ಮಿಶ್ರ ಬೆಳೆಯಲ್ಲಿ ಮಸ್ತ್ ಆದಾಯ!

Team Udayavani, Sep 16, 2019, 5:00 AM IST

lead-zero-mishra

ಶ್ರೀಗಂಧ ಬೆಳೆಯುತ್ತಿದ್ದ ಕೃಷಿಕ ಸಂಜಯ್‌ ಪಂಚಗಾಂವಿಯವರು, ಅದರ ಜೊತೆಗೆ ಮಿಶ್ರ ಬೆಳೆ ಹಾಕಲು ನಿರ್ಧರಿಸಿದರು. ಏನನ್ನು ಬೆಳೆಸಬೇಕು ಎನ್ನುವುದರ ಬಗ್ಗೆ ಚಿಂತನೆ ನಡೆಸಿ, ಅದರ ಸಾಧ್ಯತೆ ಬಾಧ್ಯತೆ ಎಲ್ಲವನ್ನೂ ಅಳೆದು ತೂಗಿ ಹತ್ತಾರು ಗಿಡಮರಗಳನ್ನು ವ್ಯವಸ್ಥಿತವಾಗಿ ಬೆಳೆಸಿದ್ದಾರೆ. ನೈಸರ್ಗಿಕ ವಿಧಾನಗಳನ್ನು ಅನುಸರಿಸುತ್ತಿರುವುದರಿಂದ ಖರ್ಚು ಗಣನೀಯವಾಗಿ ಕಡಿಮೆಯಾಗಿದೆ.

ಸಂಜಯ್‌ ಮೂಲತಃ ಓರ್ವ ಎಂಜನೀಯರ್‌ ಆಗಿದ್ದರೂ, ಕೃಷಿಯಲ್ಲಿ ಏನಾದರೂ ಮಾಡಲೇಬೇಕು ಎಂಬ ತುಡಿತದಿಂದ ತಮ್ಮ 24 ಎಕರೆ ತೋಟದಲ್ಲಿ ಸುಧಾರಣೆ ತರುವ ಪ್ರಯತ್ನಕ್ಕೆ ಮುಂದಾದರು. ಇದಕ್ಕೆ, ಅವರ ತಂದೆ ಬಸಪ್ಪ ಪಂಚಗಾಂವಿ ಹಾಗೂ ಸಹೋದರರಾದ ಸಂಗಪ್ಪ ಪಂಚಗಾಂವಿ, ರಮೇಶ್‌ ಪಂಚಗಾಂವಿಯವರ ಬೆಂಬಲ ಸಿಕ್ಕಿತು.

ಅಪರೂಪದ ಹಣ್ಣಿನ ತಳಿಗಳು
ಈ ತೋಟದಲ್ಲಿ ಒಟ್ಟು 7000 ಶ್ರೀಗಂಧದ ಮರಗಳಿವೆ. ಜೊತೆಗೆ, 2500 ಸಾವಿರ ಪೇರಲ ಗಿಡಗಳು, 1250 ಜಂಬು ನೇರಳೆ ಗಿಡಗಳು, 12000 ತೈವಾನ್‌ ಪಪ್ಪಾಯ, 1500 ಕೇಸರ್‌ ಮಾವಿನ ಗಿಡಗಳು, 800 ಆಪೂಸ್‌ ಮಾವಿನ ಗಿಡಗಳು, 300 ಹಿಮ್‌ಸಾಗರ ಮಾವಿನ ಗಿಡಗಳು, 1000 ನುಗ್ಗೆ ಗಿಡಗಳೂ ಇವೆ. ಇದರ ಜೊತೆಗೆ ಆ್ಯಪಲ್‌, ವೈಟ್‌ ನೇರಳೆ, ಸೀತಾಫ‌ಲ, ರಾಮಫ‌ಲ, ಲಕ್ಷ್ಮಣ ಫ‌ಲ, ಹನುಮಾನ್‌ ಫ‌ಲ, ನಿಂಬು, ಕಿತ್ತಳೆ, ಮೂಸಂಬಿ, ಸ್ಟ್ರಾಬೆರಿ ಮುಂತಾದವುಗಳಿವೆ. ದುಬಾರಿ ಮಾವಿನ ಹಣ್ಣಿನ ತಳಿ ಎನಿಸಿರುವ ಪರ್ಪಲ್‌ ಮ್ಯಾಂಗೊ, ಮಾಲ್ಟಾ, ಡ್ರಾಗನ್‌ ಫ‌ೂ›ಟ್‌ ಮುಂತಾದವೂ ಇಲ್ಲಿವೆ.

