Udayavni Special

ಲಕ್ಷ್ಮೀ ಕೃಷಿ ಕಟಾಕ್ಷ


Team Udayavani, Jun 4, 2018, 11:43 AM IST

lakshmi.jpg

ನಗರ ಪ್ರದೇಶಗಳಿಗೆ ಜಮೀನು ಅಂಟಿಕೊಂಡಿದ್ದರೆ ಸಾಕು; ಅದನ್ನು ಒಳ್ಳೆ ಲಾಭಕ್ಕೆ ಮಾರಿ, ಕೈ ತುಂಬ ಕಾಂಚಾಣ ತುಂಬಿಕೊಂಡು ಕೃಷಿಯಿಂದ ದೂರ ನಿಂತುಬಿಡುತ್ತಾರೆ. ಆದರೆ ಲಕ್ಷ್ಮೀನಾರಾಯಣ್‌ ಹಾಗೇ ಮಾಡಲಿಲ್ಲ. ತಾತಗುಣಿಯಲ್ಲಿ ಜಮೀನು ಕೊಂಡು ಕೃಷಿ ಆರಂಭಿಸಿದರು. ಬರ್ತಾ ಬರ್ತಾ ಬೆಂಗಳೂರಿನ ಕಟ್ಟಡಗಳು ಪಕ್ಕದಲ್ಲಿ ಎದ್ದರೂ,  ಇವರು ಕೃಷಿಯನ್ನು ಬಿಟ್ಟಿಲ್ಲ. ಪ್ರತಿದಿನ ಇಳಿವಯಸ್ಸಲ್ಲೂ ಜೆಪಿನಗರದಿಂದ ತಾತಗುಣಿಗೆ ಬಂದು ಕೈ ಕೆಸರು ಮಾಡಿಕೊಳ್ಳುತ್ತಿದ್ದಾರೆ.  ಕೃಷಿ ಪ್ರೀತಿ, ಭಕ್ತಿ ಅಂದರೆ ಇದೇ ಅಲ್ವಾ?

ಸಣ್ಣ ಗೇಟಿನ ದೊಡ್ಡ ಮನೆ. ಆ ಕಡೆ ಈ ಕಡೆ ಕೈಸಾಲೆ. ಚಾಚಿದ ಹೆಂಚುಗಳು. ಮನೆಯ ಮುಂದೆ ದೊಡ್ಡ ಬೃಂದಾವನ. ಜಗುಲಿಯ ಮೇಲೆ ಯಾರೋ ಕೂತು ಉಬ್ಬು, ಮೀಸೆ ತೀಡುತ್ತಾ ಮೇಕಪ್‌ ಮಾಡಿಕೊಳ್ಳುತ್ತಿದ್ದರು. ಕೈಯಲ್ಲೊಂದು ಕನ್ನಡಿ ಇತ್ತು. ಗೇಟು ತೆರೆದು ಕಾಲಿಡುವ ಮುನ್ನ ಬೆನ್ನ ಹಿಂದೆ ” ಸಾರ್‌ ಸಾರ್‌, ಆ ಕಡೆ ಏಕೆ ಹೋಗ್ತಿàರಿ. ಈ ಕಡೆ ತಿರುಗಿ’ ಅಂದಿತು ದನಿ. 

ಹೆಗಲ ಮೇಲೊಂದು ಟವೆಲ್‌, ಚಡ್ಡಿ ಹಾಕಿಕೊಂಡಿದ್ದ ವ್ಯಕ್ತಿ  ನಲ್ಲಿ ನೀರಿನ ಟ್ಯಾಪ್‌ ತೆರೆದು ಗಿಡಗಳ ಕಡೆ ತಿರುಗಿಸುತ್ತಿದ್ದರು. ಪಕ್ಕದಲ್ಲಿ ಅಡಿಕೆ ತೋಟ. “ಅದು ಶೂಟಿಂಗ್‌ ಮನೆ. ಅಲ್ಲೇಕೆ ಹೋಗ್ತಿàರಾ. ತೋಟ ಇಲ್ಲೆ„ತೆ ಬನ್ನೀ’ ಅಂದರು. 

