Udayavni Special

ಮೊಬೈಲು ಸೀಮೆ : ಕಡಿಮೆ ಕಾಸಿಗೆ ಗೆಲಾಕ್ಸಿ


Team Udayavani, Aug 3, 2020, 12:21 PM IST

ಮೊಬೈಲು ಸೀಮೆ : ಕಡಿಮೆ ಕಾಸಿಗೆ ಗೆಲಾಕ್ಸಿ

15 ಸಾವಿರ ರೂ. ಆಸುಪಾಸಿನಲ್ಲಿರುವ ಫೋನ್‌ಗಳಲ್ಲಿ, ಸ್ಯಾಮ್‌ಸಂಗ್‌ ನನ್ನ ಆಯ್ಕೆ ಅನ್ನುವವರಿಗೆ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಂ21, ಒಂದು ಉತ್ತಮ ಆಯ್ಕೆ…

ಮೊಬೈಲ್‌ ಫೋನ್‌ ಬ್ರಾಂಡ್‌ಗಳಲ್ಲಿ ಸ್ಯಾಮ್‌ಸಂಗ್‌ ಹೆಸರು ಗ್ರಾಹಕರಿಗೆ ಬಹಳ ವಿಶ್ವಾಸಾರ್ಹ. ಇದಕ್ಕಿಂತ ಹೆಚ್ಚಿನ ಸವಲತ್ತು ಬೇರೆ ಫೋನ್‌ನಲ್ಲಿದೆ ಎಂದು ಯಾರಾದರೂ ಹೇಳಿದರೂ, ಅನೇಕ ಗ್ರಾಹಕರು ತಮಗೆ ಸ್ಯಾಮ್‌ಸಂಗ್‌ ಫೋನೇ ಬೇಕು ಎಂದು ಬಯಸುತ್ತಾರೆ. ಚೀನಾದ ಕೆಲವು ಬ್ರಾಂಡ್‌ಗಳಿಗೆ ಹೋಲಿಸಿದರೆ, ಸ್ಯಾಮ್‌ಸಂಗ್‌ ಫೋನ್‌ಗಳ ದರ ಕೊಂಚ ಹೆಚ್ಚಿರುತ್ತದೆ. ಚೀನಾ ಮೊಬೈಲ್‌ಗ‌ಳ ಪೈಪೋಟಿ ಎದುರಿಸಲು ಸ್ಯಾಮ್‌ಸಂಗ್‌ ಎಂ ಸರಣಿಯಲ್ಲಿ ಫೋನ್‌ಗಳನ್ನು ತಯಾರಿಸಿ, ಆನ್‌ಲೈನ್‌ನಲ್ಲಿ ಮಾತ್ರ ಮಾರುಕಟ್ಟೆಗೆ ಬಿಡುತ್ತಿದೆ. 15 ಸಾವಿರ ರೂ. ಆಸುಪಾಸಿನಲ್ಲಿರುವ ಫೋನ್‌ಗಳಲ್ಲಿ, ಸ್ಯಾಮ್‌ಸಂಗ್‌ ಅನ್ನೇ ಆಯ್ಕೆಮಾಡಿಕೊಳ್ಳ  ಬೇಕೆಂದವರಿಗೆ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಂ21 ಒಂದು ಉತ್ತಮ ಆಯ್ಕೆ ಎಂದೇ ಹೇಳಬಹುದು.

ಈ ಫೋನಿನ ಬ್ಯಾಟರಿ ಸಾಮರ್ಥ್ಯಕ್ಕೆ ಮೊದಲು ಹೆಚ್ಚು ಅಂಕಗಳನ್ನು ನೀಡಬೇಕು! ಇದು 6000 ಎಂಎಎಚ್‌ ಬ್ಯಾಟರಿ ಹೊಂದಿದೆ! ಹೆಚ್ಚು ಮೊಬೈಲ್‌ ಬಳಕೆ ಮಾಡುವವರಿಗೆ ಈ ಫೋನ್‌ ಸೂಕ್ತ. ಹೆಚ್ಚು ಬಳಕೆ ಮಾಡಿದರೂ ಸಂಪೂರ್ಣ ಎರಡು ದಿನ ಬ್ಯಾಟರಿ ಬಾಳಿಕೆ ಬರುತ್ತದೆ. 15 ವ್ಯಾಟ್‌ ಟೈಪ್‌ ಸಿ ಕೇಬಲ್‌ ಫಾಸ್ಟ್ ಚಾರ್ಜರ್‌ ಕೂಡ ಇರುವುದರಿಂದ, ಸ್ವಲ್ಪ ಬೇಗನೆ ಚಾರ್ಜ್‌ ಆಗುತ್ತದೆ ಅನ್ನಬಹುದು.

