ಕಾಲ್‌ ಮಾಡಿದೋರ ಬಗ್ಗೆ ಕಾಳಜಿ ಇರಲಿ…


Team Udayavani, Dec 17, 2018, 6:00 AM IST

aradhya-copy-copy.jpg

ಮೊಬೈಲ್‌ ಕರೆಗಳ ವಿಚಾರದಲ್ಲಿ ಒಂದಷ್ಟು ಶಿಸ್ತನ್ನು ರೂಢಿಸಿಕೊಳ್ಳುವುದು ಒಳಿತು. ನಾವು ಬಿಡುವಾಗಿದ್ದಾಗ ಕರೆ ಬಂದರೆ ಸ್ವೀಕರಿಸುವ, ಕೆಲಸದ ಒತ್ತಡದಲ್ಲಿದ್ದರೆ, ಆನಂತರ ವಾಪಸ್‌ ಕರೆ ಮಾಡುವ ಸೌಜನ್ಯ ರೂಢಿಸಿಕೊಳ್ಳೋಣ. ಕೆಲಸದ ಒತ್ತಡದಲ್ಲಿದ್ದೂ ಫೋನ್‌ ಪಿಕ್‌ ಮಾಡಲು ಅವಕಾಶವಿದ್ದರೆ, ಕರೆ ಸ್ವೀಕರಿಸಿ, ಏನಾದರೂ ಅರ್ಜೆಂಟ್‌ ವಿಷಯ ಇದೆಯೇ? ನಾನು ಆಮೇಲೆ ಕರೆ ಮಾಡುತ್ತೇನೆ, ಅಥವಾ ನೀವೇ ಇನ್ನು ಒಂದು ಗಂಟೆ ಬಿಟ್ಟು ಕರೆ ಮಾಡಿ… ಎಂದು ಹೇಳಬಹುದು. 

ಮೊಬೈಲ್‌ ಫೋನು ಇಂದು ಬಹುತೇಕ ಜನರ ಅವಿಭಾಜ್ಯ ಅಂಗವಾಗಿದೆ. ಪ್ರಾಥಮಿಕವಾಗಿ ಕರೆ ಮಾಡಿ ಮಾತನಾಡಲು ಇದ್ದ ಮೊಬೈಲ್‌ ಫೋನು ಈಗ ಕರೆಗಿಂತ ಹೆಚ್ಚಾಗಿ ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ಈ ದಿನಗಳಲ್ಲಿ ಯಾರಾದರೂ ಕರೆ ಮಾಡಿದರೆ ಸ್ವೀಕರಿಸಿ ಅವರಿಗೆ ಉತ್ತರ ನೀಡುವುದಕ್ಕೂ ನಮಗೆ ಸಮಯ ಸಾಲದಂತಾಗಿದೆ. ಮೊಬೈಲ್‌ ನಲ್ಲಿ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ, ಅವರು ಬ್ಯುಸಿಯಿದ್ದಾಗ ಪರವಾಗಿಲ್ಲ, ಬಿಡುವಾದ ನಂತರವಾದರೂ ವಾಪಸ್‌ ಕರೆ ಮಾಡುವುದಿಲ್ಲ ಎಂಬ ದೂರುಗಳನ್ನು ಕೇಳುತ್ತಲೇ ಇರುತ್ತೇವೆ. 

ದೂರವಾಣಿ ಅಥವಾ ಮೊಬೈಲ್‌ ಗಳಲ್ಲಿ ಕರೆ ಸ್ವೀಕರಿಸುವುದು, ಕರೆ ಮಾಡಿದವರಿಗೆ ಸ್ಪಂದಿಸುವುದು ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಇದರ ಆಧಾರದ ಮೇಲೆಯೇ ಆ ವ್ಯಕ್ತಿ ಎಷ್ಟು ಜವಾಬ್ದಾರಿಯುತ ಎಂಬುದೂ ಅರ್ಥವಾಗುತ್ತದೆ. ಒಬ್ಬ ಶಾಸಕ, ಜನಪ್ರತಿನಿಧಿ, ರಾಜಕಾರಣಿ ಕ್ಷೇತ್ರದ ಜನರ, ಪಕ್ಷದ ಕಾರ್ಯಕರ್ತರು ಮುಖಂಡರ ಕರೆಗಳನ್ನು ಸ್ವೀಕರಿಸಿ ಮಾತನಾಡುತ್ತಾನೆಯೇ ಇಲ್ಲವೇ ಎಂಬುದರ ಆಧಾರದ ಮೇಲೆಯೇ ಜನರು ಆತನ ಸ್ಪಂದಿಸುವ ಗುಣವನ್ನು ಅಳೆಯುತ್ತಾರೆ. ಕೆಲಸ ಮಾಡಿಕೊಡುತ್ತಾರೋ ಬಿಡುತ್ತಾರೋ ನಂತರದ ಮಾತು. ಕರೆ ಮಾಡಿದಾಗ ಫೋನ್‌ ಎತ್ತಿ ನಮ್ಮ ಜೊತೆ ಮಾತನಾಡುತ್ತಾರೆ. ಕೆಲಸದ ಒತ್ತಡದಲ್ಲಿದ್ದರೆ ಅನಂತರ ವಾಪಸ್‌ ಕರೆ ಮಾಡಿ ವಿಚಾರಿಸುತ್ತಾರೆ ಎಂಬುದನ್ನು ಎಷ್ಟೋ ಜನರಿಂದ ಕೇಳಿದ್ದೇವೆ.