“ನನ್ನ ಹೆಸರು ಲಕ್ಷ್ಮೀನಾರಾಯಣ ಅಂತ. ಈ ಎರಡೂವರೆ ಎಕರೆಗೆ ನಾನೇ ಮಾಲೀಕ’ ಹೀಗಂದರು. ಅವರು ಹಾಕಿದ್ದ ಧಿರಿಸಿಗೂ, ಹೇಳಿಕೆಗೂ ಒಂದಕ್ಕೊಂದು ಸಂಬಂಧವಿಲ್ಲದೇ ಅನುಮಾನ ಹುಟ್ಟಿಸಿತು. 

“ಅಲ್ಲಾ, ಶೂಟಿಂಗ್‌ ಮನೆ ಅಂತೀರಿ. ಇಲ್ಲಿ ನೋಡಿದರೆ ನೀರು ಬಿಡ್ತೀರಿ. ಶೂಟಿಂಗ್‌ ಮನೆಯಿಂದ ಬಾಡಿಗೆ ಚೆನ್ನಾಗಿ ಬರುತ್ತಲ್ಲ, ಮತ್ತೆ ನೀವ್ಯಾಕೆ ಸೆನಿಕೆ ಹಿಡಿಯೋದು, ನಿಜ ಹೇಳಿ, ನೀವು ಮಾಲೀಕರು ತೋಟಕ್ಕೋ, ಶೂಟಿಂಗ್‌ ಮನೆಗೋ’   ನಮ್ಮ ಈ ಪ್ರಶ್ನೆಗೂ  ಅವರು ಹೀಗೆ ಉತ್ತರಕೊಟ್ಟರು.

 “ಎರಡಕ್ಕೂ ನಾನೇ ಮಾಲೀಕ ಸ್ವಾಮೀ. ಅದರಪಾಡಿಗೆ ಅದು, ಇದರ ಪಾಡಿಗೆ ಇದು. ನಮಗೆ ಕಷ್ಟದಲ್ಲಿ ಊಟ ಹಾಕಿದ್ದು ಕೃಷಿ. ಅದಕ್ಕೇ ಇದನ್ನು ಬಿಡದೆ ಮಾಡ್ಕೊಂಡು ಬರ್ತಾ ಇದ್ದೀನಿ. ನೀವೇನಾದ್ರು ಇನ್ನು ಐದುವರ್ಷ ಬಿಟ್ಟು ಇಲ್ಲಿಗೆ ಬಂದ್ರೋ.  ತೋಟಾನೇ ಇರಕ್ಕಿಲ್ಲ. ಅಲ್ನೋಡಿ, ಎಷ್ಟೊಂದು ಬಿಲ್ಡಂಗ್‌ಗಳು ಎದ್ದುಬಿಟ್ಟವೇ ‘ 
ಆಶ್ಚರ್ಯದಿಂದ ತೋರಿಸಿದರು. 

ನಿಜ, ಲಕ್ಷ್ಮೀನಾರಾಯಣರ ಜಮೀನಿನ ಸುತ್ತ ಕಣ್ಣು ಹಾಯಿಸಿದರೆ ಬೆಂಗಳೂರು ತನ್ನ ಕಬಂಧ ಬಾಹುಗಳನ್ನು ಚಾಚಿದ ಕುರುಹುಗಳಂತೆ ಬರೀ ಸಿಮೆಂಟ್‌ ಮನೆಗಳು ಎದ್ದು ನಿಂತಿವೆ. ಲಕ್ಷ್ಮೀನಾರಾಯಣರಿಗೆ ಇದು ಆಮಿಷವಾಗಿಲ್ಲ. 

