ದುಡ್ಡಿನ ಸಂಸಾರ


Team Udayavani, Feb 12, 2018, 5:15 PM IST

duddu.jpg

ಮದುವೆ ಎನ್ನುವುದು ಇಬ್ಬರ ನಡುವಿನ ಭಾವನಾತ್ಮಕ ಸಂಬಂಧ ಮಾತ್ರವಲ್ಲ, ಅದು ಆರ್ಥಿಕ ಸಂಬಂಧವೂ ಹೌದು. ಮದುವೆಯಾಗಿ ಒಂದು ವಾರದೊಳಗಂತೂ ಆರ್ಥಿಕ ಗುರಿ ನಿರ್ಧರಿಸುವುದು ಕಡ್ಡಾಯ. 

ಮದುವೆನಂತರ ಜವಾಬ್ದಾರಿ ಜಾಸ್ತಿ. ಹಣವನ್ನು ಉಳಿಸುವ ಅನಿವಾರ್ಯತೆ ಬ್ಯಾಚುಲರ್ಗಿಂತ ಹೆಚ್ಚು. ಮದುವೆಯ ಮೊದಲು ಕನಸು ಹಂಚಿಕೊಳ್ಳುವ ಜೊತೆಗೆ ಭವಿಷ್ಯದ ಆರ್ಥಿಕ ಗುರಿಯನ್ನು ಗುರುತಿಸುವುದು ಜಾಣ ದಂಪತಿಗಳ ಲಕ್ಷಣ ಎನ್ನುತ್ತಾರೆ.  ಇದು ನಿಜ ಕೂಡ. ಮದುವೆಗೆ ಮೊದಲು ಎಲ್ಲವೂ ಕನಸು, ಕನಸು. ಅದನ್ನು ಕಾಣುವ ನೆಪದಲ್ಲಿ ಭವಿಷ್ಯದ ಆರ್ಥಿಕ ಚಿಂತನೆ ಮಾಡದೇ ಇದ್ದರೆ ಹೇಗೆ?

ಮದುವೆ ಎನ್ನುವುದು ಇಬ್ಬರ ನಡುವಿನ ಭಾವನಾತ್ಮಕ ಸಂಬಂಧ ಮಾತ್ರವಲ್ಲ, ಅದು ಆರ್ಥಿಕ ಸಂಬಂಧವೂ ಹೌದು. ಮದುವೆಯಾಗಿ ಒಂದು ವಾರದೊಳಗಂತೂ ಆರ್ಥಿಕ ಗುರಿ ನಿರ್ಧರಿಸುವುದು ಕಡ್ಡಾಯ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ಕಾರ್ಯ ಅಸಾಧ್ಯವೇ ಸರಿ.  

ಇಬ್ಬರು ದುಡಿದರೆ 
ನಗರ ಪ್ರದೇಶದಲ್ಲಿದ್ದರೆ ಇಬ್ಬರೂ ದುಡಿಯಲೇ ಬೇಕು.  ಇಬ್ಬರು ದುಡಿದರೆ ಒಬ್ಬರ ಸಂಬಳವನ್ನು ಹೂಡಿಕೆಗೆ ಮೀಸಲಿಡುವುದು ಕ್ಷೇಮ.  ಅದು ಇನ್ವೆಸ್ಟ್‌ಮೆಂಟ್‌, ಮ್ಯೂಚುವಲ್‌ ಫ‌ಂಡ್‌, ಷೇರು ಅಥವಾ ರಿಯಲ್‌ ಎಸ್ಟೇಟ್‌ ಆಗಿರಬಹುದು. ಡೌನ್‌ಪೇಮೆಂಟ್‌ಗೆ ಒಂದಿಷ್ಟು ಹಣ ರೆಡಿ ಮಾಡಿ, ನಗರದೊಳಗೋ ಅಥವಾ ಹೊರಭಾಗದಲ್ಲೋ ಸೈಟ್‌ ಖರೀದಿಸಿ ಇಟ್ಟರೆ ಅದು ಭವಿಷ್ಯದ ಉತ್ತಮ ಸೇವಿಂಗ್ಸ್‌. ಹೀಗೆ ವಿವಿಧ ಬಗೆಯಲ್ಲಿ ದುಡಿಮೆಯು ಒಂದು ಭಾಗವನ್ನು ವಿನಿಯೋಗಿಸಿದರೆ ಉತ್ಪತ್ತಿ ಡೆಡ್‌ಮನಿಯಾಗುವುದು ತಪ್ಪುತ್ತದೆ.  ಒಂದು ಪಕ್ಷ  ಇಬ್ಬರೂ ದುಡಿಮೆಯಲ್ಲಿ ಒಬ್ಬರ ಆದಾಯ ಅಷ್ಟನ್ನೂ ಹೂಡಿಕೆ ಮಾಡಲು ಆಗದೇ ಇದ್ದರೆ.  ಅದರಲ್ಲಿ  ಶೇ. 60ರಷ್ಟು ಹೂಡಿಕೆ ಮಾಡಿ.

