ಮೊಬೈಲ್‌ ಫೋನಿನಿಂದ ಕೃಷಿಯಲ್ಲಿ ಮೌನಕ್ರಾಂತಿ 

Team Udayavani, Mar 13, 2017, 11:47 AM IST

ಬೆಂಗಳೂರಿನ ಬಿಎಂಟಿ – ಮೊದಲನೇ ಹಂತದಲ್ಲಿ ಕಚೇರಿ ಹೊಂದಿರುವ ಕ್ರೊಪ್‌ ಇನ್‌ ಟೆಕ್ನಾಲಜಿ ಸೊಲ್ಯುಷನ್ಸ್‌ ಪ್ರ„ವೇಟ್‌ ಲಿಮಿಟೆಡ್‌ ಕೃಷಿಯ ಉತ್ಪಾದಕತೆ ಹೆಚ್ಚಿಸಲು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಆಧಾರಿತ
ಸೇವೆಗಳನ್ನು ಒದಗಿಸುತ್ತಿದೆ. ರೈತರ ಹೊಲಗಳಲ್ಲಿ ಬೆಳೆಯುವ ಬೆಳೆಗಳ ನಿರ್ವಹಣೆಗೆ ಹವಾಮಾನ ಮಾಹಿತಿ, ಕೀಟ-ರೋಗ ಮಾಹಿತಿ, ಪರಿಣಿತರ ಹಾಗೂ ತಾಂತ್ರಿಕ ಸಲಹೆ ಒದಗಿಸುತ್ತದೆ. ಇದರ ಸೇವೆಯನ್ನು ಬಳಸುತ್ತಿರುವ ಕೃಷಿಕರ ಸಂಖ್ಯೆ 5,09,860.

“ನಮ್ಮ ಹಳ್ಳಿಗಳಲ್ಲಿ ಇಂಟರ್ನೆಟ್‌ ಮತ್ತು ಮೊಬೈಲ್‌ ಫೋನ್‌ ಸಂಪರ್ಕ ಇದ್ದರೆ ಸಾಕು; ಕೃಷಿಯಲ್ಲಿ ಕ್ರಾಂತಿಯನ್ನೇ
ಮಾಡಬಹುದು’ ಎಂಬ ಮಾತನ್ನು ನೀವು ಕೇಳಿರಬಹುದು. ಅದನ್ನು ನಂಬಬೇಕಾದ ಕಾಲ ಬಂದಿದೆ. ಬೆಂಗಳೂರಿನ ಬಿಎಂಟಿ – ಮೊದಲನೇ ಹಂತದಲ್ಲಿ ಕಚೇರಿ ಹೊಂದಿರುವ ಕ್ರೊಪ್‌ ಇನ್‌ ಟೆಕ್ನಾಲಜಿ ಸಲ್ಯುಷನ್ಸ್‌ ಪ್ರ„ವೇಟ್‌ ಲಿಮಿಟೆಡ್‌ ಕೃಷಿಯ ಉತ್ಪಾದಕತೆ ಹೆಚ್ಚಿಸಲು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಒದಗಿಸುತ್ತಿದೆ. ರೈತರ ಹೊಲಗಳಲ್ಲಿ ಬೆಳೆಯುವ ಬೆಳೆಗಳ ನಿರ್ವಹಣೆಗೆ ಹವಾಮಾನ ಮಾಹಿತಿ, ಕೀಟ-ರೋಗ ಮಾಹಿತಿ, ಪರಿಣತರ ಹಾಗೂ ತಾಂತ್ರಿಕ ಸಲಹೆ ಒದಗಿಸುತ್ತದೆ. ಇದರ ಸೇವೆಯನ್ನು ಬಳಸುತ್ತಿರುವ ಕೃಷಿಕರ ಸಂಖ್ಯೆ 5,09,860. ಜೊತೆಗೆ, ಮಹೀಂದ್ರ ಆಂಡ್‌ ಮಹೀಂದ್ರ ಕಂಪೆನಿ, ಐಟಿಸಿ ಮತ್ತು ಗೊಡೆøà μಲಿಪ್ಸ್‌ ಇಂಡಿಯಾ ಇತ್ಯಾದಿ 40 ಕೃಷಿನಿರತ ಕಂಪೆನಿಗಳೂ ತಮ್ಮ ವಿಸ್ತಾರವಾದ ಹೊಲಗಳ ಮೇಲುಸ್ತುವಾರಿಗಾಗಿ ಕ್ರೊಪ್‌ ಇನ್‌ ಟೆಕ್ನಾಲಜಿ ಸಲ್ಯುಷನ್ಸ್‌ನ ಸಹಾಯ ಪಡೆಯುತ್ತಿವೆ. ಮಾಹಿತಿ ವಿಶ್ಲೇಷಣೆ ಆಧರಿಸಿದ ಮುನ್ಸೂಚನೆಗಳನ್ನು ನೀಡುವ ಮೂಲಕ ಕೃಷಿಕರ ಆದಾಯ ನಷ್ಟವನ್ನು ಶೇಕಡಾ 18ರಷ್ಟು ಕಡಿಮೆ ಮಾಡಲು ಕ್ರಾಪ್‌ ಇನ್‌ ಟೆಕ್ನಾಲಜಿ ಸಲ್ಯೂಷಿನ್ಸ್‌ಗೆ ಸಾಧ್ಯವಾಗಿದೆ. ಅದಲ್ಲದೆ, ಈ ಕಂಪೆನಿಯ ಮಾರ್ಗದರ್ಶನದಿಂದಾಗಿ ಇಳುವರಿಯಲ್ಲಿ ಶೇಕಡಾ 12ರಷ್ಟು ಹೆಚ್ಚಳವನ್ನು ರೈತರು ಸಾಧಿಸಿದ್ದಾರೆ.