“ಪಕ್ಕದವರು ಜಮೀನು ಮಾಡ್ತೀನಿ ಅಂತ ಕೊಂಡುಕೊಂಡ್ರು. ಈಗ ನೋಡಿದ್ರೆ ಲೇಔಟ್‌ ಮಾಡಿಬಿಟ್ಟಿದ್ದಾರೆ. ನಾನಂಗೆ ಮಾಡಕ್ಕಿಲ್ಲ’ ಅಂತ ರಿಯಲ್‌ ಎಸ್ಟೇಟ್‌ಗೆ ನಾನು ಎಂದೂ ಮರುಳಾಗಲಾರೆ ಅನ್ನೋದನ್ನು ಹೇಳಿದರು. 
 **
ಲಕ್ಷ್ಮೀನಾರಾಯಣ್‌ ಮುಲತಃ ತುಮಕೂರು ಜಿಲ್ಲೆಯ ಯಡಿಯೂರಿನವರು.  ಕೃಷಿಕರು. ಕೂಡುಕುಟುಂಬ. ಅಲ್ಲಿನ ಮನೆ, ಜಮೀನು ಎಲ್ಲಾ ಭಾಗವಾದ ಮೇಲೆ 2002ರಲ್ಲಿ ಬೆಂಗಳೂರಿಗೆ ಬಂದರು.  ಕನಕಪುರ ರಸ್ತೆಯ ತಾತಗುಣಿ ಪೈಪ್‌ಲೈನ್‌ ರಸ್ತೆಯಲ್ಲಿ ಈ ಜಮೀನನ್ನು ಕೊಂಡರು. ಆಗಂತೂ ಇದು ಥೇಟ್‌ ಹಳ್ಳಿಯೇ. ಬಸ್ಸುಗಳು ಇರಲಿಲ್ಲ. ಸೈಕಲ್ಲೂ  ಹೋಗಲು ಆಗದ ಕಾಲು ಹಾದಿಗಳಿದ್ದವು. ಅಣ್ಣ ತಮ್ಮಂದಿರು ಮತ್ತೆ ಒಂದೇ ಕಡೆ ನೆಲಸಬೇಕೆಂದು ಜಮೀನಿನಲ್ಲಿ ಆಸೆಪಟ್ಟು, ದೊಡ್ಡ ತೊಟ್ಟಿ ಮನೆ ಕಟ್ಟಿಸಿದರೆ ಅದು ಶೂಟಿಂಗ್‌ನವರ ಪಾಲಾಯ್ತು.  ಒಂದು ಸಲ ನಿರ್ದೇಶಕ ಟಿ.ಎನ್‌. ಸೀತಾರಾಮ್‌ ಅವರ ಬಂದಿದ್ದರು. ಮನೆ ನೋಡಿದವರೇ,  “ಲಕ್ಷ್ಮೀನಾರಾಯಣ್‌ ಈ ಮನೆ ನಮ್ಮ ಶೂಟಿಂಗ್‌ಗೆ ಚೆನ್ನಾಗಿದೆ ರೀ.. ಕೊಟ್ಟು ಬಿಡಿ’ ಅಂದರು.  ಸರಿಸಾರ್‌ ಅಂದು ಬಿಟ್ಟುಕೊಟ್ಟೆ.  ಮುಕ್ತ ಧಾರಾವಾಹಿಯ ಶೂಟಿಂಗ್‌ ಶುರುವಾಗಿದ್ದೇ, ಆವತ್ತಿಂದ ಈ  ಮನೆ ಶೂಟಿಂಗ್‌ಗೆ ಮೀಸಲಾಯ್ತು. ನಾವು ಜೆ.ಪಿನಗರಕ್ಕೆ ಸ್ಥಳಾಂತರವಾದೆವು ಅಂತ ಹೇಳುತ್ತಾರೆ ಲಕ್ಷ್ಮೀ. 