ನಾನು ಅನೇಕರನ್ನು ನೋಡಿದ್ದೇನೆ. ಕರೆಗಳು ಬಂದಾಗ ಅದು ತನಗೇ ಅಲ್ಲವೆಂಬಂತೆ ನಿರ್ಭಾವುಕರಾಗಿ ಅದನ್ನು ನೋಡಿ ಕರೆ ಸ್ವೀಕರಿಸದೇ ನಿರ್ಲಕ್ಷಿಸುತ್ತಾರೆ. ಎಲ್ಲ ಕರೆಗಳಿಗೂ ಹೀಗೆ ಮಾಡುತ್ತಾರೆ. ಆ ಕಡೆ ಕರೆ ಮಾಡಿದವರು ಏತಕ್ಕೆ ಮಾಡಿದ್ದಾರೋ, ಏನು ಮುಖ್ಯ ವಿಷಯ ಇದೆಯೋ ಎಂಬ ಸಣ್ಣ ಕಾಳಜಿಯನ್ನೂ ವಹಿಸುವುದಿಲ್ಲ. ಮೀಟಿಂಗ್‌ನಲ್ಲಿದ್ದಾಗಲೋ, ವಾಹನವನ್ನು ಚಾಲನೆ ಮಾಡುತ್ತಿದ್ದಾಗಲೋ ಕರೆ ಸ್ವೀಕರಿಸಲಾಗುವುದಿಲ್ಲ ಸರಿ. ಆದರೆ ಬಿಡುವಾದಾಗ ಮಿಸ್ಡ್ ಕಾಲ್‌ಗ‌ಳನ್ನು ನೋಡಿ ವಾಪಸ್‌ ಕರೆ ಮಾಡಿ, ಕರೆ ಮಾಡಿದ್ದ ವಿಷಯವೇನು ಎಂದು ವಿಚಾರಿಸಬಹುದಲ್ಲ? 

ಹಾಗಾಗಿ, ನಾವು ಮೊಬೈಲ್‌ ಕರೆಗಳ ವಿಚಾರದಲ್ಲಿ ಒಂದಷ್ಟು ಶಿಸ್ತನ್ನು ರೂಢಿಸಿಕೊಳ್ಳುವುದು ಒಳಿತು. ನಾವು ಬಿಡುವಾಗಿದ್ದಾಗ ಕರೆ ಬಂದರೆ ಸ್ವೀಕರಿಸುವ, ಕೆಲಸದ ಒತ್ತಡದಲ್ಲಿದ್ದರೆ, ಆನಂತರ ವಾಪಸ್‌ ಕರೆ ಮಾಡುವ ಸೌಜನ್ಯ ರೂಢಿಸಿಕೊಳ್ಳೋಣ. ಕೆಲಸದ ಒತ್ತಡದಲ್ಲಿದ್ದೂ ಫೋನ್‌ ಪಿಕ್‌ ಮಾಡಲು ಅವಕಾಶವಿದ್ದರೆ, ಕರೆ ಸ್ವೀಕರಿಸಿ, ಏನಾದರೂ ಅರ್ಜೆಂಟ್‌ ವಿಷಯ ಇದೆಯೇ? ನಾನು ಆಮೇಲೆ ಕರೆ ಮಾಡುತ್ತೇನೆ, ಅಥವಾ ನೀವೇ ಇನ್ನು ಒಂದು ಗಂಟೆ ಬಿಟ್ಟು ಕರೆ ಮಾಡಿ… ಎಂದು ಹೇಳಬಹುದು. ಅಥವಾ ಮೊಬೈಲ್‌ಗ‌ಳಲ್ಲಿ ಕರೆ ಬಂದಾಗ, ಈಗ ಬ್ಯುಸಿಯಾಗಿದ್ದೇನೆ ಅನಂತರ ಕರೆ ಮಾಡಿ ಎಂಬಂತಹ ಮೆಸೇಜ್‌ಗಳನ್ನು ಕಳಿಸುವ ಆಪ್ಷನ್‌ಗಳಿರುತ್ತವೆ. ಕರೆ ಬಂದಾಗಲೇ ಮೆಸೇಜ್‌ ಕಳಿಸುವ ಆಯ್ಕೆ ಕೂಡ ಇರುತ್ತದೆ. ಅದನ್ನು ಒತ್ತಿದರೂ ಆಯಿತು. ತಕ್ಷಣ ಕರೆ ಮಾಡಿದಾತನಿಗೆ ಮೆಸೇಜ್‌ ರವಾನೆಯಾಗುತ್ತದೆ.