ರಾಯಿಟರ್ಸ್‌ ಮಾರ್ಕೆಟ್‌ ಲೈಟ್‌ ಮೊಬೈಲ್‌ ಮಾಹಿತಿ ಸೇವೆ (ಆರ್‌.ಎಂ.ಎಸ್‌.) ಇಂತಹ ಇನ್ನೊಂದು ಕಂಪನಿ. ಇದು ಎಸ್‌.ಎಂ.ಎಸ್‌. ಮೂಲಕ ದೇಶದ ವಿವಿಧ ಮಾರುಕಟ್ಟೆಗಳಲ್ಲಿ ಕೃಷಿ ಉತ್ಪನ್ನಗಳ ಆ ಕ್ಷಣದ ಬೆಲೆಗಳು ಮತ್ತು ಆಯಾ ಪ್ರದೇಶದ ಹವಾಮಾನ ಮುನ್ಸೂಚನೆಯ ಮಾಹಿತಿ ನೀಡುವ ಕಂಪೆನಿ. ಜೊತೆಗೆ, ಬೆಳೆಗಳ ಬೆಳವಣಿಗೆಯ ವಿವಿಧ ಹಂತಗಳಿಗೆ (ಬೀಜ ಬಿತ್ತನೆ ತಯಾರಿಯಿಂದ ತೊಡಗಿ ಕೊಯ್ಲಿನ ತನಕ) ಸಂಬಂಧಿಸಿದ ಮಾಹಿತಿ, ಮಾರುಕಟ್ಟೆಗಳ
ಭೌಗೋಳಿಕ ಸ್ಥಾನ ಮತ್ತು ಕೃಷಿಉತ್ಪನ್ನಗಳ ಬೆಲೆಗಳು – ಇವನ್ನು ಈ ಭಾಷೆಗಳಲ್ಲಿ ರೈತರಿಗೆ ತಿಳಿಸುತ್ತದೆ: ಹಿಂದಿ,
ಪಂಜಾಬಿ, ಬಂಗಾಳಿ, ಗುಜರಾತಿ, ಮರಾಠಿ, ಕನ್ನಡ, ತೆಲುಗು, ತಮಿಳು. ಈ ಸೇವೆಯನ್ನು 18 ರಾಜ್ಯಗಳ 50,000 ಹಳ್ಳಿಗಳ 17 ಲಕ್ಷ ರೈತ ಚಂದಾದಾರರು ಬಳಸುತ್ತಿದ್ದಾರೆ. ಅವರಿಗೇನು ಲಾಭ? ಅವರ ಕೃಷಿ ಉತ್ಪನ್ನಗಳನ್ನು ಹೆಚ್ಚಿನ ಬೆಲೆಗೆ ಮಾರಲು ಸಾಧ್ಯವಾಗಿದೆ; ಯಾವುದೇ ಕೃಷಿ ಉತ್ಪನ್ನಕ್ಕೆ ಬೇರೆಬೇರೆ ಮಾರುಕಟ್ಟೆಗಳಲ್ಲಿ ಇರುತ್ತಿದ್ದ ಬೆಲೆಗಳ ಅಂತರ ಈಗ ಶೇ.12 ಕಡಿಮೆಯಾಗಿದೆ. ಇದರಿಂದಾಗಿ, ಅವರ ಆದಾಯದಲ್ಲಿ ಶೇ.5 -ಶೇ.15 ಹೆಚ್ಚಳವಾಗಿದೆ.