ಹಾಗಂತ ಕೃಷಿಯನ್ನು ಬಿಡಲಿಲ್ಲ.  ಈ ಜಮೀನಿನಲ್ಲಿ  ಭತ್ತ, ಜೋಳ, ತರಕಾರಿಗಳನ್ನು ಬೆಳೆಯುತ್ತಾ ಹೋದರು ಲಕ್ಷ್ಮೀನಾರಾಯಣ್‌.   ಬೆಳಗ್ಗೆ ಅಷ್ಟೊತ್ತಿಗೆ ತೋಟಕ್ಕೆ ಬಂದರೆ ರಾತ್ರಿ 8-9ಕ್ಕೆ ಮನೆ ಸೇರುವುದು ಇವರ ಅಂದಿನ ಮತ್ತು ಇಂದಿನ  ದಿನಚರಿಯೂ ಆಗಿದೆ. 

 ಪ್ರಸ್ತುತ 390 ಅಡಿಕೆ, 20 ಸಪೋಟ, 30 ತೆಂಗು ಮರಗಳಿವೆ.  ಈಸಲ ಅಡಿಕೆಯಿಂದ 55 ಸಾವಿರ, ತೆಂಗು 75ಸಾವಿರ ಬಂತು ಅಂತ ಲೆಕ್ಕ ಕೊಟ್ಟರು ಲಕ್ಷ್ಮೀನಾರಾಯಣ್‌. 

ಇವಿಷ್ಟೇ, ಅಲ್ಲ, ಇವರು ಹೈನುಗಾರಿಕೆ ಕೂಡ ಮಾಡುತ್ತಿದ್ದಾರೆ.  ಎರಡು ಹಸು, ಒಂದು ಕರು ಇದೆ.  ದಿನಕ್ಕೆ 20 ಲೀಟರ್‌ನಂತೆ ಸಾವಯವ ಹಾಲು ಉತ್ಪಾದನೆಯಾಗುತ್ತಿದೆ. ಇದರರಿಂದ ತಿಂಗಳ ಆದಾಯ 55 ಸಾವಿರ ರೂ. ಇದೆಯಂತೆ. ಹೈನುಗಾರಿಯ ಲಾಭದ ಇನ್ನೊಂದು ರೂಪದಲ್ಲಿ ವರ್ಷಕ್ಕೆ 20 ಟ್ರ್ಯಾಕ್ಟರ್‌ ಕೊಟ್ಟಿಗೆ ಗೊಬ್ಬರ ಬೇರೆ ಸಿಗುತ್ತಿದೆ. ಇದನ್ನೇ ಬೆಳೆಗಳಿಗೆ ಬಳಸುತ್ತಿದ್ದಾರೆ.   15 ಗುಂಟೆ ಜಮೀನಿನಲ್ಲಿ 750 ಕೋಳಿಗಳನ್ನು ಮೇಯಿಸುತ್ತಿದ್ದಾರೆ.  ವರ್ಷಕ್ಕೆ ಮೂರು ಬ್ಯಾಚ್‌ ಮಾಡಿದ್ದಾರೆ. ಅಂದರೆ ಇಡೀ ವರ್ಷ ಕೋಳಿಗಳ ವಹಿವಾಟು ನಡೆಯುತ್ತಲೇ ಇರಬೇಕು ಅನ್ನೋದು ಮೂಲ ಉದ್ದೇಶ. 

