸಿಕೊಂಡು ಹೋಗಲೂಬಹುದು.

ಡೆಬಿಟ್‌ ಕಾರ್ಡ್‌: ಹೆಸರು ಕೈಬಿಡಲಾದ ವ್ಯಕ್ತಿ, ಬ್ಯಾಂಕ್‌ ನೀಡಲ್ಪಟ್ಟ ಎಟಿಎಂ ಕಾರ್ಡನ್ನು ಹಿಂದಿರುಗಿಸಬೇಕಾಗುತ್ತದೆ. ಇಲ್ಲವೇ ಜಂಟಿ ಖಾತೆಯ ಇತರೆ ಸದಸ್ಯರು ಒಟ್ಟಾಗಿ, ಎಟಿಎಂ ಕಾರ್ಡನ್ನು ನಾಶಪಡಿಸಿರುವುದಾಗಿ ಮುಚ್ಚಳಿಕೆ ಬರೆದುಕೊಡಬೇಕಾಗುತ್ತದೆ. ಹೊಸ ಚೆಕ್‌ಬುಕ್‌: ಹಳೆಯ ಚೆಕ್‌ ಬುಕ್ಕನ್ನು ಬ್ಯಾಂಕಿಗೆ ಹಿಂದಿರುಗಿಸಿ, ಹೊಸ ಚೆಕ್‌ ಬುಕ್ಕಿಗೆ ಜಂಟಿ ಖಾತೆಯ ಸದಸ್ಯರು ಅರ್ಜಿ ಸಲ್ಲಿಸಬಹುದು. ಅರ್ಜಿಯಲ್ಲಿ ಅಪ್‌ಡೇಟ್‌ ಆದ ಸದಸ್ಯರ ಹೆಸರುಗಳನ್ನಷ್ಟೇ ನಮೂದಿಸಬೇಕು. ಇದರಿಂದ ಅರ್ಜಿಯಲ್ಲಿ ನಮೂದಿಸಲಾದ ಹೆಸರು ಗಳನ್ನಷ್ಟೇ ಒಳಗೊಂಡ ಹೊಸ ಚೆಕ್‌ಬುಕ್‌ ಅನ್ನು ನೀಡಲಾಗುತ್ತದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಏರ್‌ಇಂಡಿಯಾಗೆ ನಿರ್ಬಂಧ

ಏರ್ ‌ಇಂಡಿಯಾಗೆ ನಿರ್ಬಂಧ

ಕೃಷಿ ಬಿಲ್‌: ಎನ್‌ಡಿಎನಲ್ಲೇ ಒಡಕು

ಕೃಷಿ ಬಿಲ್‌: ಎನ್‌ಡಿಎನಲ್ಲೇ ಒಡಕು

ಕುಡಿಯುವ ನೀರು ಯೋಜನೆಗಳಿಗೆ 540 ಕೋಟಿ ಮಂಜೂರು

ಕುಡಿಯುವ ನೀರು ಯೋಜನೆಗಳಿಗೆ 540 ಕೋಟಿ ಮಂಜೂರು

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಅಮ್ಮನಾದ ಮಾಯಂತಿ ಐಪಿಎಲ್‌ಗೆ ಇಲ್ಲ

ಅಮ್ಮನಾದ “ಮಾಯಂತಿ” ಐಪಿಎಲ್‌ಗೆ ಇಲ್ಲ

ಧೋನಿಗೆ ಚಿನ್ನದ ಕ್ಯಾಪ್‌, ಜಡೇಜಾಗೆ ಚಿನ್ನದ ಖಡ್ಗ!

ಧೋನಿಗೆ ಚಿನ್ನದ ಕ್ಯಾಪ್‌, ಜಡೇಜಾಗೆ ಚಿನ್ನದ ಖಡ್ಗ!

ಆರ್‌ಸಿಬಿ ಗೀತೆಯಲ್ಲಿ ಕನ್ನಡ ಪ್ರತ್ಯಕ್ಷವಾಯಿತು!

ಆರ್‌ಸಿಬಿ ಗೀತೆಯಲ್ಲಿ ಕನ್ನಡ ಪ್ರತ್ಯಕ್ಷವಾಯಿತು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

isiri-tdy-5

ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಮತ್ತೆ ಬಂತು ವಿಆರ್‌ಎಸ್‌!

ಭಾಷೆ ಬಲ್ಲವನೇ ಬಾಸ್‌!

ಭಾಷೆ ಬಲ್ಲವನೇ ಬಾಸ್‌!

ಟಿ.ವಿ.ಯನ್ನು ಸ್ಮಾರ್ಟ್‌ ಮಾಡುವ ಸ್ಟಿಕ್‌ ಎಂಬ ಮಂತ್ರದಂಡ!

ಟಿ.ವಿ.ಯನ್ನು ಸ್ಮಾರ್ಟ್‌ ಮಾಡುವ ಸ್ಟಿಕ್‌ ಎಂಬ ಮಂತ್ರದಂಡ!

ಹೂಡಿಕೆಗೆ 8ದಾರಿಗಳು!

ಹೂಡಿಕೆಗೆ 8ದಾರಿಗಳು!

ರವಿ ಕಾಣದ್ದನ್ನು ರಿಲಯನ್ಸ್‌ ಕಂಡ ಕಥೆ

ರವಿ ಕಾಣದ್ದನ್ನು ರಿಲಯನ್ಸ್‌ ಕಂಡ ಕಥೆ

MUST WATCH

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆಹೊಸ ಸೇರ್ಪಡೆ

ಏರ್‌ಇಂಡಿಯಾಗೆ ನಿರ್ಬಂಧ

ಏರ್ ‌ಇಂಡಿಯಾಗೆ ನಿರ್ಬಂಧ

ಕರ್ನಾಟಕದ ಕೆಲವೆಡೆ ಇಂದು ಭಾರೀ ಮಳೆ

ಕರ್ನಾಟಕದ ಕೆಲವೆಡೆ ಇಂದು ಭಾರೀ ಮಳೆ

ಕೃಷಿ ಬಿಲ್‌: ಎನ್‌ಡಿಎನಲ್ಲೇ ಒಡಕು

ಕೃಷಿ ಬಿಲ್‌: ಎನ್‌ಡಿಎನಲ್ಲೇ ಒಡಕು

ಕುಡಿಯುವ ನೀರು ಯೋಜನೆಗಳಿಗೆ 540 ಕೋಟಿ ಮಂಜೂರು

ಕುಡಿಯುವ ನೀರು ಯೋಜನೆಗಳಿಗೆ 540 ಕೋಟಿ ಮಂಜೂರು

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.