ಇದು ಕರೆ ಸ್ವೀಕರಿಸುವವರ ವಿಷಯವಾದರೆ, ಕರೆ ಮಾಡುವವರಿಗೂ ಕೆಲವು ಅಶಿಸ್ತುಗಳಿರುತ್ತವೆ. ಆ ಕಡೆ ಕರೆ ಸ್ವೀಕರಿಸುವವರು ಯಾವ ಪರಿಸ್ಥಿತಿಯಲ್ಲಿರುತ್ತಾರೆ ಎಂಬ ಬಗ್ಗೆ ಚಿಂತಿಸುವುದೇ ಇಲ್ಲ. ಇವರು ಕರೆ ಮಾಡಿದ ವ್ಯಕ್ತಿ ಕೆಲಸದಲ್ಲಿ ಅತ್ಯಂತ ಬ್ಯುಸಿಯಾಗಿರುತ್ತಾನೆ. ಈ ಕಡೆ ಇರುವವರು ಅತ್ಯಂತ ಆರಾಮವಾಗಿ ಕುಳಿತಿರುತ್ತಾರೆ. ತಮ್ಮಂತೆ ಆತನೂ ಆರಾಮಾಗಿ ಕುಳಿತಿರುತ್ತಾನೆ ಎಂಬ ಭಾವದಿಂದ, ” ಏನಯ್ನಾ ಸಮಾಚಾರ? ಊಟ ಆಯ್ತಾ? ತಿಂಡಿ ಆಯ್ತಾ?’ ಅಂತ ಶುರುಮಾಡಿ, ತಮ್ಮ ಪ್ರವರಗಳನ್ನು ಒದರಲು ಶುರುಮಾಡುತ್ತಾರೆ. ಆ ಕಡೆಯಿರುವವ ಕೆಲಸದ ಅವಸರದಲ್ಲಿರುತ್ತಾನೆ. ತನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳದೇ ಸುಮ್ಮನೆ ಮಾತನಾಡುತ್ತಿದ್ದಾನಲ್ಲ ಎಂದು ಉರಿದು ಹೋಗುತ್ತದೆ. ಕರೆ ಕಟ್‌ ಮಾಡಿದರೆ ಬೇಜಾರು ಮಾಡಿಕೊಳ್ಳುತ್ತಾರೆ ಎಂಬ ಸಂದಿಗ್ಧತೆ ಉಂಟಾಗುತ್ತದೆ. ಹಾಗಾಗಿ ಯಾರಿಗೇ ಆಗಲಿ, ಕರೆ ಮಾಡಿದಾಗ ಈಗ ಫ್ರೀ ಇದ್ದೀರಾ? ಐದು ನಿಮಿಷ ಮಾತನಾಡಬಹುದೇ? ಅಂತ ಹೇಳಿ ಮುಂದುವರಿಯಿರಿ. ಅನವಶ್ಯಕವಾಗಿ ಕರೆ ಮಾಡಲು ಹೋಗಬೇಡಿ. ಇದರಿಂದ ನಿಮ್ಮ ಮತ್ತು ಅವರ ಸಮಯ ಹಾಳು. 