ನಾಟಿ ಕೋಳಿಗಳಾಗಿರುವುದರಿಂದ ಡಿಮ್ಯಾಂಡ್‌ ಇದ್ದೇ ಇದೆ. ಮಾರಾಟಗಾರರೇ ಇವರ ಜಮೀನಿಗೆ ಬಂದು ಕೊಳ್ಳುವುದರಿಂದ ಹೆಚ್ಚಾ ಕಮ್ಮಿ ವರ್ಷಕ್ಕೆ ಮೂರು ಲಕ್ಷ ರೂ. ಆದಾಯದ ಜೋಳಿಗೆಗೆ ಭರ್ತಿಯಾಗುತ್ತಿದೆಯಂತೆ. 
ಲಕ್ಷ್ಮೀನಾರಾಯಣ್‌, ಮನೆಗೆ ಅಕ್ಕಿ, ರಾಗಿ, ತರಕಾರಿ ಕೊಳ್ಳುವುದೇ ಇಲ್ಲ. ಇದಕ್ಕಾಗಿ 6 ಗುಂಟೆಯನ್ನು ಎತ್ತಿಟ್ಟಿದ್ದಾರೆ. ಅದರಲ್ಲಿ ವರ್ಷಕ್ಕೆ  ಭತ್ತ, ರಾಗಿ, ಜೋಳ ಅಂತ ಮೂರು ಬೆಳೆ ಬೆಳೆಯುತ್ತಾರೆ.  ವರ್ಷಕ್ಕೆ ಮೂರು ಕ್ವಿಂಟಾಲ್‌ ಸಾವಯವ ಅಕ್ಕಿ ಸಿಗುತ್ತಿದೆಯಂತೆ. ಇದೇ ಜಾಗದಲ್ಲಿ ನಂತರ ರಾಗಿಯನ್ನೂ, ಹಸುಗಳ ಮೇವಿಗಾಗಿ ಜೋಳವನ್ನೂ ಬೆಳೆಯುತ್ತಾರೆ.  ನಮ್ಮ ತೋಟ ಸಂಪೂರ್ಣ ಸಾವಯವ. ಹೀಗಾಗಿ ರೋಗಗಳು ಕಡಿಮೆ ಇರುವುದರಿಂದ ತಲೆನೋವಿಲ್ಲ ಎನ್ನುತ್ತಾರೆ ಲಕ್ಷ್ಮೀನಾರಾಯಣ್‌. ಜಮೀನಿನ ಬದುಗಳಲ್ಲಿ 60 ಸ್ವಿಲರ್‌ ಓಕ್‌ ಮರಗಳಿವೆ. 
ಲಕ್ಷ್ಮೀನಾರಾಯಣ್‌ಗೆ ನೀರಿನ ಪರದಾಟವಿಲ್ಲ. ಒಂದು ಬೋರ್‌ವೆಲ್‌ ಇದೆ. ನೀರು ಇಡೀ ತೋಟಕ್ಕೆ ಆಗಿ ಮಿಗುತ್ತದೆ. ಸಮೀಪದಲ್ಲೇ ಮುನೇಶ್ವರ ಗುಡ್ಡವಿದೆ. ಮಳೆಗಾಲದಲ್ಲಿ ಅಲ್ಲಿಂದ ಹರಿದು ಬರುವ ನೀರನ್ನು ತೋಟದ ಒಳಗೆ ಕಟ್ಟಿಹಾಕುವುದಕ್ಕಾಗಿಯೇ ಸಣ್ಣ ಒಡ್ಡು ಮಾಡಿದ್ದಾರೆ. ಪ್ರತಿ ಮಳೆಗಾಲದಲ್ಲೂ ಒಡ್ಡು ತುಂಬಿ, ಬೇಸಿಗೆಯ ತನಕ ನೀರು ಬಳಕೆಯಾಗುತ್ತದೆಯಂತೆ. 

ಲಕ್ಷ್ಮೀನಾರಾಯಣರಿಗೂ ಕೂಲಿಯಾಳುಗಳ ಕಿರಿಕಿರಿ ಇದೆ. ಇಡೀ ತೋಟವನ್ನು ನೋಡಿಕೊಳ್ಳಲು ಒಂದು ಸಂಸಾರವನ್ನು ಇಟ್ಟಿದ್ದಾರೆ.  ಇನ್ನೂ ಜನ ಬೇಕು ಅಂದರೆ- “ನನಗೇನೂ ಬೇಸರ ಇಲ್ಲಪ್ಪ, ಜನರು ಸಿಗಲಿಲ್ಲ ಅಂದ್ರೆ ನಾನೇ ಗದ್ದೆಗೆ ಇಳಿದು ಬಿಡ್ತೀನಿ ‘ ಅಂತಾರೆ ಲಕ್ಷ್ಮೀ.