“ಆರ್‌.ಎಂ.ಎಲ್‌’ನ ಉಪವಿಭಾಗ “ಕೃಷಿದೂತ’. ಇದು 20 ರಾಜ್ಯಗಳ 253 ಜಿಲ್ಲೆಗಳ 11,500 ರೈತರ ಗುಂಪುಗಳನ್ನು
ಹೊಂದಿದೆ. ಇವು ಈವರೆಗೆ ರೂ.360 ಕೋಟಿ ವ್ಯವಹಾರ ಮಾಡಿವೆ. ಪಶು ಆಹಾರ, ಕೃಷಿ ಯಂತ್ರಗಳು, ರಾಸಾಯನಿಕ
ಗೊಬ್ಬರಗಳು ಮತ್ತು ಬೀಜಗಳ ಖರೀದಿಗೂ ಈ ಗುಂಪುಗಳ ರೈತರು “ಕೃಷಿದೂತ’ ತಂತ್ರಜ್ಞಾನದ ಸಹಾಯ ಪಡೆದಿದ್ದಾರೆ.

ನಮ್ಮ ದೇಶದ ಅತ್ಯಧಿಕ ಸಂಖ್ಯೆಯ (400) ರೈತ ಉತ್ಪಾದಕ ಸಂಸ್ಥೆಗಳನ್ನು (ಎಪ್‌.ಪಿ.ಓ.ಎಸ್‌.) ಒಳಗೊಂಡಿದೆ “ಕೃಷಿದೂತ’. ಜೊತೆಗೆ, 9,000 ಕೃಷಿವಾಣಿಜ್ಯ ಸಂಸ್ಥೆಗಳನ್ನೂ ಒಳಗೊಂಡಿದೆ. ಇವೆಲ್ಲ ಸಂಸ್ಥೆಗಳೂ “ಕೃಷಿದೂತ’ದ ವೇದಿಕೆಯಲ್ಲಿ ಪರಸ್ಪರ ವ್ಯವಹಾರ ಮಾಡುತ್ತಿವೆ.

“ಟ್ರಿಂಗೋ’ – ಇದು ಮಹೀಂದ್ರ ಅಂಡ್‌ ಮಹೀಂದ್ರ ಕಂಪೆನಿ ಸಪ್ಟಂಬರ್‌ 2016ರಲ್ಲಿ ಆರಂಭಿಸಿದ ಸ್ಮಾರ್ಟ್‌ ಫೋನ್‌
ಬಳಕೆಸಾಧನ (ಆಪ್‌). ಇದರ ಮೂಲಕ ಚಾಲಕ ಸಹಿತ ಟ್ರಾಕ್ಟರುಗಳನ್ನು ಬಾಡಿಗೆಗೆ ಪಡೆಯುವುದು ಸುಲಭ – ಗಂಟೆಗೆ
ರೂ.400 – 700 ವೆಚ್ಚದಲ್ಲಿ. ಸಾಮಾಜಿಕ ಜಾಲತಾಣಗಳ ವ್ಯಾಪಕ ನೆಟ್‌ ವರ್ಕ್‌ ಬಳಸಿಕೊಂಡು ರೈತರಿಗಾಗಿ ಕೆಲವು ಸೇವೆಗಳನ್ನು ಶುರು ಮಾಡಲಾಗಿದೆ. ಅವುಗಳಲ್ಲೊಂದು “ಮಿತ್ರ’  (ಮೊಬೈಲ್‌ ಇಂಟರ್‌ವೆನ್‌ಷನ್ಸ್‌ ಆಂಡ್‌ ಟೆಕ್ನಾಲಜಿ
ಫಾರ್‌ ರೂರಲ್‌ ಏರಿಯಾಸ್‌). ಇದು ತಂಜಾವೂರಿನ ಪಿ.ಆರ್‌.ಐ. ವಿಶ್ವವಿದ್ಯಾಲಯದ ಕೃಷಿ ಕಾಲೇಜಿನ ಕೆ.ಸಿ.
ಶಿವಬಾಲನ್‌ ಪ್ರಾರಂಭಿಸಿರುವ ಉಚಿತ ಸೇವೆ. ಈಗ ಇದರ ಮೂಲಕ ಬೆಳೆಗಳಿಗೆ ಹಾಕಬೇಕಾದ ರಾಸಾಯನಿಕ
ಗೊಬ್ಬರಗಳ ಬಗ್ಗೆ ರೈತರಿಗೆ ಮಾಹಿತಿ ಒದಗಣೆ – ಇಂಗ್ಲಿಷ್‌ ಮತ್ತು ತಮಿಳಿನಲ್ಲಿ. “ಈ-ಸಾಗು’ ತೆಲುಗು ಮತ್ತು ಇಂಗ್ಲಿಷ್‌
ಭಾಷೆಗಳಲ್ಲಿ ಲಭ್ಯವಿರುವ ಇಂತಹ ಇನ್ನೊಂದು ಸೇವೆ. ಇದು ಹೈದರಾಬಾದಿನ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಮತ್ತು ನೋಕಿಯಾ ಜಂಟಿಯಾಗಿ ಒದಗಿಸುತ್ತಿರುವ ಸೇವೆ.