6.4 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಇದೆ. ಸ್ಯಾಮ್‌ಸಂಗ್‌ನವರು ಮಧ್ಯಮ ದರ್ಜೆಯ ಫೋನ್‌ಗಳಲ್ಲೂ ಅಮೋಲೆಡ್‌ ಡಿಸ್‌ಪ್ಲೇ ಕೊಡುವುದು ವಿಶೇಷ. ಇದು ಕಡಿಮೆ ಬ್ಯಾಟರಿ ಬಳಸುತ್ತದೆ. ಜೊತೆಗೆ, ಚಿತ್ರಗಳು ರಿಚ್‌ ಆಗಿ ಕಾಣುತ್ತವೆ. ಕೆಲವರಿಗೆ ಫೋನ್‌ ದೊಡ್ಡದಾಗಿರಬಾರದು. ಜೇಬಿನೊಳಗೆ ಹಿಡಿಸಬೇಕು. ಎಂ 21 ಆ ರೀತಿಯ ಫೋನು. ಕೈಯಲ್ಲಿ ಹಿಡಿಯುವಷ್ಟು ಅಳತೆ ಹೊಂದಿದೆ. ಹೆಚ್ಚು ಭಾರವೂ ಇಲ್ಲ. ಹಾಗಂತ ತೀರಾ ಹಗುರವಾಗಿಯೂ ಇಲ್ಲ. 188 ಗ್ರಾಂ ತೂಕ ಇದೆ. ಕ್ಯಾಮೆರಾ ವಿಷಯಕ್ಕೆ ಬಂದರೆ, ಇದು ಒಂದು ಹಂತಕ್ಕೆ ಓಕೆ ಎನ್ನಬಹುದಾದರೂ ಈ ರೇಟಿಗೆ ಇನ್ನೂ ಚೆನ್ನಾಗಿರುವ ಕ್ಯಾಮರಾ ಹಾಕಬಹುದಿತ್ತು ಎನಿಸುತ್ತದೆ.

ಹೊರಾಂಗಣ ಚಿತ್ರಗಳ ಗ್ರಹಿಕೆಗೆ ಯಾವುದೇ ತೊಂದರೆಯಿಲ್ಲ. ಒಳಾಂಗಣದಲ್ಲಿ ಫೋಟೋ ತೆಗೆದರೆ ಇನ್ನಷ್ಟು ಕ್ವಾಲಿಟಿಬೇಕಿತ್ತು ಎನಿಸುತ್ತದೆ. 48 ಮೆ.ಪಿ. ಹಿಂಬದಿ
ಮೂರು ಲೆನ್ಸಿನ ಕ್ಯಾಮೆರಾ, 20 ಮೆ.ಪಿ. ಮುಂಬದಿ ಕ್ಯಾಮೆರಾ ಇದೆ. ಸ್ಯಾಮ್‌ಸಂಗ್‌ನದೇ ತಯಾರಿಕೆಯಾದ ಎಕ್ಸಿನಾಸ್‌ 9611 ಎಂಟು ಕೋರ್‌ಗಳ ಪ್ರೊಸೆಸರ್‌ ಮಧ್ಯಮ ದರ್ಜೆಯ ಫೋನ್‌ಗಳ ಪೈಕಿ ವೇಗ ಹೊಂದಿದೆ. ಹಾಗಾಗಿ ಫೋನ್‌ ಬಳಸಲು ವೇಗವಾಗಿದೆ. ಫೋನಿನ ಇಂಟರ್‌
ಸ್ಪೇಸ್‌ ಎಂದಿನಂತೆ ಟಿಪಿಕಲ್‌ ಸ್ಯಾಮ್‌ಸಂಗ್‌ ಫೋನ್‌ಗಳ ಒನ್‌ ಯುಐ ಇದೆ.

ಫೋನಿನ ಫಿಂಗರ್‌ ಪ್ರಿಂಟ್‌ ಸೆನ್ಸರ್‌ ಹಿಂಬದಿ ಇದೆ. ಈಗ ಬರುತ್ತಿರುವ ಬೇರೆ ಬ್ರಾಂಡಿನ ಫೋನ್‌ಗಳಲ್ಲಿ ಫೋನಿನ ಸೈಡಿನಲ್ಲಿ ಬೆರಳಚ್ಚು ಸಂವೇದಕ ಇದೆ. ಫೋನಿನ ಬದಿಯಲ್ಲಿ ಇದ್ದರೆ ಹೆಚ್ಚು ಅನುಕೂಲಕರವಾಗಿರುತ್ತದೆ.