ನಗರಕ್ಕೆ ಹೊಂದಿಕೊಂಡ ಜಮೀನು ಮಾರಿದರೆ ಕೋಟಿ ಕೋಟಿ ಬೆಲೆ ಬರುತ್ತದೆ.  ಹೀಗಿದ್ದರೆ ಯಾರು ತಾನೇ ಕೃಷಿಕಡೆ ಮುಖ ಮಾಡುತ್ತಾರೆ ಹೇಳಿ?   ಕೈ ತುಂಬ ಕಾಂಚಾಣ ತುಂಬಿಕೊಂಡು ಕೃಷಿಯಿಂದ ದೂರ ನಿಂತು ಬಿಡುತ್ತಾರೆ. ಆದರೆ ಈ ಲಕ್ಷ್ಮೀನಾರಾಯಣ್‌ ರಿಯಲ್‌ಎಷ್ಟೇಟ್‌ಗೆ ಮಾರುಹೋಗದೆ ಈಗಲೂ ಕೃಷಿ ಮಾಡುತ್ತಲೇ ಇದ್ದಾರೆ. ಪುಟಿಯುವ ಇವರ ಕೃಷಿ ಉತ್ಸಾಹ ಎಲ್ಲರಲ್ಲೂ ಮೂಡಿದರೆ ರೈತಾಪಿಗಳ ಬದುಕು ಹಸನಾಗಬಹುದು. 
ಅಲ್ಲವೇ?

– ಕಟ್ಟೆ ಗುರುರಾಜ್‌

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಎಲೆಕ್ಷನ್‌ ಬಳಿಕ “ಕೈ’ ಹುದ್ದೆಗಳಲ್ಲಿ ಬದಲು?

ಎಲೆಕ್ಷನ್‌ ಬಳಿಕ “ಕೈ’ ಹುದ್ದೆಗಳಲ್ಲಿ ಬದಲು?

ಉಪ ಚುನಾವಣೆ ಫ‌ಲಿತಾಂಶದ ಬಳಿಕ ಹುಲಿಯಾ ಕಾಡಿಗೆ, ಬಂಡೆ ಛಿದ್ರ: ನಳಿನ್‌

ಉಪ ಚುನಾವಣೆ ಫ‌ಲಿತಾಂಶದ ಬಳಿಕ ಹುಲಿಯಾ ಕಾಡಿಗೆ, ಬಂಡೆ ಛಿದ್ರ: ನಳಿನ್‌

ಡ್ರಗ್ಸ್‌ ಪ್ರಕರಣ : ನಿರ್ಮಾಪಕ ಜಗದೀಶ್‌ ದಂಪತಿ, ಉದ್ಯಮಿ ವಿಚಾರಣೆ

ಡ್ರಗ್ಸ್‌ ಪ್ರಕರಣ : ನಿರ್ಮಾಪಕ ಜಗದೀಶ್‌ ದಂಪತಿ, ಉದ್ಯಮಿ ವಿಚಾರಣೆ

“ಚೇತರಿಕೆಯತ್ತ ಅರ್ಥ ವ್ಯವಸ್ಥೆ’

“ಚೇತರಿಕೆಯತ್ತ ಅರ್ಥ ವ್ಯವಸ್ಥೆ’

ನಾಯಕರಿಗೇಕೆ 2 ಕ್ಯಾಪ್‌?

ಐಪಿಎಲ್‌ 2020: ತಂಡದ ನಾಯಕರಿಗೇಕೆ 2 ಕ್ಯಾಪ್‌?

ಬಾಂಗ್ಲಾ ಆಟಗಾರ್ತಿ ಸಂಜಿದಾ ವಿಶಿಷ್ಟ ಹೆಜ್ಜೆ; ಬ್ಯಾಟ್‌ನೊಂದಿಗೆ ವೆಡ್ಡಿಂಗ್‌ ಫೋಟೋ ಶೂಟ್‌!