ಇದರಲ್ಲಿ ಶೇ. 30ರಷ್ಟು ದೀರ್ಘಾವಧಿ, ಶೇ. 20ರಷ್ಟು ಅಲಾºವಧಿ, ಶೇ.10ರಷ್ಟು ಅತ್ಯಾಲ್ಪಾವಧಿ ಎಂದು ವಿಭಾಗಿಸಿ ಹೂಡಿಕೆ ಮಾಡಿ. ಈ ಗಣಿತ ಏಕೆಂದರೆ ಸಂಪಾದನೆಯ ಶೇ. 10ರಷ್ಟು ಮೊತ್ತವನ್ನು ಪ್ರತಿ ತಿಂಗಳು ಉಳಿಸಿದರೆ ಆ ಹಣ ತುರ್ತು ಸಂದರ್ಭದಲ್ಲಿ ನೆರವಾಗುತ್ತದೆ.  ಐದು ವರ್ಷಕ್ಕೆ ಒಮ್ಮೆ ಕೈಗೆ ಒಂದಷ್ಟು ದುಡ್ಡು ಬರುವ ಹಾಗೇ ಹೂಡಿಕೆ ಇರಲಿ. ಹೂಡಿಕೆಯಲ್ಲಿ ತುರ್ತುನಿಧಿಯನ್ನು ಸೇರಿಸಿಕೊಳ್ಳಿ. ತುರ್ತು ನಿಧಿ ಎಷ್ಟಿರಬೇಕು ಅನ್ನೋದನ್ನು ನಿಮ್ಮ ಮನೆಯಲ್ಲಿರುವ ಸದಸ್ಯರ ವಯಸ್ಸಿನ ಆಧಾರದ ಮೇಲೆ ನಿಗದಿ ಮಾಡಿ.

ನಿಮ್ಮ ಆದಾಯದ ಶೇ. 5ರಷ್ಟು ತುರ್ತು ನಿಧಿ ಅಂದರೆ ಅನಾರೋಗ್ಯ, ಅನಿರೀಕ್ಷಿತ ಖರ್ಚುಗಳನ್ನು ನಿಭಾಯಿಸಲು ಎತ್ತಿಡಬೇಕು.  

ವಾಹನ ಬೇಕೋ ಬೇಡವೋ
ವಾಹನ ಕೊಳ್ಳುವ ಮೊದಲು ಇದು ಬೇಕಾ ಅನ್ನೋದನ್ನು ಖಚಿತ ಮಾಡಿಕೊಳ್ಳಿ. ತಿಂಗಳ ಆದಾಯದಲ್ಲಿ ಶೇ. 4-5ರಷ್ಟು ಖರ್ಚು ಇದಕ್ಕಾಗಿಯೇ ಆಗುತ್ತದೆ.  ವಾಹನ ಕೊಳ್ಳುವಿರಾದರೆ ಕಾರು ಅಥವಾ ಬೈಕು ಇದರಲ್ಲಿ ನಿಮಗೆ ಅಗತ್ಯ ಯಾವುದಿದೆ ತೀರ್ಮಾನಿಸಿ. ಏಕೆಂದರೆ ಕಾರು ಕೊಂಡರೆ ಪ್ರತಿ ದಿನ 20ಕಿ.ಮೀ ಓಡಾಡಲು ತಿಂಗಳಿಗೆ ಪೆಟ್ರೋಲ್‌, ಸರ್ವೀಸು ಸೇರಿ 6-7ಸಾವಿರ ಖರ್ಚುೆ. ವರ್ಷಕ್ಕೆ ಹೆಚ್ಚಾ ಕಡಿಮೆ 80ಸಾವಿರದಷ್ಟು ಹಣವನ್ನು ಕಾರಿಗಾಗಿಯೇ ಎತ್ತಿಡಬೇಕು. ಬೈಕ್‌ ಆದರೆ ತಿಂಗಳಿಗೆ ವರ್ಷಕ್ಕೆ ಹೆಚ್ಚಾ ಕಡಿಮೆ ಪೆಟ್ರೋಲ್‌ ಸೇರಿ 30ಸಾವಿರ ಖರ್ಚು ಬರಬಹುದು.