ಕೊರತೆಗಳು
ಈ ದರಕ್ಕೆ ಪರದೆಯ ಗಾತ್ರ ದೊಡ್ಡದಿರುವ ಮೊಬೈಲ್‌ಗ‌ಳು ಬೇರೆ ಬ್ರಾಂಡಿನಲ್ಲಿ ಲಭ್ಯವಿದೆ. ಇದು ಸ್ವಲ್ಪ ಪುಟ್ಟದು ಎಂಬ ಭಾವನೆ ಬರುತ್ತದೆ. ಕ್ಯಾಮೆರಾ ಗುಣಮಟ್ಟ ಇನ್ನೂ ಇರಬೇಕಿತ್ತು. ಫೋನಿನ ದೇಹ ಪ್ಲಾಸ್ಟಿಕ್‌ ಇದೆ. ಈ ದರಕ್ಕೆ ಎದುರು ಬ್ರಾಂಡ್‌ಗಳು ಗ್ಲಾಸ್‌ ಬಾಡಿ ತರುತ್ತಿವೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಂ21ನ ಸ್ಪೆಸಿಫಿಕೇಷನ್‌
ಇದು ಸ್ಯಾಮ್‌ಸಂಗ್‌ನದೇ ಆದ ಎಕ್ಸಿನಾಸ್‌ 9611 ಎಂಟು ಕೋರ್‌ಗಳ ಪೊ›ಸೆಸರ್‌ ಹೊಂದಿದೆ. (ಇದೇ ಪ್ರೊಸೆಸರ್‌ ಸ್ಯಾಮ್‌ಸಂಗ್‌ ಎಂ31ನಲ್ಲಿ ಕೂಡ ಇದೆ.) ಅಂಡ್ರಾಯ್ಡ್ 10 ಆವೃತ್ತಿ. 4ಜಿಬಿ ರ್ಯಾಮ…+ 64 ಜಿಬಿ ಆಂತರಿಕ ಸಂಗ್ರಹ (14000 ರೂ.), 6 ಜಿಬಿ ರ್ಯಾಮ…, 128 ಜಿಬಿ ಆಂತರಿಕ ಸಂಗ್ರಹ (16000
ರೂ.), 6.4 ಇಂಚಿನ 23401080 ಪಿಕ್ಸೆಲ್‌ಗ‌ಳ ವಾಟರ್‌ ಡ್ರಾಪ್‌, ಅಮೋಲೆಡ್‌ ಡಿಸ್‌ಪ್ಲೇ ಇದೆ. 48 ಮೆ.ಪಿ. ಮುಖ್ಯ ಕ್ಯಾಮೆರಾ. ಇದಕ್ಕೆ 8 ಮೆ.ಪಿ, 5 ಮೆ.ಪಿ, ಉಪಕ್ಯಾಮೆರಾಗಳಿವೆ. ಒಟ್ಟು ಹಿಂಬದಿ 3 ಕ್ಯಾಮೆರಾ. ಮುಂಬದಿ 20 ಮೆ.ಪಿ. ಕ್ಯಾಮೆರಾ ಇದೆ. 6000 ಎಎಂಎಚ್‌ ಬ್ಯಾಟರಿ, 15 ವ್ಯಾಟ್‌ ಟೈಪ್‌
ಸಿ ಕೇಬಲ್‌ ಫಾಸ್ಟ್ ಚಾರ್ಜರ್‌ ಇದೆ. ಇದು ಅಮೆಜಾನ್‌ನಲ್ಲಿ ಲಭ್ಯ. ಸ್ಯಾಮ್‌ಸಂಗ್‌.ಕಾಮ್‌ನಲ್ಲೂ ಲಭ್ಯ ಆದರೆ ಅದರಲ್ಲಿ ಅಮೆಜಾನ್‌ಗಿಂತ 500 ರೂ. ಹೆಚ್ಚು ದರವಿದೆ.

ಕೆ.ಎಸ್‌. ಬನಶಂಕರ ಆರಾಧ್ಯ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಾವಿನಲ್ಲಿ ಶೇ.60 ಮಂದಿ ಅನಿಲ ದುರಂತ ಸಂತ್ರಸ್ತರು?