ಕೈ ಕೊಡದ ಪಪ್ಪಾಯ
ಇವಿಷ್ಟು ಬೆಳೆಗಳಲ್ಲಿ, ರೆಡ್‌ಲೇಡಿ ಪಪ್ಪಾಯದಿಂದ ಒಳ್ಳೆ ದುಡ್ಡು ಬರತೊಡಗಿದೆ. ಒಟ್ಟು 24 ಎಕರೆಯಲ್ಲಿ ಶ್ರೀಗಂಧದ ನಡುವೆ ಬೆಳೆಸಿರುವ 12 ಸಾವಿರ ಪಪ್ಪಾಯ ಗಿಡಗಳಿಂದ ಈಗಾಗಲೇ ಸುಮಾರು 15 ಟನ್‌ ಇಳುವರಿ ಬಂದಿದೆ. ಶುರುವಿನಲ್ಲಿ ಕೆ.ಜಿ. ಹಣ್ಣಿಗೆ 7-8 ರೂ.ಇದ್ದಿದ್ದು ಈಗ 25 ರೂ. ವರೆಗೆ ಹೋಗಿದೆ. ದರ ಜಾಸ್ತಿಯಾದ ಸಮಯದಲ್ಲೇ ಇವರ ತೋಟದಿಂದ ಹಣ್ಣಿನ ಇಳುವರಿ ಜಾಸ್ತಿಯಾಗಿರುವುದರಿಂದ ಒಳ್ಳೆ ಲಾಭದ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚಿಗೆ ಒಂದು ಟನ್‌ಗೆ 25 ಸಾವಿರ ರೂ.ನಂತೆ ಪಪ್ಪಾಯ ಮಾರಾಟವಾಗಿದೆ.

ರಿಸ್ಕ್ ಇರೋದಿಲ್ಲ
ಈ ತೋಟದ ನಿರ್ವಹಣಾ ವೆಚ್ಚ ತುಂಬಾ ಕಮ್ಮಿ. ಪೂರ್ತಿ ನೈಸರ್ಗಿಕ ಕೃಷಿ ಅಳವಡಿಸಿರುವುದರಿಂದ ರಾಸಾಯನಿಕ ಗೊಬ್ಬರಗಳ ಖರ್ಚು ಉಳಿದ ಹಾಗಾಯಿತು. ನಿರಂತರವಾಗಿ ಜೀವಾಮೃತವನ್ನು ಸಿಂಪಡಣೆ ಮತ್ತು ನೀರಿನ ಮೂಲಕವೂ ಉಣಿಸುತ್ತಿದ್ದಾರೆ. ಪಪ್ಪಾಯಕ್ಕೆ ಬರುವ ವೈರಸ್‌ ಕಾಟ ಒಂದು ಬಿಟ್ಟರೆ ತೋಟ ನಿರ್ವಹಿಸಲು ಇನ್ಯಾವ ತೊಂದರೆಯೂ ಬಂದಿಲ್ಲ. ಬರೀ ಅಡಕೆ, ಬರೀ ತೆಂಗು ಹೀಗೆ ಒಂದೇ ಬೆಳೆ ಬೆಳೆದು ರಿಸ್ಕ್ ತೆಗೆದುಕೊಳ್ಳುವುದಕ್ಕಿಂತ ಮಿಶ್ರ ಬೆಳೆ ಬೆಳೆದರೆ ರೈತನಿಗೆ ಭದ್ರತೆ ಇರುತ್ತದೆ ಎನ್ನುವುದಕ್ಕೆ ಸಂಜಯ್‌ ಅವರೇ ಸಾಕ್ಷಿ.

-ಎಸ್‌. ಕೆ. ಪಾಟೀಲ್‌

ಟಾಪ್ ನ್ಯೂಸ್

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.