ಲೆಕ್ಕವಿರಲಿ..
ಮದುವೆ ಸರ್ಟಿಫಿಕೇಟ್‌ ಕೂಡಲೇ ಮಾಡಿಸಿ ಹೆಸರು ಬದಲಾವಣೆಯ ಅಫಿಡೆವಿಟ್‌ಸಲ್ಲಿಸಿದರೆ ಉಳಿತಾಯ, ಹೂಡಿಕೆಗೆ  ಅನುಕೂಲ. ಮುಂದೆ ಎಲ್ಲ ವ್ಯವಹಾರಗಳೂ ಸರಾಗವಾಗಿ ಆಗಿ, ಗೊಂದಲಗಳಿಗೆ ಅವಕಾಶವಿರುವುದಿಲ್ಲ. ತಮ್ಮ ಹೆಸರಿನ ಜೊತೆ ಗಂಡನ ಹೆಸರು ಸೇರಿಸಿಕೊಳ್ಳುವ ಇಚ್ಛೆ ಇದ್ದವರು ಆ ಬದಲಾವಣೆಯನ್ನು ಈ ಸಂದರ್ಭದಲ್ಲೇ ಮಾಡಿಕೊಳ್ಳಬೇಕು. ಒಟ್ಟಿಗೆ ಅಕೌಂಟ್‌ ಇದ್ದು ಸಾಲಕ್ಕೆ ಇಬ್ಬರೂ ಅರ್ಜಿ ಸಲ್ಲಿಸಿದರೆ, ಹೆಚ್ಚೆಚ್ಚು ಸಾಲ ಸಿಗುತ್ತದೆ.  ಜೊತೆಗೆ ಇಬ್ಬರಿಗೂ ತೆರಿಗೆ ವಿನಾಯತಿ ಸಿಗುತ್ತದೆ.  ಮದುವೆಯಾದ ಕೆಲದಿನಗಳಿಗೆ ಇಬ್ಬರ ಹೆಸರಲ್ಲೂ ಜಾಯಿಂಟ್‌ ಅಕೌಂಟ್‌ ತೆರೆದರೆ ಉತ್ತಮ. 

ಮದುವೆ ನಂತರ ನಿಮ್ಮ ಆಸ್ತಿಯನ್ನು ಜಂಟಿಯಾಗಿ ಅನುಭವಿಸುವಂತೆ ನೋಡಿಕೊಳ್ಳಿ.  ಇದರಿಂದ ಭವಿಷ್ಯದ ಹೂಡಿಕೆಗೆ ಅನುಕೂಲವಾಗುತ್ತದೆ.  ಇದರಿಂದ ಲಾಭ ಏನೆಂದರೆ ಸಾಲ ಪಡೆಯಬೇಕಾದರೆ ಇಬ್ಬರ ಆದಾಯ, ಆಸ್ತಿಯ ಲೆಕ್ಕವೂ ಇರುವುದರಿಂದ ಪ್ಲಸ್‌ ಪಾಯಿಂಟ್‌ ಜಾಸ್ತಿ.   

ಹೂಡಿಕೆ ಹೇಗೆ?
ಕೈಯಲ್ಲಿ ಐದು ಲಕ್ಷ ಇದೆ. ಹೂಡಿಕೆ ಮಾಡುವ ಮನೆ ಮೌಲ್ಯ 15 ಲಕ್ಷ. ಬಾಡಿಗೆಗೆ ಕೊಟ್ಟರೆ 10ಸಾವಿರ ಸಿಗುತ್ತದೆ ಎಂದಾದರೆ, 10 ಲಕ್ಷ ಸಾಲ ಮಾಡಿ ಕೊಳ್ಳುವುದು ಲೇಸು.  ಏಕೆಂದರೆ ಕೊಂಡು ಬಾಡಿಗೆಗೆ ಕೊಟ್ಟರೆ ಬಾಡಿಗೆ ಹಣ ಸಾಲಕ್ಕೆ ಹೋಗುತ್ತದೆ. ಇದು ನಿಜವಾದ ಹೂಡಿಕೆಯಾಗುತ್ತದೆ. ಬೇಡ ಎಂದಾಗ ಮನೆ ಮಾರಿದರೆ ಹಾಕಿದ ಹಣಕ್ಕೆ ಶೇ. 10-15ರಷ್ಟು ಜಾಸ್ತಿ ಬರಬಹುದು. ಇದೇ 5 ಲಕ್ಷವನ್ನು ಬ್ಯಾಂಕಲ್ಲಿ ಇಟ್ಟರೆಶೇ. 7-8ರಂತೆ  ತಿಂಗಳಿಗೆ 350ರೂ. ಬರಬಹುದು. ಈ ಹೂಡಿಕೆಯ ಲೆಕ್ಕಾಚಾರದಲಿ ಜಾಣ್ಮೆ ಇದೆ. ಆದರೆ ಹತ್ತು ಲಕ್ಷದ ಜೊತೆಗೆ, ಮತ್ತೆ ಕೈಯಿಂದ 5 ಲಕ್ಷ ಸಾಲ ಮಾಡಿದರೂ ಮನೆಯ ಬಾಡಿಗೆ ಎರಡು ಸಾವಿರ ಬಂದರೆ  ನೀವೇ ಕೈಯಿಂದ ಬಡ್ಡಿ ಕಟ್ಟಬೇಕಾಗುತ್ತದೆ, ಎಚ್ಚರ. 

– ನಾದಸ್ವರಾ

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.