“ಅಗ್ರಿ ಎಕ್ಸ್‌ಪರ್ಟ್‌’ ಗೂಗಲ್‌ ಪ್ಲೇಸ್ಟೋರಿನಿಂದ ಆಂಡ್ರಾಯ್ಡ ಮೊಬೈಲ್‌ ಫೋನಿಗೆ ಇಳಿಸಿಕೊಳ್ಳಬಹುದಾದ ಮತ್ತೂಂದು ಬಳಕೆಸಾಧನ. ಇದನ್ನು ಬೆಂಗಳೂರಿನ ಜಿಕೆವಿಕೆಯ ಸಸ್ಯರೋಗ ವಿಜ್ಞಾನ ವಿಭಾಗ ಅಭಿವೃದ್ಧಿ ಪಡಿಸಿದೆ. ಇದರಲ್ಲಿ ಬೆಳೆಯ ವಿವರ ನಮೂದಿಸಿ, ಕೀಟಬಾಧೆಗೆ ತುತ್ತಾದ ಗಿಡದ ಫೋಟೋ ಅಪ್‌-ಲೋಡ್‌ ಮಾಡಬೇಕು. ಅನಂತರ ಪರಿಣತರು ನಿಯಂತ್ರಣ ವಿಧಾನಗಳನ್ನು ರೈತರಿಗೆ ತಿಳಿಸುತ್ತಾರೆ. ಕನ್ನಡ ಮತ್ತು ಇಂಗ್ಲಿಷಿನಲ್ಲಿ ಲಭ್ಯವಿರುವ ಇದನ್ನು ಬಳಸುತ್ತಿರುವ
ರೈತರ ಸಂಖ್ಯೆ 30,000. “ಹವಾಮಾನ ಕೃಷಿ’ ಧಾರವಾಡ ಕೃಷಿ ವಿಶ್ವವಿದ್ಯಾಲಯ ಒದಗಿಸುವ ಮೊಬೈಲ್‌ ಫೋನ್‌
ಬಳಕೆಸಾಧನ. ಇದರಿಂದ ಬೆಳೆ, ಹವಾಮಾನ ಮತ್ತು ಮಾರುಕಟ್ಟೆ ಬೆಲೆಗಳು ಎಸ್‌.ಎಂ.ಎಸ್‌. ಮೂಲಕ ರೈತರಿಗೆ ರವಾನೆ. ಈಗ ಧಾರವಾಡ ಪ್ರದೇಶದ ರೈತರಿಗೆ ಅವಶ್ಯವಾದ ಮಾಹಿತಿ ಇದರಲ್ಲಿ ಲಭ್ಯ.