ಇಲ್ಲಿ ಇನ್ನೊಂದು ವಿಷಯ ಪ್ರಸ್ತಾಪಿಸಬೇಕು. ಇಬ್ಬರು ಗೆಳೆಯರು ಆರಾಮಾಗಿ ಹರಟುತ್ತಿರುತ್ತೀರಿ. ಹರಟೆ ಹೊಡೆಯಬೇಡಿ ಎಂದು ಹೇಳುತ್ತಿಲ್ಲ. ಸಮಯವಿದ್ದರೆ ಎಷ್ಟಾದರೂ ಹರಟಿ. ಬೆಳಿಗ್ಗೆ ಏನು ತಿಂಡಿ? ಇಡ್ಲಿ ಎಷ್ಟು ತಿಂದೆ? ಎಂದು ಶುರುವಾದ ಹರಟೆ, ಮೋದಿ, ರಾಹುಲ್‌ಗಾಂಧಿಯಿಂದ ಹೊರಟು, ವಿರಾಟ್‌ ಕೊಹ್ಲಿ, ದೀಪಿಕಾ, ದಿಶಾ ಪಟಾಣಿ, ಶ್ರದ್ಧಾ ಕಪೂರ್‌ ಮೂಲಕ ಹಾದು ಫೇಸ್‌ಬುಕ್‌, ವಾಟ್ಸಪ್‌ ಇತ್ಯಾದಿಗಳತ್ತ ಹೊರಟು ಸಾಗುತ್ತಲೇ ಇರುತ್ತದೆ. ಅಂತಹ ಸಮಯದಲ್ಲಿ ಯಾರಾದರೂ ಪದೇ ಪದೇ ಕಾಲ್‌ ಮಾಡುತ್ತಿದ್ದರೆ, ಕಾಲ್‌ ವೇಟಿಂಗ್‌ ತೋರಿಸುತ್ತದೆ. ಆಗ ಗೆಳೆಯನಿಗೆ ಹೇಳಿ ಕರೆ ತುಂಡರಿಸಿ, ಪದೇ ಪದೇ ಕಾಲ್‌ ಮಾಡುತ್ತಿದ್ದವರನ್ನು ವಿಚಾರಿಸಿ. ಮುಖ್ಯವಾಗಿದ್ದರೆ ಮಾತಾಡಿ. ಅಮುಖ್ಯವಾಗಿದ್ದರೆ, ಅನಂತರ ಮಾತನಾಡುತ್ತೇನೆ ಎಂದು ಹೇಳಿ. 

ಹೀಗೊಮ್ಮೆ ಚೆಕ್‌ ಮಾಡಿ…
ಟಿಪ್ಸ್‌:
ನಿಮ್ಮ ಮೊಬೈಲ್‌ನಲ್ಲಿ ಕಾಲ್‌ ವೇಟಿಂಗ್‌ ಆಪ್ಷನ್‌ ಆನ್‌ ಆಗಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಅದು ಆನ್‌ ಆಗಿರದಿದ್ದರೆ ಇನ್ನೊಂದು ಕರೆಯಲ್ಲಿದ್ದಾಗ, ಬೇರೊಬ್ಬರು ಕರೆ ಮಾಡಿದರೆ ಗೊತ್ತಾಗುವುದಿಲ್ಲ. ಆಗವರು ನನ್ನ ಕರೆ ಬಂದರೂ ನೀವು ನಂತರ ಕರೆ ಮಾಡಲಿಲ್ಲ ಎಂದು ಆಕ್ಷೇಪಿಸುತ್ತಾರೆ. ಕಾಲ್‌ ವೇಟಿಂಗ್‌ ಆನ್‌ ಮಾಡುವುದು ಹೀಗೆ. ಸೆಟ್ಟಿಂಗ್‌ಗೆ ಹೋಗಿ, ವೈರ್‌ಲೆಸ್‌ ಅಂಡ್‌ ನೆಟ್‌ವರ್ಕ್‌ ಆಯ್ಕೆ ಒತ್ತಿ, ಅನಂತರ ಕಾಲ್‌ ಸೆಟ್ಟಿಂಗ್‌ಗೆ ಹೋಗಿ ಅದನ್ನು ಒತ್ತಿ, ನಂತರ ಅದರಲ್ಲಿ ಅಡಿಷನಲ್‌ ಸೆಟ್ಟಿಂಗ್‌ ಹೋಗಿ ಅದನ್ನು ಒತ್ತಿ, ಅಲ್ಲಿ ಕಾಲ್‌ ವೇಟಿಂಗ್‌ ಆನ್‌ ಅಗಿದೆಯಾ ಚೆಕ್‌ ಮಾಡಿ. ಆನ್‌ ಆಗಿರದಿದ್ದರೆ ಆನ್‌ ಮಾಡಿಕೊಳ್ಳಿ.

– ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.