ಬ್ಯಾಟ್‌ನೊಂದಿಗೆ ವೆಡ್ಡಿಂಗ್‌ ಫೋಟೋ ಶೂಟ್‌: ಬಾಂಗ್ಲಾ ಆಟಗಾರ್ತಿ ಸಂಜಿದಾ ವಿಶಿಷ್ಟ ಹೆಜ್ಜೆ

IPLIPL 2020 : ಸಿಡಿದು ನಿಂತ ಸಿರಾಜ್‌; ಆರ್‌ಸಿಬಿ ಜಯಭೇರಿ

IPL 2020 : ಸಿಡಿದು ನಿಂತ ಸಿರಾಜ್‌; ಆರ್‌ಸಿಬಿ ಜಯಭೇರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

isiri-tdy-3

ಬಾಳು ಜೇನು! ಖರ್ಚು ಕಡಿಮೆ, ಲಾಭ ಜಾಸ್ತಿ…

isiri-tdy-2

ಭೂಮಿಗೆ ಸಿಗುತ್ತದೆ ಬಂಗಾರದ ಬೆಲೆ…

isiri-tdy-1

ಲೈಫ್ ಈಸ್‌ ಬುಟ್ಟಿ ಫ‌ುಲ್‌

isiri-tdy-5

ಕೀ ಬೋರ್ಡ್‌ ಮೇಲೆ ಸಿಟ್ಟಾಗಿ ಕುಟ್ಟಬೇಡಿ ಮಾರಾಯ್ರೇ.

ಆನ್‌ಲೈನ್ ‌ಕ್ಲಾಸಿಗೆ ಲ್ಯಾಪಿ

ಆನ್‌ಲೈನ್ ‌ಕ್ಲಾಸಿಗೆ ಲ್ಯಾಪಿ

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

ಡ್ರಗ್ಸ್‌ ಮುಕ್ತ ಜಿಲ್ಲೆಯಾಗಿ ಪಣ ; ಉಡುಪಿಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್‌

ಡ್ರಗ್ಸ್‌ ಮುಕ್ತ ಜಿಲ್ಲೆಯಾಗಿ ಪಣ ; ಉಡುಪಿಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್‌

ಪೊಲೀಸರ ಕೆಲಸ ಶ್ಲಾಘನೀಯ ; ಮಂಗಳೂರಿನಲ್ಲಿ ಐಜಿಪಿ ದೇವಜ್ಯೋತಿ ರೇ

ಪೊಲೀಸರ ಕೆಲಸ ಶ್ಲಾಘನೀಯ; ಮಂಗಳೂರಿನಲ್ಲಿ ಐಜಿಪಿ ದೇವಜ್ಯೋತಿ ರೇ

ಕೇರಳಕ್ಕೆ ಬರಲು ನೋಂದಣಿ ಅಗತ್ಯ ; ಕಾಸರಗೋಡು ಗಡಿಗಳಲ್ಲಿ ಮತ್ತೆ ತಪಾಸಣೆ

ಕೇರಳಕ್ಕೆ ಬರಲು ನೋಂದಣಿ ಅಗತ್ಯ ; ಕಾಸರಗೋಡು ಗಡಿಗಳಲ್ಲಿ ಮತ್ತೆ ತಪಾಸಣೆ

ಎಲೆಕ್ಷನ್‌ ಬಳಿಕ “ಕೈ’ ಹುದ್ದೆಗಳಲ್ಲಿ ಬದಲು?

ಎಲೆಕ್ಷನ್‌ ಬಳಿಕ “ಕೈ’ ಹುದ್ದೆಗಳಲ್ಲಿ ಬದಲು?

ಪೊಲೀಸರ ಕಾರ್ಯ ಅವಿಸ್ಮರಣೀಯ: ಮುಖ್ಯಮಂತ್ರಿ

ಪೊಲೀಸರ ಕಾರ್ಯ ಅವಿಸ್ಮರಣೀಯ: ಮುಖ್ಯಮಂತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.