ಈ ಎಲ್ಲ ಬೆಳವಣಿಗೆಗಳು ಏನನ್ನು ತೋರಿಸಿಕೊಡುತ್ತಿವೆ? ರೈತರಿಗೆ ತಮ್ಮ ಅಂಗೈಯ ಮೊಬೈಲ್‌ ಫೋನಿನ ಮೂಲಕವೇ
ಉಪಯುಕ್ತ ಮಾಹಿತಿ ಪಡೆಯಲು ಸಾಧ್ಯ. ತಮ್ಮ ಫ‌ಸಲಿನ ಕೊಯ್ಲಿನ ನಂತರ, ಅದಕ್ಕೆ ವಿವಿಧ ಮಾರುಕಟ್ಟೆಗಳ ಬೆಲೆ
ತಿಳಿದುಕೊಂಡು, ಉತ್ತಮ ಮಾರಾಟ ಬೆಲೆಗಾಗಿ ಚೌಕಾಸಿ ಮಾಡಲು ಸಾಧ್ಯ. ಅಂತೂ ಮಾಹಿತಿ ಮತ್ತು ಸಂವಹನ
ತಂತ್ರಜ್ಞಾನವು ಕೃಷಿಯ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲದು. ಜೊತೆಗೆ ರೈತರ ಜಮೀನಿನ ಉತ್ಪಾದಕತೆ
ಮತ್ತು ಆದಾಯ ಹೆಚ್ಚಿಸಲಿಕ್ಕೂ ನೆರವಾಗಬಲ್ಲದು. ಇದು ಮೊಬೈಲ್‌ ಫೋನಿನಿಂದ ಕೃಷಿಯಲ್ಲಿ ಮೌನಕ್ರಾಂತಿಯ ಪರಿ. 

– ಅಡ್ಕೂರು ಕೃಷ್ಣರಾವ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಫೆಬ್ರವರಿ 1, ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ದೇಶವಾಸಿಗಳ ಕಂಗಳು ಟಿ.ವಿ., ಫೋನ್‌ ಪರದೆಗಳನ್ನು ದಿಟ್ಟಿಸುತ್ತಿರುತ್ತವೆ. ಏಕೆಂದರೆ ಆ ಹೊತ್ತಿಗೆ ವಿತ್ತಸಚಿವೆ ನಿರ್ಮಲಾ...

  • ತೆಂಗಿನ ಗರಿ ಅಥವಾ ಸೋಗೆಯಿಂದ ಚಪ್ಪರ ನಿರ್ಮಿಸಿ, ಚಪ್ಪರದ ಅಡಿಯಲ್ಲಿ ದೊಡ್ಡ ದೊಡ್ಡ ಗಾತ್ರದ ಬೆಲ್ಲದ ಕೊಪ್ಪರಿಗೆ ಸ್ಥಾಪಿಸಿ, ಕೊಪ್ಪರಿಗೆಯಲ್ಲಿ ಕುದಿಯುತ್ತಿರುವ...

  • ಫಿಲಿಪ್ಪೀನ್ಸ್‌ನ ಒಂದು ಊರಲ್ಲಿ ಬಹಳಷ್ಟು ಗಂಡಸರು ಸಿಗರೇಟ್‌ ಮತ್ತು ಮದ್ಯದ ಚಟಕ್ಕೆ ಬಿದ್ದಿದ್ದರು. ಅವರ ವ್ಯಸನದಿಂದಾಗಿ ಅವರ ಕುಟುಂಬಗಳು ಪರಿತಪಿಸುತ್ತಿದ್ದವು....

  • ಚಳಿಗಾಲದಲ್ಲಿ ಹಿರಿಯರಿಗೆ, ಸಣ್ಣಮಕ್ಕಳಿಗೆ ಮನೆಯೊಳಗೆ ಬೆಚ್ಚನೆಯ ವಾತಾವರಣ ಅವಶ್ಯವಾಗಿ ಇರಬೇಕಾಗುತ್ತದೆ. ಇಲ್ಲದಿದ್ದರೆ ರೋಗ ರುಜಿನಗಳಿಗೆ ಸುಲಭದಲ್ಲಿ ತುತ್ತಾಗುತ್ತಾರೆ....

  • ಒಂದು ವರ್ಷದ ಹಿಂದೆ ಗೆಲಾಕ್ಸಿ ಎಸ್‌10 ಎಂಬ ಲಕ್ಷ ರೂ. ದರದ ಫೋನ್‌ ನೀಡಿದ್ದ ಸ್ಯಾಮ್‌ಸಂಗ್‌ ಈಗ ಸರಿಸುಮಾರು ಅತ್ಯುನ್ನತ ದರ್ಜೆಯ ಫೋನ್‌ನ ವೈಶಿಷ್ಟ್ಯಗಳನ್ನೇ ನೀಡಿ...

ಹೊಸ ಸೇರ್ಪಡೆ