ಸಾವಿನಲ್ಲಿ ಶೇ.60 ಮಂದಿ ಅನಿಲ ದುರಂತ ಸಂತ್ರಸ್ತರು ?

ಕೋವಿಡ್ : ಶೇ.78.86 ಚೇತರಿಕೆ

ಕೋವಿಡ್ : ಶೇ.78.86 ಚೇತರಿಕೆ

ಏರ್‌ಇಂಡಿಯಾಗೆ ನಿರ್ಬಂಧ

ಏರ್ ‌ಇಂಡಿಯಾಗೆ ನಿರ್ಬಂಧ

ಕೃಷಿ ಬಿಲ್‌: ಎನ್‌ಡಿಎನಲ್ಲೇ ಒಡಕು

ಕೃಷಿ ಬಿಲ್‌: ಎನ್‌ಡಿಎನಲ್ಲೇ ಒಡಕು

ಕುಡಿಯುವ ನೀರು ಯೋಜನೆಗಳಿಗೆ 540 ಕೋಟಿ ಮಂಜೂರು

ಕುಡಿಯುವ ನೀರು ಯೋಜನೆಗಳಿಗೆ 540 ಕೋಟಿ ಮಂಜೂರು

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಅಮ್ಮನಾದ ಮಾಯಂತಿ ಐಪಿಎಲ್‌ಗೆ ಇಲ್ಲ

ಅಮ್ಮನಾದ “ಮಾಯಂತಿ” ಐಪಿಎಲ್‌ಗೆ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

isiri-tdy-5

ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಮತ್ತೆ ಬಂತು ವಿಆರ್‌ಎಸ್‌!

ಭಾಷೆ ಬಲ್ಲವನೇ ಬಾಸ್‌!

ಭಾಷೆ ಬಲ್ಲವನೇ ಬಾಸ್‌!

ಟಿ.ವಿ.ಯನ್ನು ಸ್ಮಾರ್ಟ್‌ ಮಾಡುವ ಸ್ಟಿಕ್‌ ಎಂಬ ಮಂತ್ರದಂಡ!

ಟಿ.ವಿ.ಯನ್ನು ಸ್ಮಾರ್ಟ್‌ ಮಾಡುವ ಸ್ಟಿಕ್‌ ಎಂಬ ಮಂತ್ರದಂಡ!

ಹೂಡಿಕೆಗೆ 8ದಾರಿಗಳು!

ಹೂಡಿಕೆಗೆ 8ದಾರಿಗಳು!

ರವಿ ಕಾಣದ್ದನ್ನು ರಿಲಯನ್ಸ್‌ ಕಂಡ ಕಥೆ

ರವಿ ಕಾಣದ್ದನ್ನು ರಿಲಯನ್ಸ್‌ ಕಂಡ ಕಥೆ

MUST WATCH

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆಹೊಸ ಸೇರ್ಪಡೆ

ಸೆ. 22: ಮಂಗಳೂರು-ಮಹಾರಾಷ್ಟ್ರ ಕೆಎಸ್ಸಾರ್ಟಿಸಿ ಸಂಚಾರ ಆರಂಭ

ಸೆ. 22: ಮಂಗಳೂರು-ಮಹಾರಾಷ್ಟ್ರ ಕೆಎಸ್ಸಾರ್ಟಿಸಿ ಸಂಚಾರ ಆರಂಭ

ಮೀನುಗಾರರ ಸಾಲ ಶೀಘ್ರ ಖಾತೆಗೆ: ಕೋಟ

ಮೀನುಗಾರರ ಸಾಲ ಶೀಘ್ರ ಖಾತೆಗೆ: ಕೋಟ

ಸಾವಿನಲ್ಲಿ ಶೇ.60 ಮಂದಿ ಅನಿಲ ದುರಂತ ಸಂತ್ರಸ್ತರು?

ಸಾವಿನಲ್ಲಿ ಶೇ.60 ಮಂದಿ ಅನಿಲ ದುರಂತ ಸಂತ್ರಸ್ತರು ?

ಕೋವಿಡ್ : ಶೇ.78.86 ಚೇತರಿಕೆ

ಕೋವಿಡ್ : ಶೇ.78.86 ಚೇತರಿಕೆ

ಅಪಘಾತ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿ: ಸುಪ್ರೀಂ

ಅಪಘಾತ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿ: ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.